ಸಂಪುಟ
ಕೇಂದ್ರ ಸರ್ಕಾರಿ ನೌಕರರಿಗೆ ದಿನಾಂಕ 1.1.2019ರಿಂದ ಬಾಕಿ ಇರುವ ಡಿ.ಎ.ಯ ಹೆಚ್ಚುವರಿ ಕಂತಿನ ಬಿಡುಗಡೆಗೆ ಸಚಿವ ಸಂಪುಟದ ಅನುಮೋದನೆ
प्रविष्टि तिथि:
19 FEB 2019 9:22PM by PIB Bengaluru
ಕೇಂದ್ರ ಸರ್ಕಾರಿ ನೌಕರರಿಗೆ ದಿನಾಂಕ 1.1.2019ರಿಂದ ಬಾಕಿ ಇರುವ ಡಿ.ಎ.ಯ ಹೆಚ್ಚುವರಿ ಕಂತಿನ ಬಿಡುಗಡೆಗೆ ಸಚಿವ ಸಂಪುಟದ ಅನುಮೋದನೆ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ (ಡಿಎ) ಮತ್ತು ಪಿಂಚಿಣಿದಾರರಿಗೆ ತುಟ್ಟಿ ಪರಿಹಾರ(ಡಿ.ಆರ್.)ವನ್ನು 01.01.2019ರಿಂದ ಅನ್ವಯವಾಗುವಂತೆ ಹೆಚ್ಚುವರಿ ಕಂತಿನ ಬಿಡುಗಡೆಗೆ ತನ್ನ ಅನುಮೋದನೆ ನೀಡಿದೆ. ದರ ಏರಿಕೆಯನ್ನು ಸರಿದೂಗಿಸಲು ಪ್ರಸ್ತುತ ಇರುವ ಮೂಲ ವೇತನ/ಪಿಂಚಣಿಯ ಶೇ.9ರ ದರದ ಮೇಲೆ ಶೇ.3ರಷ್ಟು ಏರಿಕೆ ಮಾಡಲಾಗಿದೆ.
ಈ ಏರಿಕೆಯು ಅಂಗೀಕೃತ ಸೂತ್ರಕ್ಕೆ ಅನುಗುಣವಾಗಿದ್ದು, ಇದು 7ನೇ ಕೇಂದ್ರೀಯ ವೇತನ ಆಯೋಗ (ಸಿಪಿಸಿ)ದ ಶಿಫಾರಸಿನ ಆಧಾರದ ಮೇಲಿದೆ. ತುಟ್ಟಿ ಭತ್ಯೆ ಮತ್ತು ತುಟ್ಟಿ ಪರಿಹಾರ ಎರಡೂ ಸೇರಿ ಒಟ್ಟಾರೆ ಬೊಕ್ಕಸಕ್ಕೆ ವಾರ್ಷಿಕ ರೂ. 9168.12 ಕೋಟಿ ಮತ್ತು 2019-20ನೇ ಆರ್ಥಿಕ ವರ್ಷದಲ್ಲಿ ರೂ. 10696.14 ಕೋಟಿ ರೂಪಾಯಿಗಳ (ಜನವರಿ 2019ರಿಂದ 2020ರ ಫೆಬ್ರವರಿಯವರೆಗೆ 14 ತಿಂಗಳುಗಳಿಗೆ) ಹೊರೆ ಬೀಳಲಿದೆ. ಇದರಿಂದ ಸುಮಾರು 48.41 ಲಕ್ಷ ಕೇಂದ್ರ ಸರ್ಕಾರಿ ನೌಕರರಿಗೆ ಮತ್ತು 62.03 ಲಕ್ಷ ಪಿಂಚಣಿದಾರರಿಗೆ ಪ್ರಯೋಜನವಾಗಲಿದೆ.
(रिलीज़ आईडी: 1565732)
आगंतुक पटल : 152