57th International Film Festival of India 2026
20 – 28 Nov 2026

ಚಿತ್ರ ನಿರ್ಮಾಪಕ ಅವ್ತಾರ್ ಕೌಲ್ ಅವರ ಜೀವನ ಮತ್ತು ಚಲನಚಿತ್ರ ಪರಂಪರೆಯನ್ನು ‘ಅವ್ತಾರ್ ಕೌಲ್: ದಿ (ಇನ್) ಕಂಪ್ಲೀಟ್ ಸ್ಟೋರಿ’ ಪರಾಮರ್ಶಿಸುತ್ತದೆ


57ನೇ ಐ.ಎಫ್.ಎಫ್.ಐ.ನಲ್ಲಿ ನಡೆದ ಸಂವಾದದ ಸಂದರ್ಭದಲ್ಲಿ ಅವ್ತಾರ್ ಕೌಲ್ ಅವರ ಜೀವನ, ಅವರ ಚಲನಚಿತ್ರ ‘27 ಡೌನ್’ ಮತ್ತು ಅವರ ಅಪೂರ್ಣ ಸೃಜನಶೀಲ ಪ್ರಯಾಣದ ಒಳನೋಟಗಳನ್ನು ಲೇಖಕರಾದ ವಿನೋದ್ ಕೌಲ್ ಅವರು ಹಂಚಿಕೊಂಡಿದ್ದಾರೆ

ಪ್ರಕಟಣಾ ದಿನಾಂಕ: 24 NOV 2026 4:09PMby PIB Bengaluruಪ್ರಕಟಣೆ ಐ.ಡಿ.: 2340892Views: 9

ಭಾರತೀಯ ಚಿತ್ರರಂಗವು ತಮ್ಮ ಸೃಜನಶೀಲ ಪ್ರಯಾಣಗಳು ಅತಿ ಬೇಗನೆ ಕೊನೆಗೊಂಡ ಹಲವಾರು ಚಲನಚಿತ್ರ ನಿರ್ಮಾಪಕರನ್ನು ಕಂಡಿದೆ, ಆದರೆ ಅವರ ಕೆಲಸವು ಇನ್ನೂ ಮಹತ್ವದ್ದಾಗಿದೆ. ಅವ್ತಾರ್ ಕೌಲ್ ಅಂತಹ ಒಬ್ಬ ಚಲನಚಿತ್ರ ನಿರ್ಮಾಪಕ. ಅವರ ಏಕೈಕ ಚಲನಚಿತ್ರ, 27 ಡೌನ್ (1974), ಭಾರತೀಯ ಚಿತ್ರರಂಗದ ಪ್ರಮುಖ ಕೃತಿ ಎಂದು ಪರಿಗಣಿಸಲಾಗಿದೆ.

ಭಾರತ ಸರ್ಕಾರದ ಪಬ್ಲಿಕೇಷನ್ಸ್ ವಿಭಾಗವು ಪ್ರಕಟಿಸಿದ ಅವ್ತಾರ್ ಕೌಲ್: ದಿ (ಇನ್) ಕಂಪ್ಲೀಟ್ ಸ್ಟೋರಿ ಪುಸ್ತಕದಲ್ಲಿ ಅವತಾರ್ ಕೌಲ್ ಅವರ ಜೀವನ ಮತ್ತು ಸಿನಿಮೀಯ ಪರಂಪರೆಯನ್ನು ಪರಿಶೋಧಿಸಲಾಗಿದೆ. ವಿನೋದ್ ಕೌಲ್ ಅವರು ಬರೆದ ಈ ಪುಸ್ತಕವು ಚಲನಚಿತ್ರ ನಿರ್ಮಾಪಕರ ಜೀವನ ಮತ್ತು ಸೃಜನಶೀಲ ಪ್ರಯಾಣವನ್ನು ದಾಖಲಿಸಲು ಪತ್ರಗಳು, ಛಾಯಾಚಿತ್ರಗಳು, ವೈಯಕ್ತಿಕ ನೆನಪುಗಳು ಮತ್ತು ಸಂಭಾಷಣೆಗಳನ್ನು ಒಟ್ಟುಗೂಡಿಸುತ್ತದೆ. ಈ ಪುಸ್ತಕವನ್ನು ನವೆಂಬರ್ 21, 2026 ರಂದು ಗೋವಾದಲ್ಲಿ ನಡೆದ 57ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐ.ಎಫ್.ಎಫ್.ಐ.)ದಲ್ಲಿ ಬಿಡುಗಡೆ ಮಾಡಲಾಯಿತು.

ನವೆಂಬರ್ 23 ರಂದು ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐ.ಎಫ್.ಎಫ್.ಐ) ದಲ್ಲಿ ನಡೆದ ಸಂವಾದದ ಸಂದರ್ಭದಲ್ಲಿ, ಪುಸ್ತಕದ ಹಿಂದಿನ ಸ್ಫೂರ್ತಿ ಮತ್ತು ಅವ್ತಾರ್ ಕೌಲ್ ಅವರ ಕಥೆಯನ್ನು ವ್ಯಾಪಕ ಪ್ರೇಕ್ಷಕರಿಗೆ ತಲುಪಿಸುವ ಪ್ರಯತ್ನಗಳ ಬಗ್ಗೆ ಲೇಖಕ ವಿನೋದ್ ಕೌಲ್ ಅವರು ಮಾತನಾಡಿದರು. ಈ ಕಲ್ಪನೆಯು ಚಲನಚಿತ್ರ ನಿರ್ಮಾಪಕರ ಬಗ್ಗೆ ಪುಸ್ತಕ ಬರೆಯುವ ಯೋಜನೆಯೊಂದಿಗೆ ಪ್ರಾರಂಭವಾಗಲಿಲ್ಲ ಎಂದು ಅವರು ಹಂಚಿಕೊಂಡರು. ವಿನೋದ್ ಕೌಲ್ ಎರಡನೇ ತರಗತಿಯಲ್ಲಿದ್ದಾಗ ನಿಧನರಾದ ಅವರ ಚಿಕ್ಕಪ್ಪನ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ವೈಯಕ್ತಿಕ ಪ್ರಯತ್ನವಾಗಿ ಇದು ಪ್ರಾರಂಭವಾಯಿತು.

ತಮ್ಮ ಚಿಕ್ಕಪ್ಪನ ಛಾಯಾಚಿತ್ರಗಳು, ಪತ್ರಗಳು ಮತ್ತು ಇತರ ದಾಖಲೆಗಳನ್ನು ಹೇಗೆ ಸಂಗ್ರಹಿಸಲು ಪ್ರಾರಂಭಿಸಿದರು ಎಂಬುದನ್ನು ಲೇಖಕ ವಿನೋದ್ ಕೌಲ್ ಅವರು ನೆನಪಿಸಿಕೊಂಡರು. ಕಾಲಾನಂತರದಲ್ಲಿ, ಈ ವೈಯಕ್ತಿಕ ಹುಡುಕಾಟವು ಅವ್ತಾರ್ ಕೌಲ್ ಅವರ ಜೀವನ ಮತ್ತು ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಅರ್ಥಮಾಡಿಕೊಳ್ಳುವ ಆಳವಾದ ಪ್ರಯತ್ನವಾಗಿ ಬೆಳೆಯಿತು.

ತಮಗೆ ವಯಸ್ಸಾದಂತೆ, 27 ಡೌನ್ ಚಲನಚಿತ್ರದ ಮಹತ್ವವನ್ನು ತಾನು ಅರಿತುಕೊಂಡರು ಎಂದು ಲೇಖಕ ವಿನೋದ್ ಕೌಲ್ ಅವರು ಹೇಳಿದರು. ಅಂತಹ ಅದ್ಭುತ ಚಲನಚಿತ್ರವನ್ನು ಮಾಡಿದ ಅಂತಹ ಪ್ರತಿಭೆಯ ಚಲನಚಿತ್ರ ನಿರ್ಮಾಪಕ ಏಕೆ ವ್ಯಾಪಕವಾಗಿ ತಿಳಿದಿಲ್ಲ ಎಂದು ಅವರು ಆಗಾಗ್ಗೆ ಆಶ್ಚರ್ಯ ಪಡುತ್ತಾರೆ. ಇದು ಅವ್ತಾರ್ ಕೌಲ್ ಅವರ ಜೀವನವನ್ನು ಸಂಶೋಧಿಸಲು ಮತ್ತು ಅವರ ಕಥೆಯನ್ನು ಹೊಸ ಪೀಳಿಗೆಗೆ ಮತ್ತು ಭವಿಷ್ಯದ ಚಲನಚಿತ್ರ ನಿರ್ಮಾಪಕರಿಗೆ ಪರಿಚಯಿಸಲು ಅವರನ್ನು ಪ್ರೋತ್ಸಾಹಿಸಿತು.

ದಿ (ಇನ್) ಕಂಪ್ಲೀಟ್ ಸ್ಟೋರಿ ಶೀರ್ಷಿಕೆಯನ್ನು ವಿವರಿಸುತ್ತಾ, ವಿನೋದ್ ಕೌಲ್, ಅವ್ತಾರ್ ಕೌಲ್ ಮತ್ತು ಅವರ ಕೃತಿಗಳ ಬಗ್ಗೆ ಬಹಳ ಕಡಿಮೆ ಬರೆಯಲಾಗಿದೆ ಎಂದು ಹೇಳಿದರು. ಪುಸ್ತಕವು ಅವರ ಕಥೆಯನ್ನು ಒಟ್ಟಿಗೆ ತರಲು ಪ್ರಯತ್ನಿಸುತ್ತದೆ, ಒಂದು ಅರ್ಥದಲ್ಲಿ ಅದನ್ನು ಪೂರ್ಣಗೊಳಿಸುತ್ತದೆ. ಆದಾಗ್ಯೂ, ಅವರ ಜೀವನ ಮತ್ತು ಸೃಜನಶೀಲ ಪ್ರಯಾಣ ಅಪೂರ್ಣವಾಗಿಯೇ ಉಳಿಯಿತು. ಅವರು ಅಲ್ಪಾವಧಿಯ ವೈವಾಹಿಕ ಜೀವನವನ್ನು ಹೊಂದಿದ್ದರು ಮತ್ತು ಕೇವಲ ಒಂದು ಚಲನಚಿತ್ರವನ್ನು ಮಾತ್ರ ನಿರ್ಮಿಸಿದರು. ಅವ್ತಾರ್ ಕೌಲ್ ಹೆಚ್ಚು ಕಾಲ ಬದುಕಿದ್ದರೆ, ಅವರು ಇನ್ನೂ ಅನೇಕ ಚಲನಚಿತ್ರಗಳನ್ನು ಮಾಡಬಹುದಿತ್ತು ಎಂದು ಲೇಖಕರು ವಿವರಿಸಿದರು.

ತಮ್ಮ ಸಂಶೋಧನೆಯಿಂದ ಭಾವನಾತ್ಮಕ ಅನುಭವವನ್ನು ಹಂಚಿಕೊಂಡ ವಿನೋದ್ ಕೌಲ್ ಅವರು, ಅಮೆರಿಕದಿಂದ ಬಂದ ತಮ್ಮ ಚಿಕ್ಕಮ್ಮ ಆನ್ ಕೌಲ್ ಕೂಡ ನಿಧನರಾಗಿದ್ದಾರೆಂದು ವಿಷಯ ಅರಿತ ಬಗ್ಗೆ ಕೂಡಾ ಮಾತನಾಡಿದರು. ಅವರ ಸಾವಿನ ಬಗ್ಗೆ ಕುಟುಂಬಕ್ಕೆ ತಿಳಿದಿರಲಿಲ್ಲ. ಅವರು ಆವಿಷ್ಕಾರವನ್ನು ಒಂದು ದೊಡ್ಡ ಆಘಾತ ಎಂದು ಬಣ್ಣಿಸಿದರು ಮತ್ತು ಸಂಶೋಧನೆಯು ಹಲವಾರು ಅನಿರೀಕ್ಷಿತ ಮತ್ತು ಭಾವನಾತ್ಮಕ ಅನುಭವಗಳನ್ನು ಬೆಳಕಿಗೆ ತಂದಿತು ಎಂದು ಹೇಳಿದರು.

ಸಿನಿಮಾ ಮತ್ತು ಸಾಹಿತ್ಯದ ನಡುವಿನ ಸಂಬಂಧದ ಬಗ್ಗೆ ಮಾತನಾಡಿದ ವಿನೋದ್ ಕೌಲ್, ಇಬ್ಬರೂ ಯಾವಾಗಲೂ ನಿಕಟ ಸಂಬಂಧ ಹೊಂದಿದ್ದಾರೆ, ಅನೇಕ ಚಲನಚಿತ್ರಗಳು ಕಾದಂಬರಿಗಳು, ಕಥೆಗಳು ಮತ್ತು ಇತರ ಸಾಹಿತ್ಯ ಕೃತಿಗಳಿಂದ ಸ್ಫೂರ್ತಿ ಪಡೆದಿವೆ ಎಂದು ಹೇಳಿದರು. ಈ ಸಂಬಂಧವನ್ನು ಎತ್ತಿ ತೋರಿಸುವ ಮತ್ತು ಚಲನಚಿತ್ರ ನಿರ್ಮಾಪಕರು ಮತ್ತು ಸಿನಿಮಾಗೆ ಸಂಬಂಧಿಸಿದ ಕೃತಿಗಳ ಕಥೆಗಳನ್ನು ಓದುಗರಿಗೆ ತಲುಪಿಸುವ ಪ್ರಯತ್ನಗಳಿಗಾಗಿ ಅವರು ಪ್ರಕಟಣೆ ವಿಭಾಗವನ್ನು ಶ್ಲಾಘಿಸಿದರು. ಅವ್ತಾರ್ ಕೌಲ್ ಅವರ ಕಥೆಯನ್ನು ವಿಶಾಲ ಪ್ರೇಕ್ಷಕರಿಗೆ ತಲುಪಿಸಲು ವೇದಿಕೆಯನ್ನು ಒದಗಿಸಿದ್ದಕ್ಕಾಗಿ ವಿನೋದ್ ಕೌಲ್ ಅವರು ಭಾರತ ಸರ್ಕಾರದ ಪಬ್ಲಿಕೇಷನ್ಸ್ ವಿಭಾಗಕ್ಕೆ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು.

ಯುವ ಚಲನಚಿತ್ರ ನಿರ್ಮಾಪಕರು ಅವ್ತಾರ್ ಕೌಲ್ ಅವರಿಂದ ಏನು ಕಲಿಯಬಹುದು ಎಂಬ ಪ್ರಶ್ನೆಗೆ , ಈ  ಕುರಿತು ಉತ್ತರಿಸುತ್ತಾ, ತಮ್ಮ ಸೃಜನಶೀಲ ಆಯ್ಕೆಗಳಿಗೆ ಬದ್ಧರಾಗಿರಬೇಕು ಎಂದು ವಿನೋದ್ ಕೌಲ್ ಅವರು ಹೇಳಿದರು. ಜಂಜೀರ್, ಬಾಬಿ ಮತ್ತು ಯಾದೋಂಕಿ ಬಾರಾತ್ ನಂತಹ ಮುಖ್ಯವಾಹಿನಿಯ ಚಲನಚಿತ್ರಗಳು ಜನಪ್ರಿಯವಾಗಿದ್ದ ಸಮಯದಲ್ಲಿ, ಅವ್ತಾರ್ ಕೌಲ್ ತಮ್ಮದೇ ಆದ ಆಸಕ್ತಿಗಳನ್ನು ಅನುಸರಿಸಲು ಮತ್ತು ಕಲಾತ್ಮಕ ಚಲನಚಿತ್ರವನ್ನು ಮಾಡಲು ಆಯ್ಕೆ ಮಾಡಿಕೊಂಡರು. ಯುವ ಚಲನಚಿತ್ರ ನಿರ್ಮಾಪಕರನ್ನು 27 ಡೌನ್ ನ ಕಥೆ ಹೇಳುವಿಕೆ, ಕರಕುಶಲತೆ, ಸಂದೇಶ ಮತ್ತು ಚಲನಚಿತ್ರ ನಿರ್ಮಾಣ ಶೈಲಿಯನ್ನು ಅಧ್ಯಯನ ಮಾಡಲು ವಿನೋದ್ ಕೌಲ್ ಅವರು ಪ್ರೋತ್ಸಾಹಿಸಿದರು.

ಸಿನಿಮೀಯ ಪರಂಪರೆಯನ್ನು ಸಂರಕ್ಷಿಸುವುದು

ಅವತಾರ್ ಕೌಲ್: ದಿ (ಇನ್) ಕಂಪ್ಲೀಟ್ ಸ್ಟೋರಿ ಕೇವಲ ಚಲನಚಿತ್ರ ನಿರ್ಮಾಪಕರ ಜೀವನದ ದಾಖಲೆಯಲ್ಲ; ಇದು ಭಾರತೀಯ ಚಿತ್ರರಂಗದ ಪ್ರಮುಖ ಅಧ್ಯಾಯದೊಂದಿಗೆ ವೈಯಕ್ತಿಕ ನೆನಪುಗಳನ್ನು ಮರುಸಂಪರ್ಕಿಸುವ ಪ್ರಯತ್ನವಾಗಿದೆ. ತನ್ನ ಚಿಕ್ಕಪ್ಪನನ್ನು ಅರ್ಥಮಾಡಿಕೊಳ್ಳಲು ಸೋದರಳಿಯನೊಬ್ಬನ ಹುಡುಕಾಟವು ಅವ್ತಾರ್ ಕೌಲ್ ಅವರ ಜೀವನ ಮತ್ತು ಕೊಡುಗೆಯನ್ನು ಮತ್ತೆ ಸಾರ್ವಜನಿಕ ಸ್ಮರಣೆಗೆ ತರುವ ಪ್ರಯತ್ನವಾಗಿ ವಿಕಸನಗೊಂಡಿದೆ.

ಈ ಪ್ರಕಟಣೆಯ ಮೂಲಕ, ಭಾರತ ಸರ್ಕಾರದ ಪ್ರಕಾಶನ ವಿಭಾಗವು ಅವ್ತಾರ್ ಕೌಲ್ ಅವರಂತಹ ಚಲನಚಿತ್ರ ನಿರ್ಮಾಪಕರ ಕೊಡುಗೆಗಳನ್ನು ದಾಖಲಿಸಲು ಮತ್ತು ಹೊಸ ಪೀಳಿಗೆಯ ಓದುಗರು, ವಿದ್ಯಾರ್ಥಿಗಳು ಮತ್ತು ಸಿನಿಮಾ ಉತ್ಸಾಹಿಗಳಿಗೆ ಅವರ ಸೃಜನಶೀಲ ಪರಂಪರೆಯನ್ನು ಪರಿಚಯಿಸಲು ಪ್ರಯತ್ನಿಸುತ್ತದೆ.

Read IFFILOID here: https://www.pib.gov.in/iffi/57/iffiLoid.aspx?yr=2026&lang=1&reg=48

 

*****


Great films resonate through passionate voices. Share your love for cinema with #IFFI2026 and #StoriesWithoutBorders. Tag us @pibindia on Instagram and @PIB_India on X, and we will help amplify your festival moments!

For accredited journalists, critics, bloggers, and vloggers seeking 1-on-1 interviews with filmmakers and festival juries, write to us at:
iffi.mediadesk@pib.gov.in with the subject line: Take One with PIB.


Official Release ID: 2340892
•
Media Centre: Goa
•
Festival Dates: Nov 20 – 28, 2026