ಸಂಪುಟ

ಶಸ್ತ್ರಾಸ್ತ್ರ (ತಿದ್ದುಪಡಿ) ಮಸೂದೆ, 2019 ರ ಅಧಿಕೃತ ತಿದ್ದುಪಡಿಗೆ ಸಚಿವ ಸಂಪುಟ ಅನುಮೋದನೆ

प्रविष्टि तिथि: 24 DEC 2019 4:20PM by PIB Bengaluru

ಶಸ್ತ್ರಾಸ್ತ್ರ (ತಿದ್ದುಪಡಿ) ಮಸೂದೆ, 2019 ರ ಅಧಿಕೃತ ತಿದ್ದುಪಡಿಗೆ ಸಚಿವ ಸಂಪುಟ ಅನುಮೋದನೆ
 

ಶಸ್ತ್ರಾಸ್ತ್ರ (ತಿದ್ದುಪಡಿ) ಮಸೂದೆ, 2019 ರ ಅಧಿಕೃತ ತಿದ್ದುಪಡಿಗೆ ಡಿಸೆಂಬರ್ 9, 2019 ರಂದು ಲೋಕ ಸಭೆಯಲ್ಲಿ ಅಂಗೀಕಾರ ದೊರೆತಿದ್ದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಪೂರ್ವೋತ್ತರ ಅನುಮೋದನೆ ನೀಡಿದೆ.

ಅನುಕೂಲಗಳು

ಇದು ಸಂಭಾವ್ಯ ಅಪರಾಧಿಗಳು ಅಕ್ರಮ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳ ವ್ಯಾಪಾರ ಮತ್ತು ಉತ್ಪಾದನೆಯಲ್ಲಿ ತೊಡಗುವುದನ್ನು ತಡೆಗಟ್ಟುತ್ತದೆ, ಪರವಾಣಿಗೆ ನಿಭಂದನೆಗಳನ್ನು ಸಡಿಲಗೊಳಿಸುತ್ತದೆ, ಪ್ರಸ್ತುತ ಭದ್ರತಾ ಅಗತ್ಯತೆಗಳನ್ನು ಉತ್ತಮಗೊಳಿಸುತ್ತದೆ ಹಾಗೂ ದುರ್ಘಟನೆಗಳನ್ನು ಪರಿಣಾಮಕಾರಿಯಾಗಿ ಪರಿಹರಿಸುವುದು ಹಾಗೂ ಅಕ್ರಮ ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳ ಪ್ರಸರಣ ಹಾಗೂ ವ್ಯಾಪಾರಕ್ಕೆ ತಡೆಯೊಡ್ಡುತ್ತದೆ. ಇದೇ ವೇಳೆ ಶಸ್ತ್ರಾಸ್ತ್ರಗಳ ಪರವಾಣಿಗೆ ಅವಧಿಯನ್ನು ವಿಸ್ತರಿಸುವ ಮೂಲಕ ಕಾನೂನಾತ್ಮಕ ಪರವಾಣಿಗೆ ಹೊಂದಿರುವವರಿಗೆ ಅನುಕೂಲವನ್ನು ಕಲ್ಪಿಸಲಿದೆ.

ಶಸ್ತ್ರಾಸ್ತ್ರ ಕಾಯ್ದೆಯ ಈ ಅನುಮೋದಿತ ತಿದ್ದುಪಡಿಗಳು ಎಲೆಕ್ಟ್ರಾನಿಕ್ ಪರವಾನಿಗೆ ನೀಡುವಲ್ಲಿ ಒಂದು ಹೆಜ್ಜೆ ಮುಂದೆ ಸಾಗಿದ್ದು, ದೀರ್ಘಾವಧಿಯ ಪರವಾನಿಗೆಗಳಿಗೆ ಅವಕಾಶ ಕಲ್ಪಿಸಿದೆ. ಕಠಿಣ ಶಿಕ್ಷೆಯ ನಿಭಂದನೆಗಳ ಪ್ರಸ್ತಾವನೆಯೊಂದಿಗೆ ಅಕ್ರಮ ಶಸ್ತ್ರಾಸ್ತ್ರ ಹೊಂದಿದವರ ಮೇಲೆ ನಿಗಾ ಇಡಲು ಕಠಿಣ ನಿಯಂತ್ರಣ ಕಾರ್ಯ ವಿಧಾನವನ್ನು ಜಾರಿಗೆ ತಂದಿದೆ.


(रिलीज़ आईडी: 1597495) आगंतुक पटल : 215
इस विज्ञप्ति को इन भाषाओं में पढ़ें: Malayalam , English , Urdu , हिन्दी , Marathi , Punjabi , Tamil , Telugu