ರೈಲ್ವೇ ಸಚಿವಾಲಯ
ಭಾರತೀಯ ರೈಲ್ವೆ ತನ್ನ ತಡೆರಹಿತ ಸರಕು ಸೇವೆಗಳ ಮೂಲಕ ಅಗತ್ಯ ವಸ್ತುಗಳ ಲಭ್ಯತೆ ಖಾತ್ರಿಪಡಿಸಲು ಎಲ್ಲ ಕ್ರಮಗಳನ್ನು ಕೈಗೊಂಡಿದೆ
प्रविष्टि तिथि:
27 MAR 2020 4:39PM by PIB Bengaluru
ಭಾರತೀಯ ರೈಲ್ವೆ ತನ್ನ ತಡೆರಹಿತ ಸರಕು ಸೇವೆಗಳ ಮೂಲಕ ಅಗತ್ಯ ವಸ್ತುಗಳ ಲಭ್ಯತೆ ಖಾತ್ರಿಪಡಿಸಲು ಎಲ್ಲ ಕ್ರಮಗಳನ್ನು ಕೈಗೊಂಡಿದೆ
ಕಳೆದ ನಾಲ್ಕು ದಿನದಲ್ಲಿ 1.6 ಲಕ್ಷಕ್ಕೂ ಅಧಿಕ ವ್ಯಾಗನ್ ಳಲ್ಲಿ ಅಗತ್ಯ ವಸ್ತುಗಳ ಸರಣಿಯನ್ನು ಪೂರೈಸುವ ಕಾರ್ಯದಲ್ಲಿ ತೊಡಗಿದ್ದು, ಅದರಲ್ಲಿ ಒಂದು ಲಕ್ಷ ವ್ಯಾಗನ್ ಗಳಲ್ಲಿ ಅಗತ್ಯ ಸರಕು ಸಾಮಗ್ರಿಗಳನ್ನು ರವಾನಿಸಲಾಗಿದೆ.
ಆಹಾರ ಉತ್ಪನ್ನಗಳು, ಉಪ್ಪು, ಸಕ್ಕರೆ, ಹಾಲು, ಎಣ್ಣೆ, ಈರುಳ್ಳಿ, ತರಕಾರಿ ಮತ್ತು ಹಣ್ಣು, ಪೆಟ್ರೋಲಿಯಂ ಉತ್ಪನ್ನಗಳು, ಕಲ್ಲಿದ್ದಲು, ರಸಗೊಬ್ಬರ ಮತ್ತಿತರ ಅಗತ್ಯ ವಸ್ತುಗಳನ್ನು ಭಾರತೀಯ ರೈಲ್ವೆ ದೇಶಾದ್ಯಂತ ಸಾಗಾಣೆ ಮಾಡುತ್ತಿದೆ
ಕೊರೋನಾ ಸೋಂಕಿನ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಇಡೀ ದೇಶವೇ ಸಂಪೂರ್ಣವಾಗಿ ಲಾಕ್ ಡೌನ್ ಆಗಿರುವ ಸಂದರ್ಭದಲ್ಲಿ ಭಾರತೀಯ ರೈಲ್ವೆ, ದೇಶವಾಸಿಗಳ ಹಿತಕಾಯಲು ಸಂಪೂರ್ಣ ಬದ್ಧವಾಗಿದೆ ಮತ್ತು ತನ್ನ ತಡೆರಹಿತ ಸರಕು ಸಾಗಾಣೆ ಸೇವೆಗಳ ಮೂಲಕ ಅಗತ್ಯ ವಸ್ತುಗಳ ಲಭ್ಯತೆಯನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಸರ್ವ ಪ್ರಯತ್ನಗಳನ್ನು ಮಾಡುತ್ತಿದೆ. ಕಳೆದ ನಾಲ್ಕು ದಿನಗಳಿಂದೀಚೆಗೆ ಅಂದಾಜು 1.6 ಲಕ್ಷಕ್ಕೂ ಅಧಿಕ ವ್ಯಾಗನ್ ಗಳ ಮೂಲಕ ಪೂರೈಕೆ ಸರಣಿಯ ಕಾರ್ಯನಿರ್ವಹಣೆ ಮಾಡಲಾಗಿದೆ. ಅದರಲ್ಲಿ ಒಂದು ಲಕ್ಷಕ್ಕೂ ಅಧಿಕ ವ್ಯಾಗನ್ ಗಳಲ್ಲಿ ಅಗತ್ಯ ಸಾಮಗ್ರಿಗಳನ್ನು ಭಾರತೀಯ ರೈಲ್ವೆ ಸಾಗಾಣೆ ಮಾಡಿ, ದೇಶಕ್ಕೆ ಅಗತ್ಯ ವಸ್ತುಗಳ ಪೂರೈಕೆ ಕಾರ್ಯ ನಿರ್ವಹಣೆ ಸರಣಿಯನ್ನು ಮುಂದುವರಿಸಿದೆ.
ಹಲವು ರಾಜ್ಯಗಳಲ್ಲಿ ಲಾಕ್ ಡೌನ್ ಪರಿಸ್ಥಿತಿ ಉಂಟಾಗಿರುವುದರಿಂದ ಭಾರತೀಯ ರೈಲ್ವೆ, ದೇಶಕ್ಕೆ ಅಗತ್ಯವಿರುವ ವಸ್ತುಗಳ ಪೂರೈಕೆಗೆ ತೊಂದರೆ ಆಗದಂತೆ ತನ್ನ ಸರಕು ಸಾಗಾಣೆ ಗೋದಾಮುಗಳು, ನಿಲ್ದಾಣಗಳು ಮತ್ತು ನಿಯಂತ್ರಣ ಕಚೇರಿಗಳನ್ನು ದಿನದ 24 ಗಂಟೆಗಳು ಕಾರ್ಯನಿರ್ವಹಿಸುವಂತೆ ಮಾಡಿವೆ.
2020ರ ಮಾರ್ಚ್ 23ರಂದು ಒಟ್ಟಾರೆ 26577 ವ್ಯಾಗನ್ ಗಳಲ್ಲಿ ಆಹಾರ ಧಾನ್ಯಗಳು, ಉಪ್ಪು, ಎಣ್ಣೆ, ಸಕ್ಕರೆ, ಹಾಲು, ಹಣ್ಣು ಮತ್ತು ತರಕಾರಿ, ಈರುಳ್ಳಿ, ಕಲ್ಲಿದ್ದಲು ಮತ್ತು ಪೆಟ್ರೋಲಿಯಂ ಉತ್ಪನ್ನಗಳನ್ನು ತುಂಬಿಸಲಾಗಿತ್ತು. ಇದರಲ್ಲಿ 1168 ವ್ಯಾಗನ್ ಆಹಾರ ಧಾನ್ಯಗಳು, 42 ವ್ಯಾಗನ್ ಹಣ್ಣು ಮತ್ತು ತರಕಾರಿ, 42 ವ್ಯಾಗನ್ ಈರುಳ್ಳಿ, 42 ವ್ಯಾಗನ್ ಸಕ್ಕರೆ, 168 ವ್ಯಾಗನ್ ಉಪ್ಪು, 20 ವ್ಯಾಗನ್ ಹಾಲು, 22473 ವ್ಯಾಗನ್ ಕಲ್ಲಿದ್ದಲು ಮತ್ತು 2322 ವ್ಯಾಗನ್ ಪೆಟ್ರೋಲಿಯಂ ಉತ್ಪನ್ನಗಳು ಸೇರಿವೆ.
2020ರ ಮಾರ್ಚ್ 24ರಂದು ಒಟ್ಟಾರೆ 27742 ವ್ಯಾಗನ್ ಗಳಲ್ಲಿ ಅಗತ್ಯ ವಸ್ತುಗಳನ್ನು ತುಂಬಿಸಲಾಗಿತ್ತು. ಇದರಲ್ಲಿ 1444 ವ್ಯಾಗನ್ ಆಹಾರ ಧಾನ್ಯಗಳು, 84 ವ್ಯಾಗನ್ ಹಣ್ಣು ಮತ್ತು ತರಕಾರಿ, 168 ವ್ಯಾಗನ್ ಉಪ್ಪು, 15 ವ್ಯಾಗನ್ ಹಾಲು, 50 ಟ್ಯಾಂಕ್ ಎಣ್ಣೆ, 24207 ವ್ಯಾಗನ್ ಕಲ್ಲಿದ್ದಲು ಮತ್ತು 1774 ವ್ಯಾಗನ್ ಪೆಟ್ರೋಲಿಯಂ ಉತ್ಪನ್ನಗಳು ಸೇರಿವೆ.
2020ರ ಮಾರ್ಚ್ 25ರಂದು ಒಟ್ಟಾರೆ 23097 ವ್ಯಾಗನ್ ಗಳಲ್ಲಿ ಅಗತ್ಯ ವಸ್ತುಗಳನ್ನು ತುಂಬಿಸಲಾಗಿತ್ತು. ಇದರಲ್ಲಿ 876 ವ್ಯಾಗನ್ ಆಹಾರ ಧಾನ್ಯಗಳು, 42 ವ್ಯಾಗನ್ ಸಕ್ಕರೆ, 42 ವ್ಯಾಗನ್ ಉಪ್ಪು, 15 ವ್ಯಾಗನ್ ಹಾಲು, 20418 ವ್ಯಾಗನ್ ಕಲ್ಲಿದ್ದಲು ಮತ್ತು 1704 ವ್ಯಾಗನ್ ಪೆಟ್ರೋಲಿಯಂ ಉತ್ಪನ್ನಗಳು ಸೇರಿವೆ.
2020ರ ಮಾರ್ಚ್ 26ರಂದು ಒಟ್ಟಾರೆ 24009 ವ್ಯಾಗನ್ ಗಳಲ್ಲಿ ಅಗತ್ಯ ವಸ್ತುಗಳನ್ನು ತುಂಬಿಸಲಾಗಿತ್ತು. ಇದರಲ್ಲಿ 1417 ವ್ಯಾಗನ್ ಆಹಾರ ಧಾನ್ಯಗಳು, 42 ವ್ಯಾಗನ್ ಸಕ್ಕರೆ, 42 ವ್ಯಾಗನ್ ಉಪ್ಪು, 20784 ವ್ಯಾಗನ್ ಕಲ್ಲಿದ್ದಲು ಮತ್ತು 1724 ವ್ಯಾಗನ್ ಪೆಟ್ರೋಲಿಯಂ ಉತ್ಪನ್ನಗಳು ಸೇರಿವೆ.
ಕೋವಿಡ್-19 ಹಿನ್ನೆಲೆಯಲ್ಲಿ ಹಲವು ನಿರ್ಬಂಧಗಳನ್ನು ವಿಧಿಸಿರುವುದರಿಂದ ಅಗತ್ಯ ವಸ್ತುಗಳನ್ನು ಹೊತ್ತ ರೈಲುಗಳು ಸಕಾಲದಲ್ಲಿ ಮತ್ತು ಯಾವುದೇ ವಿಳಂಬವಿಲ್ಲದೆ, ಸುಗಮವಾಗಿ ಸಾಗಿಸಲು ರಾಜ್ಯ ಸರ್ಕಾರಗಳೊಂದಿಗೆ ನಿಕಟ ಸಮನ್ವಯವನ್ನು ಕಾಯ್ದುಕೊಳ್ಳಲಾಗುತ್ತಿದೆ.
ಭಾರತೀಯ ರೈಲ್ವೆ ವ್ಯವಸ್ಥೆಯಲ್ಲಿ ಅಗತ್ಯ ವಸ್ತುಗಳನ್ನು ತಡೆರಹಿತವಾಗಿ ಸಾಗಿಸುವ ಕುರಿತು ನಿಗಾವಹಿಸಲು ರೈಲ್ವೆ ಸಚಿವಾಲಯ ತುರ್ತು ಸರಕು ನಿಯಂತ್ರಣ ವ್ಯವಸ್ಥೆಯನ್ನು ಸೃಷ್ಟಿಸಿದೆ. ಹಿರಿಯ ಅಧಿಕಾರಿಗಳ ಮಟ್ಟದಲ್ಲಿ ಸರಕು ಸಾಗಾಣೆ ಬಗ್ಗೆ ನಿಗಾ ಇಡಲಾಗಿದೆ.
ಭಾರತೀಯ ರೈಲ್ವೆ ಇಂತಹ ಸಂಕಷ್ಟದ ಸಮಯದಲ್ಲಿ ತನ್ನ ಮಹತ್ವದ ಪಾತ್ರವನ್ನು ಅರಿತಿದೆ ಮತ್ತು ಅಗತ್ಯ ವಸ್ತುಗಳ ಪೂರೈಕೆಯನ್ನು ವ್ಯಾಗನ್ ಗಳಿಗೆ ತುಂಬಲು ಮತ್ತು ಅವುಗಳನ್ನು ತ್ವರಿತವಾಗಿ ಇಳಿಸಲು ಸಂಬಂಧಿಸಿದ ಎಲ್ಲರೂ ಸಂಪೂರ್ಣ ಸಹಕಾರ ನೀಡಬೇಕೆಂದು ರೈಲ್ವೆ ಮನವಿ ಮಾಡುತ್ತದೆ.
****
(रिलीज़ आईडी: 1608716)
आगंतुक पटल : 167