ಸಂಪುಟ

ಸಾರ್ವಜನಿಕ ವಲಯದ ಬ್ಯಾಂಕ್ ಗಳಾದ ಎನ್ ಬಿ ಎಫ್ ಸಿ/ ಎಚ್ ಎ ಎಫ್ ಸಿ ಯಿಂದ ಹೆಚ್ಚಿನ ದರದಲ್ಲಿ ಸ್ವತ್ತುಗಳ ಖರೀದಿಗೆ ಭಾಗಶಃ ಸಾಲ ಖಾತರಿ ಯೋಜನೆಗೆ ಸಂಸತ್ ಅನುಮೋದನೆ

Posted On: 11 DEC 2019 6:15PM by PIB Bengaluru

ಸಾರ್ವಜನಿಕ ವಲಯದ ಬ್ಯಾಂಕ್ ಗಳಾದ ಎನ್ ಬಿ ಎಫ್ ಸಿ/ ಎಚ್ ಎ ಎಫ್ ಸಿ ಯಿಂದ ಹೆಚ್ಚಿನ ದರದಲ್ಲಿ ಸ್ವತ್ತುಗಳ ಖರೀದಿಗೆ ಭಾಗಶಃ ಸಾಲ ಖಾತರಿ ಯೋಜನೆಗೆ ಸಂಸತ್ ಅನುಮೋದನೆ
 

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಈ ಕೆಳಗಿನವುಗಳಿಗೆ ಅನುಮೋದನೆ ನೀಡಿದೆ.
ವಿತ್ತೀಯ ದೃಷ್ಟಿಯಿಂದ ಸಬಲವಾದ ಬ್ಯಾಂಕಿಂಗ್ ಯೇತರ ಹಣಕಾಸು ಸಂಸ್ಥೆ(ಎನ್ ಬಿ ಎಫ್ ಸಿ)ಗಳು/ ಗೃಹ ಸಾಲ ಸಂಸ್ಥೆ (ಎಚ್ ಎಫ್ ಸಿ)ಗಳಿಂದ ಹೆಚ್ಚಿನ ರೇಟಿಂಗ್ ವುಳ್ಳ ಸ್ವತ್ತುಗಳ ಖರೀದಿಗೆ ಭಾಗಶಃ ಸಾಲದ ಗ್ಯಾರಂಟಿ ಯೋಜನೆಗೆ ಮಂಜೂರಾತಿ ನೀಡಿದೆ. ಇದನ್ನು ಸರ್ಕಾರ ಸಾರ್ವಜನಿಕ ಕ್ಷೇತ್ರದ ಬ್ಯಾಂಕ್ (ಪಿ ಎಸ್ ಬಿ) ಗಳ ಮೂಲಕ ಪರಿಚಯಿಸಲಿದೆ. ಇದರ ಮೂಲಕ ನೀಡಲಾಗುವ ಒಟ್ಟು ಗ್ಯಾರಂಟಿಯು ಹಣಕಾಸು ವ್ಯವಹಾರಗಳ ಇಲಾಖೆ (ಡಿ ಇ ಎ) ಒಪ್ಪಿಗೆ ಮೇರೆಗೆ ಈ ಯೋಜನೆಯಡಿ ಬ್ಯಾಂಕ್ ಗಳ ಮೂಲಕ ಖರೀದಿಸಲಾಗುವ ಸ್ವತ್ತುಗಳ ಸೂಕ್ತ ಮೌಲ್ಯದ ಶೇ 10 ರವರೆಗಿನ ಮೊದಲ ನಷ್ಟ ಅಥವಾ 10,000 ಕೋಟಿ ರೂಪಾಯಿಗಳು ಇವೆರಡರಲ್ಲಿ ಯಾವುದು ಕಡಿಮೆಯಿರುತ್ತದೋ ಅದಕ್ಕೆ ಸೀಮಿತವಾಗುತ್ತದೆ. 2018 ರ ಅಗಸ್ಟ್ 1 ಕ್ಕೆ ಮೊದಲು ಒಂದು ವರ್ಷ ಅವಧಿಯೊಳಗೆ ಎಸ್ ಎಂ ಎ – 0 ಶ್ರೇಣಿಯಲ್ಲಿ ಬಂದಿರುವ ಎನ್ ಬಿ ಎಫ್ ಸಿ/ ಎಚ್ ಎಫ್ ಸಿ ಗಳು ಈ ಯೋಜನೆಯ ವ್ಯಾಪ್ತಿಗೆ ಬರುತ್ತವೆ. ಯಾವ ಸ್ವತ್ತುಗಳಿಗೆ ಬಿಬಿಬಿ+ ಅಥವಾ ಅದಕ್ಕಿಂತ ಹೆಚ್ಚಿನ ರೇಟಿಂಗ್ ದೊರೆತ ಸ್ವತ್ತುಗಳು ಈ ಯೋಜನೆಯ ವ್ಯಾಪ್ತಿಗೆ ಒಳಪಡುತ್ತವೆ.
ಕೇಂದ್ರ ಸರ್ಕಾರ ಪರಿಚಯಿಸಿರುವ ಏಕಮಾತ್ರ ಅವಕಾಶದ ಭಾಗಶಃ ಸಾಲದ ಗ್ಯಾರಂಟಿಯ ಸೌಲಭ್ಯ 2020 ರ ಜೂನ್ 30 ರವರೆಗೆ ಅಥವಾ ಬ್ಯಾಂಕ್ ಗಳಿಂದ 1,00.000 ಕೋಟಿ ರೂಪಾಯಿ ಮೌಲ್ಯದ ಸ್ವತ್ತು ಖರೀದಿ ದಿನಾಂಕದ ಇವೆರಡರಲ್ಲಿ ಯಾವುದು ಮೊದಲು ಸಂಭವಿಸುತ್ತದೋ ಅಲ್ಲಿವರೆಗೆ ಮುಕ್ತವಾಗಿರುತ್ತದೆ. ಈ ಯೋಜನೆಯ ಪ್ರಗತಿಯನ್ನು ಗಮನದಲ್ಲಿರಿಸಿಕೊಂಡು ಇದರ ಸೀಮಿತಾವಧಿಯನ್ನು 3 ತಿಂಗಳವರೆಗೆ ವೃದ್ಧಿಸುವ ಅಧಿಕಾರವನ್ನು ವಿತ್ತ ಸಚಿವರಿಗೆ ನೀಡಲಾಗಿದೆ.
ಪ್ರಮುಖ ಪರಿಣಾಮ
ಪ್ರಸ್ತಾವಿತ ಸರ್ಕಾರದ ಖಾತರಿ ಬೆಂಬಲ ಮತ್ತು ಇದರ ಫಲ ಸ್ವರೂಪ ಸಂಯೋಜಿತ ಸ್ವತ್ತುಗಳ ಖರೀದಿ (ಬೈ ಔಟ್) ಯಿಂದ ಎನ್ ಬಿ ಎಫ್ ಸಿ/ ಎಚ್ ಎಫ್ ಸಿ ಗಳಿಗೆ ತಾತ್ಕಾಲಿಕ ದ್ರವ್ಯತೆ (ಲಿಕ್ವಿಡಿಟಿ) ಅಥವಾ ಹಣದ ಹರಿವಿನ ಅಸಮತೋಲನೆಯ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಲಭಿಸುವುದು ಮತ್ತು ಇದರ ಜೊತೆಗೆ ಸಾಲ ಸೃಷ್ಟಿಗೆ ಕೊಡುಗೆ ನೀಡುವುದನ್ನು ಮುಂದುವರಿಸಲು ಹಾಗೂ ಸಾಲಗಾರರಿಗೆ ಅಂತಿಮ ಆಯ್ಕೆಯ ಸಾಲವನ್ನು ಒದಗಿಸುವಲ್ಲಿ ಸಮರ್ಥವಾಗಲಿದೆ ಇದರಿಂದ ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ದೊರೆಯಲಿದೆ.
ಹಿನ್ನೆಲೆ:
2019 – 20 ರ ಕೇಂದ್ರ ಬಜೆಟ್ ನಲ್ಲಿ ಇದನ್ನು ಘೋಷಿಸಲಾಗಿತ್ತು:
ಪ್ರಸ್ತುತ ಹಣಕಾಸು ವರ್ಷದಲ್ಲಿ ವಿತ್ತೀಯ ದೃಷ್ಟಿಯಿದ ಸಬಲವಾದ ಎನ್ ಬಿ ಎಫ್ ಸಿ ಯ ಒಟ್ಟು ಒಂದು ಲಕ್ಷ ಕೋಟಿ ರೂಪಾಯಿಗಳ ಮೌಲ್ಯದ ಉಚ್ಚ ರೇಟಿಂಗ್ ವುಳ್ಳ ಸಂಯೋಜಿತ ಸ್ವತ್ತುಗಳ ಖರೀದಿಗಾಗಿ ಸರ್ಕಾರ ಶೇ 10 ರಷ್ಟು ಮೊದಲ ನಷ್ಟಕ್ಕಾಗಿ ಸಾರ್ವಜನಿಕ ಕ್ಷೇತ್ರದ ಬ್ಯಾಂಕ್ ಗಳಿಗೆ ಒಂದು ಬಾರಿಗೆ 6 ತಿಂಗಳ ಭಾಗಶಃ ಸಾಲ ಗ್ಯಾರಂಟಿ ನೀಡುತ್ತದೆ.
ಮೇಲಿನ ಬಜೆಟ್ ಪ್ರಕಟಣೆಯನ್ನು ಗಮನದಲ್ಲಿಟ್ಟುಕೊಂಡು ಎನ್ ಬಿ ಎಫ್ ಸಿ/ಎಷ್ ಎಫ್ ಸಿ ಯಿಂದ ಸ್ವತ್ತುಗಳನ್ನು ಖರೀದಿಸಲು ಪಿ ಎಸ್ ಬಿ ಗಳಿಗೆ ಸರ್ಕಾರಿ ಗ್ಯಾರಂಟಿ ನೀಡಲು 2019 ರ ಅಗಸ್ಟ್ 10 ಕ್ಕೆ ಒಂದು ಯೋಜನೆ (23 9 2019 ಕ್ಕೆ ತಿದ್ದುಪಡಿ) ಯನ್ನು ಆರಂಭಿಸಲಾಗಿತ್ತು. ಇದರಡಿ ಗ್ಯಾರಂಟಿಯನ್ನು ಈ ಯೋಜನೆಯಡಿ ಬ್ಯಾಂಕ್ ಗಳ ಮೂಲಕ ಖರೀದಿ ಮಾಡಲಾದ ಸ್ವತ್ತುಗಳ ಸೂಕ್ತ ಮೌಲ್ಯದ ಶೇ 10 ಅಥವಾ 10,000 ಕೋಟಿ ರೂಪಾಯಿಗಳು ಇವೆರಡರಲ್ಲಿ ಯಾವುದು ಕಡಿಮೆಯಿರುತ್ತದೋ ಅದಕ್ಕೆ ಸೀಮಿತವಾಗುತ್ತದೆ. ಈ ಯೋಜನೆ ಆರಂಭದ ತಾರೀಖಿನಿಂದ 6 ತಿಂಗಳ ಅವಧಿವರೆಗೆ ಅಥವಾ ಬ್ಯಾಂಕ್ ಗಳಿಂದ 1,00,000 ಕೋಟಿ ರೂಪಾಯಿ ಮೌಲ್ಯದ ಖರೀದಿ ಮಾಡುವ ದಿನಾಂಕದವರೆಗೆ ಇವೆರಡರಲ್ಲಿ ಯಾವುದು ಮೊದಲು ಘಟಿಸುತ್ತದೋ ಅಲ್ಲಿವರೆಗೆ ಈ ಸೌಲಭ್ಯ ಮುಕ್ತವಾಗಿರುತ್ತದೆ
ಹಲವಾರು ಪಾಲುದಾರರ ಸಲಹೆ ಸೂಚನೆಗಳು ಮತ್ತು ಅವರೊಂದಿಗೆ ನಡೆಸಿದ ಚರ್ಚೆಯನ್ನು ಆಧರಿಸಿ ವಿಭಿನ್ನ ಸಂಶೋಧನೆಗಳ ಈ ಯೋಜನೆಗೆ ಸಂಸತ್ ಅನುಮೋದನೆ ಪಡೆಯುವ ನಿರ್ಣಯ ಕೈಗೊಳ್ಳಲಾಯಿತು. ಇದರ ಉಲ್ಲೇಖ ಈ ಕೆಳಗಿನಂತಿದೆ.

I. ಯಾವ ಎನ್ ಬಿ ಎಫ್ ಸಿ/ಎಚ್ ಎಫ್ ಸಿ ಗಳು 1 8 2018 ಕ್ಕಿಂತ ಒಂದು ವರ್ಷ ಅವಧಿಗೂ ಮೊದಲು (ಅಂದರೆ ಐ ಎಲ್ ಮತ್ತು ಎಫ್ ಎಸ್ ಸಂಕಷ್ಟಕ್ಕೂ ಮೊದಲು) ಸಂಭಾವ್ಯ ಎಸ್ ಎಂ ಎ – 0 ಶ್ರೇಣಿಯಲ್ಲಿ ಬಂದಿವೆಯೋ ಅವು ಪಿ ಎಸ್ ಬಿ ಮೂಲಕ ಸಂಯೋಜಿತ ಸ್ವತ್ತುಗಳ ಖರೀದಿಗಾಗಿ ಸಮರ್ಥವೆಂದು ಭಾವಿಸಬೇಕು ಈ ಅವಧಿಯಲ್ಲಿ ಎಸ್ ಎಂ ಎ – 1 ಮತ್ತು ಎಸ್ ಎಂ ಎ – 2 ರ ವಿಭಾಗದಲ್ಲಿ ಬರುವ ಎನ್ ಬಿ ಎಫ್ ಸಿ/ಎಚ್ ಎಫ್ ಸಿ ಗಳು ಮುಂದೆಯೂ ಈ ಯೋಜನೆಯಡಿ ಅನರ್ಹವೆಂದು ಪರಿಗಣಿಸಲಾಗುವುದು.
II. ಪಿ ಎಸ್ ಬಿ ಮೂಲಕ ಖರೀದಿಸಲಾಗುವ ಅಂತರ್ಗತ ಸಂಯೋಜಿತ ಸ್ವತ್ತುಗಳ ಕನಿಷ್ಠ ರೇಟಿಂಗ್ ನ್ನು ಪ್ರಸ್ತುತ ಇರುವ ಎ ಎ ಯಿಂದ ಬಿಬಿಬಿ+ ಗೆ ಪರಿಷ್ಕರಿಸಬೇಕು.
III. ಈ ಯೋಜನೆಯನ್ನು 2020 ರ ಜೂನ್ 30 ರವರೆಗೆ ಕಾರ್ಯರೂಪದಲ್ಲಿರಿಸಲು ಈ ಯೋಜನೆಯಡಿ ಆಗುವ ಅಭಿವೃದ್ಧಿಯನ್ನು ಪರಿಗಣಿಸಿ ಈ ಯೋಜನೆಯ ಅವಧಿಯನ್ನು 3 ತಿಂಗಳವರೆಗೆ ಹೆಚ್ಚಿಸುವ ಅಧಿಕಾರವನ್ನು ವಿತ್ತ ಸಚಿವರಿಗೆ ನೀಡಬೇಕು

ಮೇಲಿನ ಎಲ್ಲ ಬದಲಾವಣೆಗಳನ್ನು ಒಗ್ಗೂಡಿಸಿ ಈಗ ಸಂಸತ್ತು ಭಾಗಶಃ ಸಾಲ ಗ್ಯಾರಂಟಿ ಯೋಜನೆಗೆ ಅನುಮೋದನೆ ನೀಡಿದೆ.
ಸಾರ್ವಜನಿಕ ಕ್ಷೇತ್ರದ ಬ್ಯಾಂಕ್ ಗಳ ಮೂಲಕ ಈ ಯೋಜನೆ ಪರಿಚಯಿಸಲಾಗುತ್ತಿದೆ. ಇದರಿಂದ ಈ ಯೋಜನೆ ಅಡಿ ಸರ್ಕಾರದ ಗ್ಯಾರಂಟಿ ಸಹಾಯದಿಂದ ಸಂಯೋಜಿತ ಸ್ವತ್ತುಗಳ ಖರೀದಿ ಸಾಧ್ಯವಾಗುವುದರಿಂದ ದಿವಾಳಿಯಾಗುವ ಹಂತಕ್ಕೆ ತಲುಪಿದ ಎನ್ ಬಿ ಎಫ್ ಸಿ/ಎಚ್ ಎಫ್ ಸಿ ಗಳ ತಾತ್ಕಾಲಿಕ ದ್ರವ್ಯತೆ (ಲಿಕ್ವಿಡಿಟಿ) ಅಥವಾ ಹಣದ ಹರಿವಿನ ಅಸಮತೋಲನೆಯ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಲಭಿಸುವುದು. ಇಂಥ ಸ್ಥಿತಿಯಲ್ಲಿ ಎನ್ ಬಿ ಎಫ್ ಸಿ/ಎಚ್ ಎಫ್ ಸಿ ಗಳು ತಮ್ಮ ಬದ್ಧತೆಯನ್ನು ಪೂರ್ಣಗೊಳಿಸಲು ತಮ್ಮ ತಮ್ಮ ಸ್ವತ್ತುಗಳನ್ನು ಬೇಕಾಬಿಟ್ಟಿ ಮಾರಾಟ ಮಾಡಲು ವಿವಶವಾಗುವುದನ್ನು ತಪ್ಪಿಸಬಹುದು. ಇದರಿಂದ ಅರ್ಥವ್ಯವಸ್ಥೆಯ ಸಾಲ ಸಂಬಂಧಿ ಬೇಡಿಕೆಗೆ ಹಣಕಾಸು ಸರಬರಾಜು ಮಾಡುವುದುರ ಜೊತೆಗೆ ಇಂಥ ಎನ್ ಬಿ ಎಫ್ ಸಿ/ ಎಚ್ ಎಫ್ ಸಿ ಗಳ ವಿಫಲತೆ ಅಥವಾ ದಿವಾಳಿತನದಿಂದ ದೇಶದ ವಿತ್ತೀಯ ಪ್ರಣಾಳಿಕೆಯನ್ನು ಸಂರಕ್ಷಿಸಲು ಎನ್ ಬಿ ಎಫ್ ಸಿ/ ಎಚ್ ಎಫ್ ಸಿ ಗಳಿಗೆ ಅವಶ್ಯಕ ಲಿಕ್ವಿಡಿಟಿ ಲಭಿಸುವುದು.

 

****



(Release ID: 1596180) Visitor Counter : 270