ಪ್ರಧಾನ ಮಂತ್ರಿಯವರ ಕಛೇರಿ

ಈಶಾನ್ಯ ಭಾಗ ಪ್ರಗತಿಯತ್ತ ಸಾಗಿದೆ - ಪ್ರಧಾನಮಂತ್ರಿ ಹೇಳಿಕೆ

Posted On: 06 FEB 2020 5:48PM by PIB Bengaluru

ಈಶಾನ್ಯ ಭಾಗ ಪ್ರಗತಿಯತ್ತ ಸಾಗಿದೆ - ಪ್ರಧಾನಮಂತ್ರಿ ಹೇಳಿಕೆ

ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯ ಕುರಿತು ಲೋಕಸಭೆಯಲ್ಲಿಂದು ಪ್ರಧಾನಿ ಭಾಷಣ;  ಸಂಬಂಧಿಸಿದ ಎಲ್ಲರನ್ನು ಒಗ್ಗೂಡಿಸಿ ದಶಕದ ಹಿಂದಿನ ಬೋಡೋ ಬಿಕ್ಕಟ್ಟಿಗೆ ಪರಿಹಾರಪ್ರಧಾನಿ ಉತ್ತರ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಲೋಕಸಭೆಯಲ್ಲಿಂದು ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತು ಉತ್ತರ ನೀಡಿಈಶಾನ್ಯ ಭಾಗ ಇನ್ನು ಯಾವುದೇ ವಿಧದಲ್ಲೂ ನಿರ್ಲಕ್ಷಿತ ಭಾಗವಲ್ಲ ಎಂದರು.

ಸರ್ಕಾರ ಹಲವು ವಲಯಗಳಲ್ಲಿ ನಿರಂತರ ಪ್ರಯತ್ನಗಳನ್ನು ನಡೆಸುತ್ತಿರುವುದಕ್ಕೆ ಧನ್ಯವಾದಗಳನ್ನು ಹೇಳಿದ ಅವರುಈಶಾನ್ಯ ಭಾಗ ಇಂದು ದೇಶದ ಪ್ರಮುಖ ಆರ್ಥಿಕ ಬೆಳವಣಿಗೆಯ ಪ್ರಗತಿಯತ್ತ ಸಾಗಿದೆ.

ಈಶಾನ್ಯ ಭಾಗದ ಜನರು ಇನ್ನುದೆಹಲಿ ನಮಗೆ ದೂರದ ಸ್ಥಳ ಎಂದು ಭಾವಿಸಬೇಕಿಲ್ಲಇದೀಗ ಸರ್ಕಾರವೇ ಅವರ ಮನೆಯ ಬಾಗಿಲ ಬಳಿ ಇದೆನಮ್ಮ ಸಚಿವರು ಮತ್ತು ಅಧಿಕಾರಿಗಳು ನಿರಂತರವಾಗಿ  ಪ್ರಾಂತ್ಯಕ್ಕೆ ಭೇಟಿ ನೀಡುತ್ತಿದ್ದಾರೆ” ಎಂದು ಹೇಳಿದರು.

ಈಶಾನ್ಯ ಭಾಗಕ್ಕೆ ವಿದ್ಯುತ್ರೈಲ್ವೆ ಸಂಪರ್ಕಮೊಬೈಲ್ ಸಂಪರ್ಕ ಒದಗಿಸಲು ಸರ್ಕಾರ ಕಾರ್ಯೋನ್ಮುಖವಾಗಿದೆ ಮತ್ತು  ಭಾಗದ ಅಭಿವೃದ್ಧಿಯ ಹಲವು ಆಯಾಮಗಳಿಗೆ ಆದ್ಯತೆ ನೀಡಿದೆ ಎಂದು ಪ್ರಧಾನಮಂತ್ರಿ ಹೇಳಿದರು.

ಇತ್ತೀಚಿನ ಬೋಡೋ ಒಪ್ಪಂದದ ಕುರಿತು ಉಲ್ಲೇಖಿಸಿದ ಪ್ರಧಾನಮಂತ್ರಿದಶಕಗಳ ಹಿಂದಿನ ಬಿಕ್ಕಟ್ಟನ್ನು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನದಿಂದಾಗಿ ಸಂಬಂಧಿಸಿದ ಎಲ್ಲರನ್ನು ಒಟ್ಟುಗೂಡಿಸಿ ಅದನ್ನು ಸಾಧಿಸಲಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು.

 ವಿಷಯಕ್ಕೆ ಸಂಬಂಧಿಸಿದಂತೆ ಆಲಸ್ಯ ಮಾಡಿದ್ದರಿಂದ ಹಲವು ದಶಕಗಳ ಹಿಂದಿನಿಂದ ನಡೆಯುತ್ತಿರುವ ಹಿಂಸಾಚಾರಗಳಲ್ಲಿ ಕನಿಷ್ಠ 40 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಎಂದು ಪ್ರಧಾನಮಂತ್ರಿ ಹೇಳಿದರು.

ಆದರೆ  ಬಾರಿ ನಾವು ಸಂಬಂಧಿಸಿದ ಎಲ್ಲರನ್ನು ಒಗ್ಗೂಡಿಸಿದ್ದೇವೆ ಮತ್ತು ಒಪ್ಪಂದ ಅತ್ಯಂತ ಸ್ಪಷ್ಟವಾಗಿದ್ದುಬಿಕ್ಕಟ್ಟಿಗೆ ಸಂಬಂಧಿಸಿದ ಯಾವುದೇ ವಿಷಯ ಬಾಕಿ ಇಲ್ಲ” ಎಂದು ಹೇಳಿದರು.

***(Release ID: 1602451) Visitor Counter : 167