57th International Film Festival of India 2026
20 – 28 Nov 2026

ಗೋವಾದಲ್ಲಿ ನಡೆಯುತ್ತಿರುವ 57ನೇ ಐಎಫ್‌ಎಫ್‌ಐನಲ್ಲಿ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಚಂಚಲ್ ಕುಮಾರ್ ಅವರು ಪ್ರಕಟಣಾ ವಿಭಾಗದ ಮಳಿಗೆಯನ್ನು ಉದ್ಘಾಟಿಸಿದರು


ಮಳಿಗೆ ಸಂಖ್ಯೆ 24ರಲ್ಲಿ ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ, ಇತಿಹಾಸ, ಕಲೆ, ಚಲನಚಿತ್ರ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿದ ಪುಸ್ತಕಗಳ ಪ್ರದರ್ಶನ

ಭಾರತದ ವೈವಿಧ್ಯಮಯ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಪರಿಚಯಿಸಿಕೊಳ್ಳಲು ಸಿನಿಮಾ ಆಸಕ್ತರು, ಪ್ರತಿನಿಧಿಗಳು ಹಾಗೂ ಸಂದರ್ಶಕರಿಗೆ ಮಳಿಗೆಯಲ್ಲಿ ಅವಕಾಶ

ಪ್ರಕಟಣಾ ದಿನಾಂಕ: 21 NOV 2026 9:03PMby PIB Bengaluruಪ್ರಕಟಣೆ ಐ.ಡಿ.: 2339910Views: 13

ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಚಂಚಲ್ ಕುಮಾರ್ ಅವರು, ಇಂದು ಗೋವಾದಲ್ಲಿ ನಡೆಯುತ್ತಿರುವ 57ನೇ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐಎಫ್‌ಎಫ್‌ಐ 2026)ದಲ್ಲಿ ಪ್ರಕಟಣಾ ವಿಭಾಗದ ಮಳಿಗೆಯನ್ನು (ಮಳಿಗೆ ಸಂಖ್ಯೆ 24) ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪ್ರಕಾಶನ ವಿಭಾಗದ ಮಹಾನಿರ್ದೇಶಕಿ ಶ್ರೀಮತಿ ಕಾಂಚನ್ ಪ್ರಸಾದ್ ಉಪಸ್ಥಿತರಿದ್ದರು.

ಐಎಫ್‌ಎಫ್‌ಐನ 57ನೇ ಆವೃತ್ತಿಯು 2026ರ ನವೆಂಬರ್ 20ರಿಂದ 28ರವರೆಗೆ ಗೋವಾದಲ್ಲಿ ನಡೆಯುತ್ತಿದೆ. ಈ ಚಲನಚಿತ್ರೋತ್ಸವದಲ್ಲಿ ಭಾರತದಾದ್ಯಂತ ಹಾಗೂ ವಿಶ್ವದ ವಿವಿಧ ಭಾಗಗಳಿಂದ ಚಲನಚಿತ್ರ ನಿರ್ಮಾತೃಗಳು, ಚಲನಚಿತ್ರಾಸಕ್ತರು, ಚಿತ್ರರಂಗದ ವೃತ್ತಿಪರರು ಮತ್ತು ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ.

ಮಳಿಗೆ ಸಂಖ್ಯೆ 24ರಲ್ಲಿ ಸ್ಥಾಪಿಸಲಾಗಿರುವ ಪ್ರಕಟಣಾ ವಿಭಾಗದ ಮಳಿಗೆಯಲ್ಲಿ ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ, ಇತಿಹಾಸ, ಕಲೆ, ಚಲನಚಿತ್ರ, ಸಾಹಿತ್ಯ ಸೇರಿದಂತೆ ರಾಷ್ಟ್ರೀಯ ಮಹತ್ವದ ವಿವಿಧ ವಿಷಯಗಳಿಗೆ ಸಂಬಂಧಿಸಿದ ಪುಸ್ತಕಗಳು ಮತ್ತು ಪ್ರಕಟಣೆಗಳ ಸಂಗ್ರಹವನ್ನು ಪ್ರದರ್ಶಿಸಲಾಗಿದೆ. ದೇಶದ ಸಾಂಸ್ಕೃತಿಕ ವೈವಿಧ್ಯತೆ, ಸೃಜನಶೀಲ ಪರಂಪರೆ ಮತ್ತು ಬೌದ್ಧಿಕ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುವ ಮಾಹಿತಿಪೂರ್ಣ ಹಾಗೂ ಜ್ಞಾನವರ್ಧಕ ಪ್ರಕಟಣೆಗಳನ್ನು ಪರಿಚಯಿಸಿಕೊಳ್ಳಲು ಈ ಮಳಿಗೆ ಸಂದರ್ಶಕರಿಗೆ ಅವಕಾಶ ಕಲ್ಪಿಸುತ್ತದೆ.

ಭಾರತೀಯ ಸಿನಿಮಾಕ್ಕೆ ಸಂಬಂಧಿಸಿದ ಪ್ರಕಟಣೆಗಳಿಗೆ ಇಲ್ಲಿ ವಿಶೇಷ ಆದ್ಯತೆ ನೀಡಲಾಗಿದೆ. ಇವುಗಳ ಮೂಲಕ ಸಿನಿಮಾ ಆಸಕ್ತರು, ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಉತ್ಸವದ ಪ್ರತಿನಿಧಿಗಳು ಭಾರತೀಯ ಚಲನಚಿತ್ರರಂಗದ ಬೆಳವಣಿಗೆ, ಚಲನಚಿತ್ರ ನಿರ್ಮಾತೃಗಳ ಸೃಜನಶೀಲ ಪಯಣ ಹಾಗೂ ಭಾರತೀಯ ಚಲನಚಿತ್ರ ಪರಂಪರೆಗೆ ಮಹತ್ವದ ಕೊಡುಗೆ ನೀಡಿದ ಗಣ್ಯರ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು.

ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಧೀನದಲ್ಲಿರುವ ಪ್ರಮುಖ ಪ್ರಕಾಶನ ಸಂಸ್ಥೆಯಾದ ಪ್ರಕಟಣಾ ವಿಭಾಗವು 1941ರಿಂದ ವಿವಿಧ ವಿಷಯಗಳ ಕುರಿತು ಪುಸ್ತಕಗಳು ಮತ್ತು ನಿಯತಕಾಲಿಕೆಗಳನ್ನು ಪ್ರಕಟಿಸುತ್ತಿದೆ. ತನ್ನ ಪ್ರಕಟಣೆಗಳ ಮೂಲಕ ಭಾರತದ ಸಾಹಿತ್ಯಿಕ, ಐತಿಹಾಸಿಕ, ಸಾಂಸ್ಕೃತಿಕ ಮತ್ತು ಬೌದ್ಧಿಕ ಪರಂಪರೆಯನ್ನು ಸಂರಕ್ಷಿಸುವ ಹಾಗೂ ಜನರಿಗೆ ತಲುಪಿಸುವ ಕಾರ್ಯವನ್ನು ಈ ವಿಭಾಗ ನಿರಂತರವಾಗಿ ಮಾಡುತ್ತಿದೆ.

ಓದುವ ಹವ್ಯಾಸವನ್ನು ಉತ್ತೇಜಿಸುವುದು, ಪುಸ್ತಕಗಳೊಂದಿಗೆ ಜನರ ಒಡನಾಟವನ್ನು ಹೆಚ್ಚಿಸುವುದು ಮತ್ತು ಅಮೂಲ್ಯ ಜ್ಞಾನಸಂಪತ್ತನ್ನು ಹೆಚ್ಚಿನ ಜನರಿಗೆ ತಲುಪಿಸುವ ನಿರಂತರ ಪ್ರಯತ್ನಗಳ ಭಾಗವಾಗಿ ಪ್ರಕಟಣಾ ವಿಭಾಗವು ಐಎಫ್‌ಎಫ್‌ಐ 2026ರಲ್ಲಿ ಭಾಗವಹಿಸಿದೆ.

ಚಲನಚಿತ್ರ ಮತ್ತು ಸಾಹಿತ್ಯವನ್ನು ಬೆಸೆಯುವ ವೇದಿಕೆಯಾಗಿ ಈ ಮಳಿಗೆ ಕಾರ್ಯನಿರ್ವಹಿಸುತ್ತಿದೆ. ಇದರ ಮೂಲಕ ಚಲನಚಿತ್ರೋತ್ಸವದ ಪ್ರತಿನಿಧಿಗಳು ಮತ್ತು ಸಂದರ್ಶಕರು ತೆರೆಯ ಮೇಲಿನ ಕಥೆಗಳಾಚೆಗೂ ಭಾರತದ ಶ್ರೀಮಂತ ಕಥನ ಪರಂಪರೆಯನ್ನು ಅರಿತುಕೊಳ್ಳಲು ಅವಕಾಶ ದೊರೆಯುತ್ತದೆ.

ಈ ಚಲನಚಿತ್ರೋತ್ಸವದಲ್ಲಿ ಭಾಗವಹಿಸುವ ಮೂಲಕ, ಓದುವ ಸಂಸ್ಕೃತಿಯನ್ನು ಉತ್ತೇಜಿಸುವುದು, ಭಾರತದ ಸೃಜನಶೀಲ ಸಾಧನೆಗಳನ್ನು ಸಂಭ್ರಮಿಸುವುದು ಹಾಗೂ ದೇಶದ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಪರಂಪರೆಯನ್ನು ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಗಳಿಗಾಗಿ ಸಂರಕ್ಷಿಸುವ ತನ್ನ ಬದ್ಧತೆಯನ್ನು ಪ್ರಕಟಣಾ ವಿಭಾಗವು ಪುನರುಚ್ಚರಿಸಿದೆ.

 

IFFILOID ಅನ್ನು ಇಲ್ಲಿ ಓದಬಹುದು: https://www.pib.gov.in/iffi/57/iffiLoid.aspx?yr=2026&lang=1&reg=48

 

*****

 


Great films resonate through passionate voices. Share your love for cinema with #IFFI2026 and #StoriesWithoutBorders. Tag us @pibindia on Instagram and @PIB_India on X, and we will help amplify your festival moments!

For accredited journalists, critics, bloggers, and vloggers seeking 1-on-1 interviews with filmmakers and festival juries, write to us at:
iffi.mediadesk@pib.gov.in with the subject line: Take One with PIB.


Official Release ID: 2339910
•
Media Centre: Goa
•
Festival Dates: Nov 20 – 28, 2026