ಸಂಪುಟ

ಸೈಬರ್ ಭದ್ರತೆ ವಲಯದಲ್ಲಿ ಭಾರತ ಮತ್ತು ಮೊರಾಕೊ  ನಡುವಿನ ಸಹಕಾರ ಕುರಿತ ಒಡಂಬಡಿಕೆಗೆ ಸಂಪುಟ ಅನುಮೋದನೆ

प्रविष्टि तिथि: 02 JAN 2019 6:03PM by PIB Bengaluru

ಸೈಬರ್ ಭದ್ರತೆ ವಲಯದಲ್ಲಿ ಭಾರತ ಮತ್ತು ಮೊರಾಕೊ  ನಡುವಿನ ಸಹಕಾರ ಕುರಿತ ಒಡಂಬಡಿಕೆಗೆ ಸಂಪುಟ ಅನುಮೋದನೆ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆ, 

ಸೈಬರ್ ಭದ್ರತೆ ವಲಯದಲ್ಲಿ ಭಾರತ ಮತ್ತು ಮೊರಾಕೊ  ನಡುವಿನ ಸಹಕಾರ ಸಾಧಿಸುವ ಕುರಿತ ಒಡಂಬಡಿಕೆಗೆ ಅನುಮೋದನೆ ನೀಡಿತು. 

ಈ ಒಪ್ಪಂದಕ್ಕೆ 2018ರ ಸೆಪ್ಟೆಂಬರ್ 25ರಂದು ಸಹಿ ಹಾಕಲಾಗಿತ್ತು.

ಈ ಒಪ್ಪಂದದಡಿ ಭಾರತ ಮತ್ತು ಮೊರಾಕೊ ನಡುವೆ ಭದ್ರತೆಗೆ ಸಂಬಂಧಿಸಿದ ಘಟನೆಗಳ ನಿಯಂತ್ರಣ, ನಿರ್ಣಯ ಕೈಗೊಳ್ಳುವುದು, ಪತ್ತೆ ಕಾರ್ಯದ ಅನುಭವ ಮತ್ತು ಜ್ಞಾನ ವಿನಿಮಯದಲ್ಲಿ ಪರಸ್ಪರ ನಿಕಟ ಸಹಕಾರ ಉತ್ತೇಜಿಸುವ ಉದ್ದೇಶವಿದೆ. 

ಈ ಒಪ್ಪಂದದ ಅನುಷ್ಠಾನದಿಂದಾಗಿ ಸೈಬರ್ ಭದ್ರತಾ ವಲಯದಲ್ಲಿ ಪರಸ್ಪರ ಪ್ರಯೋಜನ ಪಡೆದುಕೊಳ್ಳುವುದಲ್ಲದೆ,  ಮೊರಾಕೊದ ಜೊತೆ ಸೇರಿ, ಸೈಬರ್ ಭದ್ರತಾ ವಲಯದಲ್ಲಿ ಸಾಂಸ್ಥಿಕ ಮತ್ತು ಸಾಮರ್ಥ್ಯ ವೃದ್ಧಿಗೂ ಅವಕಾಶವಿದೆ.

***************


(रिलीज़ आईडी: 1558321) आगंतुक पटल : 119
इस विज्ञप्ति को इन भाषाओं में पढ़ें: Malayalam , English , Urdu , Marathi , Assamese , Bengali , Gujarati , Tamil , Telugu