ಇಂಧನ ಸಚಿವಾಲಯ

ವೆಂಟಿಲೇಟರ್‌ಗಳನ್ನು ಖರೀದಿಸಲು ಎಸ್‌ಜೆವಿಎನ್  ಕಂಪನಿ 1 ಕೋಟಿ  ರೂಪಾಯಿ ನೀಡಿದೆ

ಪ್ರಕಟಣಾ ದಿನಾಂಕ: 27 MAR 2020 11:21AM by PIB Bengaluru

ವೆಂಟಿಲೇಟರ್‌ಗಳನ್ನು ಖರೀದಿಸಲು ಎಸ್‌ಜೆವಿಎನ್  ಕಂಪನಿ 1 ಕೋಟಿ  ರೂಪಾಯಿ ನೀಡಿದೆ

 

ಕೇಂದ್ರ ಇಂಧನ ಸಚಿವಾಲಯದ ಅಧೀನದಲ್ಲಿರುವ ಮಿನಿರತ್ನ ಸಾರ್ವಜನಿಕ ಸಾಮ್ಯದ ಉದ್ದಿಮೆಯಾದ ಎಸ್‌ಜೆವಿಎನ್ ಲಿಮಿಟೆಡ್ ಕಂಪನಿಯು  ಜಗತ್ತನ್ನೇ ಆತಂಕಕ್ಕೆ ದೂಡಿರುವ ಕೊರೊನಾ ವೈರಸ್ (ಸಿಒವಿಐಡಿ -19) ಸಾಂಕ್ರಾಮಿಕ ರೋಗವನ್ನು ಎದುರಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದೆ. ಇಂತಹ ಬಿಕ್ಕಟ್ಟಿನ ಸಮಯದಲ್ಲಿ, ಕೊರೊನಾ ವೈರಸ್ ಎದುರಿಸಲು 1 ಕೋಟಿ ರೂಪಾಯಿಗಳನ್ನು ನೀಡಲು ಕೇಂದ್ರ  ಈ ಸಾರ್ವಜನಿಕ ಸಾಮ್ಯದ ಉದ್ದಿಮೆಯು ತಾತ್ವಿಕವಾಗಿ ಒಪ್ಪಿಕೊಂಡಿದೆ.

ಈ ಮೊತ್ತವನ್ನು ಶಿಮ್ಲಾದ ಇಂದಿರಾ ಗಾಂಧಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಾಗಿ ಆರು ವೆಂಟಿಲೇಟರ್‌ಗಳನ್ನು ಮತ್ತು ತಾಂಡಾ ಡಾ.ರಾಜೇಂದರ್ ಪ್ರಸಾದ್ ವೈದ್ಯಕೀಯ ಕಾಲೇಜಿಗೆ  ವೆಂಟಿಲೇಟರ್‌ಗಳು ಖರೀದಿಸಲು ಮತ್ತು ಖನೇರಿಯಲ್ಲಿರುವ ರಾಮ್ ಪುರ್ ಆಸ್ಪತ್ರೆಗೆ ಕೆಲವು ವೆಂಟಿಲೇಟರ್ ಗಳನ್ನು ಖರೀದಿಸಲು ಬಳಸಲಾಗುವುದೆಂದು ಎಸ್‌ಜೆವಿಎನ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ (ಸಿಎಂಡಿ)ರಾದ  ನಂದ್ ಲಾಲ್ ಶರ್ಮಾ ಹೇಳಿದ್ದಾರೆ.  ಈ ಆರೋಗ್ಯ ಸಂಸ್ಥೆಗಳಿಗೆ ಮುಖಗವಸುಗಳು, ಸ್ಯಾನಿಟೈಜರ್‌ಗಳು ಮತ್ತು ಕೈಗವಸುಗಳಂತಹ ಇತರ ಅಗತ್ಯ ವಸ್ತುಗಳನ್ನು ಒದಗಿಸಲು ಎಸ್‌ಜೆವಿಎನ್ ಲಿಮಿಟೆಡ್ ಆರ್ಥಿಕ ನೆರವು  ಸಹ ನೀಡಲಿದೆ.


(ಪ್ರಕಟಣೆ ಐ.ಡಿ.: 1608530) ವಿಸಿಟರ್ ಕೌಂಟರ್ : 106
ಪ್ರಕಟಣೆಯನ್ನು ಇದರಲ್ಲಿ ಓದಿ: English , हिन्दी , Marathi , Assamese , Bengali , Punjabi , Gujarati , Odia , Tamil , Telugu