ಸಂಪುಟ

ವಿಮಾನ (ತಿದ್ದುಪಡಿ) ವಿಧೇಯಕ, 2019 ಕ್ಕೆ ಸಂಪುಟ ಅನುಮೋದನೆ

Posted On: 11 DEC 2019 6:08PM by PIB Bengaluru

ವಿಮಾನ (ತಿದ್ದುಪಡಿ) ವಿಧೇಯಕ, 2019 ಕ್ಕೆ ಸಂಪುಟ ಅನುಮೋದನೆ
 

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ವಿಮಾನ (ತಿದ್ದುಪಡಿ) ವಿಧೇಯಕ 2019 ನ್ನು ಮಂಡಿಸುವುದಕ್ಕೆ ತನ್ನ ಅನುಮೋದನೆ ನೀಡಿತು. ಈ ವಿಧೇಯಕವು ವಿಮಾನ ಕಾಯ್ದೆ , 1934 (1934 ರ XXII) ಕ್ಕೆ ತಿದ್ದುಪಡಿ ತರಲಿದೆ. ಈ ವಿಧೇಯಕವನ್ನು ಇನ್ನು ಸಂಸತ್ತಿನಲ್ಲಿ ಮಂಡಿಸಲಾಗುವುದು.
ಈ ವಿಧೇಯಕವು ದಂಡದ ಮೊತ್ತಕ್ಕೆ ಸಂಬಂಧಿಸಿದಂತೆ ಈಗಿರುವ 10 ಲಕ್ಷ ರೂ. ಗಳ ಗರಿಷ್ಟ ಮಿತಿಯನ್ನು ರುಪಾಯಿ 1 ಕೋಟಿಗೆ ಏರಿಸಲಿದೆ. ಇದು ಹಾಲಿ ಕಾಯ್ದೆಯ ವ್ಯಾಪ್ತಿಯನ್ನು ವಾಯು ಯಾನಕ್ಕೆ ಸಂಬಂಧಿಸಿದ ಎಲ್ಲಾ ಕ್ಷೇತ್ರಗಳಿಗೂ ವಿಸ್ತರಿಸುತ್ತದೆ.
ಈ ತಿದ್ದುಪಡಿಗಳು ಅಂತಾರಾಷ್ಟ್ರೀಯ ನಾಗರಿಕ ವಾಯುಯಾನ ಸಂಘಟನೆಯ (ಐ.ಸಿ.ಎ.ಒ.) ಆವಶ್ಯಕತೆಗಳನ್ನು ಈಡೇರಿಸಲಿವೆ. ಭಾರತದ ನಾಗರಿಕ ವಾಯುಯಾನ ಕ್ಷೇತ್ರದಲ್ಲಿರುವ ಮೂರು ನಿಯಂತ್ರಣ ಮಂಡಳಿಗಳಾದ ನಾಗರಿಕ ವಾಯು ಯಾನ ಮಹಾ ನಿರ್ದೇಶನಾಲಯ, ನಾಗರಿಕ ವಾಯು ಯಾನ ಭದ್ರತಾ ಬ್ಯೂರೋ ಮತ್ತು ವಿಮಾನ ಅಪಘಾತ ತನಿಖಾ ಬ್ಯೂರೋಗಳು ಇನ್ನಷ್ಟು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡಲಿವೆ. ಇದರಿಂದ ದೇಶದಲ್ಲಿ ಸುರಕ್ಷಾ ಮಟ್ಟ ಮತ್ತು ವಿಮಾನಗಳ ಕಾರ್ಯಾಚರಣೆಯಲ್ಲಿ ಭದ್ರತಾ ಮಟ್ಟ ಹೆಚ್ಚಲಿದೆ.


(Release ID: 1596161) Visitor Counter : 85