57th International Film Festival of India 2026
20 – 28 Nov 2026

ಕಥೆಯ ಮಾನವೀಯ ಪಾತ್ರ ಮತ್ತು ಗಾಂಧಿವಾದಿ ಆದರ್ಶಗಳೊಂದಿಗೆ ಹೊಂದಾಣಿಕೆಗಳು ಮೌಲ್ಯಮಾಪನಕ್ಕಾಗಿ ಪ್ರಮುಖ ಪರಿಗಣನೆಯಾಗಿದೆ: ಐ.ಸಿ.ಎಫ್.ಟಿ. - ಯುನೆಸ್ಕೊ ಗಾಂಧಿ ಪದಕ ತೀರ್ಪುಗಾರರ ಸದಸ್ಯರಾದ ಶ್ರೀ ಮನೌಜ್ ಕದಾಂಹ್

ಪ್ರಕಟಣಾ ದಿನಾಂಕ: 26 NOV 2026 7:50PMby PIB Bengaluruಪ್ರಕಟಣೆ ಐ.ಡಿ.: 2342374Views: 13

ಶಾಂತಿ, ಸಹಿಷ್ಣುತೆ, ಸಹಾನುಭೂತಿ, ಸಾಮಾಜಿಕ ನ್ಯಾಯ ಮತ್ತು ಅಂತರಸಾಂಸ್ಕೃತಿಕ ಸಂವಾದದ ವಿಷಯಗಳನ್ನು ಅನ್ವೇಷಿಸುವ ಹತ್ತು ಕಾಲ್ಪನಿಕ ಚಲನಚಿತ್ರಗಳು 57ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (ಐ.ಎಫ್.ಎಫ್.ಐ.) ಪ್ರತಿಷ್ಠಿತ ಐ.ಸಿ.ಎಫ್.ಟಿ. - ಯುನೆಸ್ಕೊ ಗಾಂಧಿ  ಪದಕಕ್ಕಾಗಿ ಸ್ಪರ್ಧಿಸುತ್ತಿವೆ. ಐ.ಸಿ.ಎಫ್.ಟಿ. - ಯುನೆಸ್ಕೊ ಗಾಂಧಿ  ಪದಕ ತೀರ್ಪುಗಾರರ ಸದಸ್ಯರಾದ ಶ್ರೀ ಮನೋಜ್ ಕದಾಂಹ್ ಮತ್ತು ಐ.ಎಫ್.ಎಫ್.ಐ. ಸೃಜನಾತ್ಮಕ ನಿರ್ದೇಶಕರಾದ ಶ್ರೀ ಪಂಕಜ್ ಸಕ್ಸೇನಾ ಅವರು ಉತ್ಸವದ ಭಾಗವಾಗಿ ಪತ್ರಿಕಾ ಮಾಹಿತಿ ಬ್ಯೂರೋ (ಪಿಐಬಿ) ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮಗಳೊಂದಿಗೆ ಈ ನಿಟ್ಟಿನಲ್ಲಿ ಸಂವಾದ ನಡೆಸಿದರು.

ಸಂವಾದದಲ್ಲಿ ಮಾತನಾಡಿದ ಶ್ರೀ ಮನೋಜ್ ಕದಾಂಹ್ ಅವರು, ಅರ್ಥಪೂರ್ಣ ವಿಚಾರಗಳನ್ನು ಸಂವಹನ ಮಾಡಲು ಮತ್ತು ಶಾಂತಿಯ ಸಂಸ್ಕೃತಿಯನ್ನು ಉತ್ತೇಜಿಸಲು ಆಯ್ದ ಚಲನಚಿತ್ರಗಳು ಸಿನಿಮಾವನ್ನು ಮಾಧ್ಯಮವಾಗಿ ಬಳಸುವ ಹಂಚಿಕೆಯ ಬದ್ಧತೆಯನ್ನು ವಿವರಿಸಿದರು.

ಚಲನಚಿತ್ರಗಳನ್ನು ಮೌಲ್ಯಮಾಪನ ಮಾಡುವಲ್ಲಿ ತೀರ್ಪುಗಾರರ ವಿಧಾನವನ್ನು ವಿವರಿಸುತ್ತಾ, ಶ್ರೀ ಮನೋಜ್ ಕದಾಂಹ್ ಅವರು, ಕಥೆಯ ಮಾನವೀಯ ಪಾತ್ರ ಮತ್ತು ಗಾಂಧಿವಾದಿ ಆದರ್ಶಗಳೊಂದಿಗೆ ಅದರ ಹೊಂದಾಣಿಕೆ, ವಿಶೇಷವಾಗಿ ಅಹಿಂಸೆ ಮತ್ತು ಸಿನೆಮಾ ಮೂಲಕ ಶಾಂತಿಯನ್ನು ಉತ್ತೇಜಿಸುವುದು ಅತ್ಯಂತ ಮುಖ್ಯವಾದ ಪರಿಗಣನೆಯಾಗಿದೆ ಎಂದು ಹೇಳಿದರು. ಚಲನಚಿತ್ರದ ಸೌಂದರ್ಯ ಮತ್ತು ತಾಂತ್ರಿಕ ಗುಣಗಳು, ಜೊತೆಗೆ ಚಲನಚಿತ್ರ ನಿರ್ಮಾಪಕರು ಉದ್ದೇಶಿತ ಸಂದೇಶವನ್ನು ಸಂವಹನ ಮಾಡುವ ಪ್ರಾಮಾಣಿಕತೆ ಮತ್ತು ದೃಢನಿಶ್ಚಯವು ಸಹ ಪ್ರಮುಖ ಪರಿಗಣನೆಗಳಾಗಿವೆ ಎಂದು ಅವರು ಹೇಳಿದರು.

ಈ ವರ್ಷದ ಐ.ಎಫ್.ಎಫ್.ಐ. ಆಶಯ, 'ಸ್ಟೋರೀಸ್ ಬಿಯಾಂಡ್ ಬಾರ್ಡರ್ಸ್' ಅನ್ನು ಉಲ್ಲೇಖಿಸಿ, ಆಯ್ದ ಚಲನಚಿತ್ರಗಳು ಪ್ರಪಂಚದ ವಿವಿಧ ಭಾಗಗಳಲ್ಲಿ ವೀಕ್ಷಕರನ್ನು ಪರಿಚಯವಿಲ್ಲದ ಸಂಸ್ಕೃತಿಗಳು ಮತ್ತು ದೃಷ್ಟಿಕೋನಗಳ ಬಗ್ಗೆ ಒಳನೋಟಗಳನ್ನು ನೀಡಿವೆ ಎಂದು ಅವರು ಗಮನಿಸಿದರು. "ಪ್ರತಿಯೊಂದು ಚಲನಚಿತ್ರವು ತನ್ನದೇ ಆದ ಸಾಮರ್ಥ್ಯ ಮತ್ತು ಸೌಂದರ್ಯದ ಮೌಲ್ಯಗಳನ್ನು ಹೊಂದಿದೆ. ಇದು ಆ ದೇಶದ ಸಾಮಾಜಿಕ-ಆರ್ಥಿಕ ಮತ್ತು ಸಾಂಸ್ಕೃತಿಕ ಅಂಶಗಳನ್ನು ಪ್ರತಿಬಿಂಬಿಸುತ್ತದೆ. ಇಡೀ ಪ್ರಪಂಚವನ್ನು ಪ್ರಯಾಣಿಸುವ ಚಲನಚಿತ್ರಗಳು ತಮ್ಮ ಸಂಸ್ಕೃತಿಯನ್ನು ತಿಳಿದುಕೊಳ್ಳಲು ತೀರ್ಪುಗಾರರು ತಮ್ಮೊಂದಿಗೆ ಪ್ರಯಾಣಿಸುವಂತೆ ಮಾಡುತ್ತಿವೆ. ಅದು ನಿಮ್ಮನ್ನು ಜಗತ್ತಿಗೆ ಪರಿಚಯಿಸುವ ಸಿನೆಮಾದ ಶಕ್ತಿ" ಎಂದು ಅವರು ಹೇಳಿದರು.

ಸ್ಪರ್ಧೆಯಲ್ಲಿರುವ ಕೆಲವು ಚಲನಚಿತ್ರಗಳನ್ನು ಉಲ್ಲೇಖ ಮಾಡಿದ ಶ್ರೀ ಮನೋಜ್ ಕದಾಂಹ್ ಅವರು, ಸ್ಟ್ರಾಬೆರಿಗಳನ್ನು ಮಹಿಳೆಯರ ಮೇಲಿನ ಅನ್ಯಾಯದ ವಿರುದ್ಧದ ಹೋರಾಟದ ಚಿತ್ರಣ ಮತ್ತು ಮಹಿಳೆಯರ ಶಕ್ತಿಯ ದೃಢೀಕರಣವೆಂದು ಉಲ್ಲೇಖಿಸಿದರು. ಔಷಧಿಗಳ ಪೇಟೆಂಟ್ ಮತ್ತು ಆರೋಗ್ಯ ಸೇವೆಯ ಪ್ರವೇಶದ ಬಗ್ಗೆ ಕಳವಳ ವ್ಯಕ್ತಪಡಿಸುವ 'ದಿ ಫಾಲ್ ಆಫ್ ದಿ ಕ್ವೀನ್' ಮತ್ತು ಯುವ ಪೀಳಿಗೆಗೆ ಪ್ರಮುಖ ಸಂದೇಶವನ್ನು ಹೊಂದಿರುವ 'ಸ್ಕ್ರೋಲ್' ಬಗ್ಗೆಯೂ ಅವರು ಗಮನಸೆಳೆದರು. ಹಲವಾರು ಚಲನಚಿತ್ರಗಳು ಸಾಮಾಜಿಕ ಸಮಸ್ಯೆಗಳನ್ನು ಚಿತ್ರಿಸುವುದನ್ನು ಮೀರಿ, ಕಾರ್ಯಸಾಧ್ಯ ಪರಿಹಾರಗಳ ಬಗ್ಗೆ ಯೋಚಿಸಲು ಪ್ರೇಕ್ಷಕರನ್ನು ಪ್ರೋತ್ಸಾಹಿಸುತ್ತವೆ ಎಂದು ಅವರು ಗಮನಿಸಿದರು. ಪ್ರೇಕ್ಷಕರ ಪ್ರತಿಕ್ರಿಯೆಗಳು ಮಾತ್ರ ಚಿತ್ರದ ಅರ್ಹತೆಯನ್ನು ನಿರ್ಧರಿಸಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಐ.ಎಫ್.ಎಫ್.ಐ.ನ ಕಲಾತ್ಮಕ ನಿರ್ದೇಶಕರಾದ ಪಂಕಜ್ ಸಕ್ಸೇನಾ ಅವರು, ಐಸಿಎಫ್‌ಟಿ-ಯುನೆಸ್ಕೋ ಆದೇಶವು ಸಹಿಷ್ಣುತೆ, ಶಾಂತಿ, ತಿಳುವಳಿಕೆ ಮತ್ತು ಅಂತರಸಾಂಸ್ಕೃತಿಕ ವಿನಿಮಯವನ್ನು ಉತ್ತೇಜಿಸುವ ಚಲನಚಿತ್ರಗಳನ್ನು ಆಯ್ಕೆ ಮಾಡಲು ಸ್ಪಷ್ಟ ಚೌಕಟ್ಟನ್ನು ಒದಗಿಸಿದೆ ಎಂದು ಹೇಳಿದರು. ಸಮಾಜವನ್ನು ರೂಪಿಸುವಲ್ಲಿ ಸಿನೆಮಾದ ಜವಾಬ್ದಾರಿಯನ್ನು ಅವರು ಎತ್ತಿ ತೋರಿಸಿದರು, ಮಾಧ್ಯಮವನ್ನು ಹೇಗೆ ಬಳಸಲಾಗುತ್ತದೆ ಎಂಬುದರ ಆಧಾರದ ಮೇಲೆ ಚಲನಚಿತ್ರಗಳು ಪ್ರಯೋಜನಕಾರಿ ಮತ್ತು ಹಾನಿಕಾರಕ ಎರಡೂ ಆಗಿರಬಹುದು ಎಂದು ಎಚ್ಚರಿಸಿದರು.

ಜಾಗತಿಕ ದಕ್ಷಿಣದ ಸಮಾಜಗಳು, ವಿಶೇಷವಾಗಿ ತ್ವರಿತ ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಿವರ್ತನೆಗಳಿಗೆ ಒಳಗಾಗುವ ಸಮಾಜಗಳು, ಸಿನಿಮೀಯ ಸೃಜನಶೀಲತೆಗೆ ಫಲವತ್ತಾದ ನೆಲವನ್ನು ನೀಡುತ್ತವೆ ಎಂದು ಸಕ್ಸೇನಾ ಅವರು ಗಮನಿಸಿದರು. ಕೀನ್ಯಾ, ಹೈಟಿ ಮತ್ತು ಟರ್ಕಿಯಂತಹ ದೇಶಗಳ ಚಲನಚಿತ್ರಗಳು ಪ್ರೇಕ್ಷಕರಿಗೆ ವಿಕಸನಗೊಳ್ಳುತ್ತಿರುವ ಸಾಮಾಜಿಕ ವಾಸ್ತವಗಳು ಮತ್ತು ಸಾಂಸ್ಕೃತಿಕ ಚಲನಶೀಲತೆಯ ಬಗ್ಗೆ ಅಮೂಲ್ಯವಾದ ಒಳನೋಟಗಳನ್ನು ಒದಗಿಸುತ್ತವೆ ಎಂದು ಅವರು ಹೇಳಿದರು.

ಚಲನಚಿತ್ರ ನಿರ್ಮಾಪಕರು ಯಾವಾಗಲೂ ಸಾಮಾಜಿಕ ಸಮಸ್ಯೆಗಳಿಗೆ ನಿರ್ಣಾಯಕ ಪರಿಹಾರಗಳನ್ನು ಒದಗಿಸಬೇಕಾಗಿಲ್ಲ, ಏಕೆಂದರೆ ಸಂಬಂಧಿತ ಪ್ರಶ್ನೆಗಳನ್ನು ಎತ್ತುವುದು ಮತ್ತು ಸಾರ್ವಜನಿಕ ಚಿಂತನೆಯನ್ನು ಪ್ರಚೋದಿಸುವುದು, ಕಲೆಯ ಪಾಲಿಗೆ ಅಷ್ಟೇ ಅಗತ್ಯವಾದ ಕಾರ್ಯಗಳಾಗಿವೆ ಎಂದು ಅವರು  ಹೇಳಿದರು. "ಒಬ್ಬ ಕಲಾವಿದನ ಕೆಲಸ ಪರಿಹಾರಗಳನ್ನು ಒದಗಿಸುವುದು ಆಗಿರಬಹುದು, ಆದರೆ ಅದು ಮುಕ್ತ ಪ್ರಶ್ನೆಗಳನ್ನು ಸಾಮಾನ್ಯವಾಗಿ ಸಾರ್ವಜನಿಕವಾಗಿ ಬಿಡುವುದೂ ಆಗಿರಬಹುದು. ಇದು ಸಂಪೂರ್ಣವಾಗಿ ಉತ್ತಮವಾಗಿದೆ, ಮತ್ತು ನಾವು ಎರಡೂ ರೀತಿಯ ಕಲಾವಿದರ ಬಗ್ಗೆ ಕಾಳಜಿ ವಹಿಸುತ್ತೇವೆ" ಎಂದು ಅವರು ಹೇಳಿದರು.

ಕಥೆಗಳು ಭೌಗೋಳಿಕ ಮತ್ತು ಸಾಂಸ್ಕೃತಿಕ ಗಡಿಗಳನ್ನು ಮೀರಲು ಯಾವುದು ಅನುವು ಮಾಡಿಕೊಡುತ್ತದೆ ಎಂಬ ಪ್ರಶ್ನೆಗೆ ಉತ್ತರಿಸುತ್ತಾ, ಸಕ್ಸೇನಾ ಅವರು ಸೌಂದರ್ಯಶಾಸ್ತ್ರ ಮತ್ತು ಪ್ರಸ್ತುತತೆ ಅಥವಾ ರೂಪ ಮತ್ತು ವಿಷಯವನ್ನು ಅಗತ್ಯ ಅಂಶಗಳಾಗಿ ಗುರುತಿಸಿದರು.

ಶ್ರೀ ಮಹೇಶ್ ಕುಮಾರ್ ಪತ್ರಿಕಾಗೋಷ್ಠಿಯನ್ನು ಮಾಡರೇಟ್ ಮಾಡಿದರು.

ಐ.ಸಿ.ಎಫ್.ಟಿ. - ಯುನೆಸ್ಕೊ ಗಾಂಧಿ  ಪದಕದ ಬಗ್ಗೆ

ಯುನೆಸ್ಕೊ ಆಶ್ರಯದಲ್ಲಿ ಪ್ಯಾರಿಸ್‌ ನ ಅಂತರರಾಷ್ಟ್ರೀಯ ಚಲನಚಿತ್ರ, ದೂರದರ್ಶನ ಮತ್ತು ಆಡಿಯೋವಿಶುವಲ್ ಸಂವಹನ ಮಂಡಳಿ (ಐ.ಸಿ.ಎಫ್.ಟಿ.) ಸಹಯೋಗದೊಂದಿಗೆ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (ಐ.ಎಫ್.ಎಫ್.ಐ.) ಇದರ 46ನೇ ಆವೃತ್ತಿಯಲ್ಲಿ ಸ್ಥಾಪಿಸಲಾದ ಐ.ಸಿ.ಎಫ್.ಟಿ. - ಯುನೆಸ್ಕೊ ಗಾಂಧಿ   ಪದಕವು ಮಹಾತ್ಮ ಗಾಂಧಿಯವರ ಅಹಿಂಸೆ, ಸಹಿಷ್ಣುತೆ, ಅಂತರಸಾಂಸ್ಕೃತಿಕ ತಿಳುವಳಿಕೆ ಮತ್ತು ಶಾಂತಿಯ ಸಂಸ್ಕೃತಿಯ ಆದರ್ಶಗಳನ್ನು ಪ್ರತಿಬಿಂಬಿಸುವ ಚಲನಚಿತ್ರಗಳನ್ನು ಗುರುತಿಸುತ್ತದೆ.  ಈ ವರ್ಷದ ಸ್ಪರ್ಧೆಗೆ ಆಯ್ಕೆಯಾದ ಹತ್ತು ಚಲನಚಿತ್ರಗಳು (ಏಳು ಅಂತರರಾಷ್ಟ್ರೀಯ ಮತ್ತು ಮೂರು ಭಾರತೀಯ) ವೈವಿಧ್ಯಮಯ ಸಾಂಸ್ಕೃತಿಕ ಹಿನ್ನೆಲೆಗಳ ಕಥೆಗಳನ್ನು ಒಟ್ಟುಗೂಡಿಸಿ, ಮಾನವ ಸಂಬಂಧಗಳು, ಸಾಮಾಜಿಕ ಸವಾಲುಗಳು ಮತ್ತು ಹಂಚಿಕೆಯ ಮೌಲ್ಯಗಳನ್ನು ಉಲ್ಲೇಖಿಸುತ್ತವೆ.

Read IFFILOID here: https://www.pib.gov.in/iffi/57/iffiLoid.aspx?yr=2026&lang=1&reg=48

 

*****


Great films resonate through passionate voices. Share your love for cinema with #IFFI2026 and #StoriesWithoutBorders. Tag us @pibindia on Instagram and @PIB_India on X, and we will help amplify your festival moments!

For accredited journalists, critics, bloggers, and vloggers seeking 1-on-1 interviews with filmmakers and festival juries, write to us at:
iffi.mediadesk@pib.gov.in with the subject line: Take One with PIB.


Official Release ID: 2342374
•
Media Centre: Goa
•
Festival Dates: Nov 20 – 28, 2026