ಸಂಪುಟ
ಅರುಣಾಚಲ ಪ್ರದೇಶದ ಪರಿಶಿಷ್ಟ ಪಂಗಡದ ಮೀಸಲು ಪಟ್ಟಿಯಲ್ಲಿ ಪರಿಷ್ಕರಣೆಗಾಗಿ ‘ಸಂವಿಧಾನದ (ಪರಿಶಿಷ್ಟ ಪಂಗಡಗಳ) ಆದೇಶ (ತಿದ್ದುಪಡಿ) ವಿಧೇಯಕ 2018’ಕ್ಕೆ ಸಂಪುಟದ ಅನುಮೋದನೆ
प्रविष्टि तिथि:
02 JAN 2019 5:45PM by PIB Bengaluru
ಅರುಣಾಚಲ ಪ್ರದೇಶದ ಪರಿಶಿಷ್ಟ ಪಂಗಡದ ಮೀಸಲು ಪಟ್ಟಿಯಲ್ಲಿ ಪರಿಷ್ಕರಣೆಗಾಗಿ ‘ಸಂವಿಧಾನದ (ಪರಿಶಿಷ್ಟ ಪಂಗಡಗಳ) ಆದೇಶ (ತಿದ್ದುಪಡಿ) ವಿಧೇಯಕ 2018’ಕ್ಕೆ ಸಂಪುಟದ ಅನುಮೋದನೆ
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಅರುಣಾಚಲ ಪ್ರದೇಶದ ಪರಿಶಿಷ್ಟ ಪಂಗಡಗಳ (ಎಸ್.ಟಿ.ಗಳು) ಪಟ್ಟಿಯಲ್ಲಿ ಮಾರ್ಪಾಡು ಮಾಡುವ ಸಲುವಾಗಿ ಸಂವಿಧಾನದ (ಪರಿಶಿಷ್ಟ ಪಂಗಡಗಳ) ಆದೇಶ 1950ಕ್ಕೆ ಕೆಲವೊಂದು ತಿದ್ದುಪಡಿಗಳನ್ನು ತರಲು ಸಂವಿಧಾನದ (ಪರಿಶಿಷ್ಟ ಪಂಗಡಗಳ) ಆದೇಶ (ತಿದ್ದುಪಡಿ) ಮಸೂದೆ 2018 ಹೆಸರಿನ ವಿಧೇಯಕವನ್ನು ಸಂಸತ್ತಿನಲ್ಲಿ ಮಂಡಿಸಲು ತನ್ನ ಅನುಮೋದನೆ ನೀಡಿದೆ.
ಅರುಣಾಚಲ ಪ್ರದೇಶದ ಪರಿಶಿಷ್ಟ ಪಂಗಡಗಳ ಪಟ್ಟಿಯಲ್ಲಿ ಈ ಕೆಳಗಿನ ಬದಲಾವಣೆಗಳನ್ನು ಮಾಡಲಾಗುವುದು:
i. ಕ್ರಮ ಸಂಖ್ಯೆ 16ರಲ್ಲಿರುವ 'ಆದಿ'ಗೆ ಸಮಾನವಾಗಿರುವುದರಿಂದ ಕ್ರಮ ಸಂಖ್ಯೆ 1ರಲ್ಲಿರುವ 'ಅಬೋರ್' ಅನ್ನು ತೆಗೆದು ಹಾಕಲು.
ii. ಕ್ರಮ ಸಂಖ್ಯೆ 6ರಲ್ಲಿರುವ 'ಖಂಪ್ತಿ' ಬದಲಾಗಿ 'ತಾಯ್ ಖಮ್ತಿ' ಬದಲಾಯಿಸಲು
iii. ಕ್ರಮ ಸಂಖ್ಯೆ 8ರಲ್ಲಿ 'ಮಿಷಿಮಿ-ಕಮಾನ್' (ಮಿಜು ಮಿಶ್ಮಿ), ಇದು (ಮಿಶ್ಮಿ) ಮತ್ತು ತರಾನ್ (ಡಿಗರು ಮಿಶ್ಮಿ) ಸೇರಿಸಲು.
iv. ಕ್ರಮ ಸಂಖ್ಯೆ 9ರಲ್ಲಿ 'ಮೊಂಬಾ' ಬದಲಾಗಿ ಮೋನ್ಪಾ, ಮೆಂಬಾ, ಸರ್ತಂಗ್ (ಮಿಜಿ) ಸೇರ್ಪಡೆ ಮಾಡಲು
v. ಅರುಣಾಚಲ ಪ್ರದೇಶದ ಪರಿಶಿಷ್ಟ ಪಂಗಡಗಳ ಪಟ್ಟಿಯ ಕ್ರಮ ಸಂಖ್ಯೆ 10ರಲ್ಲಿ 'ಯಾವುದೇ ನಾಗಾ ಬುಡಕಟ್ಟುಗಳು' ಎಂಬುದರ ಬದಲಾಗಿ 'ನೋಕ್ಟೆ', 'ತಂಗ್ಸಾ', 'ತುತ್ಸಾ', 'ವಾಂಚೋ' ಸೇರಿಸಲು.
ಪ್ರಸ್ತಾಪಿತ ತಿದ್ದುಪಡಿಗಳಿಗೆ ತಾರ್ಕಿಕ ವಿವರಣೆ:
i. ಅಬೋರ್ ತೆಗೆದು ಹಾಕುವುದು – ದ್ವಿರುಕ್ತಿಗಳನ್ನು ತೆಗೆಯಲು
ii. ಖಂಪ್ತಿಯ ಬದಲಾವಣೆ – ಖಂಪ್ತಿ ಎಂಬ ಯಾವುದೇ ಬುಡಕಟ್ಟು ಇಲ್ಲ.
iii. ಮಿಶ್ಮಿ – ಕಮಾನ್, ಇದು ಮತ್ತು ತರೋನ್ ಸೇರ್ಪಡೆ – ಪ್ರಸ್ತುತ ಇರುವ ಉಲ್ಲೇಖ ಕೇವಲ ಮಿಶ್ಮಿ. ಅಂಥ ಯಾವುದೇ ಸಮುದಾಯ ಇಲ್ಲ ಎಂದು ವರದಿಯಾಗಿದೆ.
iv. ಮೋನ್ಪಾ, ಮೆಂಬಾ, ಸರ್ತಂಗ್, ವಾಂಚೋ ಸೇರ್ಪಡೆ – ಹಾಲಿ ಇರುವ ಉಲ್ಲೇಖ ಯಾವುದೇ ನಾಗಾ ಬುಡಕಟ್ಟು. ವರದಿಗಳ ರೀತ್ಯ ರಾಜ್ಯದಲ್ಲಿ ನಾಗಾ ಬುಡಕಟ್ಟು ಮಾತ್ರವೇ ಇದೆ.
v. ನೋಕ್ಟೆ, ತಂಗ್ಸಾ, ತುತ್ಸಾ, ವಾಂಚೋ ಸೇರ್ಪಡೆ - ವರದಿಗಳ ರೀತ್ಯ ರಾಜ್ಯದಲ್ಲಿ ನಾಗಾ ಬುಡಕಟ್ಟು ಮಾತ್ರವೇ ಇದೆ.
ಈ ಮಸೂದೆ ಕಾಯಿದೆಯಾದ ತರುವಾಯ, ಅರುಣಾಚಲ ಪ್ರದೇಶದ ಪರಿಶಿಷ್ಟ ಪಂಗಡದ ಪರಿಷ್ಕೃತ ಪಟ್ಟಿಯಲ್ಲಿ ಹೊಸದಾಗಿ ಸೇರಿದ ಸಮುದಾಯದ ಸದಸ್ಯರು ಸಹ ಸರ್ಕಾರದ ಹಾಲಿ ಯೋಜನೆಗಳ ಅಡಿಯಲ್ಲಿ ಎಸ್.ಟಿ.ಗಳಿಗೆ ಮೀಸಲಾದ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿರುತ್ತದೆ. ಈ ರೀತಿಯ ಪ್ರಮುಖ ಕೆಲವು ಯೋಜನೆಗಳೆಂದರೆ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ, ರಾಷ್ಟ್ರೀಯ ಸಾಗರೋತ್ತರ ವಿದ್ಯಾರ್ಥಿ ವೇತನ, ರಾಷ್ಟ್ರೀಯ ಫೆಲೋಶಿಪ್, ಉನ್ನತ ದರ್ಜೆಯ ಶಿಕ್ಷಣ, ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮದಿಂದ ರಿಯಾಯಿತಿ ಸಾಲಗಳು, ಎಸ್.ಟಿ. ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿ ನಿಲಯಗಳು ಇತ್ಯಾದಿಗಳು. ಈ ಮೇಲೆ ತಿಳಿಸಲಾಗಿರುವುದರ ಜೊತೆಗೆ, ಅವರು ಸೇವೆಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿನ ಪ್ರವೇಶಕ್ಕೆ ಸರ್ಕಾರದ ನೀತಿಗಳನ್ವಯ ಮೀಸಲು ಸೌಲಭ್ಯಕ್ಕೆ ಅರ್ಹರಾಗಿರುತ್ತಾರೆ.
(रिलीज़ आईडी: 1558319)
आगंतुक पटल : 141