ಪ್ರಧಾನ ಮಂತ್ರಿಯವರ ಕಛೇರಿ

ಬ್ಲೂಮ್‌ಬರ್ಗ್ ಗ್ಲೋಬಲ್ ಬಿಸಿನೆಸ್ ಫೋರಂನಲ್ಲಿ ಪ್ರಧಾನ ಮಂತ್ರಿ ಯವರು ಮುಖ್ಯ ಭಾಷಣ ಮಾಡಿದರು.

Posted On: 25 SEP 2019 8:03PM by PIB Bengaluru

ಬ್ಲೂಮ್‌ಬರ್ಗ್ ಗ್ಲೋಬಲ್ ಬಿಸಿನೆಸ್ ಫೋರಂನಲ್ಲಿ ಪ್ರಧಾನ ಮಂತ್ರಿ ಯವರು ಮುಖ್ಯ ಭಾಷಣ ಮಾಡಿದರು.

 

ಇಂದು ನ್ಯೂಯಾರ್ಕ್‌ನಲ್ಲಿ ನಡೆದ ಬ್ಲೂಮ್‌ಬರ್ಗ್ ಗ್ಲೋಬಲ್ ಬಿಸಿನೆಸ್ ಫೋರಂನಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಮುಖ್ಯ ಭಾಷಣ ಮಾಡಿದರು.

ಪ್ರತಿಷ್ಠಿತ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿಯವರು, ಭಾರತದ ಬೆಳವಣಿಗೆಯ ಕಥೆಯ ಭವಿಷ್ಯದ ದಿಕ್ಕಿನ ಬಗ್ಗೆ ಮಾತನಾಡಲು ಈ ಅವಕಾಶವನ್ನು ಬಳಸಿಕೊಳ್ಳುತ್ತಿರುವುದಾಗಿ ಹೇಳಿದರು. ಭಾರತದ ಬೆಳವಣಿಗೆಯ ಕಥೆಯನ್ನು ಪ್ರಜಾಪ್ರಭುತ್ವ, ಜನಸಂಖ್ಯೆ, ಬೇಡಿಕೆ ಮತ್ತು ನಿರ್ಣಾಯಕತ್ವ ಎಂಬ ನಾಲ್ಕು ಸ್ತಂಭಗಳ ಮೇಲೆ ನಿರ್ಮಿಸಲಾಗಿದೆ ಎಂದು ಪ್ರಧಾನ ಮಂತ್ರಿ ಹೇಳಿದರು.

ದೇಶದ ರಾಜಕೀಯ ಸ್ಥಿರತೆಯ ವಾತಾವರಣದಿಂದ ಭಾರತದ ಆರ್ಥಿಕತೆಯು ಲಾಭ ಪಡೆದಿದೆ ಎಂದು ಪ್ರಧಾನ ಮಂತ್ರಿಗಳು ಹೇಳಿದರು.

ಭಾರತ ಸರ್ಕಾರವು ಪರಿಚಯಿಸಿದ ಯಶಸ್ವಿ ಸುಧಾರಣೆಗಳು ಜಾಗತಿಕ ಮಾನ್ಯತೆಯನ್ನು ಪಡೆದಿರುವುದನ್ನು ಪ್ರಧಾನ ಮಂತ್ರಿಯವರು ಒತ್ತಿ ತಿಳಿದರು.  ಈ ನಿಟ್ಟಿನಲ್ಲಿ ಅವರು ಲಾಜಿಸ್ಟಿಕ್ಸ್ ಪರ್ಫಾರ್ಮೆನ್ಸ್ ಇಂಡೆಕ್ಸ್‌ನಲ್ಲಿ ಹತ್ತು ಶ್ರೇಯಾಂಕಗಳ ಜಿಗಿತ, ಜಾಗತಿಕ ಸ್ಪರ್ಧಾತ್ಮಕತೆ ಸೂಚ್ಯಂಕದ ಹದಿಮೂರು ಪಾಯಿಂಟ್ಗಳ ಜಿಗಿತ, ಗ್ಲೋಬಲ್ ಇನ್ನೋವೇಶನ್ ಇಂಡೆಕ್ಸ್‌ನಲ್ಲಿ ಇಪ್ಪತ್ನಾಲ್ಕು ಶ್ರೇಯಾಂಕದ ಏರಿಕೆ; ವಿಶ್ವಬ್ಯಾಂಕ್ ಲೆಕ್ಕಾಚಾರ ಮಾಡಿದ ಈಸ್ ಆಫ್ ಡೂಯಿಂಗ್ ಬಿಸಿನೆಸ್ ಸೂಚ್ಯಂಕದಲ್ಲಿ ಅರವತ್ತೈದು ಶ್ರೇಯಾಂಕದ ಸುಧಾರಣೆ.

ಜಾಗತಿಕ ಹೂಡಿಕೆಯನ್ನು ಆಕರ್ಷಿಸುವಲ್ಲಿ ಏಷ್ಯಾದ ಉನ್ನತ ಕಾರ್ಯಕ್ಷಮತೆ ಹೊಂದಿರುವ ದೇಶವಾದ ಭಾರತವು, ಬ್ಲೂಮ್‌ಬರ್ಗ್ ನ್ಯಾಷನಲ್ ಬ್ರಾಂಡ್ ಟ್ರ್ಯಾಕರ್ 2018 ಸಮೀಕ್ಷೆಯಲ್ಲಿ ಇತ್ತೀಚೆಗೆ ಸ್ಥಾನ ಪಡೆದ ಬಗ್ಗೆಯೂ ಪ್ರಧಾನ ಮಂತ್ರಿಯವರು  ಮಾತನಾಡಿದರು.  ಈ ವರದಿಯ 10 ಸೂಚಕಗಳಲ್ಲಿ 7 ರಲ್ಲಿ, ಅಂದರೆ ರಾಜಕೀಯ ಸ್ಥಿರತೆ, ಆರ್ಥಿಕ ಸ್ಥಿರತೆ, ಉತ್ತಮ ಗುಣಮಟ್ಟದ ಉತ್ಪನ್ನಗಳು, ಭ್ರಷ್ಟಾಚಾರ ವಿರೋಧಿ, ಕಡಿಮೆ ಉತ್ಪಾದನಾ ವೆಚ್ಚ, ಸೂಕ್ತ ಕಾರ್ಯತಂತ್ರದ ಸ್ಥಳ ಮತ್ತು ಐಪಿಆರ್‌ಗಳಿಗೆ (ಬೌದ್ಧಿಕ ಆಸ್ತಿ ಹಕ್ಕುಗಳು) ಗೌರವ ಇವುಗಳಲ್ಲಿ ಭಾರತವು ಉನ್ನತ ಸ್ಥಾನದಲ್ಲಿದೆ.

ತಂತ್ರಜ್ಞಾನ ಮತ್ತು ಹೊಸ ಶೋಧಗಳ ವಿಷಯದಲ್ಲಿ, ಪ್ರಧಾನ ಮಂತ್ರಿಯವರು ಜಾಗತಿಕ ವ್ಯಾಪಾರ ಸಮುದಾಯವನ್ನು ಭಾರತದಲ್ಲಿ ಹೂಡಿಕೆ ಮಾಡಲು ಆಹ್ವಾನಿಸಿದರು ಮತ್ತು ಅವರ ತಂತ್ರಜ್ಞಾನ ಮತ್ತು ಭಾರತದ ಪ್ರತಿಭೆಗಳು ಒಟ್ಟಾಗಿ ಜಗತ್ತನ್ನು ಬದಲಾಯಿಸಬಹುದು ಎಂದು ಹೇಳಿದರು.  ಅವರ ತಂತ್ರಜ್ಞಾನ ಪ್ರಮಾಣವು ಭಾರತದ ಕೌಶಲ್ಯದೊಂದಿಗೆ ಸೇರಿ ಜಾಗತಿಕ ಆರ್ಥಿಕ ಬೆಳವಣಿಗೆಯನ್ನು ವೇಗಗೊಳಿಸಬಲ್ಲದು ಎಂದು ಹೇಳಿದರು.

ಪ್ರಧಾನ ಮಂತ್ರಿಯವರ ಮುಖ್ಯ ಭಾಷಣದ ನಂತರ ಬ್ಲೂಮ್‌ಬರ್ಗ್‌ನ ಸ್ಥಾಪಕ ಶ್ರೀ ಮೈಕೆಲ್ ಬ್ಲೂಮ್‌ಬರ್ಗ್ ಅವರೊಂದಿಗೆ ಸಂವಾದ ಅಧಿವೇಶನ  ನಡೆಯಿತು.(Release ID: 1586672) Visitor Counter : 91