ಪ್ರಕಟಣಾ ದಿನಾಂಕ:
20 OCT 2026 7:20PM by PIB Bengaluru
ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ ವೈಯಕ್ತಿಕ ಅತ್ಯುತ್ತಮ ಸಾಧನೆಯೊಂದಿಗೆ ಪುರುಷರ ಜಾವೆಲಿನ್ ಥ್ರೋ F53/54 ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಗೆದ್ದ ಆಯುಷ್ ವರ್ಮಾ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಅಭಿನಂದಿಸಿದ್ದಾರೆ.
ಕ್ರೀಡಾಪಟುವಿಗೆ ಇದು ಸ್ಮರಣೀಯ ಚೊಚ್ಚಲ ಪಂದ್ಯವಾಗಿದೆ ಎಂದು ಹೇಳಿದ ಶ್ರೀ ಮೋದಿಯವರು, ಆಯುಷ್ ಯಶಸ್ಸಿನ ಉತ್ತುಂಗಕ್ಕೇರಲಿ, ಕ್ರೀಡಾ ಕ್ಷೇತ್ರದಲ್ಲಿ ತನ್ನ ಛಾಪನ್ನು ಮೂಡಿಸುವುದನ್ನು ಮುಂದುವರಿಸಲಿ ಎಂದು ಆಶಿಸಿ, ಅವರಿಗೆ ತಮ್ಮ ಶುಭಾಶಯಗಳನ್ನು ತಿಳಿಸಿದ್ದಾರೆ.
Xನ ಪೋಸ್ಟ್‌ನಲ್ಲಿ, ಪ್ರಧಾನ ಮಂತ್ರಿಯವರ ಕಾರ್ಯಾಲಯವು ಹೀಗೆ ಹಂಚಿಕೊಂಡಿದೆ:
"ಆಯುಷ್ ವರ್ಮಾ ಅವರಿಗೆ ಇದು ಸ್ಮರಣೀಯ ಚೊಚ್ಚಲ ಪಂದ್ಯ! ಪುರುಷರ ಜಾವೆಲಿನ್ ಥ್ರೋ F53/54 ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿದ್ದಕ್ಕಾಗಿ ಮತ್ತು ವೈಯಕ್ತಿಕ ಅತ್ಯುತ್ತಮ ಸಾಧನೆಯನ್ನು ದಾಖಲಿಸಿದ್ದಕ್ಕಾಗಿ ಅವರಿಗೆ ಅಭಿನಂದನೆಗಳು. ಅವರು ಯಶಸ್ಸಿನ ಉತ್ತುಂಗಕ್ಕೇರಿ, ತಮ್ಮ ಛಾಪು ಮೂಡಿಸುವುದನ್ನು ಮುಂದುವರಿಸಲಿ. ನನ್ನ ಶುಭಾಶಯಗಳು: ಪ್ರಧಾನಮಂತ್ರಿ @narendramodi"
*****