ಪ್ರಧಾನ ಮಂತ್ರಿಯವರ ಕಛೇರಿ

ಯುಎನ್‌ಜಿಎ 74 ರಲ್ಲಿ ಸೈಪ್ರಸ್‌ನ ಅಧ್ಯಕ್ಷರೊಂದಿಗೆ ಪ್ರಧಾನ ಮಂತ್ರಿಯವರ ಸಭೆ

प्रविष्टि तिथि: 26 SEP 2019 11:10PM by PIB Bengaluru

ಯುಎನ್‌ಜಿಎ 74 ರಲ್ಲಿ ಸೈಪ್ರಸ್‌ನ ಅಧ್ಯಕ್ಷರೊಂದಿಗೆ ಪ್ರಧಾನ ಮಂತ್ರಿಯವರ ಸಭೆ

 

ಪ್ರಧಾನ ಮಂತ್ರಿಯವರು ಸೈಪ್ರಸ್ ಗಣರಾಜ್ಯದ ಅಧ್ಯಕ್ಷರಾದ ನಿಕೋಸ್ ಅನಸ್ತಾಸಿಯಾಡ್ಸ್ ರವರನ್ನು ಉನ್ನತ ಮಟ್ಟದ ವಿಭಾಗದ  ಯುಎನ್‌ಜಿಎ 74 ಮಹಾಧಿವೇಶನದ ಸಂದರ್ಭದಲ್ಲಿ ಭೇಟಿಯಾದರು.

2018 ರ ಸೆಪ್ಟೆಂಬರ್‌ನಲ್ಲಿ ಗೌರವಾನ್ವಿತ ಭಾರತದ ರಾಷ್ಟ್ರಪತಿಗಳು ಸೈಪ್ರಸ್‌ಗೆ ಭೇಟಿ ನೀಡಿದ ನಂತರ ಉಭಯ ನಾಯಕರು ವಿವಿಧ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಚರ್ಚಿಸಿದರು.

2018-19ರಲ್ಲಿ, ದ್ವಿಪಕ್ಷೀಯ ವ್ಯಾಪಾರವು  464 ಮಿಲಿಯನ್ ಡಾಲರ್ ನಷ್ಟು ಆಗಿತ್ತು. ಎರಡು ಆರ್ಥಿಕತೆಗಳ ಗಣನೀಯ ಸಂಭಾವ್ಯತೆ ಮತ್ತು ಸಾಮರ್ಥ್ಯಗಳನ್ನು  ಪರಿಗಣಿಸಿ  ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆಯ ಪ್ರಮಾಣವನ್ನು ಹೆಚ್ಚಿಸುವ ಅಗತ್ಯವನ್ನು ಉಭಯ ನಾಯಕರು ಒತ್ತಿ ಹೇಳಿದರು.

ವಿಸ್ತೃತ ಭದ್ರತಾ ಮಂಡಳಿ, ಎನ್‌ಎಸ್‌ಜಿ ಮತ್ತು ಇತರ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಯುಎನ್‌ಎಸ್‌ಸಿ ಶಾಶ್ವತ ಸದಸ್ಯತ್ವಕ್ಕಾಗಿ ಭಾರತದ ಉಮೇದುವಾರಿಕೆಯನ್ನು ಬೆಂಬಲಿಸಿದ್ದಕ್ಕಾಗಿ ಸೈಪ್ರಸ್ ಸರ್ಕಾರಕ್ಕೆ ಪ್ರಧಾನ ಮಂತ್ರಿಯವರು ಧನ್ಯವಾದ ಅರ್ಪಿಸಿದರು. ಸೈಪ್ರಸ್ ಗಣರಾಜ್ಯದ ಸ್ವಾತಂತ್ರ್ಯ, ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆ ಮತ್ತು ಐಕ್ಯತೆಗೆ ಭಾರತದ ನಿರಂತರ ಬೆಂಬಲವನ್ನು ಅವರು ಪುನರುಚ್ಚರಿಸಿದರು.

ಅಂತರರಾಷ್ಟ್ರೀಯ ಭಯೋತ್ಪಾದನೆಯ ವಿಷಯ ಸೇರಿದಂತೆ ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ಮಹತ್ವದ ವಿಷಯಗಳ ಬಗ್ಗೆಯೂ ಅವರು ಚರ್ಚಿಸಿದರು.  ಪ್ರಧಾನ ಮಂತ್ರಿ ಮೋದಿಯವರು ಅಧ್ಯಕ್ಷ ಅನಸ್ತಾಸಿಸ್ಡೆಸ್ ಅವರನ್ನು ಅಂತರರಾಷ್ಟ್ರೀಯ ಸೌರ ಒಕ್ಕೂಟಕ್ಕೆ ಸೇರಲು ಆಹ್ವಾನಿಸಿದರು.


(रिलीज़ आईडी: 1586825) आगंतुक पटल : 81
इस विज्ञप्ति को इन भाषाओं में पढ़ें: Assamese , Tamil , English , Urdu , हिन्दी , Marathi , Bengali , Punjabi , Gujarati , Telugu