ಸಂಪುಟ

ಮಹಾರಾಷ್ಟ್ರದ ವಾಧ್ವಾನ್ ನಲ್ಲಿ ನೂತನ ಪ್ರಮುಖ ಬಂದರು ಸ್ಥಾಪನೆಗೆ ಸಂಪುಟದ ತಾತ್ವಿಕ ಒಪ್ಪಿಗೆ

Posted On: 05 FEB 2020 1:47PM by PIB Bengaluru

ಮಹಾರಾಷ್ಟ್ರದ ವಾಧ್ವಾನ್ ನಲ್ಲಿ ನೂತನ ಪ್ರಮುಖ ಬಂದರು ಸ್ಥಾಪನೆಗೆ ಸಂಪುಟದ ತಾತ್ವಿಕ ಒಪ್ಪಿಗೆ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಮಹಾರಾಷ್ಟ್ರದ ದಹನು ಬಳಿಯ ವಾಧ್ವಾನ್ ನಲ್ಲಿ ನೂತನ ಪ್ರಮುಖ ಬಂದರು ಸ್ಥಾಪನೆಗೆ ತನ್ನ ಅನುಮೋದನೆ ನೀಡಿದೆ.

ಯೋಜನೆಯ  ಒಟ್ಟು ಅಂದಾಜು ವೆಚ್ಚ 65,544.54 ಕೋಟಿ ರೂ. ಆಗಿರುತ್ತದೆ.

ವಾಧ್ವಾನ್ ಬಂದರನ್ನು ಲ್ಯಾಂಡ್ ಲಾರ್ಡ್ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದು. ಯೋಜನೆಯ ಜಾರಿಗೆ ಶೇ.50ಕ್ಕೆ ಸಮಾನದ ಅಥವಾ ಅದಕ್ಕಿಂತ ಹೆಚ್ಚಾದ ಈಕ್ವಿಟಿಯೊಂದಿಗೆ ಜವಾಹರಲಾಲ್ ನೆಹರು ಬಂದರು ಟ್ರಸ್ಟ್ (ಜೆ.ಎನ್.ಪಿ.ಟಿ.) ಪ್ರಮುಖ  ಪಾಲುದಾರನಾಗಿರುವಂತೆ ಇದರೊಂದಿಗೆ ವಿಶೇಷ ಉದ್ದೇಶದ ವಾಹಕ (ಎಸ್.ಪಿ.ವಿ.)ವನ್ನು ರೂಪಿಸಲಾಗುವುದು. ಈ ವಿಶೇಷ ಉದ್ದೇಶದ ವಾಹಕವು ಒಳನಾಡಿನ ಸಂಪರ್ಕ ಸ್ಥಾಪನೆಯ ಜೊತೆಗೆ ಪುನರ್ ಪಡೆದುಕೊಳ್ಳುವುದುಬ್ರೇಕ್‌ ವಾಟರ್ ನಿರ್ಮಾಣ ಸೇರಿದಂತೆ ಬಂದರಿನ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲಿದೆ. ಪಿಪಿಪಿ ಮಾದರಿಯಲ್ಲಿ ಎಲ್ಲಾ ವ್ಯಾಪಾರ ಚಟುವಟಿಕೆಗಳನ್ನು ಖಾಸಗಿ ಅಭಿವೃದ್ಧಿದಾರರು ಕೈಗೊಳ್ಳುತ್ತಾರೆ.

ಜೆ.ಎನ್. ಬಂದರು, ಭಾರತದ ಅತಿ ದೊಡ್ಡ ಕಂಟೈನರ್ ಬಂದರಾಗಿದ್ದು, 5.1 ದಶಲಕ್ಷ ಟಿಇಯುಗಳು (20 ಅಡಿಗೆ ಸಮಾನವಾದ ಪ್ರಮಾಣ)ದ ಸಾಗಾಟದೊಂದಿಗೆ ವಿಶ್ವದಲ್ಲಿ 28ನೇ ಸ್ಥಾನ ಪಡೆದಿದೆ. ಜೆ.ಎನ್. ಬಂದರಿನಲ್ಲಿ ನಾಲ್ಕನೇ ಟರ್ಮಿನಲ್ ಪೂರ್ಣಗೊಂಡ ತರುವಾಯ 2023ರ ಹೊತ್ತಿಗೆ ಅದರ ನಿರ್ವಹಣಾ ಸಾಮರ್ಥ್ಯ 10 ದಶಲಕ್ಷ ಟಿಇಯುವರೆಗೆ ಹೆಚ್ಚಳವಾಗಲಿದ್ದು, ವಿಶ್ವದ 17ನೇ ಅತಿ ದೊಡ್ಡ ಕಂಟೈನರ್ ಬಂದರಾಗಲಿದೆ. ವಾಧ್ವಾನ್ ಬಂದರು ಅಭಿವೃದ್ಧಿಯೊಂದಿಗೆ ಭಾರತವು ವಿಶ್ವದಲ್ಲಿ ಪ್ರಥಮ 10 ಕಂಟೈನರ್ ಬಂದರು ಇರುವ ರಾಷ್ಟ್ರಗಳ ಸಾಲಿಗೆ ಸೇರಲಿದೆ.

ಮಹಾರಾಷ್ಟ್ರ ಭಾರತದ ಅತಿ ದೊಡ್ಡ ಕಂಟೈನರ್ ಬಂದರನ್ನು ಜೆಎನ್ ಪಿಟಿಯಲ್ಲಿ ಹೊಂದಿದ್ದು, ಮಹಾರಾಷ್ಟ್ರ, ಉತ್ತರ ಕರ್ನಾಟಕ, ತೆಲಂಗಾಣಗಳಿಗೆ ಒಳನಾಡ ಸಂಪರ್ಕದ ಮೂಲಕ ಸೇವೆ ಒದಗಿಸುತ್ತಿದೆ ಮತ್ತು ಗುಜರಾತ್, ಮಧ್ಯಪ್ರದೇಶ, ರಾಜಾಸ್ಥಾನ, ಎನ್.ಸಿ.ಆರ್., ಪಂಜಾಬ್ ಮತ್ತು ಉತ್ತರ ಪ್ರದೇಶಗಳಿಗೆ ಎರಡನೇ ಹಂತದ ಒಳನಾಡ ಸಂಪರ್ಕ ಕಲ್ಪಿಸಿದೆ.  ವಿಶ್ವದ ಅತಿದೊಡ್ಡ ಕಂಟೈನರ್ ಹಡಗುಗಳಿಗೆ ಸ್ಥಳಾವಕಾಶ ನೀಡುವ ಆಳ ಸಮುದ್ರ ಬಂದರುಗಳ ಅಗತ್ಯವಿದ್ದು,  ಜೆಎನ್‌ ಪಿಟಿ ಬಂದರಿನ ಉದ್ದೇಶಿತ 10 ದಶಲಕ್ಷ ಟಿಇಯುಗಳ ಸಗಾಟದ ದಟ್ಟಣೆಯ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಂಡ ತರುವಾಯ ಜಲ ಮಾರ್ಗ ಸಾಗಾಟದ ದಟ್ಟಣೆ (ಸ್ಪಿಲ್ ಓವರ್ ಟ್ರಾಫಿಕ್)ಯನ್ನೂ ಪೂರೈಸುತ್ತದೆ. ಜೆಎನ್ ಪಿ.ಟಿ. ಮತ್ತು ಮುಂದ್ರಾ ಎರಡೂ ದೇಶದ ಅತಿದೊಡ್ಡ ಕಂಟೈನರ್ ಹಡಗು ನಿರ್ವಹಣೆಯ ಬಂದರುಗಳಾಗಿದ್ದು (ಮಧ್ಯಮ ಗಾತ್ರದ ಕಂಟೈನರ್ ಹಡಗುಗಳನ್ನು ಮಾತ್ರ ನಿರ್ವಹಿಸುತ್ತಿವೆ) ಅವು ಅನುಕ್ರಮವಾಗಿ 15 ಎಂ ಮತ್ತು 16 ಎಂ ಆಳದ (ಡ್ರಾಫ್ಟ್) ನಿರ್ವಹಿಸುತ್ತಿವೆ, ಆದರೆ ವಿಶ್ವದ ಅತಿ ದೊಡ್ಡ ಕಂಟೈನರ್ ಹಡಗು ನಿರ್ವಹಣೆಯ ಆಧುನಿಕ ಆಳ ಸಮುದ್ರ ಬಂದರಿಗೆ 18ಎಂ -20 ಎಂ ಆಳದ ಅಗತ್ಯವಿರುತ್ತದೆ. ವಾಧ್ವಾನ್ ಬಂದರು ಸ್ವಾಭಾವಿಕವಾಗಿ 20 ಮೀಟರ್ ಆಳವಿದ್ದು ಕಡಲತಡಿಗೆ ಸಮೀಪದಲ್ಲಿದೆ, ಹೀಗಾಗಿ ಇದು ಅತಿ ದೊಡ್ಡ ಹಡಗುಗಳನ್ನು ಬಂದರಲ್ಲಿ ನಿರ್ವಹಸಲು ಸಾಧ್ಯವಾಗಿದೆ. ವಾಧ್ವಾನ್ ಬಂದರು ಅಭಿವೃದ್ಧಿಯು 16,000-25000 ಟಿಇಯು ಸಾಮರ್ಥ್ಯದ ಕಂಟೈನರ್ ಹಡಗುಗಳನ್ನು ನಿರ್ವಹಣೆಯು ಆರ್ಥಿಕತೆಗೆ ಇಂಬು ನೀಡಿ ಸಾಗಾಟದ ವೆಚ್ಚ ತಗ್ಗಿಸಲು ನೆರವಾಗಲಿದೆ.

ನಿರಂತರವಾಗಿ ಹೆಚ್ಚಳವಾಗುತ್ತಿರುವ ಕಂಟೈನರ್ ಹಡಗುಗಳ ಗಾತ್ರವು, ಭಾರತದ ಪಶ್ಚಿಮ ಕರಾವಳಿಯಲ್ಲಿ ಆಳ ಸಮುದ್ರ ಬಂದರು ಅಭಿವೃದ್ಧಿಪಡಿಸಬೇಕಾದ ಅಗತ್ಯ ಸೃಷ್ಟಿಸಿತ್ತು. ಮೌಲ್ಯವರ್ಧಿತ ಉತ್ಪಾದನಾ ವಲಯದ ಹಿನ್ನೆಲೆಯಲ್ಲಿ ಸರಕುಗಳ ಧಾರಕವನ್ನು ಹೆಚ್ಚಿಸಲು ಉತ್ಪಾದನಾ ಚಟುವಟಿಕೆಯನ್ನು ಸುಗಮಗೊಳಿಸಲು ಮೌಲ್ಯವರ್ಧಿತ ಆಮದು ಮತ್ತು ರಫ್ತುಗಳನ್ನು ನಿರ್ವಹಿಸಲು ನಮ್ಮ ಬಂದರುಗಳಿಗೆ ಮೂಲಸೌಕರ್ಯದೊಂದಿಗೆ ಅಣಿಗೊಳಿಸುವುದು ಮುಖ್ಯವಾಗಿದೆ. ಜೆಎನ್ ಪಿಟಿಯ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಂಡಾಗ ಜೆ.ಎನ್.ಪಿ.ಟಿಯು ಒಳನಾಡು ಕಂಟೈನರ್ ಸಗಾಟ ದಟ್ಟಣೆ 4.5 ಎಂಟಿಇಯುಗಳಿಂದ 2022-25ರ ಹೊತ್ತಿಗೆ 10.1 ಎಂ.ಟಿಇ.ಯುಗಳಿಗೆ ವೃದ್ಧಿಸುವ ನಿರೀಕ್ಷೆ ಇದೆ. ಸರಕು ಸಾಗಾಟ ಮೂಲಸೌಕರ್ಯಗಳನ್ನು ಸುಧಾರಿಸುವ ಮತ್ತು ಹೆಚ್ಚಿನ ರಫ್ತಿಗಾಗಿ 'ಮೇಕ್ ಇನ್ ಇಂಡಿಯಾಗೆ ಮತ್ತು ಉತ್ಪಾದನಾ ವಲಯಕ್ಕೆ ಭಾರತದಲ್ಲಿ ಉತ್ತೇಜನ ನೀಡುವ  ಯೋಜನೆಗಳು ಕಾರ್ಯಗತವಾದ ಬಳಿಕ ಕಂಟೈನರ್ ಸಾಗಾಟದ ಬೇಡಿಕೆ ಮತ್ತಷ್ಟು ಹೆಚ್ಚಲಿದೆ.

******



(Release ID: 1602067) Visitor Counter : 168