ಸಂಪುಟ

ಸಾರ್ವಜನಿಕ ರಂಗದಲ್ಲಿ ಔಷಧ ತಯಾರಿಕಾ ಕಂಪೆನಿಗಳಿಗೆ ಸಂಬಂಧಿಸಿದ ದಿನಾಂಕ 28-12-2016 ರ ಸಂಪುಟ ನಿರ್ಧಾರವನ್ನು  ಅದರಲ್ಲಿ ಮಾರ್ಪಾಡು ಮಾಡಿ ಅನುಷ್ಟಾನಿಸಲು ಸಂಪುಟ ಅನುಮೋದನೆ.

Posted On: 17 JUL 2019 4:19PM by PIB Bengaluru

ಸಾರ್ವಜನಿಕ ರಂಗದಲ್ಲಿ ಔಷಧ ತಯಾರಿಕಾ ಕಂಪೆನಿಗಳಿಗೆ ಸಂಬಂಧಿಸಿದ ದಿನಾಂಕ 28-12-2016 ರ ಸಂಪುಟ ನಿರ್ಧಾರವನ್ನು  ಅದರಲ್ಲಿ ಮಾರ್ಪಾಡು ಮಾಡಿ ಅನುಷ್ಟಾನಿಸಲು ಸಂಪುಟ ಅನುಮೋದನೆ.

 

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ಈ ಕೆಳಗಿನ ನಿರ್ಧಾರಗಳಿಗೆ ತನ್ನ ಅನುಮೋದನೆ ನೀಡಿತು:

 

i. ಈ ಮೊದಲು ದಿನಾಂಕ 28.12.2016  ರಂದು ಸಾರ್ವಜನಿಕ ರಂಗದ ಸಂಸ್ಥೆಗಳ ಭೂಮಿಯನ್ನು ಸರಕಾರದ ಏಜೆನ್ಸಿಗಳಿಗೆ ಮಾರಾಟ ಮಾಡುವುದಕ್ಕೆ ಸಂಬಂಧಿಸಿದಂತೆ ತೆಗೆದುಕೊಂಡ ನಿರ್ಧಾರವನ್ನು ಮಾರ್ಪಾಡು ಮಾಡಿ ಮತ್ತು ಭೂಮಿಯನ್ನು ದಿನಾಂಕ 14.06.2018  ರ ಪುನರ್ವಿಮರ್ಶಿತ ಡಿ.ಪಿ.ಇ. ಮಾರ್ಗದರ್ಶಿಗಳ ಅಡಿಯಲ್ಲಿ ಮಾರಾಟ ಮಾಡುವುದಕ್ಕೆ ಅನುಮತಿಸುವುದಕ್ಕೆ ಬದಲು ಮತ್ತು

 

ii. ಸಿಬ್ಬಂದಿಗಳ ಬಾಧ್ಯತೆಗಳನ್ನು ಈಡೇರಿಸಲು (ಪಾವತಿಯಾಗದಿರುವ ವೇತನ  ರೂ. 158.35 ಕೋಟಿ +ವಿ.ಆರ್.ಎಸ್. ರೂ. 172.00 ಕೋ.ರೂ ) ಈ  ಕೆಳಗಿನಂತೆ 330.35 ಕೋ.ರೂ. ಗಳಷ್ಟು ಬಜೆಟ್ ಬೆಂಬಲವನ್ನು ಸಾಲ ರೂಪದಲ್ಲಿ ಒದಗಿಸುವುದಕ್ಕೆ

 

               a. ಐ.ಡಿ.ಪಿ.ಎಲ್-ರೂ. 6.50 ಕೋಟಿ.

 

                b. ಆರ್.ಡಿ.ಪಿ.ಎಲ್.-ರೂ. 43.70 ಕೋಟಿ.

 

            c ಎಚ್.ಎ.ಎಲ್.-ರೂ. 280.15 ಕೋಟಿ.

 

(iii) ಆಸ್ತಿಗಳ ಮಾರಾಟ ಮತ್ತು ಬಾಕಿ ಇರುವ ಪಾವತಿ/ ಸಾಲಗಳನ್ನು ಪಾವತಿ ಮಾಡುವುದು ಸಹಿತ ನಾಲ್ಕು ಸಾರ್ವಜನಿಕ ರಂಗದ ಉದ್ಯಮಗಳ ಮುಚ್ಚುವಿಕೆ/ವ್ಯೂಹಾತ್ಮಕ ಮಾರಾಟಗಳಿಗೆ ಸಂಬಂಧಿಸಿದ ಎಲ್ಲ ನಿರ್ಧಾರಗಳನ್ನು ಕೈಗೊಳ್ಳಲು ಸಚಿವರ ಸಮಿತಿಯ ರಚನೆ.

 

ಪ್ರಮುಖ ಪರಿಣಾಮ:

ರೂ. 330.35 ಕೋಟಿಯ ಬಜೆಟ್ ಬೆಂಬಲವು ಬಾಕಿ ಇರುವ ವೇತನ ಪಾವತಿ ಮತ್ತು ಐ.ಡಿ.ಪಿ.ಎಲ್., ಆರ್.ಡಿ.ಪಿ.ಎಲ್ ಮತ್ತು ಎಚ್.ಎ.ಎಲ್.ಗಳ ಸಿಬ್ಬಂದಿಗಳಿಗೆ ವಿ.ಆರ್.ಎಸ್. ಬೆಂಬಲ ನೀಡಲು ಸಹಾಯ ಮಾಡಲಿದೆ. ಈ ನಿರ್ಧಾರವು ಈ ಪಿ.ಎಸ್.ಯು.ಗಳ 1000 ಕ್ಕೂ ಅಧಿಕ ಸಿಬ್ಬಂದಿಗಳ ಸಮಸ್ಯೆಯನ್ನು ನಿವಾರಿಸಲಿದೆ; ಮತ್ತು

ಸಚಿವರ ಸಮಿತಿ ರಚನೆಯಿಂದಾಗಿ ಐ.ಡಿ.ಪಿ.ಎಲ್. ಮತ್ತು ಆರ್.ಡಿ.ಪಿ.ಎಲ್.ಗಳ ಮುಚ್ಚುವಿಕೆಗೆ ಸಂಬಂಧಿಸಿದ ದಿನಾಂಕ 28-12-2016 ರ ಸಂಪುಟ ನಿರ್ಧಾರದ ಪ್ರಕ್ರಿಯೆಗಳನ್ನು ತ್ವರಿತಗೊಳಿಸಲಿದೆ ಮತ್ತು ಎಚ್.ಎ.ಎಲ್. ಮತ್ತು ಬಿ.ಸಿ.ಪಿ.ಎಲ್. ಗಳ ವ್ಯೂಹಾತ್ಮಕ ಮಾರಾಟಕ್ಕೆ ಅನುವು ಮಾಡಿಕೊಡಲಿದೆ.

 

ಹಿನ್ನೆಲೆ:

ಹಿಂದೂಸ್ತಾನ್ ಆಂಟಿಬಯೋಟಿಕ್ಸ್ ಲಿಮಿಟೆಡ್ ( ಎಚ್.ಎ.ಎಲ್.) , ಇಂಡಿಯನ್ ಡ್ರಗ್ಸ್ ಆಂಡ್ ಫಾರ್ಮಾಸ್ಯೂಟಿಕಲ್ಸ್ ಲಿಮಿಟೆಡ್ (ಐ.ಡಿ.ಪಿ.ಎಲ್.) , ರಾಜಸ್ತಾನ ಡ್ರಗ್ಸ್ ಆಂಡ್ ಫಾರ್ಮಾಸ್ಯೂಟಿಕಲ್ಸ್ ಲಿಮಿಟೆಡ್ (ಆರ್.ಡಿ.ಪಿ.ಎಲ್.) ಮತ್ತು ಬೆಂಗಾಲ್ ಕೆಮಿಕಲ್ಸ್ ಆಂಡ್ ಫಾರ್ಮಾಸ್ಯೂಟಿಕಲ್ಸ್ ಲಿಮಿಟೆಡ್ (ಬಿ.ಸಿ.ಪಿ.ಎಲ್.) ಗಳ ಹೆಚ್ಚುವರಿ ಭೂಮಿಯನ್ನು ಸರಕಾರಿ ಏಜೆನ್ಸಿಗಳಿಗೆ ಮುಕ್ತ ಸ್ಪರ್ಧಾತ್ಮಕ ಹರಾಜಿನ ಮೂಲಕ ಮಾರಾಟ ಮಾಡಲು ಮತ್ತು ಅದರಿಂದ ಬರುವ ಆದಾಯದಿಂದ ಬಾಕಿ ಇರುವ ಸಾಲಬಾಧ್ಯತೆಗಳನ್ನು ತೀರಿಸಲು  ಸಂಪುಟವು ದಿನಾಂಕ 28-12-2016 ರಂದು ನಿರ್ಧಾರ ಕೈಗೊಂಡಿತ್ತು. ಸಾಲ ಬಾಧ್ಯತೆಗಳನ್ನು ತೀರಿಸಿದ  ಬಳಿಕ ಐ.ಡಿ.ಪಿ.ಎಲ್. ಮತ್ತು ಆರ್.ಡಿ.ಪಿ.ಎಲ್. ಗಳನ್ನು ಮುಚ್ಚಿ ಮತ್ತು ಎಚ್.ಎ.ಎಲ್. ಹಾಗು ಬಿ.ಸಿ.ಪಿ.ಎಲ್. ಗಳ ವ್ಯೂಹಾತ್ಮಕ ಮಾರಾಟಕ್ಕೆ ನಿರ್ಧರಿಸಲಾಗಿತ್ತು. ಇಲಾಖೆಯು ಹೆಚ್ಚುವರಿ ಭೂಮಿಯನ್ನು ಮಾರಾಟ ಮಾಡಲು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಿತಾದರೂ , ಒಂದಕ್ಕಿಂತ ಹೆಚ್ಚು ಬಾರಿ ಟೆಂಡರ್ ಕರೆದರೂ ಗ್ರಾಹಕರು ಸಿಗಲಿಲ್ಲ. ಏತನ್ಮಧ್ಯೆ ಸಾರ್ವಜನಿಕ ಉದ್ದಿಮೆಗಳ  ಇಲಾಖೆ ( ಡಿ.ಪಿ.ಇ.) ಸಾರ್ವಜನಿಕ ರಂಗದ ಉದ್ಯಮಗಳ ಭೂಮಿ ಮಾರಾಟಕ್ಕೆ ಸಂಬಂಧಿಸಿ 14-06-2018  ರಂದು  ಪರಿಷ್ಕೃತ ಮಾರ್ಗದರ್ಶಿಗಳನ್ನು ಹೊರಡಿಸಿತು. ಹೆಚ್ಚುವರಿ ಭೂಮಿ ಮಾರಾಟದ ಮೂಲಕ ಹಣಕಾಸು ದೊರೆಯದೇ ಹೋದುದರಿಂದ ಕೆಲವು ಸಾರ್ವಜನಿಕ ರಂಗದ ಉದ್ದಿಮೆಗಳ ( ಎಚ್.ಎ.ಎಲ್. ಮತ್ತು ಆರ್.ಡಿ.ಪಿ.ಎಲ್.) ಸಿಬ್ಬಂದಿಗಳಿಗೆ ವೇತನ ಪಾವತಿಯಾಗಲಿಲ್ಲ ಮತ್ತು ವಿ.ಆರ್.ಎಸ್. ಯೋಜನೆಯನ್ನು ಮುಂದಿಡಲಾಯಿತು. ಹಾಗಿರುವಾಗ , ಭೂಮಿಯನ್ನು ಪರಿಷ್ಕೃತ ಡಿ.ಪಿ.ಇ. ಮಾರ್ಗದರ್ಶಿಗಳ ಅನ್ವಯ ವಿಲೇವಾರಿ ಮಾಡಲು ಮತ್ತು ಸಿಬ್ಬಂದಿಗಳ ವೇತನ ಬಾಧ್ಯತೆ ನಿಭಾಯಿಸಲು ಬಜೆಟ್ ಬೆಂಬಲ ಕೋರಲು ನಿರ್ಧರಿಸಲಾಗಿತ್ತು.



(Release ID: 1579267) Visitor Counter : 139