ಸಂಪುಟ

ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ ಮೂರು ವಿಮಾನ ನಿಲ್ದಾಣಗಳು ಅಂದರೆ,  ಅಹಮದಾಬಾದ್,  ಲಖನೌ ಮತ್ತು ಮಂಗಳೂರು  ವಿಮಾನ ನಿಲ್ದಾಣಗಳನ್ನು ಸಾರ್ವಜನಿಕ, ಖಾಸಗಿ ಸಹಭಾಗಿತ್ವದ ಮೂಲಕ ಗುತ್ತಿಗೆಗೆ ನೀಡುವ ಪ್ರಸ್ತಾಪಕ್ಕೆ ಸಂಪುಟದ ಅನುಮೋದನೆ

Posted On: 03 JUL 2019 4:39PM by PIB Bengaluru

ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ ಮೂರು ವಿಮಾನ ನಿಲ್ದಾಣಗಳು ಅಂದರೆ,  ಅಹಮದಾಬಾದ್,  ಲಖನೌ ಮತ್ತು ಮಂಗಳೂರು  ವಿಮಾನ ನಿಲ್ದಾಣಗಳನ್ನು ಸಾರ್ವಜನಿಕ, ಖಾಸಗಿ ಸಹಭಾಗಿತ್ವದ ಮೂಲಕ ಗುತ್ತಿಗೆಗೆ ನೀಡುವ ಪ್ರಸ್ತಾಪಕ್ಕೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ)ದ ಮೂರು ವಿಮಾನ ನಿಲ್ದಾಣಗಳು ಅಂದರೆ,  ಅಹಮದಾಬಾದ್,  ಲಖನೌ ಮತ್ತು ಮಂಗಳೂರು  ವಿಮಾನ ನಿಲ್ದಾಣಗಳನ್ನು ಸಾರ್ವಜನಿಕ, ಖಾಸಗಿ ಸಹಭಾಗಿತ್ವ (ಪಿಪಿಪಿ)ದ ಮೂಲಕ ಅತಿ ಹೆಚ್ಚಿನ ಬಿಡ್ಡುದಾರರಾದ ಮೇ. ಅದಾನಿ ಎಂಟರ್ ಪ್ರೈಸೆಸ್ ಲಿಮಿಟೆಡ್ ಗೆ  ಗುತ್ತಿಗೆಗೆ ನೀಡುವ ಪ್ರಸ್ತಾಪಕ್ಕೆ ತನ್ನ ಅನುಮೋದನೆ ನೀಡಿದೆ. ಪಿಪಿಪಿ ಅಡಿಯಲ್ಲಿ ಬಿಡ್ ದಸ್ತಾವೇಜಿನ ಷರತ್ತು ಮತ್ತು ನಿಬಂಧನೆಗಳ ರೀತ್ಯ 50 ವರ್ಷಗಳ  ಅವಧಿಗೆ ಈ ಮೂರು ವಿಮಾನ ನಿಲ್ದಾಣಗಳ ನಿರ್ವಹಣೆ ಮತ್ತು ಅಭಿವೃದ್ಧಿಗೆ ಇವರು ಹೆಚ್ಚಿನ ಬಿಡ್ ಉಲ್ಲೇಖಿಸಿದ್ದರು.

 

ಪರಿಣಾಮಗಳು:

ಈ ಯೋಜನೆಗಳು ಸಾರ್ವಜನಿಕ ವಲಯದಲ್ಲಿ ಅಗತ್ಯವಾಗಿರುವ ಹೂಡಿಕೆಗಳನ್ನು ಬಳಕೆ ಮಾಡಿಕೊಳ್ಳುವುದರ ಜೊ���ೆಗೆ ವಿತರಣೆ, ಪರಿಣತಿ, ಉದ್ಯಮಶೀಲತೆ ಮತ್ತು ವೃತ್ತಿಪರತೆಯಲ್ಲಿ ದಕ್ಷತೆಯನ್ನು ತರುತ್ತದೆ. ಇದು ಎಎಐಗೆ ಹೆಚ್ಚಿನ ಆದಾಯವನ್ನೂ ತಂದುಕೊಡುತ್ತದೆ, ಇದು 2ನೇ ಹಂತ ಮತ್ತು 3ನೇ ಹಂತದ ನಗರಗಳಲ್ಲಿ ಎಎಐನ ಹೆಚ್ಚಿನ ಹೂಡಿಕೆಗೆಗೆ ಮತ್ತು ಉದ್ಯೋಗ ಸೃಷ್ಟಿ ಮತ್ತು ಸಂಬಂಧಿತ ಮೂಲಸೌಕರ್ಯದೊಂದಿಗೆ ಈ ಪ್ರದೇಶಗಳ ಆರ್ಥಿಕ ಅಭಿವೃದ್ಧಿಗೆ ಕಾರಣವಾಗುತ್ತದೆ.

*****


(Release ID: 1576913) Visitor Counter : 203