ಸಂಪುಟ

ಆರಂಭಿಕ ಬಾಲ್ಯಾವಸ್ಥೆ (ಅರ್ಲಿ ಚೈಲ್ಡ್ ಹುಡ್) ಕ್ಷೇತ್ರದಲ್ಲಿನ ದ್ವಿಪಕ್ಷೀಯ ಸಹಕಾರಕ್ಕಾಗಿ ಬ್ರೆಜಿಲ್ ಮತ್ತು ಭಾರತ ನಡುವೆ  ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಲು ಸಂಪುಟದ ಸಮ್ಮತಿ

प्रविष्टि तिथि: 22 JAN 2020 3:33PM by PIB Bengaluru

ಆರಂಭಿಕ ಬಾಲ್ಯಾವಸ್ಥೆ (ಅರ್ಲಿ ಚೈಲ್ಡ್ ಹುಡ್) ಕ್ಷೇತ್ರದಲ್ಲಿನ ದ್ವಿಪಕ್ಷೀಯ ಸಹಕಾರಕ್ಕಾಗಿ ಬ್ರೆಜಿಲ್ ಮತ್ತು ಭಾರತ ನಡುವೆ  ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಲು ಸಂಪುಟದ ಸಮ್ಮತಿ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ ಬ್ರೆಜಿಲ್ ಒಕ್ಕೂಟ ಗಣರಾಜ್ಯದ ಪೌರತ್ವ ಸಚಿವಾಲಯ ಮತ್ತು ಭಾರತ ಗಣರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ನಡುವೆ ಆರಂಭಿಕ ಬಾಲ್ಯಾವಸ್ಥೆಯ ಕ್ಷೇತ್ರದಲ್ಲಿನ ದ್ವಿಪಕ್ಷೀಯ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಲು ತನ್ನ ಸಮ್ಮತಿ ಸೂಚಿಸಿದೆ.

ಪ್ರಯೋಜನಗಳು

ಇದು ಎರಡೂ ದೇಶಗಳ ನಡುವಿನ ಸ್ನೇಹ ಬಂಧನವನ್ನು ಮತ್ತಷ್ಟು ಬಲಪಡಿಸಲಿದೆ ಮತ್ತು ಆರಂಭಿಕ ಬಾಲ್ಯಾವಸ್ಥೆಯ ಆರೈಕೆಯ ಕುರಿತ ವಿಷಯಗಳಿಗೆ ಸಂಬಂಧಿಸಿದಂತೆ ದ್ವಿಪಕ್ಷೀಯ ಸಹಕಾರ ಹೆಚ್ಚಿಸುತ್ತದೆ. ಎರಡೂ ದೇಶಗಳು ಆರಂಭಿಕ ಬಾಲ್ಯಾವಸ್ಥೆಯ ಆರೈಕೆ ಕುರಿತಂತೆ ತಮ್ಮ ತಮ್ಮ ರಾಷ್ಟ್ರದ ಉತ್ತಮ ರೂಢಿಗಳನ್ನು ಹಂಚಿಕೊಳ್ಳುವುದರಿಂದ ಪರಸ್ಪರರಿಗೆ ಪ್ರಯೋಜನವಾಗಲಿದೆ.

*******


(रिलीज़ आईडी: 1600119) आगंतुक पटल : 134
इस विज्ञप्ति को इन भाषाओं में पढ़ें: English , Urdu , हिन्दी , Marathi , Bengali , Punjabi , Gujarati , Tamil , Telugu , Malayalam