ಪ್ರಧಾನ ಮಂತ್ರಿಯವರ ಕಛೇರಿ

ಗುಜರಾತ್ ನ ಸರ್ದಾರ್ ಸರೋವರ್ ಅಣೆಕಟ್ಟೆಯಲ್ಲಿ ನಡೆದ 'ನಮಾಮಿ ನರ್ಮದಾ' ಉತ್ಸವದಲ್ಲಿ ಭಾಗಿಯಾದ ಪ್ರಧಾನಿ

Posted On: 17 SEP 2019 5:00PM by PIB Bengaluru

ಗುಜರಾತ್ ನ ಸರ್ದಾರ್ ಸರೋವರ್ ಅಣೆಕಟ್ಟೆಯಲ್ಲಿ ನಡೆದ 'ನಮಾಮಿ ನರ್ಮದಾ' ಉತ್ಸವದಲ್ಲಿ ಭಾಗಿಯಾದ ಪ್ರಧಾನಿ

ಚಿಟ್ಟೆಗಳ ಉದ್ಯಾನ, ಪರಿಸರ ಪ್ರವಾಸೋದ್ಯಮ ತಾಣ ಕೆವಾಡಿಯಾಕ್ಕೆ ಭೇಟಿ,. 

ಗುಜರಾತ್ ನ ಏಕತಾ ಪ್ರತಿಮೆಯು ವಿಶ್ವ ಪ್ರವಾಸೋದ್ಯಮ ಭೂಪಟದಲ್ಲಿ ಸ್ಥಾನ ಪಡೆದಿದೆ: ಪ್ರಧಾನಿ.  ಸರ್ದಾರ್ ಪಟೇಲ್ ಅವರ ದೂರದೃಷ್ಟಿಯು ಜಮ್ಮು ಮತ್ತು ಕಾಶ್ಮೀರದ ಬಗ್ಗೆ ಸರ್ಕಾರದ ನಿರ್ಧಾರದ ಹಿಂದಿನ ಪ್ರೇರಣೆ. ಜಮ್ಮು, ಕಾಶ್ಮೀರ ಮತ್ತು ಲಡಾಖ್ ಗೆ ಸಮೃದ್ಧಿ ಮತ್ತು ವಿಶ್ವಾಸವನ್ನು ತರುವ ವಿಶ್ವಾಸವಿದೆ: ಪ್ರಧಾನಿ

 

ಗುಜರಾತ್ ನ ಕೆವಾಡಿಯಾದಲ್ಲಿ  ನಡೆದ 'ನಮಾಮಿ ನರ್ಮದಾ' ಉತ್ಸವದಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಭಾಗವಹಿಸಿದ್ದರು. 138.68 ಮೀಟರ್ ಎತ್ತರದ ಜಲಾಶಯವು ಸಂಪೂರ್ಣ ಭರ್ತಿಯಾಗಿರುವುದನ್ನು ಆಚರಿಸಲು ಗುಜರಾತ್ ಸರ್ಕಾರ ಈ ಉತ್ಸವವನ್ನು ನಡೆಸುತ್ತಿದೆ. 2017 ರಲ್ಲಿ ಅಣೆಕಟ್ಟಿನ ಎತ್ತರವನ್ನು ಹೆಚ್ಚಿಸಿದ ನಂತರ ಮೊದಲ ಬಾರಿಗೆ, ನೀರಿನ ಮಟ್ಟವು ಸೆಪ್ಟೆಂಬರ್ 16 ರ ಸಂಜೆ ಗರಿಷ್ಠ ಮಟ್ಟವನ್ನು ತಲುಪಿತು. ಗುಜರಾತ್ನ ಜೀವನಾಡಿಯಾದ ನರ್ಮದಾ ನದಿಯ ನೀರನ್ನು ಸ್ವಾಗತಿಸಲು ಪ್ರಧಾನಿಯವರು ಅಣೆಕಟ್ಟೆಯಲ್ಲಿ ಪೂಜೆ ನೆರವೇರಿಸಿದರು.

ನಂತರ, ಪ್ರಧಾನ ಮಂತ್ರಿ ಕೆವಾಡಿಯಾದ ಖಲ್ವಾನಿ ಪರಿಸರ-ಪ್ರವಾಸೋದ್ಯಮ ತಾಣ ಮತ್ತು ಕ್ಯಾಕ್ಟಸ್ ಗಾರ್ಡನ್ಗೆ ಭೇಟಿ ನೀಡಿದರು. ಕೆವಾಡಿಯಾದ ಬಟರ್ಫ್ಲೈ ಗಾರ್ಡನ್ನಲ್ಲಿ ಪ್ರಧಾನ ಮಂತ್ರಿ ದೊಡ್ಡ ಬುಟ್ಟಿಯಲ್ಲಿ ತುಂಬಿದ್ದ ಚಿಟ್ಟೆಗಳನ್ನು ಉದ್ಯಾನವನಕ್ಕೆ ಬಿಡುಗಡೆ ಮಾಡಿದರು. ಏಕತಾ ಪ್ರತಿಮೆಯ ಸಮೀಪದಲ್ಲಿರುವ ಏಕ್ತಾ ನರ್ಸರಿಗೂ ಅವರು ಭೇಟಿ ನೀಡಿದರು. ನಂತರ ಪ್ರಧಾನಿ ‘ಏಕತಾ ಪ್ರತಿಮೆಯ’ಪಕ್ಕದಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು.

“ಸರ್ದಾರ್ ಸರೋವರ್ ಅಣೆಕಟ್ಟೆಯಲ್ಲಿ ನೀರು 138 ಮೀಟರ್ಗಿಂತ ಮೇಲೇರುವುದನ್ನು ನೋಡಲು  ನಾನು ಪುಣ್ಯ ಮಾಡಿದ್ದೇನೆ. ಸರ್ದಾರ್ ಸರೋವರ್ ಅಣೆಕಟ್ಟು ಗುಜರಾತ್ ಜನರಿಗೆ ಭರವಸೆಯ ಕಿರಣವಾಗಿದೆ. ಕಷ್ಟಪಟ್ಟು ದುಡಿಯುವ ಲಕ್ಷಾಂತರ ಮಂದಿ ರೈತರಿಗೆ ಇದು ವರದಾನವಾಗಿದೆ ” ಎಂದು ಪ್ರಧಾನಿ ಹೇಳಿದರು.

ಸ್ಟ್ಯಾಚ್ಯೂ ಆಫ್ ಯೂನಿಟಿಯಲ್ಲಿನ ಪ್ರವಾಸಿಗರ ಹರಿವನ್ನು ಸ್ಟ್ಯಾಚ್ಯೂ ಆಫ್ ಲಿಬರ್ಟಿಯೊಂದಿಗೆ ಹೋಲಿಸಿದ ಪ್ರಧಾನಿಯವರು, “ಅನಾವರಣಗೊಂಡ 11 ತಿಂಗಳಲ್ಲಿ, ಏಕತಾ ಪ್ರತಿಮೆಯು ಪ್ರವಾಸಿಗರ ಆಕರ್ಷಿಸುತ್ತಿದೆ, ಇದು 133 ವರ್ಷಗಳ ಹಳೆಯ ಸ್ಟ್ಯಾಚ್ಯೂ ಆಫ್ ಲಿಬರ್ಟಿಗೆ ಸಮನಾಗಿದೆ. ಏಕತಾ ಪ್ರತಿಮೆಯಿಂದಾಗಿ ಕೆವಾಡಿಯಾ ಮತ್ತು ಗುಜರಾತ್ ವಿಶ್ವ ಪ್ರವಾಸೋದ್ಯಮ ಭೂಪಟ ಸೇರಿವೆ. ಕಳೆದ 11 ತಿಂಗಳಲ್ಲಿ ಭಾರತ ಮತ್ತು ವಿಶ್ವದಾದ್ಯಂತದ 23 ಲಕ್ಷ ಪ್ರವಾಸಿಗರು ಈ ಸ್ಥಳಕ್ಕೆ ಭೇಟಿ ನೀಡಿದ್ದಾರೆ ಸ್ಟ್ಯಾಚ್ಯೂ ಆಫ್ ಲಿಬರ್ಟಿ ಪ್ರತಿದಿನ ಸರಾಸರಿ 10,000 ಪ್ರವಾಸಿಗರನ್ನು ಆಕರ್ಷಿಸುತ್ತದೆ. ಆದರೆ ಇದು 133 ವರ್ಷ ಹಳೆಯದು ಎಂಬುದನ್ನು ನೀವು ನೆನಪಿನಲ್ಲಿಡಬೇಕು. ಮತ್ತೊಂದೆಡೆ, ಸ್ಟ್ಯಾಚ್ಯೂ ಆಫ್ ಯೂನಿಟಿಗೆ  ಕೇವಲ 11 ತಿಂಗಳುಗಳಾಗಿವೆ. ಆದರೂ, ಇದು ಪ್ರತಿದಿನ 8,500 ಕ್ಕೂ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಇದೊಂದು ಪವಾಡ” ಎಂದರು.

ದೇಶದ ಮೊದಲ ಗೃಹ ಸಚಿವರ ಜನ್ಮ ದಿನಾಚರಣೆಯ ನೆನಪಿಗಾಗಿ ಪ್ರತಿಮೆಯನ್ನು 2018 ರ ಅಕ್ಟೋಬರ್ 31 ರಂದು ಸಾರ್ವಜನಿಕರಿಗೆ ಮುಕ್ತಗೊಳಿಸಲಾಯಿತು.

ಸರ್ದಾರ್ ಪಟೇಲ್ ಅವರ ದೂರದೃಷ್ಟಿಯನ್ನು ಶ್ಲಾಘಿಸಿದ ಪ್ರಧಾನಿಯವರು, ಕಳೆದ ತಿಂಗಳು ಜಮ್ಮು ಮತ್ತು ಕಾಶ್ಮೀರದ ಬಗ್ಗೆ ಸರ್ಕಾರದ ಕೈಗೊಂಡ ನಿರ್ಧಾರವು ಭಾರತದ ಮಾಜಿ ಗೃಹ ಸಚಿವರ ಪ್ರೇರಣೆಯಾಗಿದೆ ಎಂದು ಹೇಳಿದರು. ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವ ನಿರ್ಧಾರವು ಸರ್ದಾರ್ ಪಟೇಲ್ ಅವರಿಂದ ಸ್ಫೂರ್ತಿ ಪಡೆದಿದೆ ಮತ್ತು ಇದು ದಶಕಗಳಷ್ಟು ಹಳೆಯದಾದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನವಾಗಿದೆ ಎಂದರು. ಜಮ್ಮು, ಕಾಶ್ಮೀರ ಮತ್ತು ಲಡಾಖ್ ಗೆ ಲಕ್ಷಾಂತರ ಸಹೋದ್ಯೋಗಿಗಳ ಸಕ್ರಿಯ ಬೆಂಬಲದೊಂದಿಗೆ ಸಮೃದ್ಧಿ ಮತ್ತು ವಿಶ್ವಾಸವನ್ನು ತರುವ ನಂಬಿಕೆಯಿದೆ ಎಂದು ಪ್ರಧಾನಿ ಹೇಳಿದರು.

 “ಭಾರತದ ಏಕತೆ ಮತ್ತು ಶ್ರೇಷ್ಠತೆಗೆ ನಿಮ್ಮ ಸೇವಕ ಸಂಪೂರ್ಣವಾಗಿ ಬದ್ಧನಾಗಿರುತ್ತಾನೆ. ಕಳೆದ 100 ದಿನಗಳಲ್ಲಿ ನಾವು ಈ ಬದ್ಧತೆಯನ್ನು ಬಲಪಡಿಸಿದ್ದೇವೆ ಮತ್ತು ಹೊಸ ಸರ್ಕಾರ ಮೊದಲಿಗಿಂತ ವೇಗವಾಗಿ ಕೆಲಸ ಮಾಡಲಿದೆ, ಮೊದಲಿಗಿಂತ ದೊಡ್ಡ ಗುರಿಗಳನ್ನು ಸಾಧಿಸುತ್ತದೆ” ಎಂದು ಪ್ರಧಾನಿಯವರು  ಹೇಳಿದರು,


(Release ID: 1585528) Visitor Counter : 176