ಸಂಪುಟ

ಅಂತಾರಾಷ್ಟ್ರೀಯ ಹಣಕಾಸು ಸೇವಾ ಕೇಂದ್ರಗಳ ಪ್ರಾಧಿಕಾರ ಮಸೂದೆ, 2019 ರ ಮೂಲಕ ಭಾರತದಲ್ಲಿನ ಅಂತಾರಾಷ್ಟ್ರೀಯ ಹಣಕಾಸು ಸೇವೆಗಳ ಕೇಂದ್ರ (ಐಎಫ್ಎಸ್ಸಿಗಳು) ಗಳಲ್ಲಿನ ಎಲ್ಲಾ ಹಣಕಾಸು ಸೇವೆಗಳನ್ನು ನಿಯಂತ್ರಿಸಲು ಏಕೀಕೃತ ಪ್ರಾಧಿಕಾರ ಸ್ಥಾಪನೆಗೆ ಸಂಪುಟದ ಅನುಮೋದನೆ

Posted On: 06 FEB 2019 9:36PM by PIB Bengaluru

ಅಂತಾರಾಷ್ಟ್ರೀಯ ಹಣಕಾಸು ಸೇವಾ ಕೇಂದ್ರಗಳ ಪ್ರಾಧಿಕಾರ ಮಸೂದೆ, 2019 ರ ಮೂಲಕ ಭಾರತದಲ್ಲಿನ ಅಂತಾರಾಷ್ಟ್ರೀಯ ಹಣಕಾಸು ಸೇವೆಗಳ ಕೇಂದ್ರ (ಐಎಫ್ಎಸ್ಸಿಗಳು) ಗಳಲ್ಲಿನ ಎಲ್ಲಾ ಹಣಕಾಸು ಸೇವೆಗಳನ್ನು ನಿಯಂತ್ರಿಸಲು ಏಕೀಕೃತ ಪ್ರಾಧಿಕಾರ ಸ್ಥಾಪನೆಗೆ ಸಂಪುಟದ ಅನುಮೋದನೆ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಅಂತಾರಾಷ್ಟ್ರೀಯ ಹಣಕಾಸು ಸೇವಾ ಕೇಂದ್ರಗಳ ಪ್ರಾಧಿಕಾರ ಮಸೂದೆ, 2019 ರ ಮೂಲಕ ಭಾರತದಲ್ಲಿನ ಅಂತಾರಾಷ್ಟ್ರೀಯ ಹಣಕಾಸು ಸೇವೆಗಳ ಕೇಂದ್ರ ( ಐ.ಎಫ್.ಎಸ್.ಸಿಗಳು ) ಗಳಲ್ಲಿನ ಎಲ್ಲಾ ಹಣಕಾಸು ಸೇವೆಗಳನ್ನು ನಿಯಂತ್ರಿಸಲು ಏಕೀಕೃತ ಪ್ರಾಧಿಕಾರ ಸ್ಥಾಪನೆಗೆ ತನ್ನ ಅನುಮೋದನೆ ನೀಡಿದೆ. 

ಭಾರತದಲ್ಲಿ ಪ್ರಥಮ ಐ.ಎಫ್.ಎಸ್.ಸಿ.ಯನ್ನು ಗಿಫ್ಟ್ ನಗರ, ಗುಜರಾತ್ ನ ಗಾಂಧೀನಗರದಲ್ಲಿ ಸ್ಥಾಪಿಸಲಾಯಿತು. ವಿಶ್ವದ ಪ್ರಮುಖ ಅಂತಾರಾಷ್ಟ್ರೀಯ ಹಣಕಾಸು ಕೇಂದ್ರಗಳು ಅಂದರೆ ಲಂಡನ್ ಮತ್ತು ಸಿಂಗಾಪೂರ್ ಗೆ ಹೋಲಿಸುವಂಥಹ ವಾಣಿಜ್ಯ ಮತ್ತು ನಿಯಂತ್ರಣ ವಾತಾವರಣವನ್ನು ಒದಗಿಸುವುದಾಗಿ ಆಫರ್ ನೀಡುವ ಮೂಲಕ ಭಾರತೀಯ ಸಾಂಸ್ಥಿಕ ಕಾಯಗಳಿಂದ ಪ್ರಸ್ತುತ ಕಡಲಾಚೆಯ ಹಣಕಾಸು ಕೇಂದ್ರಗಳಲ್ಲಿ ಮತ್ತು ಹಣಕಾಸು ಸಂಸ್ಥೆಗಳ ಅಂಗ ಸಂಸ್ಥೆಗಳು/ಶಾಖೆಗಳಲ್ಲಿ ನಡೆಯುತ್ತಿರುವ ಹಣಕಾಸು ಸೇವೆಗಳನ್ನು ಮತ್ತು ವಹಿವಾಟಗಳನ್ನು ಭಾರತಕ್ಕೆ ಮರಳಿ ತರಲು ಐಎಫ್ಎಸ್.ಸಿ,ಅವಕಾಶ ನೀಡುತ್ತದೆ. ಇದು ಭಾರತೀಯ ಸಾಂಸ್ಥಿಕ ಸಂಸ್ಥೆಗಳಿಗೆ ಜಾಗತಿಕ ಹಣಕಾಸು ಮಾರುಕಟ್ಟೆಯ ಸುಲಭ ಪ್ರವೇಶ ಒದಗಿಸುತ್ತದೆ. ಐ.ಎಫ್.ಎಸ್.ಸಿ. ಭಾರತದಲ್ಲಿ ಹಣಕಾಸು ಮಾರುಕಟ್ಟೆಯ ಮತ್ತಷ್ಟು ಅಭಿವೃದ್ಧಿಗೆ ಪೂರಕವಾಗಿರುತ್ತದೆ ಮತ್ತು ಉತ್ತೇಜಿಸುತ್ತದೆ. 

ಪ್ರಸ್ತುತ, ಐಎಫ್.ಎಸ್.ಸಿ.ಯಲ್ಲಿ ಬ್ಯಾಂಕಿಂಗ್, ಹಣಕಾಸು ಮಾರುಕಟ್ಟೆಗಳು ಮತ್ತು ವಿಮಾ ವಲಯಗಳನ್ನು ಬಹು ನಿಯಂತ್ರಕರು ಅಂದರೆ ಆರ್.ಬಿ.ಐ, ಸೆಬಿ ಮತ್ತು ಐ.ಆರ್.ಡಿ.ಎ.ಐ. ನಿಯಂತ್ರಿಸುತ್ತಿವೆ. ಐ.ಎಫ್.ಎಸ್.ಸಿ.ಗಳಲ್ಲಿ ಚೈತನ್ಯ ಸ್ವರೂಪದ ವಾಣಿಜ್ಯವು ಅತ್ಯುನ್ನತ ದರ್ಜೆಯ ಅಂತರ ನಿಯಂತ್ರಣ ಸಹಯೋಗದ ಅಗತ್ಯವಿದೆ. ಇದಕ್ಕೆ ಐ.ಎಫ್.ಎಸ್.ಸಿ.ಗಳಲ್ಲಿನ ಹಣಕಾಸು ಚಟುವಟಿಕೆಗಳ ನಿರ್ವಹಿಸುತ್ತಿರುವ ಹಾಲಿ ನಿಯಂತ್ರಣಗಳಿಗೆ ನಿಯಮಿತ ಸ್ಪಷ್ಟನೆ ಮತ್ತು ಪದೇ ಪದೇ ತಿದ್ದುಪಡಿಗಳ ಅಗತ್ಯವೂ ಇರುತ್ತದೆ. ಐ.ಎಫ್.ಎಸ್.ಸಿ.ಗಳಲ್ಲಿ ಹಣಕಾಸು ಸೇವೆಗಳು ಮತ್ತು ಉತ್ಪನ್ನಗಳಿಗೆ ಕೇಂದ್ರೀಕೃತ ಮತ್ತು ಸಮರ್ಪಿತ ನಿಯಂತ್ರಣ ಮಧ್ಯಪ್ರವೇಶದ ಅಗತ್ಯವಿದೆ. ಹೀಗಾಗಿ, ಹಣಕಾಸು ಮಾರುಕಟ್ಟೆಯಲ್ಲಿ ಭಾಗವಹಿಸುವವರಿಗೆ ಭಾರತದಲ್ಲಿ ವಿಶ್ವದರ್ಜೆಯ ನಿಯಂತ್ರಣ ವಾತಾವರಣವನ್ನು ಒದಗಿಸಲು, ಐ.ಎಫ್.ಎಸ್.ಸಿ.ಗಳಿಗೆ ಏಕೀಕೃತ ಹಣಕಾಸು ನಿಯಂತ್ರಕರನ್ನು ಹೊಂದುವ ಅಗತ್ಯ ಕಂಡುಬಂದಿದೆ. ಜೊತೆಗೆ ಇದು ಸುಗಮವಾಗಿ ವಾಣಿಜ್ಯ ನಡೆಸುವ ದೃಷ್ಟಿಕೋನದಿಂದಲೂ ಅಗತ್ಯವಾಗಿದೆ. ಏಕೀಕೃತ ಪ್ರಾಧಿಕಾರವು, ಜಾಗತಿಕ ಉತ್ತಮ ರೂಢಿಗಳಿಗೆ ಹೊಂದುವಂತೆ ಭಾರತದಲ್ಲಿ ಐ.ಎಫ್.ಎಸ್.ಸಿ.ಗಳ ಅಭಿವೃದ್ಧಿಗೆ ಬಹು ಅಗತ್ಯವಾದ ಇಂಬು ನೀಡುತ್ತದೆ. 

ಐ.ಎಫ್.ಎಸ್.ಸಿ.ಯ ನಿಯಂತ್ರಣ ಅಗತ್ಯಗಳು ಮತ್ತು ಹಣಕಾಸು ವಲಯದಲ್ಲಿನ ಪ್ರಸಕ್ತ ನಿಯಮಾವಳಿಗಳನ್ನು ಗಣನೆಗೆ ತೆಗೆದುಕೊಂಡು ಹಣಕಾಸು ಸಚಿವಾಲಯದ (ಎಂ.ಓ.ಎಫ್.) ಹಣಕಾಸು ವ್ಯವಹಾರಗಳ ಇಲಾಖೆ (ಡಿ.ಇ.ಎ.) ಐ.ಎಫ್.ಎಸ್.ಸಿ.ಗಳಿಗೆ ಪ್ರತ್ಯೇಕ ಏಕೀಕೃತ ನಿಯಂತ್ರಕನ ಸ್ಥಾಪನೆಗಾಗಿ ಕರಡು ಮಸೂದೆಯನ್ನು ಸಿದ್ಧಪಡಿಸಿದೆ. ವಿಧೇಯಕದ ಪ್ರಮುಖ ಅಂಶಗಳು ಕೆಳಕಂಡಂತಿವೆ: 

ಪ್ರಾಧಿಕಾರದ ಆಡಳಿತ: ಈ ಪ್ರಾಧಿಕಾರದಲ್ಲಿ ಒಬ್ಬರು ಅಧ್ಯಕ್ಷರು, ಭಾರತೀಯ ರಿಜರ್ವ್ ಬ್ಯಾಂಕ್ (ಆರ್.ಬಿ.ಐ.), ಭಾರತೀಯ ಭದ್ರತೆ ವಿನಿಮಯ ಮಂಡಳಿ (ಸೆಬಿ), ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐ.ಆರ್.ಡಿ.ಎ.ಐ.) ಮತ್ತು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿ.ಎಫ್.ಆರ್.ಡಿ.ಎ)ಯಿಂದ ನಾಮಾಂಕನಗೊಂಡು ತಲಾ ಒಬ್ಬರು ಸದಸ್ಯರು, ಕೇಂದ್ರ ಸರ್ಕಾರದಿಂದ ನೇಮಕಗೊಂಡ ಇಬ್ಬರು ಸದಸ್ಯರು ಮತ್ತು ಇತರ ಇಬ್ಬರು ಪೂರ್ಣಕಾಲಿಕ ಅಥವಾ ಪೂರ್ಣಾವಧಿಯ ಅಥವಾ ಅಲ್ಪಾವಧಿಯ ಸದಸ್ಯರು. 

ಪ್ರಾಧಿಕಾರದ ಕಾರ್ಯಚಟುವಟಿಕೆ: ಈ ಪ್ರಾಧಿಕಾರವು, ಐ.ಎಫ್.ಎಸ್.ಸಿ.ಯಲ್ಲಿನ ಎಲ್ಲ ಅಂಥ ಹಣಕಾಸು ಸೇವೆಗಳು, ಹಣಕಾಸು ಉತ್ಪನ್ನಗಳು ಮತ್ತು ಎಫ್.ಐ.ಗಳನ್ನು ನಿಯಂತ್ರಿಸುತ್ತದೆ, ಇದಕ್ಕೆ ಐ.ಎಫ್.ಎಸ್.ಸಿಗಳ ಹಣಕಾಸು ವಲಯದ ನಿಯಂತ್ರಕರು ಅನುಮತಿಯನ್ನೂ ನೀಡರುತ್ತಾರೆ. ಈ ಪ್ರಾಧಿಕಾರವು ಕೇಂದ್ರ ಸರ್ಕಾರದಿಂದ ಕಾಲ ಕಾಲಕ್ಕೆ ಅಧಿಸೂಚನೆಯಾಗುವ ಇತರ ಹಣಕಾಸು ಉತ್ಪನ್ನಗಳು, ಹಣಕಾಸು ಸೇವೆಗಳು ಅಥವಾ ಎಫ್.ಐ.ಗಳನ್ನೂ ನಿಯಂತ್ರಿಸುತ್ತದೆ. ಐ.ಎಫ್.ಎಸ್.ಸಿ ಗಳು ಅನುಮತಿ ನೀಡಿರುವ ಇತರ ಹಣಕಾಸು ಉತ್ಪನ್ನಗಳು, ಹಣಕಾಸು ಸೇವೆಗಳು ಮತ್ತು ಹಣಕಾಸು ಸಂಸ್ಥೆಗಳನ್ನೂ ನಿಯಂತ್ರಿಸಲು ಕೇಂದ್ರ ಸರ್ಕಾರಕ್ಕೆಶಿಫಾರಸು ಮಾಡಲಾಗಿದೆ. 

ಪ್ರಾಧಿಕಾರದ ಅಧಿಕಾರಗಳು: ಹಣಕಾಸು ವಲಯದ ನಿಯಂತ್ರಕರುಗಳು (ಅಂದರೆ ಆರ್.ಬಿ.ಐ, ಸೆಬಿ, ಐ.ಆರ್.ಡಿ.ಎ. ಮತ್ತು ಪಿ.ಎಫ್.ಆರ್.ಡಿ.ಎ. ಇತ್ಯಾದಿ) ಐಎಫ್ಎಸ್.ಸಿ.ಯಲ್ಲಿ ಅನುಮತಿಸಲಾದ ಹಣಕಾಸಿನ ಉತ್ಪನ್ನಗಳು, ಹಣಕಾಸು ಸೇವೆಗಳು ಮತ್ತು ಎಫ್ಐಗಳನ್ನು ನಿಯಂತ್ರಿಸುವವರೆಗೆ ಆಯಾ ಕಾಯಿದೆಗಳ ಅಡಿಯಲ್ಲಿ ಚಲಾಯಿಸಬಹುದಾದ ಎಲ್ಲ ಅಧಿಕಾರಗಳನ್ನು ಐ.ಎಫ್.ಎಸ್.ಸಿ.ಗಳಲ್ಲಿನ ಪ್ರಾಧಿಕಾರ ಒಂದೇ ಚಲಾಯಿಸಬಹುದಾಗಿದೆ. 

ಪ್ರಾಧಿಕಾರದ ಪ್ರಕ್ರಿಯೆ ಮತ್ತು ಕಾರ್ಯ ವಿಧಾನಗಳು: ಪ್ರಾಧಿಕಾರವು ಪಾಲಿಸಬೇಕಾದ ಪ್ರಕ್ರಿಯೆ ಮತ್ತು ಕಾರ್ಯವಿಧಾನಗಳು ಇಂಥ ಹಣಕಾಸು ಉತ್ಪನ್ನ, ಸೇವೆ ಅಥವಾ ಸಂಸ್ಥೆಗಳಿಗೆ ಆಯಾ ಪ್ರಕರಣಗಳಿಗೆ ಸಂಬಂಧಿಸಿದಂತೆ ಭಾರತದ ಸಂಸತ್ತು ಜಾರಿ ಮಾಡಿದ ಕಾಯಿದೆಗಳ ನಿಯಮಾವಳಿಗೆ ಅನುಸಾರವಾಗಿರುತ್ತದೆ. 

ಕೇಂದ್ರ ಸರ್ಕಾರದ ಅನುದಾನ.: ಕೇಂದ್ರ ಸರ್ಕಾರ ಪ್ರಾಧಿಕಾರದ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳಲು ಸೂಕ್ತವೆಂದು ಚಿಂತಿರುವ ಪ್ರಾಧಿಕಾರದ ಅನುದಾನಕ್ಕೆ ಸಂಸತ್ತಿನಲ್ಲಿ ಸೂಕ್ತ ವಿನಿಯೋಗಕ್ಕಾಗಿ ಈ ನಿಟ್ಟಿನಲ್ಲಿ ಮಾಡಿದ ಕಾಯಿದೆಯ ರೀತ್ಯ ಕೇಂದ್ರ ಸರ್ಕಾರ ಹಣ ಒದಗಿಸುತ್ತದೆ. 

ವಿದೇಶೀ ಕರೆನ್ಸಿಗಳಲ್ಲಿನ ವಹಿವಾಟು: ಐ.ಎಫ್.ಎಸ್.ಸಿ.ಗಳಲ್ಲಿನ ಹಣಕಾಸು ಸೇವೆಗಳ ವಹಿವಾಟುಗಳನ್ನು ಕೇಂದ್ರ ಸರ್ಕಾರದೊಂದಿಗೆ ಸಮಾಲೋಚಿಸಿ ಪ್ರಾಧಿಕಾರ ನಿರ್ದಿಷ್ಟಪಡಿಸುವ ವಿದೇಶೀ ಕರೆನ್ಸಿಗಳಲ್ಲಿ ಮಾಡಲಾಗುತ್ತದೆ. 

ಐ.ಎಫ್.ಎಸ್.ಸಿ.ಗಳ ಏಕೀಕೃತ ಹಣಕಾಸು ನಿಯಂತ್ರಕರ ಸ್ಥಾಪನೆಯು ವಿಶ್ವ ದರ್ಜೆಯ ನಿಯಂತ್ರಣ ವಾತಾವರಣವನ್ನು ಮಾರುಕಟ್ಟೆಯಲ್ಲಿ ಭಾಗಿಯಾಗುವವರಿಗೆ ಸುಗಮ ವಾಣಿಜ್ಯ ನಡೆಸುವ ದೃಷ್ಟಿಕೋನದಂತೆ ಒದಗಿಸಲಾಗುತ್ತದೆ. ಇದು ಭಾರತದಲ್ಲಿನ ಐ.ಎಫ್.ಎಸ್.ಸಿ.ಗಳ ಹೆಚ್ಚಿನ ಅಭಿವೃದ್ಧಿಗೆ ಪ್ರಚೋದನೆ ಒದಗಿಸುತ್ತದೆ ಮತ್ತು ಪ್ರಸ್ತುತ ಕಡಲಾಚೆಯ ಹಣಕಾಸು ಕೇಂದ್ರಗಳು ನಡೆಸಲಾಗುತ್ತಿರುವ ಹಣಕಾಸು ಸೇವೆಗಳು ಮತ್ತು ವಹಿವಾಟುಗಳನ್ನು ಭಾರತಕ್ಕೆ ಮರಳಿ ತರಲು ಅವಕಾಶ ನೀಡುತ್ತದೆ. ಇದು ಐ.ಎಫ್.ಎಸ್.ಸಿ.ಗಳಲ್ಲಿ ನಿರ್ದಿಷ್ಟವಾಗಿ ಮತ್ತು ಭಾರತೀಯ ಹಣಕಾಸು ವಲಯದಲ್ಲಿ ಸಹ ಗಣನೀಯ ಪ್ರಮಾಣದ ಉದ್ಯೋಗ ಸೃಷ್ಟಿಸುತ್ತದೆ. 



(Release ID: 1563087) Visitor Counter : 176