57th International Film Festival of India 2026
20 – 28 Nov 2026

‘ಪಾರೋ: ದಿ ಅನ್‌ ಟೋಲ್ಡ್‌ ಸ್ಟೋರಿ ಆಫ್‌ ಬ್ರೈಡ್‌ ಸ್ಲೇವರಿ’ ವಧು ವ್ಯಾಪಾರದ ಜಾಲದಲ್ಲಿ ಸಿಲುಕಿದ ಮಹಿಳೆಯರ ಸಂಕಷ್ಟವನ್ನು ಅನ್ವೇಷಿಸುತ್ತದೆ


ನಟಿ, ನಿರ್ಮಾಪಕಿ ಹಾಗೂ ಚಿತ್ರಕಥೆಗಾರ್ತಿ ತೃಪ್ತಿ ಭೋಯಿರ್‌ ಅವರು, ಶೋಷಣೆ, ಲಿಂಗ ಅಸಮಾನತೆ ಮತ್ತು ಮಹಿಳಾ ಹಕ್ಕುಗಳ ಕುರಿತಾದ ಪ್ರಭಾವಶಾಲಿ ಕಥೆಯನ್ನು 57ನೇ ಐಎಫ್‌ಎಫ್‌ಐ ವೇದಿಕೆಯ ಮುಂದಿ

ಪ್ರಕಟಣಾ ದಿನಾಂಕ: 27 NOV 2026 4:15PMby PIB Bengaluruಪ್ರಕಟಣೆ ಐ.ಡಿ.: 2342833Views: 22

ಪಾರೋ: ದಿ ಅನ್‌  ಟೋಲ್ಡ್‌ ಸ್ಟೋರಿ ಆಫ್‌ ಬ್ರೈಡ್‌ ಸ್ಲೇವರಿ, 57ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐಎಫ್‌ಎಫ್‌ಐ) ನ ಭಾರತೀಯ ಪ್ಯಾನೋರಾಮಾ ವಿಭಾಗದಲ್ಲಿ ಪ್ರಕಟವಾಗಿದ್ದು, ವಿಶೇಷವಾಗಿ ಹರಿಯಾಣದ ಮೇವಾಟ್‌ನಲ್ಲಿ ಮಹಿಳೆಯರನ್ನು ವಧುಗಳಾಗಿ ಖರೀದಿಸುವ ಮತ್ತು ಮಾರಾಟ ಮಾಡುವ ಭಯಾನಕ ಮತ್ತು ಬಹುಮಟ್ಟಿಗೆ ಕಡಿಮೆ ವರದಿಯಾಗಿರುವ ಅಭ್ಯಾಸವನ್ನು ಬೆಳಕಿಗೆ ತರುತ್ತದೆ. ‘ಪಾರೋ’ ಎಂಬ ಪದವನ್ನು ಈ ಪ್ರದೇಶದಲ್ಲಿವಿವಾಹಕ್ಕೆ ಖರೀದಿಸುವ ಅಥವಾ ಮಾರಾಟ ಮಾಡುವ ಮಹಿಳೆಯರನ್ನು ಸೂಚಿಸಲು ಬಳಸಲಾಗುತ್ತದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಟಿ ಮತ್ತು ನಿರ್ಮಾಪಕಿ ತೃಪ್ತಿ ಭೋಯರ್‌ ಅವರು, ಈ ಚಿತ್ರವನ್ನು ಮಾಡಲು 4.5 ವರ್ಷಗಳ ಸಂಶೋಧನೆ ನಡೆಸಿದ್ದಾಗಿ ತಿಳಿಸಿದರು. ಇದು ಅವರ ಎರಡನೇ ಆಸ್ಕರ್‌ ಪಟ್ಟಿ ಚಿತ್ರವಾಗಿದೆ. ಈ ಚಿತ್ರದಲ್ಲಿ ಅಸಾಮಾನ್ಯ ಸೃಜನಶೀಲ ಪ್ರಯಾಣದಲ್ಲಿ,  ತೃಪ್ತಿ  ಭೋಯರ್‌ ನಿರ್ಮಾಪಕಿ, ಚಿತ್ರಕಥೆ ಬರಹ ಮತ್ತು ನಾಯಕಿಯ ಮೂರು ಜವಾಬ್ದಾರಿಗಳನ್ನು ಹೊತ್ತಿದ್ದಾರೆ.

ಚಿತ್ರ ನಿರ್ಮಾಣಕ್ಕೆ ಕಾರಣವಾದ ಸವಾಲಿನ ಸಂಶೋಧನೆ

ಈ ಚಿತ್ರದ ಕಲ್ಪನೆ ತೃಪ್ತಿ ಭೋಯರ್‌ ಅವರ ಭಾರತದಲ್ಲಿ ವಧು ದಾಸ್ಯದ ಅಭ್ಯಾಸವನ್ನು ಬಿಂಬಿಸುವ ಡಾಕ್ಯುಮೆಂಟರಿಗಳು ಮತ್ತು ಮಾಧ್ಯಮ ವರದಿಗಳಿಂದ ಹುಟ್ಟಿಕೊಂಡಿತು. ಮಹಿಳೆಯರ ಸಮಸ್ಯೆಗಳು ಮತ್ತು ಹಕ್ಕುಗಳ ಮೇಲೆ ಕೇಂದ್ರೀಕೃತ ಚಿತ್ರಗಳಿಗಾಗಿ ಪ್ರಸಿದ್ಧರಾದ ಅವರು, ಎದುರಿಸಿದ ವಾಸ್ತವಿಕತೆಗಳಿಂದ ಆಳವಾಗಿ ಕಳವಳಗೊಂಡಿದ್ದರು.

ಒಂದು ಎನ್‌ಜಿಒ ಸಹಾಯದಿಂದ, ಭೋಯರ್‌ ಮತ್ತು ಅವರ ತಾಯಿ ಪತ್ರಕರ್ತರ ವೇಷದಲ್ಲಿ ಹಳ್ಳಿಗಳಿಗೆ ಭೇಟಿ ನೀಡಿದರು. ಅವರು ಮಹಾರಾಷ್ಟ್ರ, ಆಂಧ್ರಪ್ರದೇಶ, ಒಡಿಶಾ, ಬಿಹಾರ, ಉತ್ತರ ಪ್ರದೇಶ, ರಾಜಸ್ಥಾನ, ಗುಜರಾತ್‌ ಮತ್ತು ದೆಹಲಿ ಮೂಲದ ಸುಮಾರು 62-63 ಮಹಿಳೆಯರನ್ನು ಭೇಟಿಯಾದರು.

ವಧು ವ್ಯಾಪಾರವು ಲಿಂಗ ಅಸಮಾನತೆ ಮತ್ತು ದಾರಿದ್ರ್ಯದಲ್ಲಿ ಬೇರುಬಿಟ್ಟಿದೆ ಎಂದು ಭೋಯರ್‌ ಹೇಳಿದರು. ಇದು ಹರಿಯಾಣಕ್ಕೆ ಮಾತ್ರ ಸೀಮಿತವಲ್ಲ, ಬದಲಾಗಿ ವ್ಯಾಪಕ ರಾಷ್ಟ್ರೀಯ ಚಿಂತನೆಯಾಗಿದ್ದು, ಹಲವಾರು ರಾಜ್ಯಗಳ ಮಹಿಳೆಯರು ಮತ್ತು ಹುಡುಗಿಯರು ಈ ಅಭ್ಯಾಸದ ಬಲಿಯಾಗಿದ್ದಾರೆ.

ಸಂಶೋಧನೆಯ ವೇಳೆ ಬಹಿರಂಗವಾದ ಅತ್ಯಂತ ಕಳವಳಕಾರಿ ವರದಿಗಳಲ್ಲಿ ಒಂದಾದದ್ದು ಸುಮಾರು 11-13 ವರ್ಷದ ಹುಡುಗಿಯೊಬ್ಬಳದು. ಆಕೆ ಅಲ್ಪ ಮೊತ್ತಕ್ಕೆ ಮಾರಾಟಗೊಂಡಿದ್ದಾಳೆ ಎಂದು ವರದಿಯಾಗಿದೆ. ಈ ಯುವತಿಯ ಕಥೆ ಚಿತ್ರದ ನಾಯಕಿಯ ಪ್ರೇರಣೆಯಾಯಿತು. ಈ ಪಾತ್ರವನ್ನು ತೃಪ್ತಿ ಭೋಯರ್‌ ಸ್ವತಃ ಅಭಿನಯಿಸಿದ್ದಾರೆ. ಈ ಪಾತ್ರದ ಮೂಲಕ, ಚಿತ್ರಕಾರರು ಅನೇಕ ಮಹಿಳೆಯರು ಅನುಭವಿಸುವ ನೋವು, ಅಸಹಾಯತೆ ಮತ್ತು ಕ್ರೂರ ಶೋಷಣೆಯನ್ನು ಪರದೆಗೆ ತರಲು ಪ್ರಯತ್ನಿಸುತ್ತಾರೆ. ಅವರ ಕಥೆಗಳು ಬಹುಶಃ ಕೇಳಿಸದಿರುತ್ತವೆ.

ಚಿತ್ರಮಂದಿರದ ಹೊರಗೆ ಹೋರಾಟವನ್ನು ತೆಗೆದುಕೊಂಡು ಹೋಗುವುದು

ಚಿತ್ರದ ಮಹತ್ವವು ಕಥೆ ಹೇಳುವಿಕೆಯನ್ನು ಮೀರಿ ವಿಸ್ತಾರವಾಗಿದೆ. ಎನ್‌ಜಿಒ ಶೆಲ್ಟರ್‌ಫೌಂಡೇಶನ್‌ ಸುಮಾರು 2,000 ಮಹಿಳೆಯರ ಬಗ್ಗೆ ದತ್ತಾಂಶ ಸಂಗ್ರಹಿಸಿದೆ. ಅವರು ವಧು ದಾಸ್ಯದ ಬಲಿಯಾಗಿದ್ದಾರೆ ಎಂದು ತೃಪ್ತಿ ಹೇಳಿದರು. ಈ ದತ್ತಾಂಶವನ್ನು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ವಿಜಯ ರಹತ್ಕರ್‌ಅವರಿಗೆ ಸುಮಾರು ಒಂದು ವರ್ಷ ಮೂರು ತಿಂಗಳುಗಳ ಹಿಂದೆ ಸಲ್ಲಿಸಲಾಗಿದೆ. ನಂತರ ಕೇಂದ್ರ ಸರ್ಕಾರದಿಂದ ಒಂದು ವಾಸ್ತವ ಸಂಗ್ರಹಣಾ ಸಮಿತಿಯನ್ನು ರಚಿಸಲಾಗಿದೆ. ‘‘ಈ ಸಮಸ್ಯೆಯನ್ನು ಪರಿಹರಿಸಲು ಕೈಗೊಂಡ ಸರ್ಕಾರಕ್ಕೆ ನಾನು ಗೌರವ ಸಲ್ಲಿಸುತ್ತೇನೆ. ಇದು ಈ ಚಿತ್ರವನ್ನು ಮಾಡಲು ಮತ್ತೊಂದು ಕಾರಣ,’’ ಎಂದು ಅವರು ಹೇಳಿದರು.

ಮಹಿಳೆಯರ ವ್ಯಾಪಾರ: ಜಾಗತಿಕ ಸಮಸ್ಯೆ

ಭೋಯರ್‌ ಅವರು ಕಾಣೆಯಾಗಿರುವ ಹುಡುಗಿಯರು ಮತ್ತು ಲೈಂಗಿಕ ಹಿಂಸಾಚಾರವು ವಿಶ್ವದಾದ್ಯಾಂತ ಚಿಂತೆಗಳ ವಿಷಯವಾಗಿದೆ ಎಂದು ಸೂಚಿಸಿದರು. ಮಾನವ ವ್ಯಾಪಾರ ಮತ್ತು ವೇಶ್ಯಾವೃತ್ತಿಯ ಬಗ್ಗೆ ಜಾಗೃತಿ ಕಳೆದ 15 - 20 ವರ್ಷಗಳಲ್ಲಿಬಹಳಷ್ಟು ಹೆಚ್ಚಾಗಿದ್ದರೂ, ವಧುಗಳ ಖರೀದಿ ಮತ್ತು ಮಾರಾಟ ಮತ್ತು ವಧು ದಾಸ್ಯದ ಅಭ್ಯಾಸಕ್ಕೆ ಇನ್ನೂ ಕಡಿಮೆ ಗಮನ ನೀಡಲಾಗುತ್ತಿದೆ. ವಿಶ್ವದಾದ್ಯಾಂತ ಚಲನಚಿತ್ರೋತ್ಸವಗಳು ಮತ್ತು ಸಂಸ್ಥೆಗಳಲ್ಲಿ ಪ್ರದರ್ಶನಗಳಲ್ಲಿಅವರ ಸಂವಹನಗಳು ಈ ವಿಷಯಕ್ಕೆ ಹೆಚ್ಚಿನ ಅಂತಾರಾಷ್ಟ್ರೀಯ ಜಾಗೃತಿ ಮತ್ತು ಚರ್ಚೆ ಅಗತ್ಯವಿದೆ ಎಂಬ ನಂಬಿಕೆಯನ್ನು ಬಲಪಡಿಸಿವೆ.

‘ಪಾರೋ: ದಿ ಅನ್‌ ಟೋಲ್ಡ್‌ ಸ್ಟೋರಿ ಆಫ್‌ ಬ್ರೈಡ್‌ ಸ್ಲೇವರಿ’ ಮೂಲಕ, ತೃಪ್ತಿ ಭೋಯರ್‌ ಗಂಭೀರವಾಗಿ ಕಳವಳಗೊಳಿಸುವ ಸಾಮಾಜಿಕ ಸಮಸ್ಯೆಯನ್ನು ಅಂಚುಗಳಿಂದ ಮುಖ್ಯ ಪ್ರವಾಹಕ್ಕೆ ತೆಗೆದುಕೊಂಡು ಲಿಂಗ ಅಸಮಾನತೆ, ವರನ ದಾಸ್ಯತೆ ಮತ್ತು ಮಹಿಳೆಯರ ಗೌರವ ಮತ್ತು ಹಕ್ಕುಗಳ ಬಗ್ಗೆ ಸಂವಾದಗಳನ್ನು ಪ್ರಾರಂಭಿಸಲು ಆಶಿಸುತ್ತಿದ್ದಾರೆ.

ಪತ್ರಿಕಾಗೋಷ್ಠಿಯನ್ನು ಶುಭಂಕರ್‌ ವಶಿಷ್ಠ ನಿರ್ವಹಿಸಿದರು.

Read IFFILOID here: https://www.pib.gov.in/iffi/57/iffiLoid.aspx?yr=2026&lang=1&reg=48

 

*****


Great films resonate through passionate voices. Share your love for cinema with #IFFI2026 and #StoriesWithoutBorders. Tag us @pibindia on Instagram and @PIB_India on X, and we will help amplify your festival moments!

For accredited journalists, critics, bloggers, and vloggers seeking 1-on-1 interviews with filmmakers and festival juries, write to us at:
iffi.mediadesk@pib.gov.in with the subject line: Take One with PIB.


Official Release ID: 2342833
•
Media Centre: Goa
•
Festival Dates: Nov 20 – 28, 2026