ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ ಕಂಚಿನ ಪದಕವನ್ನು ಗೆದ್ದ ಪ್ರಾಚಿ ಪಾಂಡೆಯವರಿಗೆ ಪ್ರಧಾನಮಂತ್ರಿ ಅಭಿನಂದನೆ

ಪ್ರಕಟಣಾ ದಿನಾಂಕ: 20 OCT 2026 7:26PM by PIB Bengaluru

ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ 6ನೇ ವರ್ಗದ ಮಹಿಳಾ ಸಿಂಗಲ್ಸ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಪ್ರಾಚಿ ಪಾಂಡೆಯವರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಭಾರತೀಯ ಪ್ಯಾರಾ ಟೇಬಲ್ ಟೆನಿಸ್‌ನ ಚೊಚ್ಚಲ ಪ್ರವೇಶದಲ್ಲೇ ಕಂಚಿನ ಪದಕ ಗೆದ್ದಿರುವುದು ಐತಿಹಾಸಿಕ ಮತ್ತು ಅದ್ವಿತೀಯ ಎಂದು ಹೇಳಿದ ಶ್ರೀ ಮೋದಿಯವರು, ಈ ಹೊಸ ಸಾಧನೆಗೆ ಅವರನ್ನು ಅಭಿನಂದಿಸಿದ್ದಾರೆ.

Xನ ಪೋಸ್ಟ್‌ನಲ್ಲಿ, ಪ್ರಧಾನಮಂತ್ರಿಯವರ ಕಾರ್ಯಾಲಯವು ಹೀಗೆ ಹಂಚಿಕೊಂಡಿದೆ:

"ಭಾರತೀಯ ಪ್ಯಾರಾ ಟೇಬಲ್ ಟೆನಿಸ್‌ನ ಐತಿಹಾಸಿಕ ಪ್ರಥಮ!

ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ 6ನೇ ವರ್ಗದ ಮಹಿಳಾ ಸಿಂಗಲ್ಸ್ ಸ್ಪರ್ಧೆಯಲ್ಲಿ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಪ್ರಾಚಿ ಪಾಂಡೆ ನಿಜವಾಗಿಯೂ ವಿಶೇಷವಾದದ್ದನ್ನು ಸಾಧಿಸಿದ್ದಾರೆ. ಅವರ ಚೊಚ್ಚಲ ಪ್ರವೇಶದಲ್ಲೇ ಅವರು ಪಡೆದ ಗೆದ್ದ ಈ ಕಂಚಿನ ಪದಕವು ಒಂದು ಪ್ರಮುಖ ಮೈಲಿಗಲ್ಲಾಗಿದೆ.

ಈ ಹೊಸ ಸಾಧನೆಗೆ ಅಭಿನಂದನೆಗಳು: ಪ್ರಧಾನಮಂತ್ರಿ @narendramodi"

 

*****

 


(ಪ್ರಕಟಣೆ ಐ.ಡಿ.: 2325869) ವಿಸಿಟರ್ ಕೌಂಟರ್ : 15
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Assamese , Bengali , Punjabi , Gujarati , Telugu , Malayalam