ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಬಂಟಿ ಅವರಿಗೆ ಪ್ರಧಾನಮಂತ್ರಿ ಅಭಿನಂದನೆ

ಪ್ರಕಟಣಾ ದಿನಾಂಕ: 21 OCT 2026 6:40PM by PIB Bengaluru

ಏಷ್ಯನ್ ಪ್ಯಾರಾ ಗೇಮ್ಸ್ 2026ರಲ್ಲಿ ಪುರುಷರ ಹೈ ಜಂಪ್ ಟಿ64 ವಿಭಾಗದಲ್ಲಿ ಬಂಟಿ ಅವರು ಬೆಳ್ಳಿ ಪದಕ ಗೆದ್ದಿರುವುದಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಅವರು ಉತ್ತಮ ಸಾಮರ್ಥ್ಯ ಮತ್ತು ದೃಢ ನಿಶ್ಚಯವನ್ನು ಪ್ರದರ್ಶಿಸಿದ್ದಾರೆ ಎಂದು ಉಲ್ಲೇಖಿಸಿರುವ ಶ್ರೀ ಮೋದಿ, ಈ ಯಶಸ್ಸು ಅವರಿಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಎತ್ತರದ ಗುರಿಗಳನ್ನು ಹೊಂದಲು ಮತ್ತು ಇನ್ನೂ ಹೆಚ್ಚಿನ ಸಾಧನೆ ಮಾಡಲು ಆತ್ಮವಿಶ್ವಾಸವನ್ನು ನೀಡಲಿ ಎಂದು ಆಶಿಸಿದ್ದಾರೆ.

ಪ್ರಧಾನಮಂತ್ರಿಯವರ ಕಾರ್ಯಾಲಯವು 'ಎಕ್ಸ್' ಪೋಸ್ಟ್ ನಲ್ಲಿ ಹೀಗೆ ಹಂಚಿಕೊಂಡಿದೆ:

"ಏಷ್ಯನ್ ಪ್ಯಾರಾ ಗೇಮ್ಸ್ 2026ರಲ್ಲಿ ಪುರುಷರ ಹೈ ಜಂಪ್ ಟಿ64 ವಿಭಾಗದಲ್ಲಿ ಬಂಟಿ ಅವರು ಬೆಳ್ಳಿ ಪದಕ ಗೆದ್ದಿರುವುದು ಸಂತೋಷದ ವಿಷಯ. ಅವರು ಉತ್ತಮ ಸಾಮರ್ಥ್ಯ ಮತ್ತು ದೃಢ ನಿಶ್ಚಯವನ್ನು ಪ್ರದರ್ಶಿಸಿದ್ದಾರೆ. ಈ ಯಶಸ್ಸು ಅವರಿಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಎತ್ತರದ ಗುರಿಗಳನ್ನು ಹೊಂದಲು ಮತ್ತು ಇನ್ನೂ ಹೆಚ್ಚಿನ ಸಾಧನೆ ಮಾಡಲು ಆತ್ಮವಿಶ್ವಾಸವನ್ನು ನೀಡಲಿ: ಪ್ರಧಾನಮಂತ್ರಿ @narendramodi"

 

*****


(ಪ್ರಕಟಣೆ ಐ.ಡಿ.: 2326339) ವಿಸಿಟರ್ ಕೌಂಟರ್ : 3
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Assamese , Gujarati , Tamil , Malayalam