ಪ್ರಧಾನ ಮಂತ್ರಿಯವರ ಕಛೇರಿ

ರಾಜ್ಯಸಭೆಯಲ್ಲಿ ರಾಷ್ಟ್ರಪತಿಯವರ ವಂದನಾ ನಿರ್ಣಯ ಭಾಷಣಕ್ಕೆ ಪ್ರಧಾನಿ ಮೋದಿಯವರ ಉತ್ತರ

Posted On: 06 FEB 2020 8:00PM by PIB Bengaluru

ರಾಜ್ಯಸಭೆಯಲ್ಲಿ ರಾಷ್ಟ್ರಪತಿಯವರ ವಂದನಾ ನಿರ್ಣಯ ಭಾಷಣಕ್ಕೆ ಪ್ರಧಾನಿ ಮೋದಿಯವರ ಉತ್ತರ

 

ಗೌರವಾನ್ವಿತ ಸಭಾಪತಿಯವರೇ, ಸಂಸತ್ತಿನ ಜಂಟಿ ಅಧಿವೇಶನದಲ್ಲಿ ಗೌರವಾನ್ವಿತ ರಾಷ್ಟ್ರಪತಿಯವರ ಭಾಷಣದಿಂದ ಕಲಿತ ಪಾಠಗಳು 130 ಕೋಟಿ ಭಾರತೀಯರ ಆಕಾಂಕ್ಷೆಗಳು ಮತ್ತು ನಿರೀಕ್ಷೆಗಳನ್ನು ಪ್ರತಿಬಿಂಬಿಸುತ್ತವೆ. ಗೌರವಾನ್ವಿತ ರಾಷ್ಟ್ರಪತಿಯವರ ಭಾಷಣವನ್ನು ಬೆಂಬಲಿಸಲು ನಾನು ಸದನದಲ್ಲಿದ್ದೇನೆ.

45 ಕ್ಕೂ ಹೆಚ್ಚು ಗೌರವಾನ್ವಿತ ಸದಸ್ಯರು ಭಾಷಣದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ಇದು ಹಿರಿಯರ ಸದನ ಮತ್ತು ಅನುಭವಸ್ಥರ ಸದನ. ಚರ್ಚೆಯನ್ನು ಉತ್ಕೃಷ್ಟಗೊಳಿಸಲು ಎಲ್ಲರ ಪ್ರಯತ್ನವಾಗಿದೆ. ಶ್ರೀ ಗುಲಾಂ ನಬಿ, ಶ್ರೀ ಆನಂದ ಶರ್ಮಾ, ಶ್ರೀ ಭೂಪೇಂದ್ರ ಯಾದವ್, ಶ್ರೀ ಸುಧಾಂಶು ತ್ರಿವೇದಿ, ಶ್ರೀ ಸುಧಾಕರ್ ಶೇಖರ್, ಶ್ರೀ ರಾಮಚಂದ್ರ ಪ್ರಸಾದ್, ಶ್ರೀ ರಾಮಗೋಪಾಲ್, ಶ್ರೀ ಸತೀಶ್ ಚಂದ್ರ ಮಿಶ್ರಾ, ಶ್ರೀ ಸಂಜಯ್ ರಾವತ್, ಶ್ರೀ ಸ್ವಪನ್ ದಾಸ್, ಶ್ರೀ ಪ್ರಸನ್ನ ಆಚಾರ್ಯ, ಶ್ರೀ ನವನೀತ್  ಮತ್ತಿತರ ಎಲ್ಲ ಗೌರವಾನ್ವಿತ ಸದಸ್ಯರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ಎಲ್ಲರ ಭಾಷಣಗಳಿಂದ ನಾನು ಟಿಪ್ಪಣಿಗಳನ್ನು ತೆಗೆದುಕೊಳ್ಳುತ್ತಿರುವಾಗ, ಅನೇಕ ಹೊಸ ವಿಷಯಗಳು ಹೊರಬಂದವು. ಎಲ್ಲಾ ಗೌರವಾನ್ವಿತ ಸದಸ್ಯರ ಸಹಕಾರದಿಂದಾಗಿ ನಮ್ಮ ಹಿಂದಿನ ಅಧಿವೇಶನವು ಫಲಪ್ರದವಾಗಿದ್ದರ ಬಗ್ಗೆ ಸದನವು ಹೆಮ್ಮೆಪಡಬಹುದು. ಅದಕ್ಕಾಗಿ ಸದನದ ಎಲ್ಲಾ ಗೌರವಾನ್ವಿತ ಸದಸ್ಯರಿಗೆ ಅಭಿನಂದನೆ ಸಲ್ಲಿಸಬೇಕು.

ಇದು ಅನುಭವಿ ಮತ್ತು ಹಿರಿಯರ ಸದನವಾಗಿದೆ, ಆದ್ದರಿಂದ ದೇಶವು ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿರುವುದು ಸಹಜವಾಗಿದೆ, ಆಡಳಿತ ಪಕ್ಷದವರೂ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದ್ದರು ಮತ್ತು ನಿಮ್ಮ ಪ್ರಯತ್ನಗಳಿಂದ ದೇಶಕ್ಕೆ ಸಾಕಷ್ಟು ಒಳ್ಳೆಯ ನಿರೀಕ್ಷೆಗಳು ಹೊರಹೊಮ್ಮುವ ಬಗ್ಗೆ, ನನ್ನಂತಹ ಹೊಸ ಸದಸ್ಯರಿಗೆ ಯೋಗ್ಯವಾದ ಮಾರ್ಗದರ್ಶನದ ಬಗ್ಗೆ ನಾನು ನಿರೀಕ್ಷೆ ಇಟ್ಟುಕೊಂಡಿದ್ದೆ.  ಆದರೆ ನಿರೀಕ್ಷೆಗಳು ಹುಸಿಯಾಗಿತ್ತಿರುವುದರಿಂದ ನಾನು ನಿರಾಶೆಗೊಂಡಿದ್ದೇನೆ.

ನೀವು ಮೊದಲಿದ್ದಲ್ಲೇ ಸಿಲುಕಿಕೊಂಡಿದ್ದೀರಿ ಎಂದು ತೋರುತ್ತದೆ. ಕೆಲವೊಮ್ಮೆ ನೀವು ಹಿಂದಕ್ಕೆ ಹೋಗುತ್ತಿರುವಂತೆ ತೋರುತ್ತದೆ. ನಿರಾಶೆ ಮತ್ತು ಹತಾಶೆಯ ಭಾವವನ್ನು ಸೃಷ್ಟಿಸುವ ಬದಲು ನಾವು ದೇಶಕ್ಕೆ ಸರಿಯಾದ ನಿರ್ದೇಶನವನ್ನು ನೀಡಬಹುದಿತ್ತು; ಹೊಸ ಉತ್ಸಾಹ, ಹೊಸ ಆಲೋಚನೆಗಳು, ಹೊಸ ಶಕ್ತಿಯನ್ನು ನೀಡಲು ಸರ್ಕಾರಕ್ಕೆ ಮಾರ್ಗದರ್ಶನ ನೀಡಬೇಕು; ಆದರೆ, ನಿಶ್ಚಲವಾಗುವುದೇ ಉತ್ತಮ ಎಂದು ನೀವು ಭಾವಿಸಿರಬಹುದು.

ನನಗೆ ಇದು ಕಾಕಾ ಹತ್ರಾಸಿಯವರ ಹಾಸ್ಯ ಕವಿತೆಯನ್ನು ನೆನಪಿಸುತ್ತಿದೆ.

ಬಹಳ ಸೂಕ್ತವಾಗಿ ಅವರು ಹೇಳಿದ್ದಾರೆ:

ಪ್ರಕೃತಿ ಬದಲತೀ ಕ್ಷಣ್-ಕ್ಷಣ್ ದೇಖೋ,

ಬಾದಲ್ ರಹೇನು, ಕಣ್-ಕಣ್ ದೇಖೋ

ತುಮ್ ನಿಶ್ಕ್ರಿಯಾ ಸೆ ಪಡೆ ಹುಯೆ ಹೋ

ಭಾಗ್ಯವಾದ್ ಪರ್ ಅದೆ ಹುಯೆ ಹೋ.

ಛೋಡೋ ಮಿತ್ರ್! ಪುರಾನೀ ದಫಲೀ,

ಜೀವನ್ ಮೆ ಪರಿವರ್ತನ್ ಲಾವೋ

ಪರಂಪರಾ ಸೆ ವೂಂಚೆ ವುಠಾಕರ್,

ಕುಚ್ ತೊ ಸ್ಟ್ಯಾಂಡರ್ಡ್ ಬನಾವೊ!

ಗೌರವಾನ್ವಿತ ಸಭಾಪತಿಯವರೇ, ಚರ್ಚೆಯನ್ನು ಪ್ರಾರಂಭಿಸುವಾಗ, ಗುಲಾಮ್ ನಬಿಯವರು ತಮ್ಮ ಭಾಷಣದಲ್ಲಿ ಕೋಪಗೊಂಡರು, ಅನೇಕ ವಿಷಯಗಳ ಬಗ್ಗೆ ಸರ್ಕಾರವನ್ನು ಟೀಕಿಸುವ ಪ್ರಯತ್ನ ನಡೆಯಿತು, ಆದರೆ ಅದು ತುಂಬಾ ಸ್ವಾಭಾವಿಕವಾದ್ದು. ಆದರೆ ಅವರು ಆಧಾರರಹಿತ ವಿಷಯಗಳನ್ನು ಹೇಳುತ್ತಿದ್ದರು. ಜಮ್ಮು ಮತ್ತು ಕಾಶ್ಮೀರ ಕುರಿತು ಸದನದಲ್ಲಿ ಯಾವುದೇ ಚರ್ಚೆಯಿಲ್ಲದೆ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು. ಟಿವಿಯಲ್ಲಿ ದಿನವಿಡೀ ಚರ್ಚೆಯನ್ನು ದೇಶ ನೋಡಿದೆ ಮತ್ತು ಕೇಳಿದೆ. ದೇಶವು ಸಾಕ್ಷಿಯಾಗಿದೆ, ವ್ಯಾಪಕವಾದ ವ್ಯಾಪಕ ಚರ್ಚೆಯ ನಂತರವೇ ಸದನವು ನಿರ್ಧಾರ ಕೈಗೊಂಡಿತು. ಗೌರವಾನ್ವಿತ ಸದಸ್ಯರು ಮತ ಚಲಾಯಿಸುವ ಮೂಲಕ ತೀರ್ಮಾನಿಸಿದ್ದಾರೆ.

ಆಜಾದ್ ಅವರೇ, ನಾನು ನಿಮ್ಮ ನೆನಪಿನ ಶಕ್ತಿಯನ್ನು ಇನ್ನಷ್ಟು ರಿಫ್ರೆಶ್ ಮಾಡುತ್ತೇನೆ. ಜನರು ಹಳೆಯ ದೌರ್ಜನ್ಯಗಳನ್ನು ಬಹಳ ಬೇಗ ಮರೆಯುವುದಿಲ್ಲ. ಸದನವು ತೆಲಂಗಾಣದ ಬಗ್ಗೆ ಹೇಗೆ ನಿರ್ಧರಿಸಿತು ಎಂಬುದನ್ನು ನೆನಪಿಸಿಕೊಳ್ಳಿ. ಸದನ ಲಾಕ್ ಆಗಿತ್ತು, ಟಿವಿಗಳು ಆಫ್ ಆಗಿದ್ದವು. ಚರ್ಚೆಗೆ ಯಾವುದೇ ಆಸ್ಪದವಿರಲಿಲ್ಲ ಮತ್ತು ಅದನ್ನು ಯಾವ ಪರಿಸ್ಥಿತಿಯಲ್ಲಿ ಅಂಗೀಕರಿಸಲಾಯಿತು ಎಂಬುದನ್ನು ಯಾರೂ ಮರೆಯಲು ಸಾಧ್ಯವಿಲ್ಲ. ನೀವು ಹಿರಿಯರು ನಮಗೆ ಸಲಹೆ ನೀಡಿ, ಆದರೆ ಸತ್ಯವನ್ನು ಒಪ್ಪಿಕೊಳ್ಳಲೇಬೇಕು.

ನಿಮಗೆ ದಶಕಗಳ ನಂತರ, ಹೊಸ ರಾಜ್ಯವನ್ನು ರಚಿಸಲು ಅವಕಾಶವಿತ್ತು. ಎಲ್ಲರನ್ನೂ ಅವರ ಆಕಾಂಕ್ಷೆಗಳು ಮತ್ತು ಉತ್ಸಾಹದೊಂದಿಗೆ ಜೊತೆಯಾಗಿ ಕರೆದೊಯ್ಯುವ ಮೂಲಕ ನೀವು ಅದನ್ನು ಮಾಡಬಹುದಿತ್ತು. ಇದೀಗ ಆನಂದ್ ಶರ್ಮಾ ಹೇಳುತ್ತಿದ್ದರು, ನೀವು ರಾಜ್ಯಗಳನ್ನು ಕೇಳಿದ್ದೀರಾ, ಇತರರನ್ನು ಕೇಳಿದ್ದೀರಾ ಎಂದು, ಅವರು ಬಹಳಷ್ಟು ಹೇಳಿದರು. ಓಹ್, ಕನಿಷ್ಠ ಅವರು ಆಂಧ್ರ-ತೆಲಂಗಾಣದ ಜನರಿಗೆ ಅವರ ಆಸೆ ಏನು ಎಂದು ಕೇಳಬಹುದಿತ್ತು. ಆದರೆ ನೀವು ಮಾಡಿದ್ದು ಇತಿಹಾಸ ಮತ್ತು ಸಮಯದಲ್ಲಿ ಆಗಿನ ಪ್ರಧಾನಿ ಆದರಣೀಯ ಮನಮೋಹನ್ ಸಿಂಗ್ ಅವರು ಲೋಕಸಭೆಯಲ್ಲಿ ಒಂದು ವಿಷಯವನ್ನು ಹೇಳಿದ್ದರು ಮತ್ತು ದಿನವನ್ನು ನಾವು ಇಂದು ನೆನಪು ಮಾಡಿಕೊಳ್ಳಬೇಕೆನಿಸುತ್ತದೆ.

"ತೆಲಂಗಾಣ ವಿಷಯದಲ್ಲಿ ನಿರಂತರ ಪ್ರತಿಭಟನೆಯ ಪರಿಣಾಮವಾಗಿ ಭಾರತದಲ್ಲಿ ಪ್ರಜಾಪ್ರಭುತ್ವಕ್ಕೆ ಹಾನಿಯಾಗುತ್ತಿದೆ. ಅಟಲ್ ಜಿ ಅವರ ಸರ್ಕಾರವು ಉತ್ತರಾಖಂಡ, ಜಾರ್ಖಂಡ್, ಛತ್ತೀತ್ತೀಸ್‌ಗಡವನ್ನು ಸಂಪೂರ್ಣ ಗೌರವದಿಂದ, ಶಾಂತಿಯಿಂದ, ಸಾಮರಸ್ಯದಿಂದ ಸೃಷ್ಟಿಸಿತು. ಇಂದು ಮೂರು ಹೊಸ ರಾಜ್ಯಗಳು ತಮ್ಮದೇ ಆದ ರೀತಿಯಲ್ಲಿ ದೇಶದ ಪ್ರಗತಿಗೆ ಕೊಡುಗೆ ನೀಡುತ್ತಿವೆ.” ಎಂದು ಅವರು ಹೇಳಿದ್ದರು.

ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಕುರಿತು ಯಾವುದೇ ನಿರ್ಧಾರಗಳನ್ನು ತೆಗೆದುಕೊಂಡಿದ್ದರೂ ಸುದೀರ್ಘ ಮತ್ತು ಸಂಪೂರ್ಣ ಚರ್ಚೆಯ ನಂತರ ತೆಗೆದುಕೊಳ್ಳಲಾಗಿದೆ.

ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿಯ ಕೆಲವು ಅಂಕಿ ಅಂಶವನ್ನು ಇಲ್ಲಿ ಪ್ರಸ್ತುತಪಡಿಸಲಾಗಿದೆ. ನನ್ನ ಬಳಿಯೂ ಕೆಲವು ಅಂಕಿ ಅಂಶಗಳಿವೆ. ಈ ಸದನದ ಮುಂದೆ ನಾನು ಕೂಡ ಅವುಗಳನ್ನು ಇಡಬೇಕು ಎಂದು ನಾನು ಭಾವಿಸುತ್ತೇನೆ.

20 ಜೂನ್ 2018 - ಸರ್ಕಾರದ ಪತನದ ನಂತರ, ರಾಷ್ಟ್ರಪತಿಯವರ ಆಡಳಿತವನ್ನು ಹೇರಲಾಯಿತು ಮತ್ತು 370 ನೇ ವಿಧಿಯನ್ನು ರದ್ದು ಮಾಡಲು ನಿರ್ಧರಿಸಲಾಯಿತು.

ಮತ್ತು ಅದರ ನಂತರ ಏನಾಯಿತು ಎಂದು ನಾನು ಹೇಳಲು ಬಯಸುತ್ತೇನೆ. ಆ ರಾಜ್ಯದಲ್ಲಿ ಬಡವರು ಮತ್ತು ದೀನ ದಲಿತರು ಮೊದಲ ಬಾರಿಗೆ ಮೀಸಲಾತಿಯ ಲಾಭವನ್ನು ಪಡೆದರು.

ಜಮ್ಮು ಮತ್ತು ಕಾಶ್ಮೀರದಲ್ಲಿ ಮೊದಲ ಬಾರಿಗೆ ಪಹಡಿ ಭಾಷಿಕ ಜನರಿಗೆ ಮೀಸಲಾತಿಯ ಲಾಭ ಸಿಕ್ಕಿತು.

ಜಮ್ಮು ಮತ್ತು ಕಾಶ್ಮೀರದಲ್ಲಿ ಮೊದಲ ಬಾರಿಗೆ ಮಹಿಳೆಯರು ರಾಜ್ಯದ ಹೊರಗಿನವರನ್ನು ಮದುವೆಯಾದರೂ ತಮ್ಮ ಆಸ್ತಿಯನ್ನು ಹೊಂದುವ ಹಕ್ಕನ್ನು ಪಡೆದರು.

ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ ಪ್ರದೇಶಾಭಿವೃದ್ಧಿ ಮಂಡಳಿ ಚುನಾವಣೆಗಳು ನಡೆದವು.

ಜಮ್ಮು ಮತ್ತು ಕಾಶ್ಮೀರದಲ್ಲಿ ಮೊದಲ ಬಾರಿಗೆ ರೇರಾ ಕಾನೂನು ಜಾರಿಗೆ ಬಂದಿತು.

ಜಮ್ಮು ಮತ್ತು ಕಾಶ್ಮೀರದಲ್ಲಿ ಮೊದಲ ಬಾರಿಗೆ ಸ್ಟಾರ್ಟ್ ಅಪ್ ನೀತಿ, ವ್ಯಾಪಾರ ಮತ್ತು ರಫ್ತು ನೀತಿ, ಲಾಜಿಸ್ಟಿಕ್ ನೀತಿ ಜಾರಿಗೆ ಬರುತ್ತಿವೆ.

ದೇಶವನ್ನು ಆಶ್ಚರ್ಯಗೊಳಿಸುವ ಹಾಗೆ  ಮೊದಲ ಬಾರಿಗೆ  ಜಮ್ಮು ಮತ್ತು ಕಾಶ್ಮೀರದಲ್ಲಿ ಭ್ರಷ್ಟಾಚಾರ ನಿಗ್ರಹ ದಳವನ್ನು ಸ್ಥಾಪಿಸಲಾಯಿತು.

ಮೊದಲ ಬಾರಿಗೆ, ಜಮ್ಮು ಮತ್ತು ಕಾಶ್ಮೀರದ ಪ್ರತ್ಯೇಕತಾವಾದಿಗಳಿಗೆ ಗಡಿಯಾಚೆಗಿನ ಹಣಕಾಸನ್ನು ನಿಯಂತ್ರಿಸಲಾಯಿತು.

ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳನ್ನು ಸನ್ಮಾನಿಸುವ ಸಂಪ್ರದಾಯವು ಮೊದಲ ಬಾರಿಗೆ ಕೊನೆಗೊಂಡಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮತ್ತು ಭದ್ರತಾ ಪಡೆಗಳು ಭಯೋತ್ಪಾದನೆ ಮತ್ತು ಭಯೋತ್ಪಾದಕರ ವಿರುದ್ಧ ನಿರ್ಣಾಯಕ ಕ್ರಮ ಕೈಗೊಳ್ಳುತ್ತಿವೆ.

ಮೊದಲ ಬಾರಿಗೆ, ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಸಿಬ್ಬಂದಿಯೂ ಇತರ ಕೇಂದ್ರ ನೌಕರರು ದಶಕಗಳಿಂದ ಪಡೆಯುತ್ತಿರುವ ಭತ್ಯೆಯ ಲಾಭವನ್ನು ಪಡೆದಿದ್ದಾರೆ.

ಮೊದಲ ಬಾರಿಗೆ, ಈಗ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಎಲ್‌ಟಿಸಿಯನ್ನು ತೆಗೆದುಕೊಂಡು ಕನ್ಯಾಕುಮಾರಿ, ಈಶಾನ್ಯ ಅಥವಾ ಅಂಡಮಾನ್-ನಿಕೋಬಾರ್‌ಗೆ ಹೋಗಬಹುದು.

ಗೌರವಾನ್ವಿತ ಸಭಾಪತಿಗಳೇ, ರಾಜ್ಯಪಾಲರ ಆಡಳಿತದ ನಂತರ 18 ತಿಂಗಳಲ್ಲಿ, 4400 ಕ್ಕೂ ಹೆಚ್ಚು ಸರಪಂಚ್ ಗಳಿಗೆ ಮತ್ತು 35 ಸಾವಿರಕ್ಕೂ ಹೆಚ್ಚು ಪಂಚಾಯತ್ ಗಳಿಗೆ ಶಾಂತಿಯುತ ಚುನಾವಣೆ ನಡೆಯಿತು.

18 ತಿಂಗಳಲ್ಲಿ, ಜಮ್ಮು ಮತ್ತು ಕಾಶ್ಮೀರದಲ್ಲಿ 2.5 ಲಕ್ಷ ಶೌಚಾಲಯಗಳನ್ನು ನಿರ್ಮಿಸಲಾಗಿದೆ,

18 ತಿಂಗಳಲ್ಲಿ, ಜಮ್ಮು ಮತ್ತು ಕಾಶ್ಮೀರದ 3 ಲಕ್ಷ 30 ಸಾವಿರ ಮನೆಗಳಲ್ಲಿ ವಿದ್ಯುತ್ ಸಂಪರ್ಕವನ್ನು ಒದಗಿಸಲಾಗಿದೆ.

18 ತಿಂಗಳಲ್ಲಿ ಜಮ್ಮು ಮತ್ತು ಕಾಶ್ಮೀರದ 3.5 ಲಕ್ಷಕ್ಕೂ ಹೆಚ್ಚು ಜನರಿಗೆ ಆಯುಷ್ಮಾನ್ ಯೋಜನೆಯ ಗೋಲ್ಡ್ ಕಾರ್ಡ್‌ ನೀಡಲಾಗಿದೆ.

ಕೇವಲ 18 ತಿಂಗಳಲ್ಲಿ, ಜಮ್ಮು ಮತ್ತು ಕಾಶ್ಮೀರದ ಪಿಂಚಣಿ ಯೋಜನೆಗೆ ಒಂದೂವರೆ ಲಕ್ಷ ವೃದ್ಧರು, ಮಹಿಳೆಯರು ಮತ್ತು ಅಂಗವಿಕಲರು ಸಂಪರ್ಕ ಹೊಂದಿದ್ದಾರೆ.

ಆಜಾದ್ ಅವರು ಹೇಳಿದರು ಅಭಿವೃದ್ಧಿಯು ಮೊದಲಿನಿಂದಲೂ ನಡೆಯುತ್ತಿತ್ತು ಎಂದು. ಇಲ್ಲ ಎಂದು ನಾವು ಅದನ್ನು ಎಂದಿಗೂ ಹೇಳಲಿಲ್ಲ. ಆದರೆ ಅಭಿವೃದ್ಧಿ ಹೇಗೆ ನಡೆಯುತ್ತಿತ್ತು ಎಂಬುದಕ್ಕೆ ನಾನು ಒಂದು ಉದಾಹರಣೆ ಕೊಡಲು ಬಯಸುತ್ತೇನೆ.

ಮಾರ್ಚ್ 2018 ರ ಹೊತ್ತಿಗೆ, ಪಿಎಂ ಆವಾಸ್ ಯೋಜನೆ ಅಡಿಯಲ್ಲಿ ಕೇವಲ ಮೂರೂವರೆ ಸಾವಿರ ಮನೆಗಳನ್ನು ನಿರ್ಮಿಸಲಾಗಿದೆ. ಪ್ರಧಾನ ಮಂತ್ರಿ ಅವಾಸ್ ಯೋಜನೆಯಡಿ ಕೇವಲ ಮೂರೂವರೆ ಸಾವಿರ ಮನೆ. ಆದರೆ ಎರಡೇ ವರ್ಷಗಳಲ್ಲಿ ಯೋಜನೆಯಡಿ 24 ಸಾವಿರಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಲಾಗಿದೆ.

ಸಂಪರ್ಕವನ್ನು ಸುಧಾರಿಸಲು, ಶಾಲೆಗಳ ಸ್ಥಿತಿಯನ್ನು ಸುಧಾರಿಸಲು, ಆಸ್ಪತ್ರೆಗಳನ್ನು ನವೀಕರಿಸಲು, ನೀರಾವರಿ ಸುಧಾರಿಸಲು, ಪ್ರವಾಸೋದ್ಯಮವನ್ನು ವೃದ್ಧಿಸಲು ಪ್ರಧಾನ ಮಂತ್ರಿ ಪ್ಯಾಕೇಜ್ ಸೇರಿದಂತೆ ಇನ್ನೂ ಅನೇಕ ಯೋಜನೆಗಳನ್ನು ವೇಗವಾಗಿ ಕೈಗೊಳ್ಳಲಾಗುತ್ತಿದೆ.

ಗೌರವಾನ್ವಿತ ವೈಕೋ ಅವರದು ಒಂದು ಶೈಲಿಯಿದೆ. ಅವರು ಯಾವಾಗಲೂ ತುಂಬಾ ಭಾವುಕರಾಗುತ್ತಾರೆ. 5 ನೇ ಆಗಸ್ಟ್ 2019 ಜಮ್ಮು ಮತ್ತು ಕಾಶ್ಮೀರಕ್ಕೆ ಕರಾಳ ದಿನ ಎಂದು ಹೇಳಿದರು. ವೈಕೋ ಅವರೇ, ಇದು ಕರಾಳ ದಿನವಲ್ಲ, ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದವನ್ನು ಉತ್ತೇಜಿಸುವವರಿಗೆ ಇದು ಕರಾಳ ದಿನವೆಂದು ಸಾಬೀತಾಗಿದೆ. ಇಂದು ಲಕ್ಷಾಂತರ ಕುಟುಂಬಗಳಿಗೆ, ಹೊಸ ನಂಬಿಕೆ, ಹೊಸ ಭರವಸೆಯ ಕಿರಣ ಕಾಣಿಸುತ್ತಿವೆ.

ಗೌರವಾನ್ವಿತ ಸಭಾಪತಿಯವರೇ, ಈಶಾನ್ಯದ ಬಗ್ಗೆಯೂ ಇಲ್ಲಿ ಚರ್ಚಿಸಲಾಗಿದೆ. ಈಶಾನ್ಯ ಉರಿಯುತ್ತಿದೆ ಎಂದು ಆಜಾದ್ ಅವರು ಹೇಳುತ್ತಿದ್ದಾರೆ. ಅದು ಉರಿಯುತ್ತಿದ್ದರೆ, ನೀವು ಮೊದಲು ನಿಮ್ಮ ಸಂಸದರ ನಿಯೋಗವನ್ನು ಅಲ್ಲಿಗೆ ಕಳುಹಿಸುತ್ತಿದ್ದಿರಿ ಮತ್ತು ಖಂಡಿತವಾಗಿಯೂ ಪತ್ರಿಕಾಗೋಷ್ಠಿಯನ್ನು ನಡೆಸುತ್ತಿದ್ದಿರಿ, ಫೋಟೋ ಕೂಡ ಪ್ರಕಟವಾಗುತ್ತಿತ್ತು. ಆದ್ದರಿಂದ ಆಜಾದ್ ಅವರ ಮಾಹಿತಿಯು 2014 ಕ್ಕಿಂತ ಮೊದಲಿನದು ಎಂದು ನಾನು ಭಾವಿಸುತ್ತೇನೆ. ಆದ್ದರಿಂದ ಈಶಾನ್ಯವು ಅಭೂತಪೂರ್ವ ಶಾಂತಿಯೊಂದಿಗೆ ಭಾರತದ ಅಭಿವೃದ್ಧಿಯಲ್ಲಿ ಮುಂಚೂಣಿಯ ಪಾಲುದಾರನಾಗಿ ಮಾರ್ಪಟ್ಟಿದೆ ಎಂದು ಹೇಳಲು ನಾನು ಬಯಸುತ್ತೇನೆ. 40-50 ವರ್ಷಗಳಿಂದ ಈಶಾನ್ಯದಲ್ಲಿ ಹಿಂಸಾತ್ಮಕ ಚಳುವಳಿಗಳು, ದಿಗ್ಬಂಧನಗಳು ಹೇಗೆ ನಡೆದವು ಎಂದು ಎಲ್ಲರಿಗೂ ತಿಳಿದಿದೆ. ಆದರೆ ಇಂದು ಹಿಂಸಾಚಾರ ಕೊನೆಗೊಂಡಿದೆ, ದಿಗ್ಬಂಧನಗಳು ನಿಂತು ಇಡೀ ಈಶಾನ್ಯ ಶಾಂತಿಯ ಹಾದಿಯಲ್ಲಿ ಮುಂದುವರಿಯುತ್ತಿದೆ.

ನಾನು ಒಂದು ವಿಷಯವನ್ನು ಪ್ರಸ್ತಾಪಿಸಲು ಬಯಸುತ್ತೇನೆ. ಬ್ರೂ ಬುಡಕಟ್ಟಿನ ಸಮಸ್ಯೆ ಸುಮಾರು 25-30 ವರ್ಷಗಳಿಂದ ಇತ್ತು, ನಿಮಗೂ ಗೊತ್ತಿದೆ, ನಮಗೂ ಗೊತ್ತಿದೆ. ಸುಮಾರು 30 ಸಾವಿರ ಜನರು ಅನಿಶ್ಚಿತತೆಯ ಜೀವನವನ್ನು ನಡೆಸುತ್ತಿದ್ದರು. ಒಂದು ಸಣ್ಣ ಕೋಣೆಯ ಗುಡಿಸಿಲಿನಲ್ಲಿ ಅದೂ ಸಹ ತಾತ್ಕಾಲಿಕವಾದ್ದು. ಇದರಲ್ಲಿ 100 ಜನರು ಅನಿವಾರ್ಯವಾಗಿ ವಾಸಿಸುತ್ತಿದ್ದರು. ಇದು ಮೂರು ದಶಕಗಳಿಂದ ನಡೆಯುತ್ತಿದೆ, ಚಿತ್ರಹಿಂಸೆ ಕಡಿಮೆಯೇನಲ್ಲ ಮತ್ತು ಅವರು ಯಾವುದೇ ಅಪರಾಧವೆಸಗಿಲ್ಲ. ಈಗ ವ್ಯಂಗ್ಯವನ್ನು ನೋಡಿ, ನಿಮ್ಮ ಪಕ್ಷವು ಈಶಾನ್ಯದಲ್ಲಿ ಹೆಚ್ಚಿನ ಸರ್ಕಾರಗಳನ್ನು ಹೊಂದಿತ್ತು. ತ್ರಿಪುರದಲ್ಲಿ ನಿಮ್ಮ ಮಿತ್ರರು ಅಧಿಕಾರದಲ್ಲಿದ್ದರು, ಆತ್ಮೀಯ ಸ್ನೇಹಿತರು. ಮಿಜೋರಾಂನಲ್ಲಿ ನಿಮ್ಮ ಸರ್ಕಾರವಿತ್ತು, ನಿಮ್ಮ ಸ್ನೇಹಿತರು ತ್ರಿಪುರದಲ್ಲಿ ಕುಳಿತಿದ್ದರು, ನೀವು ಕೇಂದ್ರದಲ್ಲಿ ಅಧಿಕಾರದಲ್ಲಿದ್ದಿರಿ. ನೀವು ಬಯಸಿದ್ದರೆ, ನಿಮಗೆ ಇಚ್ಛಾಶಕ್ತಿ ಇದ್ದರೆ, ಬ್ರೂ - ರಿಯಾಂಗ್ ಬುಡಕಟ್ಟಿನ ಸಮಸ್ಯೆಗೆ ನೀವು ಪರಿಹಾರವನ್ನು ತರಬಹುದಿತ್ತು. ಆದರೆ ಇಂದು, ಇಷ್ಟು ವರ್ಷಗಳ ನಂತರ, ಆ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ.

ಇಷ್ಟೊಂದು ದೊಡ್ಡ ಸಮಸ್ಯೆಯ ಬಗ್ಗೆ ಏಕೆ ನಿರಾಸಕ್ತಿಯಿತ್ತು ಎಂದು ನನಗೆ ಆಶ್ಚರ್ಯವಾಗುತ್ತಿದೆ. ಆದರೆ ಈಗ ನಾನು ಅರ್ಥಮಾಡಿಕೊಂಡಿದ್ದೇನೆಂದರೆ, ನಿರಾಸಕ್ತಿಗೆ ಕಾರಣವೆಂದರೆ ತಮ್ಮ ಮನೆಗಳಿಂದ, ಹಳ್ಳಿಗಳಿಂದ ಬೇರ್ಪಟ್ಟ ಬ್ರೂ ಜಾತಿಯ ಜನರು ಹಾಳಾಗಿದ್ದಾರೆ, ಅವರ ನೋವು ಅಪರಿಮಿತವಾಗಿದೆ, ಆದರೆ ಅವರ ಓಟು ಬಹಳ ಕಡಿಮೆ ಇವೆ. ಇದು ವೋಟುಗಳ ಆಟವಾಗಿದ್ದು, ಅವರ ಅಪಾರ ನೋವನ್ನು ನಾವು ಎಂದಿಗೂ ಅನುಭವಿಸಲು ಸಾಧ್ಯವಿಲ್ಲ. ಆದ್ದರಿಂದಲೇ ಅವರ ಸಮಸ್ಯೆಯನ್ನು ಪರಿಹರಿಸಲು ನಮಗೆ ಸಾಧ್ಯವಾಗಲಿಲ್ಲ. ಇದು ನಮ್ಮ ಇತಿಹಾಸ, ಇದನ್ನು ಮರೆಯಬಾರದು.

ನಮ್ಮ ಆಲೋಚನೆ ವಿಭಿನ್ನವಾಗಿದೆ, ಸಬ್ಕಾ ಸಾಥ್ ಸಬ್ಕಾ ವಿಶ್ವಾಸ್ ಎಂಬ ಮಂತ್ರದ ಮೂಲಕ ಎಲ್ಲರನ್ನೂ ಒಂದಾಗಿ ತೆಗೆದುಕೊಂಡು ಹೋಗುವುದನ್ನು ನಾವು ನಂಬುತ್ತೇವೆ; ನಾವು ಸಾಧ್ಯವಾದಷ್ಟು ಪೂರ್ಣ ಜವಾಬ್ದಾರಿ ಮತ್ತು ಸಹಾನುಭೂತಿಯೊಂದಿಗೆ ಸಮಸ್ಯೆಗಳನ್ನು ಪರಿಹರಿಸುವಲ್ಲಿ ತೊಡಗಿದ್ದೇವೆ. ಮತ್ತು ಅವರ ಸಂಕಟವನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಇಂದು, 29 ಸಾವಿರ ಜನರು ತಮ್ಮ ಸ್ವಂತ ಮನೆಯನ್ನು ಪಡೆಯುತ್ತಾರೆ, ತಮ್ಮದೇ ಆದ ಗುರುತನ್ನು ಹೊಂದುತ್ತಾರೆ, ತಮ್ಮದೇ ಆದ ಸ್ಥಾನವನ್ನು ಪಡೆಯುತ್ತಾರೆ ಇದಕ್ಕಾಗಿ ದೇಶವು ಬಹಳ ಹೆಮ್ಮೆ ಪಡಬಹುದು. ಅವರು ತಮ್ಮ ಕನಸುಗಳನ್ನು ನೇಯಲು ಸಾಧ್ಯವಾಗುತ್ತದೆ, ಅವರು ತಮ್ಮ ಮಕ್ಕಳ ಭವಿಷ್ಯವನ್ನು ನಿರ್ಧರಿಸಲು ಸಾಧ್ಯವಾಗುತ್ತದೆ.

ಈಶಾನ್ಯದಲ್ಲಿನ ಸಮಸ್ಯೆಗಳನ್ನು ಅವರು ಬ್ರೂ ಬುಡಕಟ್ಟು ಜನಾಂಗದವರಾಗಲೀ ಅಥವಾ ಬೇರೆ ಇನ್ಯಾರೇ ಆಗಲಿ ದಾರಿಯಲ್ಲಿ ಪರಿಹರಿಸಬೇಕು ಎಂದು ನಾವು ನಂಬುತ್ತೇವೆ.

ಬೋಡೋ ವಿಷಯದ ಬಗ್ಗೆ ನಾನು ಸುದೀರ್ಘವಾಗಿ ಹೇಳಲು ಬಯಸುವುದಿಲ್ಲ, ಆದರೆ ಅದೂ ಸಹ ಬಹಳ ಮುಖ್ಯವಾದ ಕೆಲಸವಾಗಿದೆ. ಮತ್ತು ಅದರ ವಿಶೇಷತೆಯೆಂದರೆ ಹಿಂಸಾಚಾರದ ಹಾದಿಯಲ್ಲಿದ್ದ ಎಲ್ಲಾ ಸಶಸ್ತ್ರ ಗುಂಪುಗಳು ಒಟ್ಟಾಗಿ ಬಂದವು. ಈ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಯಾವುದೇ ಅತೃಪ್ತ ಬೇಡಿಕೆಗಳಿಲ್ಲ ಎಂದು ಎಲ್ಲರೂ ಒಪ್ಪಿಕೊಂಡರು.

ಶ್ರೀ ಸುಖೇಂದು ಶೇಖರ್ ಸೇರಿದಂತೆ ಹಲವಾರು ಸಹೋದ್ಯೋಗಿಗಳು ಇಲ್ಲಿ ಆರ್ಥಿಕ ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ. ಸರ್ವಪಕ್ಷಗಳ ಸಭೆ ಇದ್ದಾಗಲೂ, ನಾನು ಅತ್ಯಂತ ಶ್ರದ್ಧೆಯಿಂದ ಹೇಳಿದ್ದೆ, ಆರ್ಥಿಕ ವಿಷಯಗಳ ಚರ್ಚೆಗೆ ನಾವು ಸಂಪೂರ್ಣ ಅಧಿವೇಶನವನ್ನು ಮೀಸಲಿಡಬೇಕು. ತೀವ್ರ ಚರ್ಚೆ ನಡೆಯಬೇಕು. ಎಲ್ಲಾ ಅಂಶಗಳನ್ನು ಎತ್ತಿ ತೋರಿಸಬೇಕು. ನಮ್ಮಲ್ಲಿರುವ ಯಾವುದೇ ಪ್ರತಿಭೆ ಮತ್ತು ಸಾಮರ್ಥ್ಯಗಳೊಂದಿಗೆ ನಾವು ಚರ್ಚೆಯನ್ನು ಉತ್ಕೃಷ್ಟಗೊಳಿಸಬೇಕು, ಇದರಿಂದಾಗಿ ಭಾರತವು ಇಂದು ಜಾಗತಿಕ ಆರ್ಥಿಕ ಪರಿಸ್ಥಿತಿಯ ಗರಿಷ್ಠ ಲಾಭವನ್ನು ಪಡೆಯಬಹುದು ಹೇಗೆ? ಭಾರತವು ತನ್ನ ಬೇರುಗಳನ್ನು ಬಲಪಡಿಸುವುದು ಹೇಗೆ? ಭಾರತವು ತನ್ನ ಆರ್ಥಿಕತೆ ಹಿತಾಸಕ್ತಿಯನ್ನು ಹೇಗೆ ಬಲಪಡಿಸಬೇಕು ಎಂಬುದರ ಕುರಿತು ಹೊಸ ವಿಷಯಗಳನ್ನು ಮತ್ತು ಹೊಸ ಮಾರ್ಗಗಳನ್ನು ಕಂಡುಹಿಡಿಯಬಹುದು. ನಾವು ಅದನ್ನು ವ್ಯಾಪಕವಾಗಿ ಚರ್ಚಿಸಬಹುದು, ಅದನ್ನು ಆಳವಾಗಿ ಚರ್ಚಿಸೋಣ ಎಂದು ಸರ್ವಪಕ್ಷಗಳ ಸಭೆಯಲ್ಲಿ ನಾನು ಎಲ್ಲರಿಗೂ ವಿನಂತಿಸಿದ್ದೆ. ಈ ಅಧಿವೇಶನವನ್ನು ಸಂಪೂರ್ಣವಾಗಿ ದೇಶದ ಆರ್ಥಿಕ ಸಮಸ್ಯೆಗಳಿಗೆ ಮೀಸಲಿಡಬೇಕೆಂದು ನಾನು ಬಯಸುತ್ತೇನೆ.

ಬಜೆಟ್ ಕುರಿತು ಚರ್ಚೆಯಾಗಬೇಕಿದೆ. ಅದನ್ನು ಹೆಚ್ಚು ವಿವರವಾಗಿ ಚರ್ಚಿಸಲಾಗುವುದು ಮತ್ತು ಪ್ರಕ್ರಿಯೆಯ ಪ್ರತಿಫಲಕ್ಕೆ ಕಾರಣವಾಗುತ್ತದೆ. ಕೆಲವು ಆರೋಪಗಳು, ಪ್ರತ್ಯಾರೋಪಗಳು, ಕೆಲವು ವಾಗ್ವಾದಗಳು ನಡೆಯಲಿವೆ, ಆದರೆ ಮಂಥನವು ಮಕರಂದವನ್ನು ಹೊರತರುತ್ತದೆ ಎಂದು ನಾನು ಗೊತ್ತು. ಅದಕ್ಕಾಗಿಯೇ ನಾನು ಎಲ್ಲರನ್ನೂ ಮತ್ತೆ ಆರ್ಥಿಕತೆ, ಆರ್ಥಿಕ ಪರಿಸ್ಥಿತಿ, ಆರ್ಥಿಕ ನೀತಿಗಳ ಮೇಲೆ, ಆರ್ಥಿಕ ಪರಿಸ್ಥಿತಿಗಳ ಮೇಲೆ ಚರ್ಚೆಗೆ ಆಹ್ವಾನಿಸುತ್ತೇನೆ. ನಾವು ನಮ್ಮ ನಡುವೆ ಡಾ. ಮನಮೋಹನ್ ಸಿಂಗ್ ಅವರಂತಹ ಗಣ್ಯರನ್ನು ಹೊಂದಿದ್ದೇವೆ, ದೇಶವು ಖಂಡಿತವಾಗಿಯೂ ಅವರ ಪ್ರಯೋಜನ ಪಡೆಯುತ್ತದೆ. ನಾವು ಇದನ್ನು ಮಾಡಬೇಕು, ಈ ಬಗ್ಗೆ ನಮಗೆ ಮುಕ್ತ ಮನಸ್ಸು ಇದೆ.

ಆದರೆ ಆರ್ಥಿಕ ಪರಿಸ್ಥಿತಿಗೆ ಸಂಬಂಧಿಸಿದಂತೆ ಇಲ್ಲಿ ಏನು ಚರ್ಚಿಸಲಾಗಿದೆ, ದೇಶವು ನಿರಾಶೆಗೊಳ್ಳಲು ಯಾವ ಕಾರಣಗಳೂ ಇಲ್ಲ. ನಿರಾಶೆಯನ್ನು ಹರಡುವವರು ಏನನ್ನೂ ಗಳಿಸಲು ಸಾಧ್ಯವಿಲ್ಲ. ಇಂದಿಗೂ, ದೇಶದ ಆರ್ಥಿಕತೆಯ ಮೂಲ ತತ್ವಗಳಾದ ಮೂಲಭೂತ ತತ್ವಗಳು ಮಾನದಂಡಗಳಾಗಿವೆ, ಇಂದಿಗೂ ದೇಶದ ಆರ್ಥಿಕತೆಯು ಪ್ರಬಲವಾಗಿದೆ, ಸ್ಥಿರವಾಗಿದೆ ಮತ್ತು ಮುಂದುವರಿಯಲು ಸಂಪೂರ್ಣ ಶಕ್ತಿಯನ್ನು ಹೊಂದಿದೆ. ಅಂತರ್ಗತ ಗುಣವು ಅದರೊಳಗೇ ಇದೆ.

ಯಾವುದೇ ದೇಶವು ಸಂಕುಚಿತ ಆಲೋಚನೆಯೊಂದಿಗೆ ಮುಂದುವರಿಯಲು ಸಾಧ್ಯವಿಲ್ಲ. ಈಗ ದೇಶದ ಯುವ ಪೀಳಿಗೆಯು, ನಾವು ದೊಡ್ಡದಾಗಿ ಯೋಚಿಸಬೇಕು, ಹೆಚ್ಚು ಯೋಚಿಸಬೇಕು ಮತ್ತು ಹೆಚ್ಚು ಬಲದಿಂದ ಮುನ್ನಡೆಯಬೇಕು ಎಂದು ನಿರೀಕ್ಷಿಸುತ್ತಿದೆ. ಈ ಮೂಲ ಮಂತ್ರದ ಮೂಲಕ, 5 ಟ್ರಿಲಿಯನ್ ಡಾಲರ್ ಆರ್ಥಿಕತೆಯತ್ತ ಕೆಲಸ ಮಾಡುವ ಮೂಲಕ, ನಾವು ದೇಶವನ್ನು ಮುನ್ನಡೆಸಲು ಪ್ರಯತ್ನಿಸುತ್ತೇವೆ,. ನಿರಾಶೆಗೊಳ್ಳುವ ಅಗತ್ಯವಿಲ್ಲ. ಮೊದಲ ದಿನವೇ ನಾವು ಭಯಭೀತರಾಗಬಾರದು. ಯಾವುದು ಸಾಧ್ಯ ಮತ್ತು ಯಾವುದು ಸಾಧ್ಯವಿಲ್ಲ ಎಂದು ನೋಡೋಣ. ಪ್ರತಿ ಬಾರಿಯೂ ನಮ್ಮನ್ನು ಇಷ್ಟೇ ದೂರಕ್ಕೆ ಸೀಮಿತಗೊಳಿಸಿಕೊಳ್ಳಬಾರದು, ಯಾರಾದರೂ ಎರಡು ಹೆಜ್ಜೆ ಇಟ್ಟರೆ, ನಾವು ಅದನ್ನೇ ಅನುಸರಿಸಬೇಕೇ? ಕೆಲವೊಮ್ಮೆ ನೀವು ಕನಿಷ್ಠ ಐದು ಹೆಜ್ಜೆ ಇಡಲು  ಪ್ರಯತ್ನಿಸುತ್ತೀರಿ, ಕೆಲವೊಮ್ಮೆ ನೀವು ಏಳು ಹೆಜ್ಜೆಗಳನ್ನು ಪ್ರಯತ್ನಿಸುತ್ತೀರಿ, ಕೆಲವೊಮ್ಮೆ ಕನಿಷ್ಠ ನನ್ನೊಂದಿಗಾದರೂ ಬರುತ್ತೀರಿ.

ನಿರಾಶವಾದದಿಂದ ಎಂದಿಗೂ ದೇಶಕ್ಕೆ ಒಳ್ಳೆಯದಾಗುವುದಿಲ್ಲ, ಆದ್ದರಿಂದ 5 ಟ್ರಿಲಿಯನ್ ಆರ್ಥಿಕತೆಯ ಬಗ್ಗೆ ಮಾತನಾಡುವುದರ ಒಳ್ಳೆಯ ಫಲಿತಾಂಶವೆಂದರೆ ಅದನ್ನು ವಿರೋಧಿಸುವವರೂ ಸಹ 5 ಟ್ರಿಲಿಯನ್ ಬಗ್ಗೆ ಮಾತನಾಡಬೇಕಾಗುತ್ತದೆ. ಪ್ರತಿಯೊಬ್ಬರೂ 5 ಟ್ರಿಲಿಯನ್ ಆರ್ಥಿಕತೆಯ ಬಗ್ಗೆ ಮಾತನಾಡಬೇಕು. ಇದು ದೊಡ್ಡ ಬದಲಾವಣೆ.

ಈಗ ಜಾಗತಿಕವಾಗಿ ಕೆಲಸ ಮಾಡಲು ಕ್ಯಾನ್ವಾಸ್ ಸಿದ್ಧಪಡಿಸಲಾಗಿದೆ. ನಾವು ಮನಸ್ಥಿತಿಯನ್ನು ಬದಲಾಯಿಸಿದ್ದೇವೆ: ಈ ಕನಸನ್ನು ಈಡೇರಿಸಲು, ಹಳ್ಳಿಗಳು, ನಗರಗಳು, ಎಂಎಸ್‌ಎಂಇಗಳು, ಜವಳಿ ಪ್ರದೇಶಗಳಲ್ಲಿ ಮೂಲಸೌಕರ್ಯಗಳು ಇರಬೇಕು, ಅಲ್ಲೆಲ್ಲಾ ಉದ್ಯೋಗಗಳ ಸಾಧ್ಯತೆಯಿದೆ.

ನಾವು ತಂತ್ರಜ್ಞಾನ ಮತ್ತು ಸ್ಟಾರ್ಟ್‌ಅಪ್‌ಗಳನ್ನು ಉತ್ತೇಜಿಸಲು ಪ್ರಯತ್ನಿಸುತ್ತಿದ್ದೇವೆ. ಪ್ರವಾಸೋದ್ಯಮ ಕೂಡ ಒಂದು ದೊಡ್ಡ ಅವಕಾಶವಾಗಿದೆ.

ಕೆಲವು ಹಲವಾರು ಕಾರಣಗಳಿಂದಾಗಿ ಕಳೆದ 70 ವರ್ಷಗಳಲ್ಲಿ ದೇಶದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ, ದೇಶವನ್ನು ಬ್ರಾಂಡ್ ಮಾಡುವ ಅವಕಾಶವನ್ನು ಕಳೆದುಕೊಂಡಿದ್ದೇವೆ. ಇಂದಿಗೂ ಒಂದು ಅವಕಾಶವಿದೆ ಮತ್ತು ಇಂದು ಭಾರತವು ಭಾರತದ ದೃಷ್ಟಿಕೋನದಿಂದಲೇ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಬೇಕು. ನಾವು ಪಾಶ್ಚಿಮಾತ್ಯ ದೃಷ್ಟಿಕೋನದಿಂದ ಭಾರತದ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ. ಭಾರತವನ್ನು ನೋಡಲು ಜಗತ್ತು ಬರಬೇಕು.

ಮೇಕ್ ಇನ್ ಇಂಡಿಯಾಕ್ಕೆ ನಾವು ಒತ್ತು ನೀಡಿದ್ದೇವೆ, ಅದರ ಯಶಸ್ಸು ಗೋಚರವಾಗುತ್ತಿದೆ. ನೀವು ವಿದೇಶಿ ಹೂಡಿಕೆಯ ಅಂಕಿಅಂಶಗಳನ್ನು ನೋಡುತ್ತಿರಬೇಕು.

ತೆರಿಗೆ ಪದ್ಧತಿಯ ಸಂಪೂರ್ಣ ಪ್ರಕ್ರಿಯೆಯನ್ನು ಸರಳೀಕರಿಸಲು ನಾವು ನಿರಂತರವಾಗಿ ಪ್ರಯತ್ನಿಸಿದ್ದೇವೆ. ಸುಗಮ ವ್ಯವಹಾರದಲ್ಲಿ ಭಾರತದ ಶ್ರೇಯಾಂಕದ ವಿಷಯವಾಗಲಿ ಅಥವಾ ಭಾರತದಲ್ಲಿ ಸುಲಭ ಜೀವನವಾಗಲೀ, ನಾವು ಒಟ್ಟಾಗಿ ಕೆಲಸ ಮಾಡಿದ್ದೇವೆ.

ಬ್ಯಾಂಕಿಂಗ್ ಕ್ಷೇತ್ರದಲ್ಲಿ ನನಗೆ ನೆನಪಿದೆ, ನಾನು ಗುಜರಾತ್‌ನಲ್ಲಿದ್ದಾಗ, ಲೇಖನಗಳನ್ನು ಬರೆಯುತ್ತಿದ್ದ ಅನೇಕ ಮಹಾನ್ ವಿದ್ವಾಂಸರು, ನಮ್ಮ ದೇಶದಲ್ಲಿ ಬ್ಯಾಂಕುಗಳ ವಿಲೀನವಾಗಬೇಕು ಎಂದು ಹೇಳುತ್ತಿದ್ದರು. ಇದು ಸಂಭವಿಸಿದರೆ, ಇದೊಂದು ದೊಡ್ಡ ಸುಧಾರಣೆಯೆಂದು ಪರಿಗಣಿಸಲಾಗುತ್ತದೆ ಎಂದು ಹೇಳುತ್ತಿದ್ದರು. ಇದನ್ನು ನಾವು ಹಲವು ಬಾರಿ ಓದಿದ್ದೇವೆ. ಈ ಸರ್ಕಾರವೇ ಅನೇಕ ಬ್ಯಾಂಕುಗಳನ್ನು ವಿಲೀನಗೊಳಿಸಿದೆ, ಅದನ್ನು ಸುಲಭವಾಗಿ ಮಾಡಿದೆ. ಮತ್ತು ಇಂದು ಪ್ರಬಲ ಬ್ಯಾಂಕುಗಳ ವಲಯವು ಸಿದ್ಧವಾಗಿದೆ, ಇದು ಭವಿಷ್ಯದಲ್ಲಿ ರಾಷ್ಟ್ರದ ಆರ್ಥಿಕ ಬೆನ್ನೆಲುಬನ್ನು ಬಲಪಡಿಸುತ್ತದೆ.

ಇಂದು, ಉತ್ಪಾದನಾ ವಲಯವನ್ನು ಹೊಸ ದೃಷ್ಟಿಕೋನದಿಂದ ನೋಡಬೇಕಾಗಿದೆ, ಬ್ಯಾಂಕುಗಳಲ್ಲಿ ಹಣವು ಸಿಕ್ಕಿಕೊಂಡಿರುವುದಕ್ಕೆ ಕಾರಣವೇನು ಎಂದು ನೋಡಬೇಕಿದೆ. ಹಿಂದಿನ ಸರ್ಕಾರ ಅಧಿಕಾರದಲ್ಲಿದ್ದಾಗ ನಾನು ಕಾರಣಗಳನ್ನು ವಿವರಿಸಿದ್ದೇನೆ ಮತ್ತು ನಾನು ಮತ್ತೆ ಯಾರನ್ನೂ ಕೆಳಮಟ್ಟಕ್ಕಿಳಿಸಲು ಪ್ರಯತ್ನಿಸುವುದಿಲ್ಲ. ಸತ್ಯವನ್ನು ರಾಷ್ಟ್ರದ ಮುಂದೆ ಇರಿಸುವ ಮೂಲಕ ನಾನು ಮುಂದುವರಿಯಲು ಪ್ರಯತ್ನಿಸುತ್ತೇನೆ. ಅಂತಹ ವಿಷಯಗಳಲ್ಲಿ ನಾನು ನನ್ನ ಸಮಯವನ್ನು ವ್ಯರ್ಥ ಮಾಡುವುದಿಲ್ಲ, ಇಲ್ಲದಿದ್ದರೆ ಹೇಳಲು ಬಹಳಷ್ಟು ಸಂಗತಿಗಳಿವೆ.

ಯಾವುದೇ ವಿಷಯದ ಬಗ್ಗೆ ಚರ್ಚೆಯ ಕೊರತೆಯಿಲ್ಲ. ನಾವು ಜಿಎಸ್‌ಟಿಯನ್ನು ಹಲವು ಬಾರಿ ಚರ್ಚಿಸಿದ್ದೇವೆ ಮತ್ತು ಅದನ್ನು ಮತ್ತೆ ಮತ್ತೆ ಬದಲಾಯಿಸಿದ್ದೇವೆ. ನಾನು ಅದನ್ನು ಒಳ್ಳೆಯದು ಅಥವಾ ಕೆಟ್ಟದು ಎಂದು ಭಾವಿಸಬೇಕೇ? ನನಗೆ ಆಶ್ಚರ್ಯವಾಗಿದೆ. ಈ ಜಿಎಸ್‌ಟಿಯ ಸೃಷ್ಟಿ, ಒಕ್ಕೂಟ ವ್ಯವಸ್ಥೆಯ ಪ್ರಮುಖ ಸಾಧನೆಯಾಗಿದೆ. ಇದು ಕಾಂಗ್ರೆಸ್ ಆಳ್ವಿಕೆ ನಡೆಸುತ್ತಿರುವ ರಾಜ್ಯಗಳ ಆಕಾಂಕ್ಷೆಗಳನ್ನೂ ಪ್ರತಿಬಿಂಬಿಸುತ್ತದೆ. ದೇವರು ಕೊಟ್ಟಿರುವ ಎಲ್ಲಾ ಬುದ್ಧಿವಂತಿಕೆಯನ್ನು ನಾವು ಹೆಚ್ಚಿನ ಸುಧಾರಣೆಗಾಗಿ ಬಳಸುವುದಿಲ್ಲ ಎಂದು ಹೇಳುತ್ತಾ ಚರ್ಚೆಯನ್ನೇ ನಿಲ್ಲಿಸಬೇಕೇ?

ಇದು ನಮ್ಮ ದೃಷ್ಟಿಕೋನವಲ್ಲ, ಬದಲಾವಣೆಯ ಅಗತ್ಯವಿದ್ದಾಗ ಬದಲಾವಣೆಯನ್ನು ಮಾಡಬೇಕು ಎಂಬುದು ನಮ್ಮ ಅಭಿಪ್ರಾಯ. ದೇಶ ದೊಡ್ಡದಿದೆ, ಹಲವು ವಿಷಯಗಳಿವೆ. ರಾಜ್ಯಗಳ ಬಜೆಟ್ ಬಂದಾಗ, ಮಾರಾಟ ತೆರಿಗೆಯಲ್ಲಿ ಅನೇಕ ಚರ್ಚೆಗಳು ನಡೆಯುತ್ತಿವೆ ಮತ್ತು ಕೊನೆಯಲ್ಲಿ ರಾಜ್ಯಗಳು ಬದಲಾವಣೆಗಳನ್ನು ಮಾಡಿರುವುದನ್ನು ನೀವು ನೋಡಿರಬೇಕು. ಈಗ ವಿಷಯವು ರಾಜ್ಯಗಳಿಂದ ದೂರ ಸರಿದು ಸಂಯೋಜಿತವಾಗಿರುವುದರಿಂದ ಅದು ಭಾರವೆನಿಸುತ್ತಿದೆ.

ನೋಡಿ, ಜಿಎಸ್‌ಟಿ ತುಂಬಾ ಸರಳವಾಗಿರಬೇಕು, ಹೀಗಿರಬೇಕು, ಹಾಗಿರಬೇಕು ಎಂದು ಮಾತನಾಡಲಾಗಿದೆ. ನಾನೊಂದು ಕೇಳಲು ಬಯಸುತ್ತೇನೆ, ನಿಮಗೆ ಹೆಚ್ಚಿನ ಜ್ಞಾನವಿದ್ದರೆ, ಅದನ್ನು ತುಂಬಾ ಸರಳವಾಗಿಸಲು ಸ್ಪಷ್ಟ ದೃಷ್ಟಿ ಇದ್ದರೆ, ಅದನ್ನೇಕೆ ನೀವು ಸದಾ ನೇಣು ಹಾಕಿದ ಸ್ಥಿತಿಯಲ್ಲಿಟ್ಟೀರಿ. ಸ್ನೇಹಿತರೇ, ಗೊಂದಲವನ್ನು ಹರಡಬೇಡಿ.

ನಾನು ನಿಮಗೆ ಹೇಳುತ್ತೇನೆ, ನೀವು ಇಂದು ಕೇಳಬೇಕು. ಪ್ರಣಬ್ ದಾ ಅವರು ಹಣಕಾಸು ಸಚಿವರಾಗಿದ್ದಾಗ ಗುಜರಾತ್‌ಗೆ ಬಂದಾಗ, ನಾವು ಅವರೊಂದಿಗೆ ಸುದೀರ್ಘವಾಗಿ ಚರ್ಚಿಸಿದ್ದೆವು. ನಾನು ಅವರಿಗೆ ದಾದಾ ಇದು ತಂತ್ರಜ್ಞಾನ ಚಾಲಿತ ವ್ಯವಸ್ಥೆ. ಇದಿಲ್ಲದೆ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದೆ,  ಅದಕ್ಕೆ ದಾದಾ ತಡೆಯಿರಿ ಎಂದು, ತಮ್ಮ ಕಾರ್ಯದರ್ಶಿಯನ್ನು ಕರೆದರು ಮತ್ತು ನೋಡಿ, ಮೋದಿ ಜಿ ಏನು ಹೇಳುತ್ತಿದ್ದಾರೆ ಕೇಳಿ ಎಂದರು. ಆಗ ನಾನು ಹೇಳಿದೆ, ನೋಡಿ, ಇದು ತಂತ್ರಜ್ಞಾನ ಚಾಲಿತ ವ್ಯವಸ್ಥೆ, ಆದ್ದರಿಂದ ತಂತ್ರಜ್ಞಾನವಿಲ್ಲದೆ ಅದು ಮುಂದುವರಿಯಲು ಆಗುವುದಿಲ್ಲ ಎಂದು. ಇಲ್ಲ, ನಾವು ನಿರ್ಧರಿಸಿಯಾಗಿದೆ. ನಾವು ಸಂಸ್ಥೆಯೊಂದನ್ನು ನೇಮಿಸಿಕೊಳ್ಳುತ್ತೇವೆ ಮತ್ತು ನಾವು ಅದನ್ನು ಮಾಡಲಿದ್ದೇವೆ ಎಂದರು. ನಾನು ಜಿಎಸ್‌ಟಿ ಬಗ್ಗೆ ಮಾತನಾಡಲು ಬಂದಾಗ ವಿಷಯ ಬಂತು. ಆಗಲೂ ಅಂತಹ ವ್ಯವಸ್ಥೆ ಇರಲಿಲ್ಲ. ಎರಡನೆಯದಾಗಿ, ಜಿಎಸ್‌ಟಿ ಯಶಸ್ವಿಯಾಗಲು ಉತ್ಪಾದನಾ ರಾಜ್ಯಗಳ ತೊಂದರೆಗಳನ್ನು ನೀವು ಪರಿಹರಿಸಬೇಕು ಎಂದು ನಾನು ಹೇಳಿದೆ. ತಮಿಳುನಾಡು, ಕರ್ನಾಟಕ, ಗುಜರಾತ್, ಮಹಾರಾಷ್ಟ್ರ ದೊಡ್ಡ ಉತ್ಪಾದನಾ ರಾಜ್ಯಗಳಾಗಿವೆ. ಬಳಕೆಯ ರಾಜ್ಯಗಳು, ಗ್ರಾಹಕರು, ಅವರಿಗೆ ಅದು ಅಷ್ಟು ಕಷ್ಟವಲ್ಲ. ಮತ್ತು ನಾನು ಇಂದು ಬಹಳ ಹೆಮ್ಮೆಯಿಂದ ಹೇಳುತ್ತೇನೆ ಅರುಣ್‌ ಜೇಟ್ಲಿ ಅವರು ಹಣಕಾಸು ಸಚಿವರಾಗಿದ್ದಾಗ ಅವರು ಸಮಸ್ಯೆಗಳನ್ನು ಬಗೆಹರಿಸಿದರು. ಅದರ ನಂತರ, ಇಡೀ ದೇಶವು ಜಿಎಸ್‌ಟಿಯೊಂದಿಗೆ ಹೋಗಿದೆ ಕಾರಣ ನಾನು ಮುಖ್ಯಮಂತ್ರಿಯಾಗಿ ಎತ್ತಿದ ಸಮಸ್ಯೆಗಳಿಂದಾಗಿ, ನಾನು ಪ್ರಧಾನ ಮಂತ್ರಿಯಾಗಿ ಸಮಸ್ಯೆಗಳನ್ನು ಬಗೆಹರಿಸಿದ್ದೇನೆ ಮತ್ತು ಬಗೆಹರಿಸುವ ಮೂಲಕ ಜಿಎಸ್‌ಟಿಗೆ ದಾರಿ ಮಾಡಿಕೊಡಲಾಗಿದೆ.

ಇದು ಮಾತ್ರವಲ್ಲ, ನಾವು ಬದಲಾವಣೆಯ ಬಗ್ಗೆ ಮಾತನಾಡುದಾದರೆ, ಕೆಲವೊಮ್ಮೆ ನಾವು ಮತ್ತೆ ಮತ್ತೆ ಏಕೆ ಬದಲಾವಣೆ ಎಂದು ಹೇಳುತ್ತೇವೆ? ನಮ್ಮ ಮಹಾಪುರುಷರು ಅಂತಹ ದೊಡ್ಡ ಸಂವಿಧಾನವನ್ನು ನೀಡಿದ್ದಾರೆ ಎಂದು ನಾನು ಭಾವಿಸುತ್ತೇನೆ, ಅವರು ಅದನ್ನು ಸುಧಾರಣೆಗಾಗಿಯೇ ಇಟ್ಟಿದ್ದಾರೆ. ಸುಧಾರಣೆಗಳು ಪ್ರತಿಯೊಂದು ವ್ಯವಸ್ಥೆಯಲ್ಲೂ ಯಾವಾಗಲೂ ಸ್ವಾಯತ್ತತೆಯನ್ನು ಹೊಂದಿರಬೇಕು ಮತ್ತು ದೇಶದ ಹಿತದೃಷ್ಟಿಯಿಂದ ಪ್ರತಿ ಹೊಸ ಮತ್ತು ಉತ್ತಮ ಸಲಹೆಗಳನ್ನು ಸ್ವಾಗತಿಸುವ ವಿಚಾರಗಳನ್ನು ತೆಗೆದುಕೊಳ್ಳುವ ಮೂಲಕ ನಾವು ಮುಂದಕ್ಕೆ ಹೋಗುತ್ತೇವೆ.

ಗೌರವಾನ್ವಿತ ಸಭಾಪತಿಯವರೇ, ಭಾರತದ ಆರ್ಥಿಕತೆಯಲ್ಲಿ ಒಂದು ವಿಷಯವಿದೆ, ಅದು ಇನ್ನೂ ಬೆಳಕಿಗೆ ಬಂದಿಲ್ಲ, ಇದಕ್ಕೆ ಗಮನ ನೀಡಬೇಕು. ದೇಶದಲ್ಲಿ ಬರಲಿರುವ ದೊಡ್ಡ ಬದಲಾವಣೆಯಲ್ಲಿ, ನಮ್ಮ 2 ಮತ್ತು 3 ನೇ ಶ್ರೇಣಿ ನಗರಗಳು ಅತ್ಯಂತ ವೇಗವಾಗಿ ಕೊಡುಗೆ ನೀಡುತ್ತಿವೆ. ನೀವು ಕ್ರೀಡೆಗಳಲ್ಲಿ ನೋಡುತ್ತಿದ್ದೀರಿ, 2 ಮತ್ತು 3 ನೇ ಶ್ರೇಣಿ ನಗರಗಳ ಮಕ್ಕಳು ಮುಂದೆ ಬರುತ್ತಿದ್ದಾರೆ. ಶಿಕ್ಷಣದಲ್ಲಿ 2 ಮತ್ತು 3 ನೇ ಶ್ರೇಣಿ ನಗರಗಳ ಮಕ್ಕಳು ಮುಂದೆ ಬರುತ್ತಿರುವುದನ್ನು ನೀವು ನೋಡುತ್ತಿದ್ದೀರಿ. ಸ್ಟಾರ್ಟ್‌ಅಪ್‌ಗಳನ್ನು ನೋಡಿ, 2 ಮತ್ತು 3 ನೇ ಶ್ರೇಣಿ ನಗರಗಳಲ್ಲಿ ಹೆಚ್ಚಿನ ಸಂಖ್ಯೆಯ ಸ್ಟಾರ್ಟ್‌ಅಪ್‌ಗಳು ಬರುತ್ತಿವೆ.

ಆದ್ದರಿಂದ ನಮ್ಮ ದೇಶದ ಮಹತ್ವಾಕಾಂಕ್ಷಿ ಯುವಕರು ಒಂದು ದೊಡ್ಡ ಹೊಸ ಶಕ್ತಿಯೊಂದಿಗೆ ಬರುತ್ತಿದ್ದಾರೆ ಮತ್ತು ನಾವು ಸಣ್ಣ ಪಟ್ಟಣಗಳು, ಸಣ್ಣ ನಗರಗಳು, ಅದರ ಆರ್ಥಿಕತೆಗಳಲ್ಲಿ ಸ್ವಲ್ಪ ಪ್ರಗತಿ ಸಾಧಿಸಿದ್ದೇವೆ.

ನಮ್ಮ ದೇಶದಲ್ಲಿ, ಡಿಜಿಟಲ್ ಪರಿವರ್ತನೆಗಳು, ಈ ಸದನದಲ್ಲಿ ಡಿಜಿಟಲ್ ವಹಿವಾಟಿನ ಬಗ್ಗೆ ಭಾಷಣಗಳು ಆಗಿವೆ. ಭಾಷಣಕಾರರು ತಮ್ಮ ಭಾಷಣಗಳನ್ನು ಈಗ ಕೇಳಿದರೆ ತಾವು ಹಾಗೆ ಹೇಳಿರುವ ಬಗ್ಗೆ ಅವರಿಗೇ ಆಶ್ಚರ್ಯವಾಗುತ್ತದೆ. ಕೆಲವರು ಮೊಬೈಲ್ ಬಗ್ಗೆಯೂ ಗೇಲಿ ಮಾಡಿದರು. ಅವರು ಡಿಜಿಟಲ್ ಬ್ಯಾಂಕಿಂಗ್, ಬಿಲ್ಲಿಂಗ್ ವ್ಯವಸ್ಥೆಯನ್ನು ನೋಡುತ್ತಿದ್ದಾರೆ. ಇಂದು ಸಣ್ಣ ಪುಟ್ಟ ಸ್ಥಳಗಳಲ್ಲೂ ಹೆಚ್ಚಾಗಿ ಡಿಜಿಟಲ್ ವಹಿವಾಟು ಕಂಡುಬರುತ್ತಿರುವುದು ನನಗೆ ಆಶ್ಚರ್ಯವಾಗಿದೆ ಮತ್ತು ಆಧುನಿಕ ಮೂಲಸೌಕರ್ಯಗಳ ನಿರ್ಮಾಣದಲ್ಲಿ 2 ಮತ್ತು 3 ನೇ ಶ್ರೇಣಿ ನಗರಗಳು ಸಹ ಮುಂದೆ ಸಾಗಿವೆ. ನಮ್ಮ ರೈಲ್ವೆಗಳು, ನಮ್ಮ ಹೆದ್ದಾರಿಗಳು, ನಮ್ಮ ವಿಮಾನ ನಿಲ್ದಾಣಗಳು, ಅದರ ಸಂಪೂರ್ಣ ಶ್ರೇಣಿ - ಈಗ ಹಾರಾಟದ ಯೋಜನೆಯನ್ನು ನೋಡಿ, 250 ನೇ ಮಾರ್ಗವನ್ನು ಮೊನ್ನೆ ಪ್ರಾರಂಭಿಸಲಾಗಿದೆ, ಭಾರತದೊಳಗೆ ಇನ್ನೂರ ಐವತ್ತು ಮಾರ್ಗ. ನಮ್ಮ ವಿಮಾನ ಪ್ರಯಾಣ ವ್ಯವಸ್ಥೆ ಎಷ್ಟು ವೇಗವಾಗಿ ಬದಲಾಗುತ್ತಿದೆ ಮತ್ತು ಮುಂದಿನ ದಿನಗಳಲ್ಲಿ ಇನ್ನಷ್ಟು ಆಗಲಿದೆ.

ಕಳೆದ ಐದು ವರ್ಷಗಳಲ್ಲಿ, ನಾವು 65 ಕಾರ್ಯಾಚರಣಾ ವಿಮಾನ ನಿಲ್ದಾಣಗಳನ್ನು ಹೊಂದಿದ್ದೇವೆ, ಇಂದು ನಾವು 100 ದಾಟಿದ್ದೇವೆ. 100ರಲ್ಲಿ 65 ಕಾರ್ಯ ನಿರ್ವಹಿಸುತ್ತಿವೆ. ಇವೆಲ್ಲವೂ ಹೊಸ ಪ್ರದೇಶದ ಶಕ್ತಿಯನ್ನು ಹೆಚ್ಚಿಸಲಿವೆ.

ಅದೇ ರೀತಿ, ಕಳೆದ ಐದು ವರ್ಷಗಳಲ್ಲಿ ನಾವು ಕೇವಲ ಸರ್ಕಾರವನ್ನಷ್ಟೇ ಬದಲಾಯಿಸಿಲ್ಲ, ನಮ್ಮ ಆಲೋಚನೆಯನ್ನೂ ಬದಲಾಯಿಸಿದ್ದೇವೆ, ನಾವು ಕೆಲಸ ಮಾಡುವ ವಿಧಾನವನ್ನೂ ಬದಲಾಯಿಸಿದ್ದೇವೆ. ಈಗ ಡಿಜಿಟಲ್ ಇಂಡಿಯಾ ಬಗ್ಗೆ ಮಾತನಾಡೋಣ. ಬ್ರಾಡ್‌ಬ್ಯಾಂಡ್ ಸಂಪರ್ಕ, ಈಗ ಬ್ರಾಡ್‌ಬ್ಯಾಂಡ್ ಸಂಪರ್ಕಕ್ಕೆ ಬಂದರೆ, ಮೊದಲು ಕೆಲಸ ಪ್ರಾರಂಭವಾಗಿತ್ತು, ಯೋಜನೆಯನ್ನು ರೂಪಿಸಲಾಗಿತ್ತು, ಆದರೆ ಯೋಜನೆಯ ವಿಧಾನ ಮತ್ತು ಆಲೋಚನೆಯು ಎಷ್ಟು ಮೌಲ್ಯಯುತವಾತ್ತೆಂದರೆ, ಬ್ರಾಡ್‌ಬ್ಯಾಂಡ್ ಸಂಪರ್ಕವು ಕೇವಲ 59 ಗ್ರಾಮ ಪಂಚಾಯಿತಿಗಳನ್ನು ತಲುಪಿತು. ಇಂದು, ಐದು ವರ್ಷಗಳಲ್ಲಿ ಬ್ರಾಡ್‌ಬ್ಯಾಂಡ್ ಸಂಪರ್ಕವು 1.25 ಲಕ್ಷಕ್ಕೂ ಹೆಚ್ಚು ಗ್ರಾಮಗಳನ್ನು ತಲುಪಿದೆ. ಸಾರ್ವಜನಿಕ ಶಾಲೆಗಳು, ಹಳ್ಳಿಗಳು ಮತ್ತು ಇತರ ಕಚೇರಿಗಳು ಮತ್ತು ಮುಖ್ಯವಾಗಿ ಸಾಮಾನ್ಯ ಸೇವಾ ಕೇಂದ್ರಗಳನ್ನು ಸಹ ಈಗ ಕಾರ್ಯರೂಪಕ್ಕೆ ತರಲಾಗಿದೆ.

ನಾವು 2014 ರಲ್ಲಿ ಅಧಿಕಾರಕ್ಕೆ ಬಂದಾಗ, ನಮ್ಮ ದೇಶದಲ್ಲಿ 80 ಸಾವಿರ ಸಾಮಾನ್ಯ ಸೇವಾ ಕೇಂದ್ರಗಳು ಇದ್ದವು. ಇಂದು, ಅವುಗಳ ಸಂಖ್ಯೆ 3 ಲಕ್ಷ 65 ಸಾವಿರಕ್ಕೆ ಏರಿದೆ. ಹಳ್ಳಿಗಳ ಯುವಕರು ಇದನ್ನು ನಡೆಸುತ್ತಿದ್ದಾರೆ. ಹಳ್ಳಿಗಳ ಅಗತ್ಯತೆಗಳನ್ನು ಪೂರೈಸಲು ಅವರು ತಂತ್ರಜ್ಞಾನದ ಸಂಪೂರ್ಣ ಸೇವೆಗಳನ್ನು ನೀಡುತ್ತಿದ್ದಾರೆ.

12 ಲಕ್ಷಕ್ಕೂ ಹೆಚ್ಚು ಗ್ರಾಮೀಣ ಯುವಕರು ತಮ್ಮ ಗ್ರಾಮಗಳಲ್ಲಿ ವಾಸಿಸುತ್ತಿದ್ದಾರೆ. ಸಂಜೆಯ ಹೊತ್ತು ಅವರು ಪೋಷಕರಿಗೆ ಸಹ ನೆರವಾಗುತ್ತಾರೆ, ಅವರು ಜಮೀನಿನ ಕೆಲಸವನ್ನೂ ಮಾಡುತ್ತಾರೆ. ಈ ಉದ್ಯೋಗ ವಿಧಾನಕ್ಕೆ 12 ಲಕ್ಷ ಗ್ರಾಮೀಣ ಯುವಕರನ್ನು ಸೇರಿಸಲಾಗಿದೆ.

ದೇಶವು ಹೆಮ್ಮೆಪಡುತ್ತದೆ ಮತ್ತು ಪಡಬೇಕು. ಸರ್ಕಾರವು, ಡಿಜಿಟಲ್ ವಹಿವಾಟಿಗಾಗಿ ಭೀಮ್ ಆ್ಯಪ್ ಅನ್ನು ಆರಂಭಿಸಿದ್ದಕ್ಕಾಗಿ ಗೇಲಿ ಮಾಡಲಾಯಿತು. ಇಂದು ಜಗತ್ತಿನಲ್ಲಿ ಅದರ ಸ್ವೀಕಾರವು ಅತ್ಯಂತ ಶಕ್ತಿಯುತ ವೇದಿಕೆಯಾಗಿ ಬೆಳೆಯುತ್ತಿದೆ ಮತ್ತು ಹಣಕಾಸಿನ ಡಿಜಿಟಲ್ ವಹಿವಾಟಿಗೆ ಸುರಕ್ಷಿತ ವೇದಿಕೆಯಾಗಿದೆ ಮತ್ತು ಅಪ್ಲಿಕೇಶನ್ ಬಗ್ಗೆ ಇನ್ನಷ್ಟು ತಿಳಿಯಲು ವಿಶ್ವದ ಅನೇಕ ದೇಶಗಳು ನಮ್ಮನ್ನು ಸಂಪರ್ಕಿಸುತ್ತಿವೆ. ಇದು ದೇಶಕ್ಕೆ ಹೆಮ್ಮೆಯ ವಿಷಯ, ಯಾವುದೇ ನರೇಂದ್ರ ಮೋದಿ ಇದನ್ನು ಸೃಷ್ಟಿಸಿಲ್ಲ. ಇದು ಇಂದು ಡಿಜಿಟಲ್ ವಹಿವಾಟಿಗೆ ಉತ್ತಮ ವೇದಿಕೆಯನ್ನು ಹೊಂದಿರುವ ನಮ್ಮ ದೇಶದ ಯುವಕರ ಬುದ್ಧಿಮತ್ತೆ ಹಾಗೂ ಪ್ರತಿಭೆಯ ಫಲಿತಾಂಶವಾಗಿದೆ.

ಸಭಾಪತಿಗಳೇ, ಅದೇ ಜನವರಿ ತಿಂಗಳಲ್ಲಿ ಭೀಮ್ ಆ್ಯಪ್‌ನಿಂದ ಮೊಬೈಲ್ ಫೋನ್ ಮೂಲಕ 2 ಲಕ್ಷ 16 ಸಾವಿರ ಕೋಟಿ ರೂಪಾಯಿಗಳ ಹಣದ ವಹಿವಾಟು ಮಾಡಲಾಗಿದೆ. ನಮ್ಮ ದೇಶವು ಬದಲಾವಣೆಯನ್ನು ಸ್ವೀಕರಿಸುತ್ತಿದೆ.

ರುಪೇ ಕಾರ್ಡ್- ರುಪೇ ಕಾರ್ಡ್ ಪರಿಚಯಿಸಿದ ಬಗ್ಗೆ ನಿಮಗೆ ತಿಳಿದಿದೆ. ಬಹಳ ಕಡಿಮೆ ಸಂಖ್ಯೆಯಲ್ಲಿ, ಕೇವಲ ಸಾವಿರ ಸಂಖ್ಯೆಯಲ್ಲಿ, ರುಪೇ ಕಾರ್ಡ್‌ಗಳಿದ್ದವು. ಡೆಬಿಟ್ ಕಾರ್ಡ್‌ಗಳ ಜಗತ್ತಿನಲ್ಲಿ, ಶೇಕಡಾ .6 ನಮ್ಮ ಕೊಡುಗೆಯಾಗಿತ್ತು ಎಂದು ಹೇಳಲಾಗಿದೆ. ಇಂದು ಇದು ಸುಮಾರು ಶೇ.50 ತಲುಪಿದೆ. ಇಂದು ರುಪೇ ಡೆಬಿಟ್ ಕಾರ್ಡ್ ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಶ್ವದ ಅನೇಕ ದೇಶಗಳಲ್ಲಿ ಸ್ವೀಕಾರವಾಗುತ್ತಿದೆ. ಭಾರತದ ರುಪೇ ಕಾರ್ಡ್, ತನಗಾಗಿ ಒಂದು ಸ್ಥಾನವನ್ನು ಮಾಡಿಕೊಂಡಿದೆ. ಇದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ.

ಗೌರವಾನ್ವಿತ ಸಭಾಪತಿಯವರೇ, ಅದೇ ರೀತಿ ಸರ್ಕಾರದ ವಿಧಾನವು ಮತ್ತೊಂದು ವಿಷಯವನ್ನು ಹೊಂದಿದೆ - ಉದಾಹರಣೆಗೆ ಜಲ ಜೀವನ್ ಮಿಷನ್. ನಾವು ಶೇ. 100 ಗುರಿಯ ದಿಕ್ಕಿನಲ್ಲಿ ಮೂಲ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಿದ್ದೇವೆ.

ಶೌಚಾಲಯಗಳು - ಶೇ.100

ಮನೆಗಳು - ಶೇ.100

ವಿದ್ಯುತ್ - ಶೇ.100

ಹಳ್ಳಿಗಳಿಗೆ ವಿದ್ಯುತ್ - ಶೇ.100

ಪ್ರತಿಯೊಂದು ಕೆಲಸದಲ್ಲೂ ನಾವು ದೇಶವನ್ನು ಕಷ್ಟಗಳಿಂದ ಮುಕ್ತಗೊಳಿಸುವ ವಿಧಾನದಲ್ಲಿ ಸಾಗುತ್ತಿದ್ದೇವೆ.

ಮನೆಗಳಿಗೆ ಶುದ್ಧ ನೀರನ್ನು ತಲುಪಿಸುವ ಬೃಹತ್ ಅಭಿಯಾನವನ್ನು ನಾವು ಕೈಗೊಂಡಿದ್ದೇವೆ ಮತ್ತು ಮಿಷನ್, ಇದರ ವೈಶಿಷ್ಟ್ಯವೆಂದರೆ, ಇದು ಕೇಂದ್ರ ಸರ್ಕಾರದ ಅಭಿಯಾನವಾಗಿದ್ದರೂ, ಹಣವನ್ನು ರಾಜ್ಯ ಸರ್ಕಾರಗಳು ಖರ್ಚು ಮಾಡಲಿವೆ. ಪ್ರೇರಕ ಶಕ್ತಿಯು ಕೇಂದ್ರ ಸರ್ಕಾರವಾಗಿರುತ್ತದೆ, ಆದರೆ ವಾಸ್ತವವಾಗಿ ಅನುಷ್ಠಾನವನ್ನು ನೇರವಾಗಿ ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಘಟಕವಾದ ಗ್ರಾಮ ಸಂಸ್ಥೆಯು ಅದನ್ನು ಸ್ವತಃ ನಿರ್ಧರಿಸುತ್ತದೆ, ಅದನ್ನು ಯೋಜಿಸುತ್ತದೆ ಮತ್ತು ಮನೆ ಮನೆಗೆ ನೀರು ಪೂರೈಸುವ ವ್ಯವಸ್ಥೆಯನ್ನು ಅವರು ಸ್ಥಾಪಿಸುತ್ತಾರೆ. ನಾವು ಯೋಜನೆಯನ್ನು ಸಹ ತೆಗೆದುಕೊಳ್ಳುತ್ತಿದ್ದೇವೆ.

ನಮ್ಮ ಸಹಕಾರಿ ಒಕ್ಕೂಟ ವ್ಯವಸ್ಥೆಗೆ ಒಂದು ಉತ್ತಮ ಉದಾಹರಣೆಯೆಂದರೆ - 100 ಕ್ಕೂ ಹೆಚ್ಚು ಮಹತ್ವಾಕಾಂಕ್ಷಿ ಜಿಲ್ಲೆಗಳು. ನಮ್ಮ ದೇಶದಲ್ಲಿ ಮತ ಬ್ಯಾಂಕ್‌ನ ರಾಜಕೀಯಕ್ಕಾಗಿ ನಾವು ಸಾಕಷ್ಟು ಹಿಂದಕ್ಕೆ ಮುಂದಕ್ಕೆ ಹೋಗಿದ್ದೇವೆ, ಆದರೆ ದೇಶದ ಹಲವು ಪ್ರದೇಶಗಳು ಹಿಂದುಳಿದವು. ನಾವು ಅವುಗಳತ್ತ ಗಮನ ಹರಿಸಬೇಕಾದರೆ, ನಾವು ಸ್ವಲ್ಪ ತಡವಾಗಿದೆ. ಅನೇಕ ರಾಜ್ಯಗಳ ಕೆಲವು ಜಿಲ್ಲೆಗಳು ಹಲವು ಮಾನದಂಡಗಳಿಂದ ಸಂಪೂರ್ಣವಾಗಿ ಹಿಂದುಳಿದಿವೆ ಎಂದು ನಾನು ಓದಿದ್ದೇನೆ. ಅವುಗಳನ್ನೂ  ನಾವು ಸರಿಪಡಿಸಿದರೆ, ದೇಶದ ಸರಾಸರಿ ಬೃಹತ್ ಪ್ರಮಾಣದಲ್ಲಿ ಸುಧಾರಿಸುತ್ತದೆ. ಕೆಲವೊಮ್ಮೆ ನಿವೃತ್ತಿ ಅಂಚಿನಲ್ಲಿರುವ ಅಧಿಕಾರಿಯಿಂದಲೂ ಅಂತಹ ಜಿಲ್ಲೆಯು ಹಾಗೆಯೇ ಇರುತ್ತದೆ. ಅಂದರೆ, ಅಲ್ಲಿ ಶಕ್ತಿಯುತ, ಪ್ರತಿಭಾವಂತ ಅಧಿಕಾರಿಗಳನ್ನು ಯಾರೂ ನಿಯುಕ್ತಿ ಮಾಡಿಲ್ಲ. ನಾವು ಅದನ್ನು ಬದಲಾಯಿಸಿದ್ದೇವೆ. ವಿವಿಧ ರಾಜ್ಯಗಳ 100 ಮಹತ್ವಾಕಾಂಕ್ಷೆಯ ಜಿಲ್ಲೆಗಳನ್ನು ಗುರುತಿಸಲಾಗಿದೆ, 50 ಮಹತ್ವಾಕಾಂಕ್ಷೆಯ ಬ್ಲಾಕ್ಗಳನ್ನು ಗುರುತಿಸುವಂತೆ ರಾಜ್ಯಗಳಿಗೆ ಸೂಚಿಸಲಾಗಿದೆ. ಅವುಗಳ ಆಡಳಿತದಲ್ಲಿ ಬದಲಾವಣೆ ತರಲು ಮತ್ತು ಪ್ರಾದೇಶಿಕವಾಗಿ ಗಮನವನ್ನು ನೀಡುವ ಮೂಲಕ ಬದಲಾವಣೆಯನ್ನು ತರಲು ಪ್ರಯತ್ನಿಸುವಂತೆ ಕೇಳಿಕೊಳ್ಳಲಾಗಿದೆ.

ಸಹಕಾರ ಒಕ್ಕೂಟ ವ್ಯವಸ್ಥೆಯ ಅನುಷ್ಠಾನಗೊಳಿಸುವ ಏಜೆನ್ಸಿಯಾಗಿ ಜಿಲ್ಲಾ ಮಟ್ಟದಲ್ಲಿಯೂ ಸಹ ಮಹತ್ವಾಕಾಂಕ್ಷೆಯ ಜಿಲ್ಲೆಯು ಅತ್ಯಂತ ಸಂತಸಕರ ಅನುಭವದೊಂದಿಗೆ ಮುಂದುವರಿಯುತ್ತಿದೆ ಎಂದು ಇಂದು ತಿಳಿಯುತ್ತಿದೆ. ಜಿಲ್ಲೆಯ ಅಧಿಕಾರಿಗಳ ನಡುವೆ ಆನ್‌ಲೈನ್‌ನಲ್ಲಿ ಸ್ಪರ್ಧೆ ಏರ್ಪಟ್ಟಿದ್ದು ಇದರಲ್ಲಿ ಎಲ್ಲರೂ ಪ್ರಯತ್ನಿಸುತ್ತಾರೆ, ಲಸಿಕೆ ಹಾಕುವಲ್ಲಿ ಜಿಲ್ಲೆಯು ಮುಂದಿದೆ, ನಾನು ವಾರವೂ ಕೆಲಸ ಮಾಡುತ್ತೇನೆ, ಲಸಿಕೆ ಹಾಕುವಲ್ಲಿ ಹೆಚ್ಚು ಸಾಧಿಸುತ್ತೇನೆ ಹೀಗೆ. ಅಂದರೆ, ಜನರ ಅನುಕೂಲಕ್ಕಾಗಿ ಅಲ್ಲಿ ಉತ್ತಮ ಕೆಲಸ ಮಾಡಲಾಗುತ್ತಿದೆ.

ನಾವು ಆಯುಷ್ಮಾನ್ ಭಾರತದಲ್ಲಿಯೂ ಇದ್ದೇವೆ - ಏಕೆಂದರೆ ಜಿಲ್ಲೆಯ ಆರೋಗ್ಯ ಸೇವೆಗಳ ಸ್ಥಿತಿಯೂ ಅದೇ ರೀತಿಯದ್ದಾಗಿದೆ. ಈ ಬಾರಿ ನಾವು ಅಲ್ಲಿನ ಆರೋಗ್ಯ ಕ್ಷೇತ್ರಕ್ಕೆ ಆದ್ಯತೆ ನೀಡಿದ್ದೇವೆ ಇದರಿಂದ ನಮ್ಮ ಪ್ರದೇಶಗಳು ಮುಂದುವರಿಯಬಹುದು.

ಇದಲ್ಲದೆ, ಮಹತ್ವಾಕಾಂಕ್ಷೆಯ ಜಿಲ್ಲೆಯ ಜನರು ನಮ್ಮ ಬುಡಕಟ್ಟು ಸಹೋದರರು ಮತ್ತು ಸಹೋದರಿಯರಿರಲಿ, ದಿವ್ಯಾಂಗರೇ ಆಗಿರಲಿ, ಅವರು ಸಂಪೂರ್ಣ ಸಂವೇದನೆಯೊಂದಿಗೆ ಕೆಲಸ ಮಾಡಲು ಸರ್ಕಾರವು ಪ್ರಯತ್ನಿಸುತ್ತಿದೆ.

ಕಳೆದ ಐದು ವರ್ಷಗಳಿಂದ ದೇಶದ ಎಲ್ಲಾ ಬುಡಕಟ್ಟು ಹೋರಾಟಗಾರರನ್ನು ಗೌರವಿಸುವ ಕೆಲಸ ನಡೆಯುತ್ತಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಬುಡಕಟ್ಟು ಜನರು ನೀಡಿದ ಕೊಡುಗೆಯನ್ನು ಗ್ರಹಿಸಿ, ಒಂದು ವಸ್ತುಸಂಗ್ರಹಾಲಯ, ಸಂಶೋಧನಾ ಸಂಸ್ಥೆ ಇರಬೇಕು ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಮತ್ತು ಉಳಿಸುವಲ್ಲಿ ಅವರ ಪಾತ್ರ ಎಷ್ಟು ಇತ್ತು. ಎಂಬುದು ಸ್ಫೂರ್ತಿಯಾಗಲಿದೆ, ಇದು ದೇಶವನ್ನು ಒಗ್ಗೂಡಿಸಲು ಸಹ ಕಾರಣವಾಗಲಿದೆ. ಅದಕ್ಕಾಗಿ ಕೆಲಸ ನಡೆಯುತ್ತಿದೆ.

ನಮ್ಮ ಬುಡಕಟ್ಟು ಮಕ್ಕಳಿಗೆ ಅನೇಕ ಭರವಸೆಯ ಅಭ್ಯಾಸಗಳಿವೆ, ಆದರೆ ಅವರಿಗೆ ಅವಕಾಶಗಳಿಲ್ಲ. ಅವರಿಗೆ ಅವಕಾಶ ಸಿಕ್ಕರೆ ಅದು ಕ್ರೀಡೆಯೇ ಆಗಿರಲಿ, ಶಿಕ್ಷಣವೇ ಆಗಿರಲಿ. ಏಕಲವ್ಯ ಶಾಲೆಗಳನ್ನು ಆರಂಭಿಸುವ ಮೂಲಕ ಅಂತಹ ಭರವಸೆಯ ಮಕ್ಕಳಿಗೆ ಅವಕಾಶಗಳನ್ನು ಒದಗಿಸುವಲ್ಲಿ ನಾವು ಉತ್ತಮ ಕೆಲಸ ಮಾಡಿದ್ದೇವೆ.

ಬುಡಕಟ್ಟು ಮಕ್ಕಳೊಂದಿಗೆ, ಈ ಪ್ರದೇಶಗಳಲ್ಲಿ ಸುಮಾರು 30 ಸಾವಿರ ಸ್ವ-ಸಹಾಯ ಗುಂಪುಗಳು ಮತ್ತು ಅರಣ್ಯ-ಸಂಪತ್ತು ಉತ್ಪಾದಿಸುವ ಕಾಡುಗಳು, ಅದಕ್ಕಾಗಿ ಕನಿಷ್ಠ ಬೆಂಲ ಬೆಲೆ- ಹೀಗೆ  ನಾವು ಅವರ ಪ್ರಗತಿಗೆ ಸಬಲೀಕರಣದತ್ತ ಕೆಲಸ ಮಾಡಿದ್ದೇವೆ.

ಮಹಿಳಾ ಸಬಲೀಕರಣ ಕ್ಷೇತ್ರದಲ್ಲಿ, ರಾಷ್ಟ್ರಪತಿಗಳ ಭಾಷಣದಲ್ಲಿ ವಿಷಯಗಳ ಬಗ್ಗೆ ಬಹಳ ಕಡಿಮೆ ಉಲ್ಲೇಖಿಸಲಾಗಿದೆ. ಆದರೆ ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಮಿಲಿಟರಿ ಶಾಲೆಗಳಲ್ಲಿ ಬಾಲಕಿಯರಿಗೆ ಪ್ರವೇಶವನ್ನು ನಾವು ಕಲ್ಪಸಿದ್ದೇವೆ. ಮಿಲಿಟರಿ ಪೊಲೀಸರಲ್ಲಿ ಮಹಿಳೆಯರ ನೇಮಕ ಕಾರ್ಯವೂ ನಡೆಯುತ್ತಿದೆ.

ಮಹಿಳೆಯರ ಸುರಕ್ಷತೆಗಾಗಿ ದೇಶದಲ್ಲಿ 600 ಕ್ಕೂ ಹೆಚ್ಚು ಒನ್ ಸ್ಟಾಪ್ ಕೇಂದ್ರಗಳನ್ನು ತೆರೆಯಲಾಗಿದೆ. ದೇಶದ ಪ್ರತಿ ಶಾಲೆಯಲ್ಲೂ ಆರನೇ ತರಗತಿಯಿಂದ ಹನ್ನೆರಡನೇ ತರಗತಿಯ ಬಾಲಕಿಯರಿಗೆ ಸ್ವಯಂ ರಕ್ಷಣೆ ತರಬೇತಿಯನ್ನು ನೀಡಲಾಗುತ್ತಿದೆ.

ಲೈಂಗಿಕ ಅಪರಾಧಿಗಳನ್ನು ಗುರುತಿಸಲು ರಾಷ್ಟ್ರೀಯ ದತ್ತಸಂಚಯವನ್ನು ಸಿದ್ಧಪಡಿಸಲಾಗಿದೆ ಮತ್ತು ಅಂತಹ ಜನರನ್ನು ಮೇಲ್ವಿಚಾರಣೆ ಮಾಡಬೇಕಾಗುತ್ತದೆ. ಇದಲ್ಲದೆ, ಮಾನವ ಕಳ್ಳಸಾಗಣೆ ವಿರುದ್ಧ ಒಂದು ಘಟಕವನ್ನು ಸ್ಥಾಪಿಸಲು ನಾವು ಯೋಜಿಸಿದ್ದೇವೆ.

ಲೈಂಗಿಕ ಅಪರಾಧಿಗಳನ್ನು ಗುರುತಿಸಲು ರಾಷ್ಟ್ರೀಯ ಡೇಟಾ ಬೇಸ್ ಸಿದ್ಧಪಡಿಸಲಾಗಿದೆ ಮತ್ತು ಅಂತಹ ಅಪರಾಧಿಗಳನ್ನು ಮೇಲ್ವಿಚಾರಣೆ ಮಾಡಬೇಕಾಗುತ್ತದೆ. ಇದಲ್ಲದೆ, ಮಾನವ ಕಳ್ಳಸಾಗಣೆ ತಡೆಗೆ ಒಂದು ಘಟಕವನ್ನು ಸ್ಥಾಪಿಸಲು ನಾವು ಯೋಜಿಸಿದ್ದೇವೆ.

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಗಂಭೀರ ಪ್ರಕರಣಗಳನ್ನು ಎದುರಿಸುವ ಸಲುವಾಗಿ, ನಾವು ಪೋಸ್ಕೋ ಕಾಯ್ದೆಗೆ ಮೂಲಕ ತಿದ್ದುಪಡಿ ಮಾಡುವ ಮೂಲಕ ಅಂತಹ ಅಪರಾಧಗಳನ್ನು ಕಾಯ್ದೆಯ ವ್ಯಾಪ್ತಿಗೆ ತಂದು ಅಪರಾಧಿಗಳಿಗೆ ಶಿಕ್ಷೆ ವಿಧಿಸುತ್ತೇವೆ. ಅಂತಹ ಸಂದರ್ಭಗಳಲ್ಲಿ, ನ್ಯಾಯವನ್ನು ತ್ವರಿತವಾಗಿ ಒದಗಿಸಬೇಕು, ಆದ್ದರಿಂದ ದೇಶಾದ್ಯಂತ ಒಂದು ಸಾವಿರಕ್ಕೂ ಹೆಚ್ಚು ತ್ವರಿತ ಗತಿ ನ್ಯಾಯಾಲಯಗಳನ್ನು ಸ್ಥಾಪಿಸಲಾಗುವುದು.

ಗೌರವಾನ್ವಿತ ಸಭಾಪತಿಯವರೇ, ಸದನದಲ್ಲಿ ಸಿಎಎ ಕುರಿತು ಚರ್ಚೆ ನಡೆದಿದೆ. ಪ್ರತಿಭಟನೆಯ ಹೆಸರಿನಲ್ಲಿ ಅನೇಕ ಭಾಗಗಳಲ್ಲಿ ಅವ್ಯವಸ್ಥೆ ಹರಡಿದೆ, ನಡೆದ ಹಿಂಸಾಚಾರವನ್ನು ಪ್ರತಿಭಟನೆಯ ಹಕ್ಕು ಎಂದು ಹೇಳಲು ಪದೇ ಪದೇ ಪ್ರಯತ್ನಿಸಲಾಗಿದೆ, ಪ್ರಜಾಪ್ರಭುತ್ವ ವಿರೋಧಿ ಚಟುವಟಿಕೆಗಳಲ್ಲಿ ಒಳಗೊಳ್ಳಲು ಸಂವಿಧಾನದ ಹೆಸರಿನಲ್ಲಿ ಪದೇ ಪದೇ ಕರೆ ಕೊಡಲಾಗುತ್ತಿದೆ. ಕಾಂಗ್ರೆಸ್ಸಿನ ಪರಿಸ್ಥಿತಿಯನ್ನು ನಾನು ಅರ್ಥಮಾಡಿಕೊಂಡಿದ್ದೇನೆ, ಆದರೆ ಕೇರಳದ ಎಡರಂಗದ ನಮ್ಮ ಸ್ನೇಹಿತರು ಸ್ವಲ್ಪ ಅರ್ಥಮಾಡಿಕೊಳ್ಳಬೇಕು. ಕೇರಳದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಹಿಂದೆ ಉಗ್ರಗಾಮಿ ಗುಂಪುಗಳ ಕೈವಾಡವಿದೆ ಎಂದು ಕೇರಳದ ಮುಖ್ಯಮಂತ್ರಿ ವಿಧಾನಸಭೆಯಲ್ಲಿ ಹೇಳಿದ್ದಾರೆ ಎಂಬುದನ್ನು ಅವರು ಇಲ್ಲಿಗೆ ಬರುವ ಮೊದಲು ತಿಳಿದುಕೊಳ್ಳಬೇಕು.

ಅಷ್ಟೇ ಅಲ್ಲ, ಕಠಿಣ ಕ್ರಮಗಳ ಬಗ್ಗೆಯೂ ಎಚ್ಚರಿಕೆ ನೀಡಿದ್ದಾರೆ. ಕೇರಳದಲ್ಲಿ, ದೆಹಲಿಯಲ್ಲಿ ಅಥವಾ ದೇಶದ ಇತರ ಭಾಗಗಳಲ್ಲಿ ಸೃಷ್ಟಿಸಿರುವ ಗೊಂದಲವನ್ನು ನೀವು ಹೇಗೆ ಬೆಂಬಲಿಸುತ್ತೀರಿ?

ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಏನು ಹೇಳಲಾಗಿದೆ, ಏನನ್ನು ಪ್ರಚಾರ ಮಾಡ ಲಾಗುತ್ತಿದೆ ಎಂಬ ಬಗ್ಗೆ ಎಲ್ಲಾ ಸಹೋದ್ಯೋಗಿಗಳು ಸ್ವತಃ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು. ದೇಶವನ್ನು ದಾರಿ ತಪ್ಪಿಸುವ ಪ್ರವೃತ್ತಿಯನ್ನು ನಾವೆಲ್ಲರೂ ನಿಲ್ಲಿಸಬೇಕೋ ಅಥವಾ ಬೇಡವೋ? ಇದು ನಮ್ಮ ಕರ್ತವ್ಯವೋ, ಅಲ್ಲವೋ? ನಾವು ಅಂತಹ ಅಭಿಯಾನದ ಭಾಗವಾಗಬೇಕೇ? ಈಗ ಅದು ಯಾರಿಗೂ ರಾಜಕೀಯವಾಗಿ ಒಳ್ಳೆಯದನ್ನು ಮಾಡುವುದಿಲ್ಲ ಎಂದು ಭಾವಿಸೋಣ, ಈ ಹಾದಿಯು ಸರಿಯಾಗಿಲ್ಲ, ನಾವು ಕುಳಿತು ಯೋಚಿಸೋಣ ನಾವು ಸರಿಯಾದ ಹಾದಿಯಲ್ಲಿ ಸಾಗುತ್ತಿದ್ದೇವೆಯೇ. ಇದೆಂತಹ ದ್ವಿಮುಖದ ಪಾತ್ರ. ನೀವು ತುಂಬಾ ಒಳ್ಳೆಯ ಪದಗಳನ್ನು ಬಳಸಿ, 24 ಗಂಟೆಗಳ ಕಾಲ ಅಲ್ಪಸಂಖ್ಯಾತರಿಗಾಗಿ ಅಳುತ್ತೀರಿ, ನಾನು ಇದೀಗ ಆನಂದ್‌ ಶರ್ಮಾ ಅವರು ಮಾತನಾಡುವುದನ್ನು ಕೇಳುತ್ತಿದ್ದೆ. ಆದರೆ ನೀವು ಮಾಡಿದ ಹಿಂದಿನ ತಪ್ಪುಗಳಿಂದಾಗಿ ನೆರೆ ದೇಶಗಳಲ್ಲಿ ಅವರು ಅಲ್ಪಸಂಖ್ಯಾತರಾದರು ಎಂದು ನೀವು ಅವರ ನೋವನ್ನು ಏಕೆ ಅನುಭವಿಸುತ್ತಿಲ್ಲ? ಈ ಸೂಕ್ಷ್ಮವಾದ ವಿಷಯದ ಬಗ್ಗೆ ಜನರನ್ನು ಹೆದರಿಸುವ ಬದಲು ಸರಿಯಾದ ಮಾಹಿತಿಯನ್ನು ನೀಡಲಾಗುತ್ತದೆ ಎಂದು ದೇಶವು ನಿರೀಕ್ಷಿಸುತ್ತದೆ. ಇದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಆಶ್ಚರ್ಯಕರ ಸಂಗತಿಯೆಂದರೆ, ಪ್ರತಿಪಕ್ಷದ ಅನೇಕ ಮಿತ್ರಪಕ್ಷಗಳು ಇತ್ತೀಚೆಗೆ ಬಹಳ ಉತ್ಸುಕರಾಗಿದ್ದಾರೆ. ಒಂದು ಕಾಲದಲ್ಲಿ ಮೌನವಾಗಿದ್ದವರು ಇತ್ತೀಚಿಗೆ ಹಿಂಸಾತ್ಮಕವಾಗಿದ್ದಾರೆ. ಸಭಾಪತಿಯವರೇ, ಇಂದು ಸದನ ಬಹಳ ಹಿರಿಯ ವ್ಯಕ್ತಿಗಳಿಗೆ ಸೇರಿದ್ದು ಎಂದು ನಾನು ನಂಬುತ್ತೇನೆ, ಆದ್ದರಿಂದ ಇಂದು ನಾನು ಕೆಲವು ಮಹಾಪುರುಷರ ಮಾತುಗಳನ್ನು ನಿಮಗೆ ಓದಲು ಬಯಸುತ್ತೇನೆ.

ಮೊದಲ ಹೇಳಿಕೆಯೆಂದರೆ- " ಪೂರ್ವ ಪಾಕಿಸ್ತಾನದ ಭಾಗದಲ್ಲಿ ನೆಲೆಸಿರುವ ಅಲ್ಪಸಂಖ್ಯಾತ ಸಮುದಾಯಗಳ ಜೀವನ, ಆಸ್ತಿ ಮತ್ತು ಗೌರವದ ಅಸುರಕ್ಷಿತತೆ ಮತ್ತು ಪಾಕಿಸ್ತಾನದ ಭಾಗದಲ್ಲಿ ಅವರಿಗೆ ಎಲ್ಲಾ ಮಾನವ ಹಕ್ಕುಗಳನ್ನು ಸಾಮಾನ್ಯವಾಗಿ ನಿರಾಕರಿಸಲಾಗಿದೆ ಎಂಬುದು ಸದನದ ಅಭಿಪ್ರಾಯವಾಗಿದೆ. ಪೂರ್ವ ಪಾಕಿಸ್ತಾನದಿಂದ ಭಾರತಕ್ಕೆ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಜನರ ವಲಸೆಯಲ್ಲಿನ ನಿರ್ಬಂಧಗಳನ್ನು ಸಡಿಲಿಸುವುದರ ಜೊತೆಗೆ ಭಾರತ ಸರ್ಕಾರವು ಜಗತ್ತಿನ ಅಭಿಪ್ರಾಯವನ್ನು ದಾಖಲಿಸುವ ಕ್ರಮಗಳನ್ನು ಪರಿಗಣಿಸಬೇಕು."

ಇದನ್ನು ಸದನದಲ್ಲಿ ಹೇಳಲಾಗಿದೆ. ಕೆಲವು ಜನಸಂಘದ ನಾಯಕರು ಮಾತ್ರ ಹೀಗೆ ಮಾತನಾಡಬಲ್ಲರು ಎಂದು ಈಗ ನಿಮಗೆ ಅನಿಸುತ್ತದೆ. ಆ ಸಮಯದಲ್ಲಿ ಬಿಜೆಪಿ ಇರಲಿಲ್ಲ ಆದರೆ ಜನಸಂಘ ಇತ್ತು. ಆದ್ದರಿಂದ ಜನಸಂಘದ ಯಾರಾದರೂ ಹೀಗೆ ಮಾತನಾಡಿರಬಹುದು ಎಂದು ನೀವು ಭಾವಿಸಿರಬೇಕು. ಆದರೆ ಹೇಳಿಕೆ ಯಾವುದೇ ಬಿಜೆಪಿ ಅಥವಾ ಜನಸಂಘದ ನಾಯಕನಿಗೆ ಸೇರಿದ್ದಲ್ಲ.

ಅದೇ ಮಹಾನ್ ವ್ಯಕ್ತಿಯ ಮತ್ತೊಂದು ಹೇಳಿಕೆಯನ್ನು ನಾನು ಹೇಳಲು ಬಯಸುತ್ತೇನೆ, "ಪೂರ್ವ ಪಾಕಿಸ್ತಾನಕ್ಕೆ ಸಂಬಂಧಿಸಿದಂತೆ, ಎಲ್ಲಾ ಮುಸ್ಲಿಮೇತರರನ್ನು ತೆಗೆದುಹಾಕಬೇಕು ಎಂಬ ನಿರ್ಧಾರವಾಗಿದೆ ಎಂದು ತಿಳಿದುಬಂದಿದೆ. ಅದು ಇಸ್ಲಾಮಿಕ್ ರಾಷ್ಟ್ರವಾಗಿದೆ. ಇಸ್ಲಾಮಿಕ್ ರಾಷ್ಟ್ರ, ಇಸ್ಲಾಂ ಧರ್ಮವನ್ನು ನಂಬುವವರು ಮಾತ್ರ ಇಲ್ಲಿ ವಾಸಿಸಬಹುದು ಮತ್ತು ಇಸ್ಲಾಮೇತರ ಜನರು ಇಲ್ಲಿ ವಾಸಿಸಲು ಸಾಧ್ಯವಿಲ್ಲ ಎಂದು ಅದು ಭಾವಿಸುತ್ತದೆ. ಆದ್ದರಿಂದ ಹಿಂದೂಗಳನ್ನು ಹೊರಹಾಕಲಾಗುತ್ತಿದೆ, ಕ್ರೈಸ್ತರನ್ನು ಹೊರಹಾಕಲಾಗುತ್ತಿದೆ. 37 ಸಾವಿರಕ್ಕೂ ಹೆಚ್ಚು ಕ್ರೈಸ್ತರು ಅಲ್ಲಿಂದ ಭಾರತಕ್ಕೆ ವಲಸೆ ಬಂದಿದ್ದಾರೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಇಂದು. ಬೌದ್ಧರನ್ನು ಸಹ ಅಲ್ಲಿಂದ ಹೊರಹಾಕಲಾಗುತ್ತಿದೆ.” ಎಂದು ಅವರು ಹೇಳುತ್ತಾರೆ.

ಇದೂ ಸಹ ಯಾವುದೇ ಜನ ಸಂಘ ಅಥವಾ ಬಿಜೆಪಿ ಮುಖಂಡರ ಹೇಳಿಕೆಯಲ್ಲ. ಈ ಮಾತುಗಳು ದೇಶದ ಪ್ರೀತಿ ಪಾತ್ರ ಪ್ರಧಾನ ಮಂತ್ರಿಗಳಲ್ಲಿ ಒಬ್ಬರಾಗಿರುವ ಮಹಾನ್ ವ್ಯಕ್ತಿಗೆ ಸೇರಿವೆ ಎಂದು ನಾನು ಸದನಕ್ಕೆ ಹೇಳಲು ಬಯಸುತ್ತೇನೆ, ಇದು ಮಾನನೀಯ ಲಾಲ್ ಬಹದ್ದೂರ್ ಶಾಸ್ತ್ರಿಜಿಯವರ ಮಾತುಗಳು. ಈಗ ನೀವು ಅವರನ್ನು ಕೋಮುವಾದಿ ಎಂದೂ ಕರೆಯುತ್ತೀರಿ. ನೀವು ಅವರನ್ನು ಹಿಂದೂ ಮತ್ತು ಮುಸ್ಲಿಂ ವಿಭಜಕ ಎಂದೂ ಕರೆಯುತ್ತೀರಿ.

ಹೇಳಿಕೆಯನ್ನು ಲಾಲ್ ಬಹದ್ದೂರ್ ಶಾಸ್ತ್ರಿಯವರು ಏಪ್ರಿಲ್ 3, 1964 ರಂದು ಸಂಸತ್ತಿನಲ್ಲಿ ನೀಡಿದರು. ಆ ಸಮಯದಲ್ಲಿ ನೆಹರೂ ಅವರು ಪ್ರಧಾನ ಮಂತ್ರಿಯಾಗಿದ್ದರು. ನಂತರ ಧಾರ್ಮಿಕ ಕಿರುಕುಳದಿಂದಾಗಿ ಭಾರತಕ್ಕೆ ಬರುವ ನಿರಾಶ್ರಿತರ ಬಗ್ಗೆ ಸಂಸತ್ತಿನಲ್ಲಿ ಚರ್ಚಿಸಲಾಯಿತು. ಶಾಸ್ತ್ರಿಯವರು ಸಂದರ್ಭದಲ್ಲಿ ರೀತಿ ಹೇಳಿದ್ದರು.

ಗೌರವಾನ್ವಿತ ಸಭಾಪತಿಯವರೇ, ಗೌರವಾನ್ವಿತ ಸದನಕ್ಕೆ ಮತ್ತೊಂದು ಹೇಳಿಕೆಯನ್ನು ಹೇಳುತ್ತೇನೆ. ಮತ್ತು ಇದನ್ನು ವಿಶೇಷವಾಗಿ ನನ್ನ ಸಮಾಜವಾದಿ ಸ್ನೇಹಿತರಿಗೆ ಅರ್ಪಿಸುತ್ತೇನೆ. ಏಕೆಂದರೆ ಬಹುಶಃ ಸ್ಫೂರ್ತಿ ಅಲ್ಲಿಂದಲೇ ಬಂದಿರಬಹುದು. ಎಚ್ಚರಿಕೆಯಿಂದ ಆಲಿಸಿ.

“ಭಾರತದ ಮುಸ್ಲಿಮರು ಬದುಕಬೇಕು ಮತ್ತು ಪಾಕಿಸ್ತಾನದ ಹಿಂದೂಗಳು ಬದುಕಬೇಕು. ಪಾಕಿಸ್ತಾನದ ಹಿಂದೂಗಳು ಪಾಕಿಸ್ತಾನದ ನಾಗರಿಕರು, ಆದ್ದರಿಂದ ನಾವು ಅವರ ಬಗ್ಗೆ ಕಾಳಜಿ ವಹಿಸಬೇಕಾಗಿಲ್ಲ ಎಂಬ ಅಂಶವನ್ನು ನಾನು ಸಂಪೂರ್ಣವಾಗಿ ತಿರಸ್ಕರಿಸುತ್ತೇನೆ, ಹಿಂದೂ ಪಾಕಿಸ್ತಾನದಲ್ಲಿರಲಿ, ಎಲ್ಲಿಯ ಪ್ರಜೆಯಾದರೂ ಆಗಿರಲಿ ಹಿಂದೂಗಳು ಅಥವಾ ಹಿಂದೂಸ್ತಾನದ ಮುಸ್ಲಿಮರಂತೆ ಅವರನ್ನು ರಕ್ಷಿಸುವುದು ನಮ್ಮ ಕರ್ತವ್ಯ."

ಇದನ್ನು ಯಾರು ಹೇಳಿದರು? ಇದು ಕೂಡ ಜನಸಂಘ ಅಥವಾ ಬಿಜೆಪಿಗೆ ಸೇರಿದವರ ಹೇಳಿಕೆಯಲ್ಲ. ಇದು ಶ್ರೀ ರಾಮ ಮನೋಹರ ಲೋಹಿಯಾ ಅವರ ಹೇಳಿಕೆ. ನಮ್ಮ ಸಮಾಜವಾದಿ ಸಹಚರರು, ನಮ್ಮನ್ನು ನಂಬುತ್ತಾರೋ, ಬಿಡುತ್ತಾರೋ. ಆದರೆ ಕನಿಷ್ಠ ಲೋಹಿಯಾ ಅವರನ್ನು ನಿರಾಕರಿಸಬೇಡಿ, ಅದು ಅವರಲ್ಲಿ ನನ್ನ ವಿನಂತಿ.

ಗೌರವಾನ್ವಿತ ಸಭಾಪತಿಯವರೇ, ನಾನು ಸದನದಲ್ಲಿ ಶಾಸ್ತ್ರಿಜಿಯವರ ಇನ್ನೊಂದು ಹೇಳಿಕೆಯನ್ನು ಓದಲು ಬಯಸುತ್ತೇನೆ. ನಿರಾಶ್ರಿತರ ಕುರಿತು ರಾಜ್ಯ ಸರ್ಕಾರಗಳ ಪಾತ್ರದ ಬಗ್ಗೆ ಅವರು ಹೇಳಿಕೆ ನೀಡಿದ್ದಾರೆ. ಲಾಲ್ ಬಹದ್ದೂರ್ ಶಾಸ್ತ್ರಿಜಿಯವರ ಭಾಷಣವನ್ನು ನೀವು ಕೇಳಬೇಕು, ಮತ ಬ್ಯಾಂಕ್ ರಾಜಕಾರಣದಿಂದಾಗಿ ರಾಜ್ಯಗಳಲ್ಲಿನ ಶಾಸಕಾಂಗ ಸಭೆಗಳಲ್ಲಿ ನಿರ್ಣಯಗಳನ್ನು ಮಂಡಿಸುವ ಮೂಲಕ ಆಡುವ ಆಟ. ನೀವು ಎಲ್ಲಿಗೆ ಹೋಗುದ್ದಿರಿ, ಎಲ್ಲಿದ್ದಿರಿ, ನಿಮಗೆ ಏನಾಗಿತ್ತು ಎಂದು ನಿಮಗೆ ತಿಳಿಯುತ್ತದೆ.

ಸಭಾಪತಿಯವರೇ, ಲಾಲ್ ಬಹದ್ದೂರ್ ಶಾಸ್ತ್ರಿಯವರು ಹೇಳಿದ್ದಾರೆ-

“ನಮ್ಮ ಎಲ್ಲಾ ರಾಜ್ಯ ಸರ್ಕಾರಗಳು ಇದನ್ನು (ನಿರಾಶ್ರಿತರಿಗೆ ಆಶ್ರಯ) ರಾಷ್ಟ್ರೀಯ ಪ್ರಶ್ನೆಯೆಂದು ಪರಿಗಣಿಸಿವೆ. ಇದಕ್ಕಾಗಿ ನಾವು ಅವರನ್ನು ಅಭಿನಂದಿಸುತ್ತೇವೆ ಮತ್ತು ಹಾಗೆ ಮಾಡಲು ನಮಗೆ ತುಂಬಾ ಸಂತೋಷವಾಗಿದೆ. ಬಿಹಾರ ಮತ್ತು ಒರಿಸ್ಸಾ ಆಗಿರಲಿ, ಮಧ್ಯಪ್ರದೇಶವಾಗಲಿ ಅಥವಾ ಉತ್ತರ ಪ್ರದೇಶವಾಗಲಿ, ಅಥವಾ ಮಹಾರಾಷ್ಟ್ರವಾಗಲಿ, ಆಂಧ್ರವಾಗಲಿ, ಎಲ್ಲಾ ರಾಜ್ಯಗಳು ನಿರಾಶ್ರಿತರಿಗೆ ಆಶ್ರಯ ನೀಡಲು ಸಿದ್ಧವಾಗಿರುವುದಾಗಿ ಭಾರತ ಸರ್ಕಾರಕ್ಕೆ ಪತ್ರ ಬರೆದಿವೆ. ಕೆಲವರು ಐವತ್ತು ಸಾವಿರ ಮಂದಿಗೆ, ಕೆಲವರು ಹದಿನೈದು ಸಾವಿರ ಕುಟುಂಬಗಳಿಗೆ ಎಂದು ಹೇಳಿದ್ದಾರೆ, ಕೆಲವರು ಹತ್ತು ಸಾವಿರ ಕುಟುಂಬಗಳಿಗೆ ಆಶ್ರಯ ನೀಡುವ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಸಿದ್ಧವಿರುವುದಾಗಿ ಹೇಳಿದ್ದಾರೆ.”

ಶಾಸ್ತ್ರಿಜಿಯವರು ಹೇಳಿಕೆ ನೀಡಿದ 1964 ರಲ್ಲಿ ಹೆಚ್ಚಾಗಿ ದೇಶದಲ್ಲಿ ಕಾಂಗ್ರೆಸ್ ಸರ್ಕಾರಗಳು ಇದ್ದವು. ಆದರೆ, ಇಂದು ನಾವು ಉತ್ತಮ ಕೆಲಸ ಮಾಡುತ್ತಿದ್ದೇವೆ ಮತ್ತು ನಿಮ್ಮ ಮತ ಬ್ಯಾಂಕ್ ರಾಜಕೀಯದಿಂದಾಗಿ ನೀವು ಅಡೆತಡೆಗಳನ್ನು ಸೃಷ್ಟಿಸುತ್ತಿದ್ದೀರಿ.

ಗೌರವಾನ್ವಿತ ಸಭಾಪತಿಯವರೇ, ನಾನು ಇನ್ನೂ ಒಂದು ಉದಾಹರಣೆ ನೀಡಲು ಬಯಸುತ್ತೇನೆ - ನವೆಂಬರ್ 25, 1947 ರಂದು, ದೇಶವು ಸ್ವಾತಂತ್ರ್ಯ ಪಡೆದ ಕೆಲವೇ ತಿಂಗಳುಗಳಲ್ಲಿ, ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ನಿರ್ಣಯವೊಂದನ್ನು ಅಂಗೀಕರಿಸಿತು. ನವೆಂಬರ್ 25, 1947 ರಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಪ್ರಸ್ತಾಪವು ಏನು ಹೇಳುತ್ತದೆ:

ತಮ್ಮ ಜೀವ ಹಾಗೂ ಗೌರವವನ್ನು ರಕ್ಷಿಸಿಕೊಳ್ಳಲು ಗಡಿಯನ್ನು ದಾಟಿ ಭಾರತಕ್ಕೆ ಬಂದಿರುವ ಪಾಕಿಸ್ತಾನದ ಮುಸ್ಲಿಮೇತರರಿಗೆ ಸಂಪೂರ್ಣ ರಕ್ಷಣೆ ನೀಡಲು ಕಾಂಗ್ರೆಸ್ ಮತ್ತಷ್ಟು ಬದ್ಧವಾಗಿದೆ”.

ನೀವು ಇಂದು ಭಾಷೆಯನ್ನು ಮಾತನಾಡುತ್ತಿದ್ದರೆ ಇದು ಮುಸ್ಲಿಮೇತರರಿಗೆ.

ಗೌರವಾನ್ವಿತ ಸಭಾಪತಿಯವರೇ, 1947 ರ ನವೆಂಬರ್ 25 ರ ಕಾಂಗ್ರೆಸ್ ಕೋಮುವಾದಿ ಎಂದು ನಾನು ನಂಬುವುದಿಲ್ಲ ಮತ್ತು ಇಂದು ಇದ್ದಕ್ಕಿದ್ದಂತೆ ಅದು ಜಾತ್ಯತೀತವಾಗುತ್ತದೆ, ನಾನು ಅದನ್ನೂ ನಂಬುವುದಿಲ್ಲ. ನವೆಂಬರ್ 25, 1947ರಂದು, ಮುಸ್ಲಿಮೇತರರು ಎಂದು ಬರೆಯುವ ಬದಲು, ಪಾಕಿಸ್ತಾನದಿಂದ ಬರುವ ಎಲ್ಲರಿಗೆ ಎಂದು ಯಾಕೆ ನೀವು ಬರೆಯಲಿಲ್ಲ. ಮುಸ್ಲಿಮೇತರರು ಎಂದು ಏಕೆ ಬರೆದಿರಿ?

ವಿಭಜನೆಯ ನಂತರ ಪಾಕಿಸ್ತಾನದಲ್ಲಿ ಉಳಿದುಕೊಂಡಿರುವ ಹೆಚ್ಚಿನ ಹಿಂದೂಗಳು ನಮ್ಮ ದಲಿತ ಸಹೋದರ ಸಹೋದರಿಯರು. ಇವರಿಗೆ ಬಾಬಾಸಾಹೇಬ್ ಅಂಬೇಡ್ಕರ್-

"ಇಂದು ಪಾಕಿಸ್ತಾನದೊಳಗೆ ಬಂಧಿಯಾಗಿರುವ ಪರಿಶಿಷ್ಟ ಜಾತಿಗಳವರಿಗೆ ಭಾರತಕ್ಕೆ ಬನ್ನಿ ಎಂದು ನಾನು ಹೇಳಲು ಬಯಸುತ್ತೇನೆ." ಎಂದು ಹೇಳಿದ್ದರು.

ಬಾಬಾ ಸಾಹೇಬ್ ಅಂಬೇಡ್ಕರ್ ಅವರೂ ಸಹ ಅದೇ ಸಂದೇಶವನ್ನು ನೀಡಿದರು. ಈ ಎಲ್ಲಾ ಹೇಳಿಕೆಗಳು ಶ್ರೇಷ್ಠ ವ್ಯಕ್ತಿತ್ವಗಳವು, ಅವರು ದೇಶದ ರಾಷ್ಟ್ರ ನಿರ್ಮಾಣಕಾರರು. ಅವರೆಲ್ಲರೂ ಕೋಮುವಾದಿಗಳಾಗಿದ್ದರಾ? ಮತ ಬ್ಯಾಂಕ್ ರಾಜಕೀಯದಿಂದಾಗಿ ಕಾಂಗ್ರೆಸ್ ಮತ್ತು ಅದರ ಸಹವರ್ತಿ ರಾಷ್ಟ್ರ ನಿರ್ಮಾಣಕಾರರೂ ಇದನ್ನು ಮರೆಯಲು ಪ್ರಾರಂಭಿಸಿದ್ದಾರೆ. ಇದು ದೇಶಕ್ಕೆ ಕಳವಳಕಾರಿ ವಿಷಯ.

ಗೌರವಾನ್ವಿತ ಸಭಾಪತಿಯವರೇ, 1997 ರಲ್ಲಿ, ಈ ಸದನದಲ್ಲಿರುವ ಅನೇಕ ಸಹಚರರಲ್ಲಿ ಆಗಲೂ ಇದ್ದವರು ಯಾರಾದರೂ ಇರಬಹುದು. ಅಂದಿನ ಸರ್ಕಾರದ ಸೂಚನೆಯ ಮೇರೆಗೆ ಹಿಂದೂ ಮತ್ತು ಸಿಖ್ಖರ ಪದಗಳನ್ನು ಬಳಸಲು ಪ್ರಾರಂಭಿಸಿದ ವರ್ಷ ಇದು. ಇದು ಮೊದಲು ಇರಲಿಲ್ಲ, ಅದನ್ನು ಸೇರಿಸಲಾಯಿತು. 2011 ರಲ್ಲಿ, ಪಾಕಿಸ್ತಾನದಿಂದ ಬರುವ ಕ್ರಿಶ್ಚಿಯನ್ ಮತ್ತು ಬೌದ್ಧ ಪದಗಳ ವರ್ಗವನ್ನು ಸಹ ಸೃಷ್ಟಿಸಲಾಯಿತು. ಇದೆಲ್ಲವೂ ನಡೆದದ್ದು 2011 ರಲ್ಲಿ.

ಪೌರತ್ವ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ 2003 ರಲ್ಲಿ ಮಂಡಿಸಲಾಯಿತು. 2003 ರ ಪೌರತ್ವ ತಿದ್ದುಪಡಿ ಮಸೂದೆ ಚರ್ಚಿಸಿ ನಂತರ ಮಂಡಿಸಿದ ಸಂಸತ್ತಿನ ಸ್ಥಾಯಿ ಸಮಿತಿ, ಕಾಂಗ್ರೆಸ್‌ನಿಂದ ಸಮಿತಿಯ ಅನೇಕ ಸದಸ್ಯರು ಇನ್ನೂ ಇಲ್ಲಿದ್ದಾರೆ, ಅವರು ಸಮಿತಿಯಲ್ಲಿದ್ದರು ಮತ್ತು ಸಂಸತ್ತಿನ ಸ್ಥಾಯಿ ಸಮಿತಿಯು ಅದೇ ವರದಿಯಲ್ಲಿ "ನೆರೆಯ ರಾಷ್ಟ್ರಗಳಿಂದ ಬರುವ ಅಲ್ಪಸಂಖ್ಯಾತರನ್ನು ಎರಡು ಭಾಗಗಳಲ್ಲಿ ನೋಡಬೇಕು, ಒಂದು ಧಾರ್ಮಿಕ ಕಿರುಕುಳದಿಂದಾಗಿ ಬಂದವರು ಮತ್ತು ಇನ್ನೊಂದು - ನಾಗರಿಕ ದಂಗೆಗಳಿಂದಾಗಿ ಬರುವ ಅಕ್ರಮ ವಲಸಿಗರು" ಎಂದು ಹೇಳಿದರು. ಇದು ಸಮಿತಿಯ ವರದಿ. ಇಂದು, ಈ ಸರ್ಕಾರವು ಬಗ್ಗೆ ಮಾತನಾಡುವಾಗ, 17 ವರ್ಷಗಳ ನಂತರ ಬಗ್ಗೆ ಅಸಮಾಧಾನವೇಕೆ?

ಸಭಾಪತಿಯವರೇ, ಫೆಬ್ರವರಿ 28, 2004 ರಂದು, ರಾಜಸ್ಥಾನದ ಮುಖ್ಯಮಂತ್ರಿಯವರ ಕೋರಿಕೆಯ ಮೇರೆಗೆ, ಕೇಂದ್ರ ಸರ್ಕಾರವು ರಾಜಸ್ಥಾನದ ಎರಡು ಜಿಲ್ಲೆಗಳು ಮತ್ತು ಗುಜರಾತ್‌ನ 4 ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಪಾಕಿಸ್ತಾನದಿಂದ ಬಂದ ಅಲ್ಪಸಂಖ್ಯಾತ ಹಿಂದೂ ಸಮುದಾಯದವರಿಗೆ ಭಾರತೀಯ ಪೌರತ್ವವನ್ನು ನೀಡುವ ಹಕ್ಕನ್ನು ನೀಡಿತು. ಈ ನಿಯಮವು 2005 ಮತ್ತು 2006 ರಲ್ಲಿಯೂ ಜಾರಿಯಲ್ಲಿತ್ತು. 2005 ಮತ್ತು 2006 ರಲ್ಲಿ ನೀವು ಇದ್ದಿರಿ. ಆಗ ಸಂವಿಧಾನದ ಮೂಲ ಆಶಯಕ್ಕೆ ಯಾವುದೇ ಬೆದರಿಕೆ ಇರಲಿಲ್ಲ, ಅದರ ವಿರುದ್ಧವಾಗಿರಲಿಲ್ಲ.

ಇಂದಿನಿಂದ 10 ವರ್ಷಗಳ ಹಿಂದಿನವರಗೂ ಅದು ಚೆನ್ನಾಗಿತ್ತು, ಯಾವುದೇ ಶಬ್ದವಿರಲಿಲ್ಲ, ಇಂದು ಇದ್ದಕ್ಕಿದ್ದಂತೆ ನಿಮ್ಮ ಜಗತ್ತು ಬದಲಾಗಿದೆ. ಸೋಲು, ಸೋಲು ನಿಮ್ಮನ್ನು ತುಂಬಾ ನಿರಾಸೆಗೊಳಿಸುತ್ತದೆ, ಇದನ್ನು ನಾನು ಎಂದಿಗೂ ಯೋಚಿಸಿರಲಿಲ್ಲ.

ಗೌರವಾನ್ವಿತ ಸಭಾಪತಿಗಳೇ, ಎನ್‌ಪಿಆರ್ ಬಗ್ಗೆಯೂ ಸಾಕಷ್ಟು ಚರ್ಚಿಸಲಾಗುತ್ತಿದೆ. ಜನಗಣತಿ ಮತ್ತು ಎನ್‌ಪಿಆರ್ ಸಾಮಾನ್ಯ ಆಡಳಿತಾತ್ಮಕ ಚಟುವಟಿಕೆಗಳಾಗಿವೆ, ಇದನ್ನು ದೇಶದಲ್ಲಿ ಮೊದಲೂ ಮಾಡಲಾಗಿದೆ. ಆದರೆ ಮತ ಬ್ಯಾಂಕ್ ರಾಜಕಾರಣದ ಹಂಗು ಇದ್ದಾಗ, 2010 ರಲ್ಲಿ ಎನ್‌ಪಿಆರ್ ಅನ್ನು ತಂದುಕೊಟ್ಟ ಜನರೇ ತಪ್ಪು ಮಾಹಿತಿ ಹರಡುತ್ತಿದ್ದಾರೆ ಮತ್ತು ಇಂದು ಅದನ್ನು ವಿರೋಧಿಸುತ್ತಿದ್ದಾರೆ.

ಗೌರವಾನ್ವಿತ ಸಭಾಪತಿಯವರೇ, ನೀವು ಜನಗಣತಿಯನ್ನು ನೋಡಿದರೆ, ದೇಶದ ಸ್ವಾತಂತ್ರ್ಯದ ನಂತರ, ಮೊದಲ ದಶಕದಲ್ಲಿ ಕೆಲವು ಪ್ರಶ್ನೆಗಳಿದ್ದವು, ಎರಡನೇ ದಶಕದಲ್ಲಿ ಕೆಲವು ಪ್ರಶ್ನೆಗಳನ್ನು ಕೈಬಿಡಲಾಗುತ್ತದೆ, ಕೆಲವನ್ನು ಸೇರಿಸಲಾಗುತ್ತದೆ. ಅಗತ್ಯಕ್ಕೆ ತಕ್ಕಂತೆ, ಕೆಲವೊಂದು ಸಣ್ಣ ಪುಟ್ಟ ಬದಲಾವಣೆಗಳು ಯಾವಾಗಲೂ ನಡೆಯುತ್ತಲೇ ಇರುತ್ತವೆ. ವದಂತಿಗಳನ್ನು ಹರಡುವ ಕೆಲಸವನ್ನು ನಾವು ಮಾಡಬಾರದು. ನಮ್ಮ ದೇಶದಲ್ಲಿ ಮಾತೃಭಾಷೆಯ ಅಷ್ಟು ದೊಡ್ಡ ಬಿಕ್ಕಟ್ಟು ಇರಲಿಲ್ಲ. ಇಂದು ಹೆಚ್ಚಿನ ಸಂಖ್ಯೆಯ ಜನರು ಸೂರತ್‌ನಿಂದ ಒಡಿಶಾಗೆ ವಲಸೆ ಬಂದಿದ್ದಾರೆ. ಮತ್ತು ನಾವು ಒಡಿಯಾ ಶಾಲೆಯನ್ನು ನಡೆಸುವುದಿಲ್ಲ ಎಂದು ಗುಜರಾತ್ ಸರ್ಕಾರ ಹೇಳಿದರೆ, ಅದು ಎಷ್ಟು ದಿನ ನಡೆಯುತ್ತದೆ. ಯಾರು ಮಾತೃಭಾಷೆ ಮಾತನಾಡುತ್ತಾರೆ, ಅವರ ತಂದೆ ಯಾವ ಭಾಷೆ ಮಾತನಾಡುತ್ತಿದ್ದರು ಎಂಬ ಬಗ್ಗೆ ಸರ್ಕಾರವು ಮಾಹಿತಿಯನ್ನು ಹೊಂದಿದ್ದರೆ ಒಡಿಯಾ ಶಾಲೆಗಳನ್ನು ಸೂರತ್‌ನಲ್ಲಿ ಪ್ರಾರಂಭಿಸಬಹುದು ಎಂದು ನಾನು ನಂಬುತ್ತೇನೆ. ಮೊದಲು ಯಾವುದೇ ವಲಸೆ ಇರಲಿಲ್ಲ, ಇಂದು ವಲಸೆ ಹೆಚ್ಚಿರುವಾಗ ಇದು ಅಗತ್ಯವಾಗಿರುತ್ತದೆ.

ಗೌರವಾನ್ವಿತ ಸಭಾಪತಿಯವರೇ, ಈ ಮೊದಲು ನಮ್ಮ ದೇಶಕ್ಕೆ ವಲಸೆ ಸಣ್ಣ ಪ್ರಮಾಣದಲ್ಲಿತ್ತು. ಕಾಲಕ್ರಮೇಣ, ನಗರಗಳತ್ತ ಆಕರ್ಷಣೆ ಹೆಚ್ಚುತ್ತಿದೆ, ನಗರಗಳ ಅಭಿವೃದ್ಧಿ, ಜನರ ಆಕಾಂಕ್ಷೆಯನ್ನು ಬದಲಾಯಿಸುತ್ತಿದೆ, ಆದ್ದರಿಂದ ಕಳೆದ 30-40 ವರ್ಷಗಳಲ್ಲಿ ವಲಸೆ ಗೋಚರಿಸುತ್ತಿದೆ. ಈಗ ನಾನು ಸಹ ವಲಸೆಯವನು, ಯಾವ ಜಿಲ್ಲೆಗಳಿಂದ ವಲಸೆ ಇದೆ, ಯಾರು ಜಿಲ್ಲೆಯನ್ನು ತೊರೆಯುತ್ತಿದ್ದಾರೆಂದು ತಿಳಿಯದೆ ನೀವು ಜಿಲ್ಲೆಯ ಅಭಿವೃದ್ಧಿಗೆ ಆದ್ಯತೆ ನೀಡಲು ಸಾಧ್ಯವಿಲ್ಲ.

ನೀವು ಮತ್ತು ಇವರೆಲ್ಲರೂ ಅನೇಕ ವದಂತಿಗಳನ್ನು ಹರಡುತ್ತಿರುವವರು, ಜನರನ್ನು ದಾರಿತಪ್ಪಿಸುತ್ತಿರುವವರ, ನೀವು 2010 ರಲ್ಲಿ ಎನ್‌ಪಿಆರ್ ಅನ್ನು ತಂದಿದ್ದೀರಿ. ನಾವು 2014 ರಿಂದ ಇಲ್ಲಿ ಕುಳಿತಿದ್ದೇವೆ, ಅದೇ ಎನ್‌ಪಿಆರ್, ದಾಖಲೆಗಳ ಬಗ್ಗೆ ನಾವು ಯಾರ ಮೇಲಾದರೂ ಪ್ರಶ್ನೆ ಮಾಡಿದ್ದೇವೆಯೇ? ನಿಮ್ಮ ಎನ್‌ಪಿಆರ್‌ನ ದಾಖಲೆ ನಮ್ಮಲ್ಲಿದೆ. ನಿಮ್ಮ ಕಾಳದ ಎನ್‌ಪಿಆರ್ ದಾಖಲೆ. ಆ ಎನ್‌ಪಿಆರ್ ಆಧಾರದ ಮೇಲೆ ದೇಶದ ಯಾವುದೇ ನಾಗರಿಕನನ್ನು ಹಿಂಸಿಸಲಾಗಿಲ್ಲ.

ಗೌರವಾನ್ವಿತ ಸಭಾಪತಿಯವರೇ  ಅಷ್ಟೇ ಅಲ್ಲ, ಯುಪಿಎಯ ಅಂದಿನ ಗೃಹ ಸಚಿವರಾಗಿದ್ದವರು  ಎನ್‌ಪಿಆರ್ ಅನ್ನು ಪ್ರಾರಂಭಿಸುವಾಗ, ಪ್ರತೀ ಸಾಮಾನ್ಯ ನಿವಾಸಿ, ಪ್ರತಿಯೊಬ್ಬ ಸ್ವಾಭಾವಿಕ ನಿವಾಸಿಗಳ ಎನ್‌ಪಿಆರ್‌ಗೆ ದಾಖಲಾತಿ ಮಾಡುವ ಅಗತ್ಯತೆಯ ಬಗ್ಗೆ ವಿಶೇಷ ಒತ್ತು ನೀಡಿದ್ದರು ಮತ್ತು ಎಲ್ಲರೂ ಪ್ರಯತ್ನದ ಭಾಗವಾಗಬೇಕು ಎಂದಿದ್ದರು. ಎನ್‌ಪಿಆರ್ ಬಗ್ಗೆ ಪ್ರಚಾರ ಮಾಡುವಂತೆ, ಈ ಬಗ್ಗೆ ಜನರಿಗೆ ತಿಳುವಳಿಕೆ ನೀಡುವಂತೆ ಮಾಧ್ಯಮಗಳಿಗೆ ಅಂದಿನ ಗೃಹ ಸಚಿವರು ಸಾರ್ವಜನಿಕವಾಗಿ ಮನವಿ ಮಾಡಿದ್ದರು.

ಯುಪಿಎ 2010 ರಲ್ಲಿ ಎನ್‌ಪಿಆರ್ ಅನ್ನು ಪರಿಚಯಿಸಿತು ಮತ್ತು 2011 ರಲ್ಲಿ ಎನ್‌ಪಿಆರ್‌ಗಾಗಿ ಬಯೋಮೆಟ್ರಿಕ್ ಡೇಟಾವನ್ನು ಸಂಗ್ರಹಿಸಲು ಪ್ರಾರಂಭಿಸಿತು. ನಿಮ್ಮ ಸರ್ಕಾರ 2014 ರಲ್ಲಿ ಹೋಗುವ ಹೊತ್ತಿಗೆ, ಎನ್‌ಪಿಆರ್ ಅಡಿಯಲ್ಲಿ, ಕೋಟ್ಯಂತರ ನಾಗರಿಕರ ದಾಖಲೆಗಳ ದಾಖಲೀಕರಣ ಮತ್ತು ಸ್ಕ್ಯಾನ್ ಮಾಡುವ ಕೆಲಸ ಪೂರ್ಣಗೊಂಡಿತ್ತು ಮತ್ತು ಬಯೋಮೆಟ್ರಿಕ್ ಡೇಟಾ ಸಂಗ್ರಹಣೆ ಕೆಲಸ ಪ್ರಗತಿಯಲ್ಲಿತ್ತು. ನಾನು ಮಾತನಾಡುತ್ತಿರುವುದು ನಿಮ್ಮ ಅಧಿಕಾರಾವಧಿಯ ಬಗ್ಗೆ.

2015 ರಲ್ಲಿ ನೀವು ಸಿದ್ಧಪಡಿಸಿದ ಎನ್‌ಪಿಆರ್ ದಾಖಲೆಗಳನ್ನು ಇಂದು ನಾವು ಪರಿಷ್ಕರಿಸಿದ್ದೇವೆ. ಮತ್ತು ಎನ್‌ಪಿಆರ್ ದಾಖಲೆಗಳ ಮೂಲಕ, ಪ್ರಧಾನ್ ಮಂತ್ರಿ ಜನ ಧನ್ ಯೋಜನ, ನೇರ ಲಾಭ ವರ್ಗಾವಣೆ ಮತ್ತು ಎಲ್ಲಾ ಸರ್ಕಾರಿ ಯೋಜನೆಗಳಲ್ಲಿ ಅರ್ಹ ಫಲಾನುಭವಿಗಳನ್ನು ಸೇರಿಸಲು ನಾವು ಎನ್‌ಪಿಆರ್ ದಾಖಲೆಯನ್ನು ಸಕಾರಾತ್ಮಕ ರೀತಿಯಲ್ಲಿ ಬಳಸಿದ್ದೇವೆ. ಬಡವರಿಗೆ ಪ್ರಯೋಜನಗಳನ್ನು ಒದಗಿಸಿದ್ದೇವೆ.

ಆದರೆ ಇಂದು, ಇದನ್ನು ರಾಜಕೀಯಗೊಳಿಸುವ ಮೂಲಕ, ನೀವು ಎನ್‌ಪಿಆರ್ ಅನ್ನು ವಿರೋಧಿಸುತ್ತಿದ್ದೀರಿ ಮತ್ತು ಕೋಟ್ಯಂತರ ಬಡವರು ಕಲ್ಯಾಣ ಯೋಜನೆಗಳ ಭಾಗವಾಗುವುದನ್ನು ತಡೆಯುವ ಮೂಲಕ ಪಾಪವನ್ನು ಮಾಡುತ್ತಿದ್ದೀರಿ. ತಮ್ಮ ಕ್ಷುಲ್ಲಕ ರಾಜಕೀಯ ಲಾಭಕ್ಕಾಗಿ ಏನನ್ನೋ ಮಾಡುತ್ತಿರುವವರ ಬಡವರ ವಿರೋಧಿ ಮನಸ್ಥಿತಿ ಬಹಿರಂಗವಾಗುತ್ತಿದೆ.

2020 ರ ಜನಗಣತಿಯೊಂದಿಗೆ, ನಾವು ಎನ್‌ಪಿಆರ್ ದಾಖಲೆಗಳನ್ನು ಪರಿಷ್ಕಕರಿಸಲು ಬಯಸುತ್ತೇವೆ, ಇದರಿಂದಾಗಿ ಬಡವರಿಗಾಗಿ ನಡೆಯುತ್ತಿರುವ ಯೋಜನೆಗಳು ಅವರನ್ನು ಹೆಚ್ಚು ಪರಿಣಾಮಕಾರಿಯಾಗಿ ಮತ್ತು ಪ್ರಾಮಾಣಿಕವಾಗಿ ತಲುಪಬಹುದು. ಆದರೆ ಈಗ ನೀವು ವಿರೋಧ ಪಕ್ಷದಲ್ಲಿದ್ದೀರಿ. ಆದ್ದರಿಂದ ಮೊದಲು  ನೀವೇ ಪ್ರಾರಂಭಿಸಿದ ಎನ್‌ಪಿಆರ್ ಈಗ ಕೆಟ್ಟದಾಗಿ ಕಾಣುತ್ತಿದೆ.

ಗೌರವಾನ್ವಿತ ಸಭಾಪತಿಯವರೇ, ಎಲ್ಲಾ ರಾಜ್ಯಗಳು ಸೂಕ್ತ ಗೆಜೆಟ್ ಅಧಿಸೂಚನೆಗಳನ್ನು ಹೊರಡಿಸುವ ಮೂಲಕ ಎನ್‌ಪಿಆರ್‌ಗೆ ಅನುಮೋದನೆ ನೀಡಿವೆ. ಈಗ ಕೆಲವು ರಾಜ್ಯಗಳು ಥಟ್ಟಂತ ಯು-ಟರ್ನ್ ತೆಗೆದುಕೊಂಡಿವೆ ಮತ್ತು ಅದರಲ್ಲಿ ಅಡೆತಡೆಗಳನ್ನುಂಟುಮಾಡುತ್ತಿವೆ ಹಾಗೂ ಇದರ ಮಹತ್ವವನ್ನು ಮತ್ತು ಬಡವರಿಗೆ ಅದರ ಪ್ರಯೋಜನಗಳನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸುತ್ತಿವೆ. 70 ವರ್ಷಗಳಲ್ಲಿ ನೀವು ಮಾಡದಂತಹ ಕೆಲಸಗಳನ್ನು ಮಾಡುತ್ತಿದ್ದರೆ, ವಿರೋಧ ಪಕ್ಷದಲ್ಲಿ ಕುಳಿತಾಗ ಈಗ ರೀತಿ ಮಾತನಾಡುವುದು ಅವರಿಗೆ ತಕ್ಕುದಲ್ಲ.

ಆದರೆ ನೀವೇ ತಂದಿರುವ, ಪ್ರಚಾರ ಮಾಡಿದ, ಮಾಧ್ಯಮದಲ್ಲಿ ಪ್ರಚಾರ ಪಡೆದಿರುವ ಕೆಲಸವನ್ನೇ ಈಗ ನೀವು ಅಸ್ಪೃಶ್ಯವೆಂದು ಕರೆಯುವ ಮೂಲಕ ವಿರೋಧಿಸಲು ಪ್ರಯತ್ನಿಸುತ್ತಿದ್ದೀರಿ! ನಿಮ್ಮ ಮನೋಧರ್ಮವನ್ನು ಮತ ಬ್ಯಾಂಕ್ ರಾಜಕೀಯದ ಪ್ರಕಾರ ಮಾತ್ರ ನಿರ್ಧರಿಸಲಾಗುತ್ತದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಓಲೈಕೆಯ ಪ್ರಶ್ನೆ ಇದ್ದರೆ ಅಭಿವೃದ್ಧಿ ಮತ್ತು ವಿಭಜನೆಯ ಹಾದಿಗಳ ನಡುವೆ, ನೀವು ಜನರನ್ನು ವಿಭಜಿಸುವ ಮಾರ್ಗವನ್ನು ಬಹಿರಂಗವಾಗಿ ಆರಿಸಿಕೊಳ್ಳಿ.

ಇಂತಹ ಅವಕಾಶವಾದಿ ವಿರೋಧದಿಂದ ಯಾವುದೇ ಪಕ್ಷಕ್ಕೆ ಪ್ರಯೋಜನವಾಗಬಹುದು ಅಥವಾ ಹಾನಿಯಾಗಬಹುದು, ಆದರೆ ಇದರಿಂದ ದೇಶಕ್ಕೆ ಖಂಡಿತವಾಗಿಯೂ ನಷ್ಟವಾಗುತ್ತದೆ. ಇದು ದೇಶದಲ್ಲಿ ಅಪನಂಬಿಕೆಯ ಸನ್ನಿವೇಶಕ್ಕೆ ಕಾರಣವಾಗುತ್ತದೆ. ಆದ್ದರಿಂದ, ನಾವು ಜನರಲ್ಲಿ ಸತ್ಯವಾದುದನ್ನು ಮತ್ತು ನೈಜ ಸಂಗತಿಗಳನ್ನು ಮಾತ್ರ ತರಬೇಕು ಎಂಬುದು ನನ್ನ ವಿನಂತಿ.

ದಶಕದಲ್ಲಿ ಜಗತ್ತು ಭಾರತದಿಂದ ದೊಡ್ಡ ನಿರೀಕ್ಷೆಗಳನ್ನು ಹೊಂದಿದೆ ಮತ್ತು ಭಾರತೀಯರು ನಮ್ಮಿಂದ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದ್ದಾರೆ. ಈ ನಿರೀಕ್ಷೆಗಳನ್ನು ಈಡೇರಿಸಲು ನಮ್ಮೆಲ್ಲರ ಪ್ರಯತ್ನಗಳು 130 ಕೋಟಿ ಭಾರತೀಯರ ಆಕಾಂಕ್ಷೆಗಳೊಂದಿಗೆ ಹೊಂದಿಕೆಯಾಗಬೇಕು.

ರಾಷ್ಟ್ರೀಯ ಹಿತಾಸಕ್ತಿಯ ಎಲ್ಲಾ ವಿಷಯಗಳಲ್ಲಿ, ಈ ಸದನವು ಸಂಗಚ್ಛದ್ವಂ, ಸಂವಾದಧ್ವಂ ಜೊತೆಗೆ ಒಟ್ಟಿಗೆ ಸಾಗಿದಾಗ, ಒಗ್ಗಟ್ಟಿನಿಂದ ಮುಂದುವರಿದಾಗ, ಈ ಸಂಕಲ್ಪದೊಂದಿಗೆ ಮುಂದಕ್ಕೆ ಹೋದಾಗ ಮಾತ್ರ ಇದು ಸಾಧ್ಯ. ಸಂವಾದಗಳು, ಚರ್ಚೆಗಳು ಮತ್ತು ನಂತರೆ ನಿರ್ಧಾರಗಳು ಇರಲಿ.

ಶ್ರೀ ದಿಗ್ವಿಜಿಯ ಸಿಂಗ್ ಅವರು ಇಲ್ಲಿ ಒಂದು ಕವಿತೆಯನ್ನು ವಾಚಿಸಿದರು, ಹಾಗಾಗಿ ನನಗೂ ಒಂದು ಕವಿತೆ ನೆನಪಾಗುತ್ತಿದೆ.

ನನಗೆ ಮನೆ ಇಲ್ಲ, ಕೇವಲ ಬಯಲಿದೆ

ಅದು ಸತ್ಯ ದಯೆ, ಆಸೆ ಮತ್ತು ಕನಸುಗಳಿಂದ ತುಂಬಿದೆ

ನನ್ನ ದೇಶವು ಅಭಿವೃದ್ಧಿ ಹೊಂದಿರುವುದನ್ನು, ಶ್ರೇಷ್ಠವಾಗಿರುವುದನ್ನು ಕಾಣುವ ಆಸೆ,

ಎಲ್ಲೆಲ್ಲೂ ಸಂತೋಷ ಮತ್ತು ಶಾಂತಿಯನ್ನು ಕಾಣುವ ಕನಸುಗಳು !!

ಭಾರತದ ಹೆಮ್ಮೆಯ ಪುತ್ರ, ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಕಲಾಂ ಅವರ ಸಾಲುಗಳು ನನಗೆ ಇಷ್ಟ. ನಾನು ಸಾಲುಗಳನ್ನು ಇಷ್ಟಪಟ್ಟೆ ಮತ್ತು ನಿಮ್ಮ ಆಯ್ಕೆಯ ಸಾಲುಗಳನ್ನು ನೀವು ಇಷ್ಟಪಟ್ಟಿದ್ದೀರಿ. ಜಾಕಿರಾಹಿ ಭಾವನಾ ಜೈಸಿ, ಪ್ರಭುಮುರತ್ ದೇಖಿ ತಿನ್ ಜೈಸೀ ಎಂದು ಹೇಳುವುದನ್ನು ನೀವು ಕೇಳಿರಬೇಕು. ಈಗ ನಿಮ್ಮ ಆಯ್ಕೆಯನ್ನು ಬದಲಾಯಿಸಬೇಕೇ ಅಥವಾ 21 ನೇ ಶತಮಾನದಲ್ಲಿ 20 ನೇ ಶತಮಾನದ ಕನವರಿಕೆಯೊಂದಿಗೆ ಸಾಗಬೇಕೆ ಎಂಬುದನ್ನು ನೀವೇ ನಿರ್ಧರಿಸಬೇಕು.

ನವ ಭಾರತ ಮುಂದೆ ಸಾಗುತ್ತಿದೆ. ಇದು ಕರ್ತವ್ಯದ ಹಾದಿಯಲ್ಲಿ ಸಾಗಲು ಪ್ರಾರಂಭಿಸಿದೆ ಮತ್ತು ಕರ್ತವ್ಯವೇ ಎಲ್ಲಾ ಹಕ್ಕುಗಳ ಸಾರವನ್ನು ಸಾಕಾರಗೊಳಿಸುತ್ತದೆ, ಇದೇ ಮಹಾತ್ಮ ಗಾಂಧಿಯವರ ಸಂದೇಶ.

ಗಾಂಧೀಜಿಯವರು ಹೇಳಿದಂತೆ ನಾವು ಕರ್ತವ್ಯದ ಹಾದಿಯಲ್ಲಿ ಮುಂದುವರಿಯೋಣ ಮತ್ತು ಸಮೃದ್ಧ, ಸಮರ್ಥ ಮತ್ತು ದೃಢವಾದ ನವ ಭಾರತವನ್ನು ನಿರ್ಮಿಸಲು ಪ್ರಾರಂಭಿಸೋಣ. ನಮ್ಮೆಲ್ಲರ ಸಾಮೂಹಿಕ ಪ್ರಯತ್ನಗಳ ಮೂಲಕ ಭಾರತದ ಪ್ರತಿಯೊಂದು ಆಕಾಂಕ್ಷೆ ಮತ್ತು ಸಂಕಲ್ಪವೂ ಸಾಕಾರಗೊಳ್ಳುತ್ತದೆ.

ರಾಷ್ಟ್ರಪತಿಯವರು ಮತ್ತು ಎಲ್ಲ ಸದಸ್ಯರಿಗೆ ನಾನು ಮತ್ತೊಮ್ಮೆ ನನ್ನ ಹೃತ್ಪೂರ್ವಕ ಧನ್ಯವಾದವನ್ನು ಅರ್ಪಿಸುತ್ತೇನೆ. ದೇಶದ ಸಂವಿಧಾನದ ಮಹೋನ್ನತ ಭಾವನೆಗಳನ್ನು ಗೌರವಿಸುವ ಮೂಲಕ ದೇಶದ ಏಕತೆ ಮತ್ತು ಸಮಗ್ರತೆಗೆ ಆದ್ಯತೆ ನೀಡುವ ಮೂಲಕ ನಾವು ಒಟ್ಟಾಗಿ ನಡೆಯೋಣ, ನಮ್ಮ ದೇಶದ ಪ್ರಗತಿಗೆ ಕೊಡುಗೆ ನೀಡೋಣ. ಈ ಚರ್ಚೆಯನ್ನು ಸಮೃದ್ಧಗೊಳಿಸಿದ್ದಕ್ಕಾಗಿ ನಾನು ಮತ್ತೊಮ್ಮೆ ಗೌರವಾನ್ವಿತ ಸಭಾಪತಿಯವರು ಮತ್ತು ಗೌರವಾನ್ವಿತ ಸದಸ್ಯರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ.

ತುಂಬು ಧನ್ಯವಾದಗಳು.

***


(Release ID: 1605875) Visitor Counter : 341