ಪ್ರಧಾನ ಮಂತ್ರಿಯವರ ಕಛೇರಿ
ಸಾರ್ಕ್ ದೇಶಗಳ ನಾಯಕರ ವಿಡಿಯೊ ಕಾನ್ಫರೆನ್ಸ್ ನಲ್ಲಿ COVID-19 ನಿಯಂತ್ರಣದ ಮಾರ್ಗೋಪಾಯ ಕುರಿತು ಪ್ರಧಾನಿ
Posted On:
15 MAR 2020 6:15PM by PIB Bengaluru
ಪರಿಸ್ಥಿತಿಯ ಬಗ್ಗೆ ನಿಮ್ಮ ವಿಚಾರಗಳನ್ನು ಹಂಚಿಕೊಂಡಿದ್ದಕ್ಕಾಗಿ ಮತ್ತು ನೀವು ಕೈಗೊಂಡಿರುವ ಕ್ರಮಗಳಿಗಾಗಿ ಧನ್ಯವಾದಗಳು.
ನಾವು ಗಂಭೀರ ಸವಾಲನ್ನು ಎದುರಿಸುತ್ತಿದ್ದೇವೆ ಎಂದು ನಮಗೆಲ್ಲಾ ಮನದಟ್ಟಾಗಿದೆ. ಮುಂಬರುವ ದಿನಗಳಲ್ಲಿ ಸಾಂಕ್ರಾಮಿಕವು ಯಾವ ರೂಪ ಪಡೆಯಲಿದೆ ಎಂಬುದು ನಮಗೆ ಇನ್ನೂ ತಿಳಿದಿಲ್ಲ.
ನಾವು ಒಟ್ಟಾಗಿ ಕೆಲಸ ಮಾಡಬೇಕು ಎಂಬುದಂತೂ ಸ್ಪಷ್ಟವಾಗಿದೆ. ದೂರವಾಗುವುದಲ್ಲ ಜೊತೆಯಾಗಿರುವುದು; ಗೊಂದಲವಲ್ಲ ಸಹಯೋಗ; ಗಾಬರಿಯಲ್ಲ ತಯಾರಿ –ಎನ್ನುವ ಮೂಲಕ ನಾವು ಇದಕ್ಕೆ ಉತ್ತಮವಾಗಿ ಪ್ರತಿಕ್ರಿಯಿಸಬಹುದು.
ಈ ಸಹಯೋಗಕ್ಕೆ, ಈ ಜಂಟಿ ಪ್ರಯತ್ನಕ್ಕೆ ಭಾರತವು ಏನು ನೀಡಬಹುದು ಎಂಬುದರ ಕುರಿತು ಕೆಲವು ವಿಚಾರಗಳನ್ನು ಹಂಚಿಕೊಳ್ಳುತ್ತೇನೆ.
COVID-19 ತುರ್ತು ನಿಧಿಯನ್ನು ಸೃಷ್ಟಿಸಲು ನಾನು ಪ್ರಸ್ತಾಪಿಸುತ್ತೇವೆ. ಇದು ನಮ್ಮೆಲ್ಲರ ಸ್ವಯಂಪ್ರೇರಿತ ಕೊಡುಗೆಗಳನ್ನು ಆಧರಿಸಿರಬಹುದು. ಈ ನಿಧಿಗೆ ಭಾರತವು ಆರಂಭದಲ್ಲಿ 10 ಮಿಲಿಯನ್ ಅಮೆರಿಕಕನ್ ಡಾಲರ್ ನೀಡುತ್ತದೆ. ನಮ್ಮಲ್ಲಿ ಯಾರಾದರೂ ತಕ್ಷಣದ ಕ್ರಮಗಳ ವೆಚ್ಚವನ್ನು ಭರಿಸಲು ಈ ನಿಧಿಯನ್ನು ಬಳಸಬಹುದು. ನಮ್ಮ ವಿದೇಶಾಂಗ ಕಾರ್ಯದರ್ಶಿಗಳು, ನಮ್ಮ ರಾಯಭಾರ ಕಚೇರಿಗಳ ಮೂಲಕ ಈ ನಿಧಿಯ ಪರಿಕಲ್ಪನೆ ಮತ್ತು ಅದರ ಕಾರ್ಯವಿಧಾನವನ್ನು ತ್ವರಿತವಾಗಿ ಅಂತಿಮಗೊಳಿಸಬಹುದು.
ನಾವು ಪರೀಕ್ಷಾ ಕಿಟ್‌ಗಳು ಮತ್ತು ಇತರ ಸಲಕರಣೆಗಳೊಂದಿಗೆ ಭಾರತದ ವೈದ್ಯರು ಮತ್ತು ತಜ್ಞರ ಕ್ಷಿಪ್ರ ಪ್ರತಿಕ್ರಿಯೆ ತಂಡವನ್ನು ರೂಪಿಸುತ್ತಿದ್ದೇವೆ. ಅವರು ಸದಾ ಸನ್ನದ್ಧರಾಗಿರುತ್ತಾರೆ ಹಾಗೂ ನಿಮಗೆ ಅಗತ್ಯವಿದ್ದರೆ ಸೇವೆಗೆ ಸಿದ್ಧರಾಗಿರುತ್ಥಾರೆ.
ನಿಮ್ಮ ತುರ್ತು ಪ್ರತಿಕ್ರಿಯೆ ತಂಡಗಳಿಗೆ ನಾವು ಆನ್‌ಲೈನ್ ತರಬೇತಿ ಮಾದರಿಗಳನ್ನು ತ್ವರಿತವಾಗಿ ವ್ಯವಸ್ಥೆಗೊಳಿಸಬಹುದು. ನಮ್ಮ ಎಲ್ಲ ತುರ್ತು ಸಿಬ್ಬಂದಿಗಳ ಸಾಮರ್ಥ್ಯವನ್ನು ಹೆಚ್ಚಿಸಲು ಇದು ನಮ್ಮ ದೇಶದಲ್ಲಿ ನಾವು ಬಳಸಿದ ಮಾದರಿಯನ್ನು ಆಧರಿಸಿದೆ.
ಸಂಭವನೀಯ ವೈರಸ್ ವಾಹಕಗಳನ್ನು ಮತ್ತು ಅವರು ಸಂಪರ್ಕಿಸಿದ ಜನರನ್ನು ಪತ್ತೆಹಚ್ಚಲು ನಾವು ಸಮಗ್ರ ರೋಗ ಕಣ್ಗಾವಲು ಪೋರ್ಟಲ್ ಅನ್ನು ಸ್ಥಾಪಿಸಿದ್ದೇವೆ. ನಾವು ಈ ರೋಗ ಕಣ್ಗಾವಲು ಸಾಫ್ಟ್‌ವೇರ್ ಅನ್ನು ಸಾರ್ಕ್ ರಾಷ್ಟ್ರಗಳೊಂದಿಗೆ ಹಂಚಿಕೊಳ್ಳಬಹುದು ಮತ್ತು ಇದನ್ನು ಬಳಸುವ ಬಗ್ಗೆ ತರಬೇತಿ ನೀಡಬಹುದು.
ನಮ್ಮ ನಡುವೆ ಇರುವ ಉತ್ತಮ ಅಭ್ಯಾಸಗಳನ್ನು ತಿಳಿಯಲು ಸಾರ್ಕ್ ವಿಪತ್ತು ನಿರ್ವಹಣಾ ಕೇಂದ್ರದಂತಹ ಅಸ್ತಿತ್ವದಲ್ಲಿರುವ ಸೌಲಭ್ಯಗಳನ್ನು ಸಹ ಬಳಸೋಣ.
ಭವಿಷ್ಯದಲ್ಲಿ, ದಕ್ಷಿಣ ಏಷ್ಯಾ ಪ್ರದೇಶದ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸುವ ಸಂಶೋಧನೆಯ ಹೊಂದಾಣಿಕೆಗಾಗಿ ನಾವು ಸಾಮಾನ್ಯ ಸಂಶೋಧನಾ ವೇದಿಕೆಯನ್ನು ರಚಿಸಬಹುದು. ಅಂತಹ ವೇದಿಕೆ ರಚನೆಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ನೆರವು ನೀಡುತ್ತದೆ.
COVID-19 ರ ದೀರ್ಘಕಾಲೀನ ಆರ್ಥಿಕ ಪರಿಣಾಮಗಳ ಬಗ್ಗೆ ಮತ್ತು ನಮ್ಮ ಆಂತರಿಕ ವ್ಯಾಪಾರ ಮತ್ತು ಸ್ಥಳೀಯ ಮೌಲ್ಯ ಸರಪಳಿಗಳನ್ನು ಅದರ ಪ್ರಭಾವದಿಂದ ನಾವು ಹೇಗೆ ರಕ್ಷಿಸಬಹುದು ಎಂದು ನಾವು ನಮ್ಮ ತಜ್ಞರನ್ನು ಕೇಳಬಹುದು.
ಕೊನೆಯದಾಗಿ, ಇದು ನಮ್ಮ ಮೇಲೆ ಪರಿಣಾಮ ಬೀರುವ ಮೊದಲ ಅಥವಾ ಕೊನೆಯ ಸಾಂಕ್ರಾಮಿಕವಲ್ಲ ರೋಗವಲ್ಲ.
ಅಂತಹ ಸಂದರ್ಭಗಳಲ್ಲಿ ನಮ್ಮ ಎಲ್ಲಾ ಗಡಿಗಳಲ್ಲಿ ಮತ್ತು ನಮ್ಮ ಗಡಿಯೊಳಗೆ ಅನ್ವಯಿಸಬಹುದಾದ ಸಾಮಾನ್ಯ ಸಾರ್ಕ್ ಸಾಂಕ್ರಾಮಿಕ ಶಿಷ್ಟಾಚಾರಗಳನ್ನು ನಾವು ರೂಪಿಸಬೇಕು.
ನಮ್ಮ ಪ್ರದೇಶದಾದ್ಯಂತ ಇಂತಹ ಸೋಂಕುಗಳು ಹರಡುವುದನ್ನು ಇದು ತಡೆಯುತ್ತದೆ ಮತ್ತು ನಮ್ಮ ಆಂತರಿಕ ಚಲನೆಯನ್ನು ಮುಕ್ತವಾಗಿಡಲು ನಮಗೆ ಅನುವು ಮಾಡಿಕೊಡುತ್ತದೆ.
(Release ID: 1606690)
Visitor Counter : 179
Read this release in:
Assamese
,
English
,
Urdu
,
Hindi
,
Marathi
,
Bengali
,
Punjabi
,
Gujarati
,
Odia
,
Tamil
,
Telugu
,
Malayalam