ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
ಇ-ಕಾಮರ್ಸ್ ಮತ್ತು ಲಾಜಿಸ್ಟಿಕ್ಸ್ ಉದ್ಯಮದ ಎಲ್ಲ ಪಾಲುದಾರರೊಂದಿಗೆ ಶ್ರೀ ಪಿಯೂಷ್ ಗೋಯಲ್ ವಿಡಿಯೋ ಕಾನ್ಫೆರೆನ್ಸ್ ನಡೆಸಿದರು
Posted On:
27 MAR 2020 12:28PM by PIB Bengaluru
ಇ-ಕಾಮರ್ಸ್ ಮತ್ತು ಲಾಜಿಸ್ಟಿಕ್ಸ್ ಉದ್ಯಮದ ಎಲ್ಲ ಪಾಲುದಾರರೊಂದಿಗೆ ಶ್ರೀ ಪಿಯೂಷ್ ಗೋಯಲ್ ವಿಡಿಯೋ ಕಾನ್ಫೆರೆನ್ಸ್ ನಡೆಸಿದರು
ಜನರಿಗೆ ಅವಶ್ಯಕ ವಸ್ತುಗಳು ಅತ್ಯಂತ ಸುರಕ್ಷಿತ ಮತ್ತು ಅನುಕೂಲಕರ ರೀತಿಯಲ್ಲಿ ತಲುಪಿಸುವುದನ್ನು ಖಚಿತಪಡಿಸಲು ಸರ್ಕಾರ ಬದ್ಧವಾಗಿದೆ ಎಂದರು
ರೈಲ್ವೇ ಮತ್ತು ವಾಣಿಜ್ಯ ಹಾಗೂ ಔದ್ಯಮಿಕ ಸಚಿವ ಶ್ರೀ ಪಿಯೂಷ್ ಗೋಯಲ್ ಅವರು ಈ ಕಾಮರ್ಸ್ ಮತ್ತು ಲಾಜಿಸ್ಟಿಕ್ಸ್ ಉದ್ಯಮದ ಎಲ್ಲ ಪಾಲುದಾರರೊಂದಿಗೆ ಕೋವಿಡ್ – 19 ಲಾಕ್ ಡೌನ್ ನಿಂದಾಗಿ ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ಮತ್ತು ಅವುಗಳ ಪರಿಹಾರಕ್ಕಾಗಿ ಕೈಗೊಳ್ಳಲಾದ ಕ್ರಮಗಳನ್ನು ಚರ್ಚಿಸಲು ಗುರುವಾರ ವಿಡಿಯೋ ಕಾನ್ಫೆರೆನ್ಸ್ ನಡೆಸಿದರು. ಜನರಿಗೆ ಅವಶ್ಯಕ ವಸ್ತುಗಳು ಅತ್ಯಂತ ಸುರಕ್ಷಿತ ಮತ್ತು ಅನುಕೂಲಕರ ರೀತಿಯಲ್ಲಿ ತಲುಪಿಸುವುದನ್ನು ಖಚಿತಪಡಿಸಲು ಸರ್ಕಾರ ಬದ್ಧವಾಗಿದೆ ಎಂದು ಔದ್ಯಮಿಕ ನಾಯಕರಿಗೆ ಭರವಸೆ ನೀಡಿದರು.
ಸ್ನಾಪ್ ಡೀಲ್ಸ್, ಶಾಪ್ ಕ್ಲೂಸ್, ಫ್ಲಿಪ್ ಕಾರ್ಟ್, ಗ್ರೋಫರ್ಸ್, ನೆಟ್ ಮೆಡ್ಸ್, ಫಾರ್ಮ್ ಈಸಿ, 1 ಎಂ ಜಿ ಟೆಕ್, ಉಡಾನ್, ಅಮೇಝಾನ್ ಇಂಡಿಯಾ, ಬಿಗ್ ಬಾಸ್ಕೆಟ್, ಝೊಮೆಟೊ ನಂತಹ ಈ ಕಾಮರ್ಸ್ ಕಂಪನಿಗಳ ಪ್ರತಿನಿಧಿಗಳು ಸಭೆಗೆ ಹಾಜರಾಗಿದ್ದರು. ಮೆಟ್ರೊ ಕ್ಯಾಶ್ & ಕ್ಯಾರಿ, ವಾಲ್ಮಾರ್ಟ್, ಬೃಹತ್ ಚಿಲ್ಲರೆ ಕಂಪನಿಗಳನ್ನು ಪ್ರತಿನಿಧಿಸಿದ್ದರೆ ಆರ್ ಪಿ ಜಿ, ಎಕ್ಸ್ ಪ್ರೆಸ್ ಇಂಡಸ್ಟ್ರಿ ಕೌನ್ಸಿಲ್, ಡೆಲಿವೆರಿ, ಸೇಫ್ ಎಕ್ಸ್ ಪ್ರೆಸ್, ಪೆಟಿಎಂ, ಸ್ವಿಗ್ಗಿ ಲಾಜಿಸ್ಟಿಕ್ ಕಂಪನಿಗಳನ್ನು ಪ್ರತಿನಿಧಿಸಿದ್ದವು.
ಅಗತ್ಯ ವಸ್ತುಗಳ ಸರಬರಾಜು ಸರಪಳಿಯನ್ನು ಕಾಪಾಡಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ವಿವಿಧ ಸೌಲಭ್ಯಗಳು ಸುಗಮವಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಖಚಿತಪಡಿಸಿಕೊಳ್ಳಲು ಡಿಪಿಐಐಟಿ ನಿಯಮಿತವಾಗಿ ಚಿಲ್ಲರೆ ವ್ಯಾಪಾರಿಗಳು ಮತ್ತು ಇ-ಕಾಮರ್ಸ್ ಕಂಪನಿಗಳೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಡಿಪಿಐಐಟಿ ಪ್ರಯತ್ನದ ಫಲವಾಗಿ ಅಗತ್ಯ ವಸ್ತುಗಳ ಸರಬರಾಜಿಗೆ ಸಂಬಂಧಿಸಿದ ವಿವಿಧ ವಿಷಯಗಳನ್ನು ಹೇಗೆ ನಿರ್ವಹಿಸಬೇಕು ಎಂಬುದರ ಕುರಿತು ರಾಜ್ಯ ಸರ್ಕಾರಗಳ ಮಾರ್ಗದರ್ಶನಕ್ಕಾಗಿ ಗೃಹ ಸಚಿವಾಲಯವು ಪ್ರಮಾಣಿತ ಕಾರ್ಯಾಚರಣೆ ವಿಧಾನವನ್ನು ಜಾರಿಗೊಳಿಸಿದೆ. ಸರಕುಗಳ ಸಾಗಣೆ ಮತ್ತು ವಿತರಣೆ, ಉತ್ಪಾದನೆ, ಸಾಮಾನ್ಯ ಜನರಿಗೆ ಅಗತ್ಯ ವಸ್ತುಗಳನ್ನು ತಲುಪಿಸುವುದು, ಮತ್ತು ಲಾಕ್ ಡೌನ್ ಸಮಯದಲ್ಲಿ ವಿವಿಧ ಪಾಲುದಾರರು ಎದುರಿಸುತ್ತಿರುವ ಸಮಸ್ಯೆಗಳ ಮೇಲೆ ಆಗಿಂದಾಗ್ಗೆ ನಿಗಾವಹಿಸಲು ಇಲಾಖೆ ಒಂದು ನಿಯಂತ್ರಣಾ ಕೊಠಡಿಯನ್ನೂ ಆರಂಭಿಸಿದೆ.
ಲಾಕ್ ಡೌನ್ ಇರುವುದನ್ನು ಗಮನದಲ್ಲಿರಿಸಿಕೊಂಡು ವಿವಿಧ ಕಾರ್ಯಗಳನ್ನು ಪೂರ್ಣಗೊಳಿಸುವ, ಪ್ರತ್ಯುತ್ತರಗಳನ್ನು ಫೈಲ್ ಮಾಡುವ, ಶುಲ್ಕ ಪಾವತಿಸುವ ಮುಂತಾದವುಗಳಿಗೆ ಅವಧಿಯನ್ನು ವಿಸ್ತರಿಸಿದೆ. ಪೇಟೆಂಟ್, ವಿನ್ಯಾಸ ಮತ್ತು ಟ್ರೇಡ್ ಮಾರ್ಕ್ ಅರ್ಜಿ ಸಲ್ಲಿಸಲು ನಿಗದಿತ ದಿನಾಂಕವನ್ನು ಹೊಂದಿರುವ ಎಲ್ಲ ಅರ್ಜಿದಾರರಿಗೆ ಇದು ಸಹಾಯಕರವಾಗಲಿದೆ.
(Release ID: 1608506)
Visitor Counter : 218
Read this release in:
Punjabi
,
Telugu
,
English
,
Marathi
,
Hindi
,
Assamese
,
Bengali
,
Gujarati
,
Odia
,
Tamil
,
Malayalam