ಸಂಪುಟ

ಹಡಗುಗಳ ಪುನರ್ಬಳಕೆ ಮಸೂದೆ, 2019ನ್ನು ರೂಪಿಸಲು  ಮತ್ತು ಹಡಗುಗಳ ಸುರಕ್ಷಿತ ಮತ್ತು ಪರಿಸರಾತ್ಮಕವಾಗಿ ಸದೃಢವಾದ ಹಡಗುಗಳ ಪುನರ್ಬಳಕೆ ಕುರಿತ ಹಾಂಕಾಂಗ್ ಅಂತಾರಾಷ್ಟ್ರೀಯ ಸಮಾವೇಶ ನಿರ್ಣಯ 2009ಕ್ಕೆ ಪ್ರವೇಶಿಸುವ ಪ್ರಸ್ತಾಪಕ್ಕೆ ಸಂಪುಟದ ಅನುಮೋದನೆ

Posted On: 20 NOV 2019 10:38PM by PIB Bengaluru

ಹಡಗುಗಳ ಪುನರ್ಬಳಕೆ ಮಸೂದೆ2019ನ್ನು ರೂಪಿಸಲು  ಮತ್ತು ಹಡಗುಗಳ ಸುರಕ್ಷಿತ ಮತ್ತು ಪರಿಸರಾತ್ಮಕವಾಗಿ ಸದೃಢವಾದ ಹಡಗುಗಳ ಪುನರ್ಬಳಕೆ ಕುರಿತ ಹಾಂಕಾಂಗ್ ಅಂತಾರಾಷ್ಟ್ರೀಯ ಸಮಾವೇಶ ನಿರ್ಣಯ 2009ಕ್ಕೆ ಪ್ರವೇಶಿಸುವ ಪ್ರಸ್ತಾಪಕ್ಕೆ ಸಂಪುಟದ ಅನುಮೋದನೆ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಹಡಗುಗಳ ಪುನರ್ಬಳಕೆ ಮಸೂದೆ2019ನ್ನು ರೂಪಿಸಲು  ಮತ್ತು ಹಡಗುಗಳ ಸುರಕ್ಷಿತ ಮತ್ತು ಪರಿಸರಾತ್ಮಕವಾಗಿ ಸದೃಢವಾದ ಹಡಗುಗಳ ಪುನರ್ಬಳಕೆ ಕುರಿತ ಹಾಂಕಾಂಗ್ ಅಂತಾರಾಷ್ಟ್ರೀಯ ಸಮಾವೇಶ ಒಪ್ಪಂದ 2009ಕ್ಕೆ ಪ್ರವೇಶಿಸುವ ಪ್ರಸ್ತಾಪಕ್ಕೆ ತನ್ನ ಅನುಮೋದನೆ ನೀಡಿದೆ.

ಪ್ರಯೋಜನಗಳು:

·    ಉದ್ದೇಶಿತ ಮಸೂದೆ ಅಪಾಯಕಾರಿ ವಸ್ತುಗಳ ಬಳಕೆ ಅಥವಾ ಸ್ಥಾಪನೆಯನ್ನು ನಿರ್ಬಂಧಿಸುತ್ತದೆ ಮತ್ತು ನಿಷೇಧಿಸುತ್ತದೆ ಹಾಗೂ ಇದು ಹಡಗು ಪುನರ್ಬಳಕೆಗೆ ಯೋಗ್ಯವೇ ಅಥವಾ ಇಲ್ಲವೇ ಎಂಬುದಕ್ಕೆ ಅನ್ವಯವಾಗುತ್ತದೆ. ಹೊಸ ಹಡಗುಗಳಿಗೆಅಪಾಯಕಾರಿ ವಸ್ತುಗಳ ಬಳಕೆಯನ್ನು ನಿರ್ಬಂಧಿಸುವುದು ಅಥವಾ ನಿಷೇಧಿಸುವುದು ತಕ್ಷಣದಿಂದಲೇ ಅಂದರೆಶಾಸನವು ಜಾರಿಗೆ ಬಂದ ದಿನಾಂಕದಿಂದ ಅನ್ವಯ ಆಗುತ್ತದೆಆದರೆ ಅಸ್ತಿತ್ವದಲ್ಲಿರುವ ಹಡಗುಗಳಲ್ಲಿ ಇದರ ಅನುಸರಣೆಗಾಗಿ ಐದು ವರ್ಷಗಳ ಕಾಲಾವಧಿಯನ್ನು ಹೊಂದಿರುತ್ತವೆ.  ಆದರೆ ಸರ್ಕಾರದಿಂದ ನಿರ್ವಹಿಸಲಾಗುತ್ತಿರುವ ವಾಣಿಜ್ಯೇತರ ಹಡಗುಗಳು ಮತ್ತು ಯುದ್ಧನೌಕೆಗಳಿಗೆ ಇದು ಅನ್ವಯವಾಗುವುದಿಲ್ಲ. ಹಡಗುಗಳಲ್ಲಿ ಬಳಸುವ ಅಪಾಯಕಾರಿ ವಸ್ತುಗಳ ದಾಸ್ತಾನುಗಳ ಮೇಲೆ ಹಡಗುಗಳನ್ನು ಸಮೀಕ್ಷೆ ಮಾಡಿ ಪ್ರಮಾಣೀಕರಿಸಲಾಗುತ್ತದೆ.

·    ಮಸೂದೆಯಡಿ ಹಡಗುಗಳ ಪುನರ್ಬಳಕೆ ಸೌಲಭ್ಯಗಳನ್ನು ಅಧಿಕೃತಗೊಳಿಸಬೇಕಾಗುತ್ತದೆ ಮತ್ತು ಅಂತಹ ಅಧಿಕೃತ ಹಡಗು ಪುನರ್ಬಳಕೆ ಸೌಲಭ್ಯಗಳಿದ್ದಲ್ಲಿ ಮಾತ್ರ ಹಡಗುಗಳನ್ನು ಮರುಬಳಕೆ ಮಾಡಲಾಗುತ್ತದೆ.

·    ಹಡಗು ನಿರ್ದಿಷ್ಟ ಮರುಬಳಕೆ ಯೋಜನೆಯ ಅನುಸಾರವಾಗಿ ಹಡಗುಗಳ ಪುನರ್ಬಳಕೆಗೆ ಮಸೂದೆ ಅವಕಾಶ ಒದಗಿಸುತ್ತದೆ. ಭಾರತದಲ್ಲಿ ಪುನರ್ಬಳಕೆ ಮಾಡಲಾಗುವ ಹಡಗುಗಳು ಎಚ್.ಕೆ.ಸಿ.ಗೆ ಅನುಗುಣವಾಗಿ ಪುನರ್ಬಳಕೆ ಮತ್ತು ಸಿದ್ಧತೆಯ ಪ್ರಮಾಣಪತ್ರವನ್ನು ಪಡೆಯಬೇಕಾಗುತ್ತದೆ.

ಮುಖ್ಯಾಂಶಗಳು:

·    ಭಾರತ ಸರ್ಕಾರವು, ಹಡಗುಗಳ ಪುನರ್ಬಳಕೆಯ ನಿಯಂತ್ರಣಕ್ಕಾಗಿ ಗುಣಮಟ್ಟದ ಅನುಷ್ಠಾನಕ್ಕಾಗಿ ಕೆಲವು ಅಂತಾರಾಷ್ಟ್ರೀಯ ಮಾನದಂಡಗಳನ್ನು ಮತ್ತು ಶಾಸನಾತ್ಮಕವಾದ ವ್ಯವಸ್ಥೆಯನ್ನು  ರೂಪಿಸಿ ಹಡಗುಗಳ ಪುನರ್ಬಳಕೆ ಮಸೂದೆ 2019 ಹೆಸರಿನ ವಿಧೇಯಕವನ್ನು ಜಾರಿ ಮಾಡಲು ನಿರ್ಧರಿಸಿದೆ.

·    ಹಡಗುಗಳ ಪುನರ್ಬಳಕೆಗಾಗಿ ಸುರಕ್ಷಿತತೆ ಮತ್ತು ಪರಿಸರಾತ್ಮಕ ಸದೃಢತೆ ಕುರಿತ ಹಾಂಕಾಂಗ್ ಅಂತಾರಾಷ್ಟ್ರೀಯ ಸಮಾವೇಶ ನಿರ್ಣಯ 2009ಕ್ಕೆ ಸೇರ್ಪಡೆಗೊಳ್ಳಲೂ ನಿರ್ಧರಿಸಲಾಗಿದೆ.

·    ಸುರಕ್ಷಿತ ಮತ್ತು ಪರಿಸರಾತ್ಮಕವಾಗಿ ಸದೃಢವಾದ ಹಡಗುಗಳ ಪುನರ್ಬಳಕೆ ಕುರಿತ ಹಾಂಕಾಂಗ್ ಅಂತಾರಾಷ್ಟ್ರೀಯ ಸಮಾವೇಶ ನಿರ್ಣಯ 2009 ಜಾರಿಗೆ ಬಂದ ತರುವಾಯ, ಅದರ ನಿಬಂಧನೆಗಳನ್ನು ಹಡಗುಗಳ ಪುನರ್ಬಳಕೆ ಮಸೂದೆ 2019ರಡಿಯಲ್ಲಿ ಜಾರಿಗೊಳಿಸಲಾಗುತ್ತದೆ ಮತ್ತು ನಿಯಮ ಮತ್ತು ನಿಯಮಾವಳಿಗಳನ್ನು ರೂಪಿಸಲಾಗುತ್ತದೆ.

ಹಿನ್ನೆಲೆ:

·    ಭಾರತವು ಜಾಗತಿಕವಾಗಿ ಹಡಗುಗಳ ಮರುಬಳಕೆಯಲ್ಲಿ ಮುಂಚೂಣಿಯಲ್ಲಿದ್ದು, ಮಾರುಕಟ್ಟೆಯ ಶೇ 30ರಷ್ಟು ಪಾಲು ಹೊಂದಿದೆ. 2018ರ ಸಾಗರ ಸಾರಿಗೆ ಪರಾಮರ್ಶೆ ಕುರಿತ ಯುಎನ್.ಸಿ.ಟಿ.ಎಡಿ. ವರದಿಯ ರೀತ್ಯ ಭಾರತವು 2017ರಲ್ಲಿ ವಿಶ್ವದಲ್ಲಿಯೇ ಹೆಚ್ಚು 6323 ಟನ್ ನಷ್ಟು ಹಡಗುಗಳ ಅವಶೇಷ ದ್ವಂಸ ಮಾಡಿದೆ.

·    ಹಡಗುಗಳ ಪುನರ್ ಬಳಕೆ ಕೈಗಾರಿಕೆ ಕಾರ್ಮಿಕ ಉಪಕ್ರಮದ ವಲಯವಾಗಿದೆ ಆದರೆ, ಇದರಲ್ಲಿ ಪರಸರ ಸುರಕ್ಷತೆಯ ಕಾಳಜಿಯೂ ಸೇರಿದೆ.

 

******



(Release ID: 1593075) Visitor Counter : 228