ಸಂಪುಟ

ಅಹಮದಾಬಾದ್ ಮೆಟ್ರೋ ರೈಲು ಯೋಜನೆ II ಹಂತಕ್ಕೆ ಸಂಪುಟದ ಅನುಮೋದನೆ ಎರಡು ಕಾರಿಡಾರ್ ಗಳನ್ನು ಒಳಗೊಂಡಿದೆ ಯಾವುವೆಂದರೆ (i) ಮೊಟೇರಾ ಕ್ರೀಡಾಂಗಣದಿಂದ ಮಹಾತ್ಮಾ ಮಂದಿರ ಮತ್ತು (ii) ಜಿ.ಎನ್.ಎಲ್.ಯು.ನಿಂದ ಜಿ.ಐ.ಎಫ್.ಟಿ. ನಗರದವರೆಗೆ

ಪ್ರಕಟಣಾ ದಿನಾಂಕ: 19 FEB 2019 9:16PM by PIB Bengaluru

ಅಹಮದಾಬಾದ್ ಮೆಟ್ರೋ ರೈಲು ಯೋಜನೆ II ಹಂತಕ್ಕೆ ಸಂಪುಟದ ಅನುಮೋದನೆ 

ಎರಡು ಕಾರಿಡಾರ್ ಗಳನ್ನು ಒಳಗೊಂಡಿದೆ ಯಾವುವೆಂದರೆ (i) ಮೊಟೇರಾ ಕ್ರೀಡಾಂಗಣದಿಂದ ಮಹಾತ್ಮಾ ಮಂದಿರ ಮತ್ತು (ii) ಜಿ.ಎನ್.ಎಲ್.ಯು.ನಿಂದ ಜಿ.ಐ.ಎಫ್.ಟಿ. ನಗರದವರೆಗೆ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಈ ಕೆಳಗಿನ ಪ್ರಸ್ತಾವನೆಗಳಿಗೆ ತನ್ನ ಅನುಮೋದನೆ ನೀಡಿದೆ: 

1. ಅಹಮದಾಬಾದ್ ಮೆಟ್ರೋ ರೈಲು ಯೋಜನೆ ಹಂತ –II ಅನುಷ್ಠಾನ, ಇದು ಎರಡು ಕಾರಿಡಾರ್ ಒಳಗೊಂಡಿದ್ದು ಇದರ ಒಟ್ಟು ಉದ್ದ 28.254 ಕಿ.ಮೀ. ಅಂದರೆ, ಕಾರಿಡಾರ್ 1 ಮೊಟೇರಾ ಕ್ರೀಡಾಂಗಣದಿಂದ ಮಹಾತ್ಮಾ ಮಂದಿರದವರೆಗೆ ಉದ್ದ 22.838 ಕಿ.ಮೀ ಮತ್ತು ಕಾರಿಡಾರ್ 2 ಜಿಎನ್.ಎಲ್.ಯು.ನಿಂದ ಜಿ.ಐ.ಎಫ್.ಟಿ. ನಗರದವರೆಗೆ ಇದರ ಉದ್ದ 5.416 ಕಿ.ಮೀ. ಆಗಿದ್ದು, 5384.17 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ಪೂರ್ಣಗೊಳ್ಳಲಿದೆ. 

2. ಯೋಜನೆಗೆ ಸಾಂಸ್ಥಿಕ ಸಿದ್ಧತೆ ಮತ್ತು ಕಾನೂನು ಚೌಕಟ್ಟು. 

3. ಯೋಜನೆಯ ಮಂಜೂರಾತಿಗೆ ಷರತ್ತುಗಳು 

ಪ್ರಯೋಜನಗಳು: 

ಈ ಯೋಜನೆಯ ಜಾರಿಯು ಅತ್ಯಂತ ಹೆಚ್ಚು ಅಗತ್ಯವಿದ್ದ ಅಹಮದಾಬಾದ್ ಮತ್ತು ಗಾಂಧಿನಗರಕ್ಕೆ ಹೆಚ್ಚುವರಿ ಸಾರಿಗೆ ಮೂಲಸೌಕರ್ಯವನ್ನು ಒದಗಿಸುತ್ತದೆ. 

ಪ್ರಮುಖ ಅಂಶಗಳು: 

ವ್ಯಾಪಕ ಅಭಿವೃದ್ಧಿ, ಹೆಚ್ಚುತ್ತಿರುವ ಖಾಸಗಿ ವಾಹನಗಳ ಸಂಖ್ಯೆ ಮತ್ತು ನಗರದಲ್ಲಿನ ಬೃಹತ್ ನಿರ್ಮಾಣಗಳ ಫಲವಾಗಿ ಒತ್ತಡಕ್ಕೆ ಸಿಲುಕಿರುವ, ಸಾರಿಗೆ ಮೂಲಸೌಕರ್ಯ ಮತ್ತು ಕೈಗಾರಿಕಾ ಚಟುವಟಿಕೆಗಳ ಮೇಲೆ ಒತ್ತಡ ಹೇರಿರುವ ಅಹಮದಾಬಾದ್ ಮತ್ತು ಗಾಂಧೀನಗರಗಳಲ್ಲಿ ನಗರ ಸಾರಿಗೆ ವ್ಯವಸ್ಥೆಯನ್ನು ಸುಗಮಗೊಳಿಸಲು, ಜನರಿಗೆ ಸುರಕ್ಷಿತ, ಸುಭದ್ರ, ವಿಶ್ವಾಸಾರ್ಹ ಮತ್ತು ಆರಾಮದಾಯಕ ಸಾರ್ವಜನಿಕ ಸಾರಿಗೆ ಒದಗಿಸಲು. ಮೆಟ್ರೋ ರೈಲು ಯೋಜನೆ, ನಗರ ಸಾರಿಗೆ ವ್ಯವಸ್ಥೆಯಲ್ಲಿ ಸಾಂಪ್ರದಾಯಿಕ ಸಾರಿಗೆಗೆ ಪ್ರತಿಯಾಗಿ ನಾವಿನ್ಯಪೂರ್ಣ ಯೋಜನೆಯಾಗಿದೆ. ಈ ಯೋಜನೆಯನ್ನು ಇತರ ನಗರ ಸಾರಿಗೆ ವ್ಯವಸ್ಥೆಗಳೊಂದಿಗೆ ಸಮನ್ವಯಗೊಳಿಸಿ ದಕ್ಷ ಮತ್ತು ಪರಿಣಾಮಕಾರಿ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ, ವಿನ್ಯಾಸ, ತಂತ್ರಜ್ಞಾನ ಮತ್ತು ಸಾಂಸ್ಥಿಕ ನಿರ್ವಹಣೆ, ನವೀನ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಮಾತ್ರ ಇದು ಸಾಧ್ಯವಾಗಲಿದೆ. 
 


(ಪ್ರಕಟಣೆ ಐ.ಡಿ.: 1565723) ವಿಸಿಟರ್ ಕೌಂಟರ್ : 93
ಪ್ರಕಟಣೆಯನ್ನು ಇದರಲ್ಲಿ ಓದಿ: Assamese , English , Urdu , Marathi , हिन्दी , Bengali , Gujarati , Tamil , Telugu