ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನ ಮಂತ್ರಿ ಅವರು ನಾಳೆ ನಡೆಯುವ ಜಿ 20 ವರ್ಚುವಲ್  ಶೃಂಗದಲ್ಲಿ ಪಾಲ್ಗೊಳ್ಳಲಿದ್ದಾರೆ

Posted On: 25 MAR 2020 9:31PM by PIB Bengaluru

ಪ್ರಧಾನ ಮಂತ್ರಿ ಅವರು ನಾಳೆ ನಡೆಯುವ ಜಿ 20 ವರ್ಚುವಲ್  ಶೃಂಗದಲ್ಲಿ ಪಾಲ್ಗೊಳ್ಳಲಿದ್ದಾರೆ



ಕೊರೋನಾ ವೈರಸ್ ಸಂಬಂಧಿ ವಿಷಯಗಳನ್ನು ಚರ್ಚಿಸಲು ನಾಳೆ ನಡೆಯುವ ಜಿ 20 ವರ್ಚುವಲ್ ಶೃಂಗದಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾಗವಹಿಸಲಿದ್ದಾರೆ.
“ಕೋವಿಡ್ 19 ಜಾಗತಿಕ ಸಾಂಕ್ರಾಮಿಕ ಖಾಯಿಲೆಯನ್ನು ನಿಭಾಯಿಸುವಲ್ಲಿ ಜಿ.20 ಶೃಂಗಕ್ಕೆ ಜಾಗತಿಕ ಮಟ್ಟದಲ್ಲಿ ಪ್ರಮುಖ ಪಾತ್ರವಿದೆ. ನಾನು ನಾಳೆ ಸೌದಿ ಜಿ.20 ಅಧ್ಯಕ್ಷತೆಯಲ್ಲಿ ನಡೆಯುವ ಜಿ 20 ವರ್ಚುವಲ್ ಶೃಂಗದಲ್ಲಿ ಫಲಪ್ರದ ಚರ್ಚೆಗಳನ್ನು ಎದುರು ನೋಡುತ್ತಿದ್ದೇನೆ” ಎಂದು ಪ್ರಧಾನ ಮಂತ್ರಿ ಅವರು ಟ್ವೀಟ್ ನಲ್ಲಿ ಹೇಳಿದ್ದಾರೆ.



***



(Release ID: 1608255) Visitor Counter : 71