ಸಂಪುಟ

ಪ್ರಧಾನ ಮಂತ್ರಿ ಆವಾಸ್ ಯೋಜನಾ-ಗ್ರಾಮೀಣ , 2019 ರ ಮಾರ್ಚ್ ಬಳಿಕವೂ ಮುಂದುವರಿಕೆಗೆ ಸಂಪುಟದ ಅನುಮೋದನೆ. ( ಪಿ.ಎಂ.ಎ.ವೈ.-ಜಿ ಹಂತ –ii )

Posted On: 19 FEB 2019 9:04PM by PIB Bengaluru

ಪ್ರಧಾನ ಮಂತ್ರಿ ಆವಾಸ್ ಯೋಜನಾ-ಗ್ರಾಮೀಣ , 2019 ರ ಮಾರ್ಚ್ ಬಳಿಕವೂ ಮುಂದುವರಿಕೆಗೆ ಸಂಪುಟದ ಅನುಮೋದನೆ. ( ಪಿ.ಎಂ.ಎ.ವೈ.-ಜಿ ಹಂತ –ii )

 

ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯು ಪ್ರಧಾನ ಮಂತ್ರಿ ಆವಾಸ್ ಯೋಜನಾ-ಗ್ರಾಮೀಣ (ಪಿ.ಎಂ.ಎ.ವೈ-ಜಿ) ಅನುಷ್ಟಾನವನ್ನು , 2019 ರ ಮಾರ್ಚ್ ಬಳಿಕವೂ (ಪಿ.ಎಂ.ಎ.ವೈ-ಜಿ) ಹಂತ iiರ  ಅನ್ವಯ  ಈ ಕೆಳಗಿನಂತೆ ಅನುಷ್ಟಾನಕ್ಕೆ  ತರಲು ಅನುಮೋದನೆ ನೀಡಿತು.

 

·         2022ರವರೆಗೆ ಪಿ.ಎಂ.ಎ.ವೈ-ಜಿ ಹಂತ ii ರಲ್ಲಿ ಒಟ್ಟು 1.95 ಕೋಟಿ ಮನೆಗಳ ನಿರ್ಮಾಣದ ಗುರಿ

 

ಗ್ರಾಮೀಣ ವಸತಿ ಯೋಜನೆಯಾದ ಪ್ರಧಾನಮಂತ್ರಿ ಆವಾಸ್ ಯೋಜನಾದ ಮುಂದುವರಿಕೆ.

ಪಿ.ಎಂ.ಎ.ವೈ-ಜಿ. ಹಂತ -1 ರಲ್ಲಿ  ಈಗಿರುವ ಮಾನದಂಡಗಳ ಅನ್ವಯ  ಗ್ರಾಮೀಣ (ಪಿ.ಎಂ.ಎ.ವೈ-ಜಿ) ಹಂತ ii  ರಡಿ  2019-20ರವರೆಗೆ 60  ಲಕ್ಷ ಮನೆಗಳ ನಿರ್ಮಾಣದ ಗುರಿ. ಇದಕ್ಕೆ ಹಣಕಾಸು ಬಾಧ್ಯತೆ 76,500 ಕೋ.ರೂ.ಗಳಷ್ಟಿದೆ ,( ಇದರಲ್ಲಿ ಕೇಂದ್ರದ ಪಾಲು 48,195  ಕೋ.ರೂ. ಮತ್ತು ರಾಜ್ಯದ ಪಾಲು 28,305  ಕೋ.ರೂ.)

2019-20 ರ ಬಳಿಕವೂ ಈ ಯೋಜನೆ 2021-22 ರ ವರೆಗೆ ಮುಂದಿನ ಹಣಕಾಸು ಆಯೋಗ ಆವರ್ತದಲ್ಲಿ, ಯೋಜನೆ/ಕಾರ್ಯಕ್ರಮಗಳ ವಿಸ್ತರಿತ  ಪ್ರಕ್ರಿಯೆಗಳ ವ್ಯಾಪ್ತಿಯೊಳಗೆ ಥರ್ಡ್ ಪಾರ್ಟಿ ಮೌಲ್ಯಮಾಪನಕ್ಕೆ ಒಳಪಟ್ಟು,   ಸೂಕ್ತ ಮೌಲ್ಯಮಾಪನ ಮತ್ತು ಅನುಮೋದನೆ ಆಧಾರದಲ್ಲಿ ಮುಂದುವರಿಕೆ.

ಅಂತಿಮ ಆವಾಸ್ ಪಟ್ಟಿಯಿಂದ ಹೆಚ್ಚುವರಿ ಅರ್ಹ ಮನೆಗಳನ್ನು ಪಿ.ಎಂ.ಎ.ವೈ-ಜಿ ಯ ಖಾಯಂ ಕಾಯುವ ಪಟ್ಟಿಗೆ (ಪಿ.ಡಬ್ಲ್ಯು.ಎಲ್.) 1.95 ಕೋಟಿಯ ಮಿತಿಗೆ ಒಳಪಟ್ಟಂತೆ ಸೇರಿಸಿಕೊಳ್ಳಬಹುದು. ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಪಿ.ಡಬ್ಲ್ಯು.ಎಲ್. ನಲ್ಲಿ ಯಾವುದೇ ಬಾಕಿ ಹೆಸರುಗಳು ಇಲ್ಲದಿದ್ದಲ್ಲಿ,  ಆದ್ಯತೆ ಆಧಾರದಲ್ಲಿ ಈ ರಾಜ್ಯಗಳಿಗೆ/ ಕೇಂದ್ರಾಡಳಿತ ಪ್ರದೇಶಗಳಿಗೆ ಗುರಿ ಹಂಚಿಕೆ ಮಾಡಬಹುದಾಗಿದ್ದು, ಇದಕ್ಕೆ ಹಣಕಾಸು ಸಚಿವಾಲಯದ ಸಲಹೆಯೊಂದಿಗೆ ಗ್ರಾಮೀಣ ಅಭಿವೃದ್ದಿ ಸಚಿವಾಲಯದ ಅನುಮೋದನೆ ಪಡೆದಿರಬೇಕಾಗುತ್ತದೆ.

ಕಾರ್ಯಕ್ರಮ ನಿರ್ವಹಣಾ ಘಟಕ (ಪಿ.ಎಂ.ಯು.) ಮತ್ತು ರಾಷ್ಟ್ರೀಯ ತಾಂತ್ರಿಕ ಬೆಂಬಲ ಏಜೆನ್ಸಿ (ಎನ್.ಟಿ.ಎಸ್.ಎ.) 2019-20 ರವರೆಗೆ ಮುಂದುವರಿಯುತ್ತದೆ.

ಹೆಚ್ಚುವರಿ ಹಣಕಾಸು ಅಗತ್ಯಕ್ಕಾಗಿ ಹಣವನ್ನು ಈಗಿರುವ ಇ.ಬಿ.ಆರ್. ವ್ಯವಸ್ಥೆ ಅಡಿ ಯೋಜನೆ ಅವಧಿಯವರೆಗೆ ಪಡೆಯಬಹುದು.

ಕಾರ್ಯಕ್ರಮ ನಿಧಿಯಲ್ಲಿ ಆಡಳಿತಾತ್ಮಕ ವೆಚ್ಚ 4 % ನಿಂದ 2 % ಗೆ ಇಳಿಕೆ. ಕಾರ್ಯಕ್ರಮ ನಿಧಿಯಲ್ಲಿ ಆಡಳಿತಾತ್ಮಕ ಘಟಕವಾಗಿ ಹಂಚಿಕೆಯಾಗಿರುವ 2% ಮೊತ್ತವನ್ನು ಪ್ರತ್ಯೇಕಿಸತಕ್ಕದ್ದು. 0.30 % ನಷ್ಟು ಕಾರ್ಯಕ್ರಮ ನಿಧಿಯನ್ನು ಕೇಂದ್ರ ಮಟ್ಟದಲ್ಲಿ ಉಳಿಸಿಡತಕ್ಕದ್ದು ಮತ್ತು ಉಳಿಕೆ 1.70 % ಕಾರ್ಯಕ್ರಮ ನಿಧಿಯನ್ನು ರಾಜ್ಯಗಳಿಗೆ/ಕೇಂದ್ರಾಡಳಿತ ಪ್ರದೇಶಗಳಿಗೆ ಆಡಳಿತಾತ್ಮಕ ನಿಧಿಯಾಗಿ ಬಿಡುಗಡೆ ಮಾಡತಕ್ಕದ್ದು.

ಲಾಭಗಳು:

 

ಇನ್ನೂ ಬಾಕಿ ಉಳಿದಿರುವ ವಸತಿರಹಿತ ಮತ್ತು ಅತ್ಯಂತ ನಾದುರಸ್ತಿಯಲ್ಲಿರುವ ಮನೆಗಳಲ್ಲಿ ವಾಸವಾಗಿರುವ ಗ್ರಾಮೀಣರಿಗೆ 2022 ರೊಳಗೆ ಪಕ್ಕಾ ಮನೆಯನ್ನು ನಿರ್ಮಿಸಿಕೊಡಲಾಗುವುದು. ಹೀಗೆ ನಿರ್ಮಿಸಲಾಗುವ ಮನೆಗಳ ಒಟ್ಟು ಸಂಖ್ಯೆ 1.95  ಕೋಟಿಯ ಮಿತಿಯನ್ನು ದಾಟಲಾಗದು. 


(Release ID: 1565717) Visitor Counter : 106