ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಅರ್ನಬ್ ಚಂಡಮಾರುತದ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ, ಪುದುಚೇರಿ, ಒಡಿಶಾ ಮತ್ತು ಛತ್ತೀಸ್ ಗಢದ ಮುಖ್ಯಮಂತ್ರಿಗಳೊಂದಿಗೆ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಮಾತುಕತೆ


ವಿಪತ್ತಿನ ಸಂದರ್ಭದಲ್ಲಿ ಜನರ ಕಷ್ಟಗಳನ್ನು ತಗ್ಗಿಸಲು ಎಲ್ಲ ನೆರವು ನೀಡುವುದಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಗೃಹ ಸಚಿವರ ಭರವಸೆ

ಎನ್ ಡಿ ಆರ್ ಎಫ್ ಮತ್ತು ಎಸ್ ಡಿ ಆರ್ ಎಫ್ ತಂಡಗಳು ಕಾರ್ಯಪ್ರವೃತ್ತವಾಗಿವೆ ಮತ್ತು ಯುದ್ಧೋಪಾದಿಯಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಯನ್ನು ಮುಂದುವರಿಸುತ್ತಿವೆ

ಪರಿಣಾಮ ಮತ್ತು ಅಗತ್ಯವಿರುವ ಹೆಚ್ಚಿನ ಸಹಾಯವನ್ನು ನಿರ್ಣಯಿಸಲು ಶೀಘ್ರದಲ್ಲೇ ಐಎಂಸಿಟಿಗಳನ್ನು ಕಳುಹಿಸಲಾಗುವುದು

ಭಾರತ ಸರ್ಕಾರ ದೃಢ ಬದ್ಧತೆಯೊಂದಿಗೆ ಜನರೊಂದಿಗೆ ನಿಲ್ಲುತ್ತದೆ

ಪ್ರಕಟಣಾ ದಿನಾಂಕ: 29 OCT 2026 11:36AM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಅರ್ನಬ್ ಚಂಡಮಾರುತದ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ, ಪುದುಚೇರಿ, ಒಡಿಶಾ ಮತ್ತು ಛತ್ತೀಸ್ ಗಢದ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಿದರು.

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, "ಅರ್ನಬ್ ಚಂಡಮಾರುತದ ಹಿನ್ನೆಲೆಯಲ್ಲಿ, ಆಂಧ್ರಪ್ರದೇಶ, ಪುದುಚೇರಿ, ಒಡಿಶಾ ಮತ್ತು ಛತ್ತೀಸ್ ಗಢದ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿದ್ದೇನೆ ಮತ್ತು ವಿಪತ್ತಿನ ಸಂದರ್ಭದಲ್ಲಿ ಜನರ ಕಷ್ಟಗಳನ್ನು ತಗ್ಗಿಸಲು ಎಲ್ಲ ನೆರವಿನ ಭರವಸೆ ನೀಡಿದ್ದೇನೆ. ಎನ್ ಡಿ ಆರ್ ಎಫ್ ಮತ್ತು ಎಸ್ ಜಿ ಆರ್ ಎಫ್ ತಂಡಗಳು ಕಾರ್ಯಪ್ರವೃತ್ತವಾಗಿವೆ ಮತ್ತು ಯುದ್ಧೋಪಾದಿಯಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಯನ್ನು ಮುಂದುವರಿಸುತ್ತಿವೆ. ಪರಿಣಾಮ ಮತ್ತು ಅಗತ್ಯವಿರುವ ಹೆಚ್ಚಿನ ಸಹಾಯವನ್ನು ನಿರ್ಣಯಿಸಲು ಶೀಘ್ರದಲ್ಲೇ ಐಎಂಸಿಟಿಗಳನ್ನು ಕಳುಹಿಸಲಾಗುವುದು. ಭಾರತ ಸರ್ಕಾರವು ದೃಢವಾದ ಬದ್ಧತೆಯೊಂದಿಗೆ ಜನರೊಂದಿಗೆ ನಿಲ್ಲುತ್ತದೆ."

 

*****


(ಪ್ರಕಟಣೆ ಐ.ಡಿ.: 2330003) ವಿಸಿಟರ್ ಕೌಂಟರ್ : 18