ನಾಗರೀಕ ವಿಮಾನಯಾನ ಸಚಿವಾಲಯ
ದೇಶದ ವಿವಿಧ ಭಾಗಗಳಿಗೆ ವೈದ್ಯಕೀಯ ಪೂರೈಕೆಗಾಗಿ ಸರಕು ವಿಮಾನಗಳ ಕಾರ್ಯಾಚರಣೆಯನ್ನು ಖಾತ್ರಿಗೊಳಿಸಿದ ಸರಕಾರ
प्रविष्टि तिथि:
30 MAR 2020 10:43AM by PIB Bengaluru
ದೇಶದ ವಿವಿಧ ಭಾಗಗಳಿಗೆ ವೈದ್ಯಕೀಯ ಪೂರೈಕೆಗಾಗಿ
ಸರಕು ವಿಮಾನಗಳ ಕಾರ್ಯಾಚರಣೆಯನ್ನು ಖಾತ್ರಿಗೊಳಿಸಿದ ಸರಕಾರ
ಕೋವಿಡ್ -19 ರ ಪರೀಕ್ಷೆ ಮತ್ತು ಅದರ ವಿರುದ್ದ ರಕ್ಷಣೆಗೆ ಅವಶ್ಯ ಇರುವ ವೈದ್ಯಕೀಯ ಸಲಕರಣೆಗಳು ಮತ್ತು ಸಂಬಂಧಿತ ಅವಶ್ಯಕ ಸಾಮಗ್ರಿಗಳ ಪೂರೈಕೆಗಾಗಿ ನಾಗರಿಕ ವಿಮಾನ ಯಾನ ಸಚಿವಾಲಯ (ಎಂ.ಒ.ಸಿ.ಎ.)ವು ರಾಜ್ಯ ಸರಕಾರಗಳ ಜೊತೆ ಸಮನ್ವಯ ಸಾಧಿಸಿದೆ. ವಿವಿಧ ರಾಜ್ಯಗಳಿಂದ ಬರುವ ಆವಶ್ಯಕತೆಗಳನ್ನು ಆಧರಿಸಿ ತುರ್ತು ಆಧಾರದಲ್ಲಿ ಅವಶ್ಯ ವಸ್ತುಗಳನ್ನು ಒದಗಿಸಲು ಪೂರೈಕೆ ಏಜೆನ್ಸಿಗಳ ಜೊತೆ ಸಚಿವಾಲಯದ ಹಿರಿಯ ಅಧಿಕಾರಿಗಳು ಸಮನ್ವಯದೊಂದಿಗೆ ಕೆಲಸ ಮಾಡುತ್ತಿದ್ದಾರೆ. ದೇಶಾದ್ಯಂತ ಅವಶ್ಯ ಪೂರೈಕೆ ಕಾರ್ಯಾಚರಣೆಗಳಿಗಾಗಿ ಏರಿಂಡಿಯಾ ಮತ್ತಿ ಅಲಯಾನ್ಸ್ ಏರ್ ವಿಮಾನಗಳನ್ನು ಹಾರಾಟಕ್ಕೆ ತೊಡಗಿಸಲಾಗಿದೆ.
ಈ ವಿಮಾನಗಳಲ್ಲಿ ಸರಕು ಸಾಗಾಟ ಮಾಡಲು ಎಂ.ಒ.ಸಿ.ಎ. ಯಿಂದ ಅಧಿಕಾರ ಪತ್ರ ಪಡೆದಿರುವ ಏಜೆನ್ಸಿಗಳು ಅವರ ವಲಯದ ಸಂಬಂಧಿತ ಅಧಿಕಾರಿಗಳನ್ನು ಸಂಪರ್ಕಿಸಿ ಸಕಾಲದಲ್ಲಿ ಅವುಗಳನ್ನು ತಲುಪಿಸಲು ಸಮನ್ವಯ ಸಾಧಿಸಬೇಕಾಗುತ್ತದೆ.
ದೇಶದ ಪೂರ್ವ ಮತ್ತು ಈಶಾನ್ಯ ಭಾಗದ ಆವಶ್ಯಕತೆಗಳನ್ನು ಪೂರೈಸಲು 2020 ರ ಮಾರ್ಚ್ 29 ರಂದು ದಿಲ್ಲಿಯಿಂದ ಕೊಲ್ಕೊತ್ತಾಕ್ಕೆ ಹೊರಟ ಏರ್ ಅಲಯಾನ್ಸ್ ವಿಮಾನ ಕೊಲ್ಕೊತ್ತಾ, ಗುವಾಹಟಿ, ಧಿಬ್ರೂಘರ್ ಮತ್ತು ಅಗರ್ತಾಲಾಗಳಿಗೆ ಸರಕುಗಳನ್ನು ಹೊತ್ತೊಯ್ದಿತು.
ಉತ್ತರ ವಲಯದಲ್ಲಿ ,ದಿಲ್ಲಿಯಿಂದ ಚಂಡೀಗಢ ಮತ್ತು ಲೇಹ್ ಗೆ ಐ.ಎ.ಎಫ್. ವಿಮಾನ ಐ.ಸಿ.ಎಂ.ಆರ್. ವಿ.ಟಿ.ಎಂ. ಕಿಟ್ ಗಳು ಮತ್ತು ಅವಶ್ಯ ಸಾಮಗ್ರಿಗಳನ್ನು ಕೊಂಡೊಯ್ದಿದೆ.
ಅಲಯೆನ್ಸ್ ಏರ್ ಪುಣೆಯ ಸರಕುಗಳನ್ನು ಏರಿಂಡಿಯಾ ವಿಮಾನ ಮೂಲಕ ಮುಂಬಯಿಗೆ ವರ್ಗಾಯಿಸಿದೆ.
(ಮುಂಬಯಿ-ದಿಲ್ಲಿ-ಹೈದರಾಬಾದ್-ಚೆನ್ನೈ-ಮುಂಬಯಿ ಮತ್ತು ಹೈದರಾಬಾದ್-ಕೊಯಮುತ್ತೂರು) –ಈ ಮಾರ್ಗದ ವಿಮಾನಗಳು ಐ.ಸಿ.ಎಂ.ಆರ್ ಕಿಟ್ ಗಳನ್ನು ಶಿಮ್ಲಾ, ಋಷಿಕೇಶ, ಲಕ್ನೋ ಮತ್ತು ಇಂಫಾಲಗಳಿಗೆ ಪುಣೆ ಮತ್ತು ದಿಲ್ಲಿಯಿಂದ ಸಾಗಾಟ ಮಾಡಿವೆ. ಚೆನ್ನೈಗೂ ಐ.ಸಿ.ಎಂ.ಆರ್. ಕಿಟ್ ಗಳನ್ನು ಸಾಗಾಟ ಮಾಡಲಾಗಿದೆ. ಹೈದರಾಬಾದಿನ ಸರಕನ್ನು ಅಲ್ಲಿಗೆ ಪೂರೈಕೆ ಮಾಡಲಾಗಿದೆ. ಆಂಧ್ರ ಪ್ರದೇಶ, ತಮಿಳು ನಾಡು, ಮತ್ತು ಪುದುಚೇರಿಗಳಿಗೂ ಸರಕು ಪೂರೈಕೆಯಾಗಿದೆ. ಜವಳಿ ಸಚಿವಾಲಯದ ಸರಕನ್ನು ಕೊಯಮುತ್ತೂರಿಗೆ ಸಾಗಾಟ ಮಾಡಲಾಗಿದೆ.
ಸಕಾಲದಲ್ಲಿ ನಿಗದಿತ ಸ್ಥಳಗಳಿಗೆ ಪೂರೈಕೆ ಮಾಡುವುದಕ್ಕಾಗಿ ಮಾಹಿತಿ ಹಂಚಿಕೊಳ್ಳಲು, ಪ್ರಶ್ನೆಗಳಿಗೆ ಉತ್ತರಿಸಲು ಮತ್ತು ತಳಮಟ್ಟದಲ್ಲಿ ಕೆಲಸ ನಿರಂತರ ನಡೆಯುತ್ತಿದೆ. ಆ ಮೂಲಕ ಕೋವಿಡ್ -19 ರ ವಿರುದ್ದದ ಹೋರಾಟದ ಪ್ರಯತ್ನಗಳು ಹೆಚ್ಚು ಹೆಚ್ಚು ನಡೆಯುತ್ತಿವೆ ಮತ್ತು ಅವುಗಳಿಗೆ ಒತ್ತಾಸೆ ನೀಡಲಾಗುತ್ತಿದೆ.
(रिलीज़ आईडी: 1609461)
आगंतुक पटल : 126
इस विज्ञप्ति को इन भाषाओं में पढ़ें:
Assamese
,
English
,
हिन्दी
,
Marathi
,
Bengali
,
Punjabi
,
Gujarati
,
Odia
,
Tamil
,
Telugu
,
Malayalam