ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿ ಜನೌಷಧಿ ಪರಿಯೋಜನಾ ಫಲಾನುಭವಿಗಳೊಂದಿಗೆ ಪ್ರಧಾನಮಂತ್ರಿ ಸಂವಾದ
Posted On:
07 MAR 2020 2:12PM by PIB Bengaluru
ಪ್ರಧಾನಮಂತ್ರಿ ಜನೌಷಧಿ ಪರಿಯೋಜನಾ ಫಲಾನುಭವಿಗಳೊಂದಿಗೆ ಪ್ರಧಾನಮಂತ್ರಿ ಸಂವಾದ
ಕರೋನಾ ವೈರಾಣು ಸೋಂಕಿನ ಪ್ರಕರಣಗಳಲ್ಲಿ ವೈದ್ಯಕೀಯ ನೆರವು ಪಡೆಯಿರಿ ಮತ್ತು ವದಂತಿಗಳನ್ನು ತಪ್ಪಿಸಿ: ಪ್ರಧಾನಮಂತ್ರಿ
ನಮಸ್ತೆ ಹೇಳಲು ಕೈಜೋಡಿಸುವ ಅಭ್ಯಾಸವನ್ನು ಪುನರ್ ಪರಿಚಯಿಸಲು ಇದು ಸೂಕ್ತ ಕಾಲ ಎಂದು ಪ್ರಧಾನಮಂತ್ರಿ ಹೇಳಿಕೆ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆ ಫಲಾನುಭವಿಗಳು ಮತ್ತು ಜನೌಷಧಿ ಕೇಂದ್ರಗಳ ಮಳಿಗೆ ಮಾಲೀಕರುಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು.
ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಕರೋನಾ ವೈರಾಣು ಭೀತಿಯನ್ನು ಹತ್ತಿಕ್ಕಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಂಡಿವೆ ಎಂದು ಪ್ರಧಾನಮಂತ್ರಿ ತಿಳಿಸಿದರು. ಭಾರತದಲ್ಲಿ ನುರಿತ ವೈದ್ಯರುಗಳು, ವೈದ್ಯಕೀಯ ಶ್ರೇಷ್ಠ ಸಂಪನ್ಮೂಲ ಹೊಂದಿದ್ದು, ಈ ಬಗ್ಗೆ ನಾಗರಿಕರಲ್ಲಿ ಸಂಪೂರ್ಣ ಅರಿವಿದೆ ಎಂದರು. ಕರೋನಾ ವೈರಾಣು ಪಸರಿಸದಂತೆ ತಡೆಯುವಲ್ಲಿ ಜಾಗೃತ ನಾಗರಿಕರ ಜವಾಬ್ದಾರಿ ಮಹತ್ವದ್ದು ಎಂದು ಪ್ರತಿಪಾದಿಸಿದರು.
ಪದೇ ಪದೇ ಕೈತೊಳೆದುಕೊಳ್ಳುವ ಬಗ್ಗೆ ಹೆಚ್ಚು ಒತ್ತು ನೀಡಿ ಹೇಳುವ ಅಗತ್ಯವಿಲ್ಲ. ಸೀನುವಾಗ ಮತ್ತು ಕೆಮ್ಮುವಾಗ ಮತ್ತೊಬ್ಬರಿಗೆ ಸೋಂಕು ತಾಗದಂತೆ ಮೂಗು ಮತ್ತು ಬಾಯಿ ಮುಚ್ಚಿಕೊಳ್ಳಿ ಎಂದು ಪ್ರಧಾನಮಂತ್ರಿ ಅವರು ಹೇಳಿದರು. “ಕರೋನಾ ವೈರಾಣು ಸೋಂಕು ತಗುಲಿರುವುದು ದೃಢಪಟ್ಟಿರುವ ಎಲ್ಲ ಪ್ರಕರಣಗಳಲ್ಲಿ ಅಗತ್ಯ ನಿಗಾದಲ್ಲಿ ಇರಿಸಲಾಗಿದೆ. ಆದರೆ ಯಾರಿಗಾದರೂ ತಾವು ಸೋಂಕು ತಗುಲಿರುವವರೊಂದಿಗೆ ಸಂಪರ್ಕಕ್ಕೆ ಬಂದಿದ್ದೇವೆ ಎನಿಸಿದರೆ ಅವರು ಆತಂಕಗೊಳ್ಳುವ ಅಗತ್ಯವಿಲ್ಲ ಬದಲಾಗಿ ಅವರು ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ತಪಾಸಣೆ ಮಾಡಿಸಿಕೊಳ್ಳಬೇಕು. ಕುಟುಂಬದ ಇತರ ಸದಸ್ಯರು ಕೂಡ ಸೋಂಕಿಕೆ ತೆರೆದುಕೊಳ್ಳುತ್ತಾರೆ, ಇಂಥ ಪ್ರಕರಣಗಳಲ್ಲಿ ಅವರುಗಳು ಕೂಡ ಅಗತ್ಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕಾಗುತ್ತದೆ”, ಎಂದು ಪ್ರಧಾನಮಂತ್ರಿ ಹೇಳಿದರು.
ಸಾಂಕ್ರಾಮಿಕ ಕರೋನಾ ವೈರಾಣುವಿನ ಬಗ್ಗೆ ಯಾವುದೇ ರೀತಿಯ ವದಂತಿಗಳಿಗೆ ಕಿವಿಗೊಡದಂತೆ ಮನವಿ ಮಾಡಿದ ಪ್ರಧಾನಮಂತ್ರಿಯವರು ಕೇವಲ ವೈದ್ಯರ ಸಲಹೆಯನ್ನಷ್ಟೇ ಪಾಲಿಸುವಂತೆ ತಿಳಿಸಿದರು.
“ಹೌದು ಈಗ ಇಡೀ ವಿಶ್ವ ನಮಸ್ತೆ ಎಂಬ ಹವ್ಯಾಸ ರೂಢಿಸಿಕೊಳ್ಳುತ್ತಿದೆ. ಕೆಲವೊಂದು ಕಾರಣಗಳಿಗಾಗಿ ನಾವು ಇದನ್ನು ಬಿಟ್ಟು ಬಿಟ್ಟಿದ್ದೆವು, ಈಗ ನಮಸ್ತೆ ಹೇಳಲು ನಮ್ಮ ಎರಡು ಕೈಗಳನ್ನು ಜೋಡಿಸುವ ಅಭ್ಯಾಸ ಮತ್ತೆ ಪರಿಚಯಿಸಲು ಇದು ಸಕಾಲವಾಗಿದೆ’’ ಎಂದು ಪ್ರಧಾನಮಂತ್ರ ಹೇಳಿದರು.
****
(Release ID: 1605867)
Visitor Counter : 137