ಸಂಪುಟ

ಭಾರತೀಯ ಮಾಹಿತಿ ತಂತ್ರಜ್ಞಾನ ಕಾನೂನು ಸಂಸ್ಥೆಗಳ (ತಿದ್ದುಪಡಿ) ಮಸೂದೆ, 2020 ಕ್ಕೆ ಕ್ಯಾಬಿನೆಟ್ ಅನುಮೋದನೆ

Posted On: 05 FEB 2020 1:44PM by PIB Bengaluru

ಭಾರತೀಯ ಮಾಹಿತಿ ತಂತ್ರಜ್ಞಾನ ಕಾನೂನು ಸಂಸ್ಥೆಗಳ (ತಿದ್ದುಪಡಿ) ಮಸೂದೆ, 2020 ಕ್ಕೆ ಕ್ಯಾಬಿನೆಟ್ ಅನುಮೋದನೆ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ಕೇಂದ್ರ ಸಚಿವ ಸಂಪುಟ ಈ ಕೆಳಗಿನವುಗಳನ್ನು ಅನುಮೋದಿಸಿದೆ: -

i) ಭಾರತೀಯ ಮಾಹಿತಿ ತಂತ್ರಜ್ಞಾನ ಕಾನೂನು ಸಂಸ್ಥೆಗಳ ತಿದ್ದುಪಡಿ) ಮಸೂದೆ, 2020 ರ ಪರಿಚಯ

ii) 21 ನಿರ್ದೇಶಕರ ಹುದ್ದೆಗಳು   20 ಐಐಐಟಿಗಳಲ್ಲಿ (ಪಿಪಿಪಿ) ಮತ್ತು ತಲಾ ಒಂದು  ಮತ್ತು  ಐಐಐಟಿಡಿಎಂ ಕರ್ನೂಲ್ (ಐಐಐಟಿ-ಸಿಎಫ್ಟಿಐ) ನಲ್ಲಿ  ಒಂದು ಹುದ್ದೆ – ಪೂರ್ವಾನ್ವಯ ಅನುಮತಿ

iii) ರಿಜಿಸ್ಟ್ರಾರ್‌ಗಳ 21 ಹುದ್ದೆಗಳು, 20 ಐಐಟಿಗಳಲ್ಲಿ (ಪಿಪಿಪಿ) ತಲಾ ಒಂದು ಮತ್ತು ಐಐಐಟಿಡಿಎಂ ಕರ್ನೂಲ್ (ಐಐಟಿ-ಸಿಎಫ್‌ಟಿಐ) ನಲ್ಲಿ ಒಂದು ಹುದ್ದೆ – ಪೂರ್ವಾನ್ವಯ ಅನುಮತಿ

ಪರಿಣಾಮ

ಮಸೂದೆಯು ಉಳಿದ 5 ಐಐಐಟಿಗಳು-ಪಿಪಿಪಿ ಜೊತೆಗೆ ಅಸ್ತಿತ್ವದಲ್ಲಿರುವ 15 ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವ ರೀತಿಯಲ್ಲಿ 'ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಗಳುಎಂದು ಪದವಿಗಳನ್ನು ನೀಡುವ ಅಧಿಕಾರ.  ಬ್ಯಾಚುಲರ್ ಆಫ್ ಟೆಕ್ನಾಲಜಿ (ಬಿ.ಟೆಕ್) ಅಥವಾ ಮಾಸ್ಟರ್ ಆಫ್ ಟೆಕ್ನಾಲಜಿ (ಎಂ.ಟೆಕ್) ಅಥವಾ ಪಿಎಚ್‌ಡಿ ಪದವಿಯನ್ನು ವಿಶ್ವವಿದ್ಯಾಲಯ ಅಥವಾ ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆ ನೀಡುವ ಅರ್ಹತೆ.  ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ದೇಶದಲ್ಲಿ ಬಲವಾದ ಸಂಶೋಧನಾ ನೆಲೆಯನ್ನು ಅಭಿವೃದ್ಧಿಪಡಿಸಲು ಸಾಕಷ್ಟು ವಿದ್ಯಾರ್ಥಿಗಳನ್ನು ಆಕರ್ಷಿಸಲು ಇದು ಸಂಸ್ಥೆಗಳಿಗೆ ಅನುವು ಮಾಡಿಕೊಡುತ್ತದೆ.

ವಿವರಗಳು

i) ಭಾರತೀಯ ಮಾಹಿತಿ ತಂತ್ರಜ್ಞಾನ ಕಾನೂನು ಸಂಸ್ಥೆಗಳ (ತಿದ್ದುಪಡಿ) ಮಸೂದೆ, 2020 ರ ಪರಿಚಯ; 2014 ಮತ್ತು 2017 ರ ಪ್ರಮುಖ ಕಾಯ್ದೆಗಳನ್ನು ತಿದ್ದುಪಡಿ ಮಾಡಲು,

ii) ಸೂರತ್ಭೋಪಾಲ್ಭಾಗಲ್ಪುರ್ಅಗರ್ತಲಾ ಮತ್ತು ರಾಯಚೂರಿನಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವ ಕ್ರಮದಲ್ಲಿ ಐದು ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಿಗೆ ಈಗಾಗಲೇ ಅಸ್ತಿತ್ವದಲ್ಲಿರುವ 15 ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳ ಜೊತೆಯಲ್ಲಿ ಶಾಸನಬದ್ಧ ಸ್ಥಾನಮಾನವನ್ನು ನೀಡುವುದು ಮತ್ತು ಭಾರತೀಯ ಮಾಹಿತಿ ಸಂಸ್ಥೆಗಳ (ಸಾರ್ವಜನಿಕ-ಖಾಸಗಿ ಸಹಭಾಗಿತ್ವ) ಕಾಯ್ದೆ, 2017ರ ಅಡಿಯಲ್ಲಿ ಅವುಗಳನ್ನು ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಗಳೆಂದು ಘೋಷಿಸುವುದು

ಸೂರತ್ಭೋಪಾಲ್ಭಾಗಲ್ಪುರ್ಅಗರ್ತಲಾ ಮತ್ತು ರಾಯಚೂರಿನಲ್ಲಿ ಐಐಐಟಿಗಳನ್ನು  ವಿಧ್ಯುಕ್ತಗೊಳಿಸುವುದು ಅನುಮೋದನೆಯ ಉದ್ದೇಶವಾಗಿದೆ.  ಈ ಐಐಐಟಿಗಳು ಈಗಾಗಲೇ 1860 ರ ಸೊಸೈಟಿ ನೋಂದಣಿ ಕಾಯ್ದೆಯಡಿ ನೋಂದಾಯಿತ ಸಂಘಗಳಾಗಿ ಕಾರ್ಯನಿರ್ವಹಿಸುತ್ತಿವೆ.  ಪಿಪಿಪಿ ರೀತಿಯಲ್ಲಿ ಯೋಜನೆಯಡಿ ಸ್ಥಾಪಿಸಲಾದ ಇತರ 15 ಐಐಐಟಿಗಳಂತೆಯೇ ಈಗ ಅವುಗಳನ್ನು ಐಐಐಟಿ (ಪಿಪಿಪಿ) ಕಾಯ್ದೆ 2017 ರ ವ್ಯಾಪ್ತಿಗೆ ತರಲಾಗುವುದು. ಇದಲ್ಲದೆಐಐಐಟಿಡಿಎಂ ಕರ್ನೂಲ್ ಅನ್ನು ಐಐಐಟಿ ಕಾಯ್ದೆ, 2014 ರ ಪ್ರಕಾರ ಸ್ಥಾಪಿಸಲಾಗಿದೆ ಮತ್ತು ಐಐಐಟಿ ಅಲಹಾಬಾದ್ಐಐಐಟಿಎಂ ಗ್ವಾಲಿಯರ್ಐಐಐಟಿಡಿಎಂ ಜಬಲ್ಪುರ್ಐಐಐಟಿಡಿಎಂ ಕಾಂಚೀಪುರಂನ ಇತರ 4 ಐಐಐಟಿಗಳೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಈ ಐಐಐಟಿಗಳಲ್ಲಿ ನಿರ್ದೇಶಕ ಮತ್ತು ರಿಜಿಸ್ಟ್ರಾರ್ ಹುದ್ದೆಗಳು ಈಗಾಗಲೇ ಅಸ್ತಿತ್ವದಲ್ಲಿವೆ ಮತ್ತು ಪ್ರಸ್ತುತ ಪ್ರಸ್ತಾವನೆಯು ಯಾವುದೇ ಹೆಚ್ಚುವರಿ ಹಣಕಾಸಿನ ವ್ಯಯವಿಲ್ಲದೆ ಅವುಗಳನ್ನು ವಿಧ್ಯುಕ್ತಗೊಳಿಸುತ್ತದೆ.

ಹಿನ್ನೆಲೆ

i) ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಉನ್ನತ ಶಿಕ್ಷಣ ಮತ್ತು ಸಂಶೋಧನೆಯನ್ನು ಉತ್ತೇಜಿಸಲು ಐಐಐಟಿಗಳನ್ನು ಸ್ಥಾಹಿಸಲಾಗಿದೆ.

ii) 26.11.2010 ರಂದು ಕೇಂದ್ರ ಸಚಿವ ಸಂಪುಟ ಅನುಮೋದಿಸಿದಂತೆ ಸಾರ್ವಜನಿಕ -ಖಾಸಗಿ ಸಹಭಾಗಿತ್ವ (ಐಐಟಿ ಪಿಪಿಪಿ) ರೀತಿಯಲ್ಲಿ 20 ಹೊಸ ಐಐಐಟಿಗಳನ್ನು ಸ್ಥಾಪಿಸುವ ಯೋಜನೆಯಡಿ, 15 ಐಐಐಟಿಗಳನ್ನು ಈಗಾಗಲೇ ಐಐಐಟಿ (ಪಿಪಿಪಿ) ಕಾಯ್ದೆ 2017 ರ ವ್ಯಾಪ್ತಿಗೆ ಒಳಪಡಿಸಲಾಗಿದೆಉಳಿದ 5 ಐಐಐಟಿಗಳು ಕಾಯ್ದೆಯ ಅನುಬಂಧದ ಪ್ರಕಾರ ಸೇರಿಸಲಾಗುವುದು.

ಭಾರತೀಯ ಮಾಹಿತಿ ತಂತ್ರಜ್ಞಾನ ಕಾನೂನು ಸಂಸ್ಥೆಗಳ ಕಾಯ್ದೆ 2014  ಮತ್ತು   ಭಾರತೀಯ ಮಾಹಿತಿ ತಂತ್ರಜ್ಞಾನ (ಸಾರ್ವಜನಿಕ-ಖಾಸಗಿ ಸಹಭಾಗಿತ್ವ) ಕಾಯ್ದೆ, 2017, ಇವುಗಳು ದೇಶ.ಎದುರಿಸುತ್ತಿರುವ ಸವಾಲುಗಳಿಗೆ ಪರಿಹಾರಗಳನ್ನು ಒದಗಿಸಲು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಜ್ಞಾನವನ್ನು ತಲುಪಿಸಲು ಭಾರತ ಸರ್ಕಾರ ಕೈಗೊಂಡಿರುವ ವಿಶಿಷ್ಟ ಉಪಕ್ರಮಗಳು.

***



(Release ID: 1602078) Visitor Counter : 137