ಪ್ರಧಾನ ಮಂತ್ರಿಯವರ ಕಛೇರಿ
ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದಿರುವ ಪ್ರದೀಪ್ ಕುಮಾರ್ ಅವರಿಗೆ ಪ್ರಧಾನಮಂತ್ರಿ ಅಭಿನಂದನೆ
ಪ್ರಕಟಣಾ ದಿನಾಂಕ:
20 OCT 2026 9:40PM by PIB Bengaluru
ಏಷ್ಯನ್ ಪ್ಯಾರಾ ಗೇಮ್ಸ್ 2026ರ ಪುರುಷರ ಡಿಸ್ಕಸ್ ಥ್ರೋ ಎಫ್43/ಎಫ್44/ಎಫ್62/ಎಫ್64 ಪಂದ್ಯದಲ್ಲಿ ತಮ್ಮ ವೈಯಕ್ತಿಕ ಶ್ರೇಷ್ಠ ಎಸೆತದೊಂದಿಗೆ ಕಂಚಿನ ಪದಕ ಜಯಿಸಿರುವ ಪ್ರದೀಪ್ ಕುಮಾರ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.
ಸಾಮರ್ಥ್ಯ ಮಿತಿ ದಾಟಿ ಮುನ್ನಡೆಯುವ ಅವರ ಬದ್ಧತೆಯು ನಿಜಕ್ಕೂ ಪ್ರಶಂಸನೀಯ ಎಂದು ಶ್ಲಾಘಿಸುತ್ತಾ ಶ್ರೀ ಮೋದಿ ಅವರು ಪ್ರದೀಪ್ ಅವರನ್ನು ಅಭಿನಂದಿಸಿ ಶುಭ ಹಾರೈಸಿದ್ದಾರೆ.
ಪ್ರಧಾನಮಂತ್ರಿಗಳ ಕಾರ್ಯಾಲಯ ಎಕ್ಸ್ ನಲ್ಲಿ ಹಂಚಿಕೊಂಡಿರುವ ಪೋಸ್ಟ್ ಹೀಗಿದೆ:
"ಏಷ್ಯನ್ ಪ್ಯಾರಾ ಗೇಮ್ಸ್ 2026ರಲ್ಲಿ, ಪುರುಷರ ಡಿಸ್ಕಸ್ ಥ್ರೋ ಎಫ್43/ ಎಫ್44/ಎಫ್62/ಎಫ್ 64 ಪಂದ್ಯದಲ್ಲಿ ಪ್ರದೀಪ್ ಕುಮಾರ್ ಅವರು ಕಂಚಿನ ಪದಕ ಗೆದ್ದಿದ್ದಾರೆ. ಇದೇ ವೇಳೆ ಅವರು ತಮ್ಮ ವೈಯಕ್ತಿಕ ಅತ್ಯುತ್ತಮ ಎಸೆತವನ್ನೂ ದಾಖಲಿಸಿದ್ದಾರೆ. ಮಿತಿಗಳಿಂದ ಹೊರಬಂದು ಸಾಧನೆ ಮಾಡಲು ಅವರು ತೋರಿದ ಬದ್ಧತೆ ನಿಜಕ್ಕೂ ಶ್ಲಾಘನೀಯ. ಪ್ರದೀಪ್ ಅವರಿಗೆ ಅಭಿನಂದನೆಗಳು ಮತ್ತು ಶುಭ ಹಾರೈಕೆಗಳು: ಪ್ರಧಾನಮಂತ್ರಿ @narendramodi"
*****
(ಪ್ರಕಟಣೆ ಐ.ಡಿ.: 2325858)
ವಿಸಿಟರ್ ಕೌಂಟರ್ : 9