ಸಂಪುಟ

ಪ್ರಮುಖ ಬಂದರು ಮಂಡಳಿಗಳು ಮತ್ತು ಡಾಕ್ ಕಾರ್ಮಿಕರ ಮಂಡಳಿಯ ಸಿಬ್ಬಂದಿ ಉತ್ಪಾದಕತೆ ಆಧಾರಿತ ಪ್ರತಿಫಲ ಯೋಜನೆಯನ್ನು 2017-18 ರ ಅವಧಿಯಿಂದಾಚೆಗೂ ವಿಸ್ತರಿಸಲು ಸಂಪುಟ ಅನುಮೋದನೆ

Posted On: 29 JAN 2020 4:06PM by PIB Bengaluru

ಪ್ರಮುಖ ಬಂದರು ಮಂಡಳಿಗಳು ಮತ್ತು ಡಾಕ್ ಕಾರ್ಮಿಕರ ಮಂಡಳಿಯ ಸಿಬ್ಬಂದಿ ಉತ್ಪಾದಕತೆ ಆಧಾರಿತ ಪ್ರತಿಫಲ ಯೋಜನೆಯನ್ನು 2017-18 ರ ಅವಧಿಯಿಂದಾಚೆಗೂ ವಿಸ್ತರಿಸಲು ಸಂಪುಟ ಅನುಮೋದನೆ

 

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯು ಹಾಲಿ ಇರುವ ಉತ್ಪಾದಕತೆ ಆಧಾರಿತ ಪ್ರತಿಫಲ (ಪಿ.ಎಲ್.ಆರ್.) ಯೋಜನೆಯನ್ನು ಈ ಯೋಜನೆಯಲ್ಲಿ ಯಾವುದೇ ತಿದ್ದುಪಡಿ/ಬದಲಾವಣೆಗಳನ್ನು ತರುವವರೆಗೆ ,  2017-18 ರ ಬಳಿಕವೂ ವಿಸ್ತರಿಸುವುದಕ್ಕೆ ತನ್ನ ಅನುಮೋದನೆ ನೀಡಿತು.

ಈ ಯೋಜನೆಯಿಂದ ಪ್ರಮುಖ ಬಂದರು ಮಂಡಳಿಗಳ ಮತ್ತು ಡಾಕ್ ಸಿಬ್ಬಂದಿ ಸಹಿತ ಒಟ್ಟು 28,821 ಮಂದಿ ಕಾರ್ಮಿಕರಿಗೆ ವಾರ್ಷಿಕವಾಗಿ ಪ್ರಯೋಜನ ಲಭಿಸಲಿದೆ. ಮತ್ತು ವಾರ್ಷಿಕವಾಗಿ ಇದಕ್ಕೆ 46 ಕೋ.ರೂ. ಅಂದಾಜು ಮೊತ್ತ ಬೇಕಾಗುತ್ತದೆ. ಉತ್ಪಾದಕತೆ ಆಧಾರಿತ ಪ್ರತಿಫಲವನ್ನು ಈಗಿರುವ ವೇತನ ಮಿತಿಯಲ್ಲಿ ತಿಂಗಳೊಂದಕ್ಕೆ ರೂ. 7000 ಗಳ ಬೋನಸ್ ಲೆಕ್ಕಾಚಾರದಲ್ಲಿ  ಮಾಡಲಾಗುತ್ತದೆ. ಈ ಯೋಜನೆಯು ಉತ್ತಮ ಉತ್ಪಾದಕತೆಯನ್ನು ಪ್ರಚೋದಿಸುವುದಲ್ಲದೆ ಬಂದರು ವಲಯದಲ್ಲಿ ಉತ್ತಮ ಕೈಗಾರಿಕಾ ಬಾಂಧವ್ಯವನ್ನು ಪೋಷಿಸುತ್ತದೆ ಮತ್ತು  ಹಿತಕರ ಕೆಲಸದ ವಾತಾವರಣವನ್ನು ಉತ್ತೇಜಿಸುತ್ತದೆ.

ಈಗ ಪ್ರಮುಖ ಬಂದರು ಮಂಡಳಿಗಳು ಮತ್ತು ಡಾಕ್ ಕಾರ್ಮಿಕ ಮಂಡಳಿಯ ಸಿಬ್ಬಂದಿಗಳಿಗೆ, ಕಾರ್ಮಿಕರಿಗೆ ಉತ್ಪಾದಕತೆ ಆಧಾರಿತ ಪ್ರತಿಫಲ (ಪಿ.ಎಲ್.ಆರ್.) ಯೋಜನೆ ಜಾರಿಯಲ್ಲಿದ್ದು, ಅದರಲ್ಲಿ ಬಂದರುಗಳ ಸಂಯುಕ್ತ ಸಾಧನಾ ಸೂಚ್ಯಂಕ ಆಧಾರದ (ಅಖಿಲ ಭಾರತ ಸಾಧನೆಗೆ 50 % ಮತ್ತು ವೈಯಕ್ತಿಕ ಬಂದರುಗಳ ಸಾಧನೆಗೆ 50 % ಮಾನ್ಯತಾ ಮೌಲ್ಯ )  ಮೇಲೆ ಉತ್ಪಾದಕತೆ ಆಧಾರಿತ ಪ್ರತಿಫಲವನ್ನು ವಾರ್ಷಿಕವಾಗಿ, ಪ್ರಮುಖ ಬಂದರು ಮಂಡಳಿಗಳ ಆಡಳಿತ ಮತ್ತು ಕಾರ್ಮಿಕ ಒಕ್ಕೂಟಗಳ ನಡುವೆ ನಡೆದ ಒಪ್ಪಂದಗಳ ಅನ್ವಯ  ನೀಡಲಾಗುತ್ತಿದೆ.



(Release ID: 1601017) Visitor Counter : 122