ಸಂಪುಟ

ಆದಾಯದ ಮೇಲಿನ ತೆರಿಗೆಗೆ ಸಂಬಂಧಿಸಿದಂತೆ  ವಿತ್ತೀಯ ವಂಚನೆ ತಡೆಯಲು ಮತ್ತು ದ್ವಿತೆರಿಗೆಯನ್ನು ತಪ್ಪಿಸಲು  ಭಾರತ ಮತ್ತು ಶ್ರೀಲಂಕಾ ನಡುವಿನ ಒಪ್ಪಂದಕ್ಕೆ ತಿದ್ದುಪಡಿಯ ಶಿಷ್ಟಾಚಾರಕ್ಕೆ  ಸಂಪುಟದ ಅನುಮೋದನೆ

प्रविष्टि तिथि: 12 FEB 2020 3:51PM by PIB Bengaluru

ಆದಾಯದ ಮೇಲಿನ ತೆರಿಗೆಗೆ ಸಂಬಂಧಿಸಿದಂತೆ  ವಿತ್ತೀಯ ವಂಚನೆ ತಡೆಯಲು ಮತ್ತು ದ್ವಿತೆರಿಗೆಯನ್ನು ತಪ್ಪಿಸಲು  ಭಾರತ ಮತ್ತು ಶ್ರೀಲಂಕಾ ನಡುವಿನ ಒಪ್ಪಂದಕ್ಕೆ ತಿದ್ದುಪಡಿಯ ಶಿಷ್ಟಾಚಾರಕ್ಕೆ  ಸಂಪುಟದ ಅನುಮೋದನೆ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಆದಾಯದ ಮೇಲಿನ ತೆರಿಗೆಗೆ ಸಂಬಂಧಿಸಿದಂತೆ  ವಿತ್ತೀಯ ವಂಚನೆ ತಡೆಯಲು ಮತ್ತು ದ್ವಿತೆರಿಗೆಯನ್ನು ತಪ್ಪಿಸಲು  ಭಾರತ ಮತ್ತು ಶ್ರೀಲಂಕಾ ನಡುವಿನ ಒಪ್ಪಂದಕ್ಕೆ ತಿದ್ದುಪಡಿಯ ಶಿಷ್ಟಾಚಾರಕ್ಕೆ ಅನುಮೋದನೆ ನೀಡಿದೆ.

ಪರಿಣಾಮಗಳು :

ದ್ವಿ ತೆರಿಗೆ ತಡೆ ಒಪ್ಪಂದ (ಡಿಟಿಎಎ)ದ ಪೀಠಿಕೆ ಪಠ್ಯದಲ್ಲಿನ ನವೀಕರಣ ಮತ್ತು ಪ್ರಧಾನ ಉದ್ದೇಶ ಪರಿಶೀಲನೆ, ಸಾಮಾನ್ಯ ನಿಂದನೆ ವಿರೋಧಿ ನಿಬಂಧನೆ ಸೇರ್ಪಡೆಯು, ತೆರಿಗೆ ನಿಯಮಗಳಲ್ಲಿನ ಕಂದಕ ಮತ್ತು ಅಸಮಾನತೆಯ  ತೆರಿಗೆ ಯೋಜನೆ ತಂತ್ರಗಳ ಬಳಕೆಯನ್ನು ತಡೆಯಲು ಕಾರಣವಾಗುತ್ತದೆ.

ವಿವರಗಳು:

  1. ಭಾರತ ಮತ್ತು ಶ್ರೀಲಂಕಾ ನಡುವೆ ಹಾಲಿ ಇರುವ ಡಿಟಿಎಎಗೆ 2013ರ ಜನವರಿ 22ರಂದು ಅಂಕಿತ ಹಾಕಲಾಗಿತ್ತು ಮತ್ತು ಇದು 2013ರ ಅಕ್ಟೋಬರ್ 22ರಿಂದ ಜಾರಿಗೆ ಬಂದಿತ್ತು.
  2. ಭಾರತ ಮತ್ತು ಶ್ರೀಲಂಕಾ ಎರಡೂ ಸಮಗ್ರ ಚೌಕಟ್ಟಿನ ರಾಷ್ಟ್ರಗಳ ಸದಸ್ಯರಾಗಿದ್ದು, ಸಮಗ್ರ ಚೌಕಟ್ಟಿನ ದೇಶಗಳೊಂದಿಗೆ ತಮ್ಮ ಡಿಟಿಎಎಗಳಿಗೆ ಸಂಬಂಧಿಸಿದಂತೆ ಜಿ -20 ಒಇಸಿಡಿ ಬಿಇಪಿಎಸ್ ಕ್ರಿಯಾ ವರದಿಗಳ ಅಡಿಯಲ್ಲಿ ಕನಿಷ್ಠ ಮಾನದಂಡಗಳನ್ನು ಕಾರ್ಯಗತಗೊಳಿಸುವ ಅಗತ್ಯವಿರುತ್ತದೆ. ಮೂಲ ಸವಕಳಿ ಮತ್ತು ಲಾಭ ವರ್ಗಾವಣೆಯನ್ನು (ಎಂಎಲ್ಐ) ತಡೆಗಟ್ಟಲು ತೆರಿಗೆ ಒಪ್ಪಂದಕ್ಕೆ ಸಂಬಂಧಿಸಿದ ಕ್ರಮಗಳನ್ನು ಜಾರಿಗೆ ತರಲು ಬಹುಪಕ್ಷೀಯ ಸಂಕಲ್ಪದ ಮೂಲಕ ಅಥವಾ ದ್ವಿಪಕ್ಷೀಯ ಒಪ್ಪಂದದ ಮೂಲಕ ಬಿಇಪಿಎಸ್ ಕ್ರಿಮ 6ರ ಅಡಿಯಲ್ಲಿ ಕನಿಷ್ಠ ಮಾನದಂಡಗಳನ್ನು ಪೂರೈಸಬಹುದಾಗಿದೆ.

      iii.     ಭಾರತವು ಎಂ.ಎಲ್.ಐ.ಗೆ ಅಂಕಿತ ಹಾಕಿದೆ. ಆದಾಗ್ಯೂ ಈವರೆಗೆ ಶ್ರೀಲಂಕಾ ಎಂ.ಎಲ್.ಐ.ಗೆ ಅಂಕಿತ ಹಾಕಿಲ್ಲ. ಹೀಗಾಗಿ ದ್ವಿಪಕ್ಷೀಯವಾಗಿ ಭಾರತ- ಶ್ರೀಲಂಕಾ ಡಿಟಿಎಎ ತಿದ್ದುಪಡಿಯು ಪೀಠಿಕೆಯನ್ನು ನವೀಕರಿಸಲು ಮತ್ತು ಜಿ -20 ಒಇಸಿಡಿ ಮೂಲ ಸವಕಳಿ ಮತ್ತು ಲಾಭ ವರ್ಗಾವಣೆ (ಬಿಇಪಿಎಸ್) ಯೋಜನೆಯ ಕ್ರಮ 6 ರ ಅಡಿಯಲ್ಲಿ ಒಪ್ಪಂದದ ದುರುಪಯೋಗದ ತಡೆಗೆ ಕನಿಷ್ಠ ಮಾನದಂಡಗಳನ್ನು ಪೂರೈಸಲು ಪ್ರಧಾನ ಉದ್ದೇಶದ ಪರಿಶೀಲನೆ (ಪಿಪಿಟಿ) ನಿಬಂಧನೆ ಸೇರಿಸಲು ಅಗತ್ಯವಾಗಿದೆ.

ಹಿನ್ನೆಲೆ:

ಭಾರತ ಮತ್ತು ಶ್ರೀಲಂಕಾ ನಡುವೆ ಹಾಲಿ ಇರುವ ದ್ವಿ ತೆರಿಗೆ ತಡೆ ಒಪ್ಪಂದ (ಡಿಟಿಎಎ)ಗೆ 2013ರ ಜನವರಿ 22ರಂದು ಅಂಕಿತ ಹಾಕಲಾಗಿದ್ದು, ಇದು 2013ರ ಅಕ್ಟೋಬರ್ 22ರಿಂದ ಜಾರಿಗೆ ಬಂದಿದೆ. ಭಾರತ ಮತ್ತು ಶ್ರೀಲಂಕಾ ಎರಡೂ ಸಮಗ್ರ ಚೌಕಟ್ಟಿನ ಸದಸ್ಯರಾಷ್ಟ್ರಗಳಾಗಿದ್ದು, ಅವು ತಮ್ಮ ಸಮಗ್ರ ಚೌಕಟ್ಟು ರಾಷ್ಟ್ರಗಳೊಂದಿಗೆ ತಮ್ಮ ಡಿಟಿಎಎ ಒಪ್ಪಂದಕ್ಕೆ ಸಂಬಂಧಿಸಿದಂತೆ ಜಿ 20 ಓಇಸಿಡಿ ಬಿಇಪಿಎಸ್ ಕ್ರಿಯಾ ವರದಿ ಅಡಿಯಲ್ಲಿ ಕನಿಷ್ಠ ಮಾನದಂಡ ಅನುಷ್ಠಾನ ಮಾಡುವ ಅಗತ್ಯವಿದೆ. ಬಿಇಪಿಎಸ್ ಕ್ರಮ 6ರಡಿ ಕನಿಷ್ಠ ಮಾನದಂಡವನ್ನು ಮೂಲದಲ್ಲಿನ ಸವಕಳಿ ಮತ್ತು ಲಾಭ ವರ್ಗಾವಣೆ (ಎಂ.ಎಲ್.ಐ) ತಡೆಯಲು ಬಹುಪಕ್ಷೀಯ ಸಂಕಲ್ಪದ ಮೂಲಕ ಅಥವಾ ದ್ವಿಪಕ್ಷೀಯ ಒಪ್ಪಂದದ ಮೂಲಕ ಅನುಷ್ಠಾನಕ್ಕೆ ತರಬಹುದಾಗಿದೆ. ಭಾರತವು ಎಂ.ಎಲ್.ಐ.ಗೆ ಅಂಕಿತ ಹಾಕಿದೆ.

******


(रिलीज़ आईडी: 1602975) आगंतुक पटल : 166
इस विज्ञप्ति को इन भाषाओं में पढ़ें: English , Urdu , Marathi , हिन्दी , Bengali , Punjabi , Gujarati , Tamil , Telugu , Malayalam