ಸಂಪುಟ

ಬಾಹ್ಯಾಕಾಶ ಇಲಾಖೆ ಅಡಿಯಲ್ಲಿ ಹೊಸ ಕಂಪನಿ ಸ್ಥಾಪನೆಗೆ ಸಂಪುಟದ ಅನುಮೋದನೆ

Posted On: 19 FEB 2019 9:26PM by PIB Bengaluru

ಬಾಹ್ಯಾಕಾಶ ಇಲಾಖೆ ಅಡಿಯಲ್ಲಿ ಹೊಸ ಕಂಪನಿ ಸ್ಥಾಪನೆಗೆ ಸಂಪುಟದ ಅನುಮೋದನೆ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಕೇಂದ್ರಗಳು ಮತ್ತು ಬಾಹ್ಯಾಕಾಶ ಇಲಾಖೆಯ ಸಾಂವಿಧಾನಿಕ ಘಟಕಗಳು ನಡೆಸಿರುವ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಗಳನ್ನು ವಾಣಿಜ್ಯಾತ್ಮಕವಾಗಿ ಬಳಸಿಕೊಳ್ಳಲು ಬಾಹ್ಯಾಕಾಶ ಇಲಾಖೆಯ ಅಡಿಯಲ್ಲಿ ಹೊಸ ಕಂಪನಿ ಸ್ಥಾಪನೆಗೆ ತನ್ನ ಅನುಮೋದನೆ ನೀಡಿದೆ. 

ಪ್ರಮುಖ ಅಂಶಗಳು: 

ಇಸ್ರೋ ಕಾರ್ಯಕ್ರಮಗಳನ್ನು ವಾಣಿಜ್ಯಾತ್ಮಕವಾಗಿ ಬಳಸಿಕೊಳ್ಳಲು ಈ ಕೆಳಕಂಡ ಕ್ಷೇತ್ರ/ಮಾರ್ಗಗಳು ಅವಕಾಶ ಮಾಡಿಕೊಡುತ್ತವೆ: 

1. ಕೈಗಾರಿಕೆಗಳಿಗೆ ಸಣ್ಣ ಉಪಗ್ರಹ ತಂತ್ರಜ್ಞಾನ ವರ್ಗಾವಣೆ, ಅದಕ್ಕಾಗಿ ಹೊಸ ಕಂಪನಿ ಡಿ.ಓ.ಎಸ್./ಇಸ್ರೋದಿಂದ ಪರವಾನಗಿ ಪಡೆದು, ಕೈಗಾರಿಕೆಗಳಿಗೆ ಉಪ ಪರವಾನಗಿ ನೀಡುತ್ತದೆ; 

2. ಖಾಸಗಿ ವಲಯದ ಸಹಯೋಗದೊಂದಿಗೆ ಸಣ್ಣ ಉಪಗ್ರಹ ಉಡಾವಣಾ ವಾಹಕ (ಎಸ್.ಎಲ್.ವಿ.) ತಯಾರಿಕೆ; 

3. ಕೈಗಾರಿಕೆಗಳ ಮೂಲಕ ಧ್ರುವೀಯ ಎಸ್.ಎಲ್.ವಿ. ಉತ್ಪಾದನೆ; 

4. ಆನ್ವಯಿಕಗಳು ಮತ್ತು ಉಡಾವಣೆ ಸೇರಿದಂತೆ ಬಾಹ್ಯಾಕಾಶ ಆಧಾರಿತ ಉತ್ಪನ್ನ ಮತ್ತು ಸೇವೆಗಳ ಉತ್ಪಾದಕತ್ವ ಮತ್ತು ಮಾರುಕಟ್ಟೆ; 

5. ಇಸ್ರೋ ಕೇಂದ್ರಗಳು ಮತ್ತು ಡಿ.ಓ.ಎಸ್.ನ ಸಾಂವಿಧಾನಿಕ ಘಟಕಗಳಿಂದ ಅಭಿವೃದ್ಧಿಪಡಿಸಲಾದ ತಂತ್ರಜ್ಞಾನದ ವರ್ಗಾವಣೆ; 

6. ಭಾರತ ಮತ್ತು ವಿದೇಶಗಳಲ್ಲಿ ತಂತ್ರಜ್ಞಾನದ ಉಪ ಉತ್ಪನ್ನಗಳು ಮತ್ತು ಉತ್ಪನ್ನಗಳ ಮಾರುಕಟ್ಟೆ; ಮತ್ತು 

7. ಭಾರತ ಸರ್ಕಾರ ಸೂಕ್ತ ಎಂದು ಪರಿಗಣಿಸುವ ಇತರ ಯಾವುದೇ ವಿಷಯ 


(Release ID: 1565739) Visitor Counter : 121