ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದ ಬೇಬಿ ಸಹನಾ ರವಿ ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 20 OCT 2026 7:44PM by PIB Bengaluru

ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ 9ನೇ ದರ್ಜೆಯ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದ ಬೇಬಿ ಸಹನಾ ರವಿ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಅಭಿನಂದಿಸಿದ್ದಾರೆ.

ತನ್ನ ಚೊಚ್ಚಲ ಪಂದ್ಯದಲ್ಲೇ ಸ್ಟ್ಯಾಂಡಿಂಗ್ ವಿಭಾಗದಲ್ಲಿ ಭಾರತದ ಮೊದಲ ಪದಕ ಗೆಲ್ಲುವ ಮೂಲಕ ಬೇಬಿ ಸಹನಾ ರವಿಯವರು ಇತಿಹಾಸ ಸೃಷ್ಟಿಸಿದ್ದಾರೆ ಎಂದು ಉಲ್ಲೇಖಿಸಿದ ಶ್ರೀ ಮೋದಿಯವರು, ಅಪಾರ ಹೆಮ್ಮೆಯ ಈ ಕ್ಷಣ ಯುವ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುತ್ತದೆ ಎಂದು ತಿಳಿಸಿ, ಅವರ ಭವಿಷ್ಯಕ್ಕಾಗಿ ತಮ್ಮ ಶುಭಾಶಯಗಳನ್ನು ಕೋರಿದ್ದಾರೆ.

Xನ ಪೋಸ್ಟ್‌ನಲ್ಲಿ, ಪ್ರಧಾನಮಂತ್ರಿಯವರ ಕಛೇರಿಯು ಹೀಗೆ ಹಂಚಿಕೊಂಡಿದೆ:

"ಬೇಬಿ ಸಹನಾ ರವಿಯವರು ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ ಸ್ಟ್ಯಾಂಡಿಂಗ್ ವಿಭಾಗದಲ್ಲಿ ಭಾರತದ ಮೊದಲ ಪದಕ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ! 9 ದರ್ಜೆಯ ಮಹಿಳಾ ಸಿಂಗಲ್ಸ್ ಸ್ಪರ್ಧೆಯಲ್ಲಿ ಅವರ ಕಂಚಿನ ಪದಕವು ಅವರ ಚೊಚ್ಚಲ ಪ್ರವೇಶದಿಂದ ಬರುತ್ತಿರುವುದರಿಂದ ಇದು ಇನ್ನಷ್ಟು ಗಮನಾರ್ಹವಾಗಿದೆ. ಇದು ಅಪಾರ ಹೆಮ್ಮೆಯ ಕ್ಷಣವಾಗಿದ್ದು, ನಿಸ್ಸಂದೇಹವಾಗಿ ಹೆಚ್ಚಿನ ಯುವ ಕ್ರೀಡಾಪಟುಗಳು ದೊಡ್ಡ ಕನಸು ಕಾಣಲು ಪ್ರೋತ್ಸಾಹಿಸುತ್ತದೆ. ಭವಿಷ್ಯಕ್ಕಾಗಿ ಅವರಿಗೆ ಅಭಿನಂದನೆಗಳು ಮತ್ತು ಶುಭಾಶಯಗಳು: ಪ್ರಧಾನಮಂತ್ರಿ @narendramodi"

 

*****


(ಪ್ರಕಟಣೆ ಐ.ಡಿ.: 2325756) ವಿಸಿಟರ್ ಕೌಂಟರ್ : 12
ಪ್ರಕಟಣೆಯನ್ನು ಇದರಲ್ಲಿ ಓದಿ: Urdu , English , Marathi , हिन्दी , Assamese , Bengali , Manipuri , Punjabi , Gujarati , Tamil , Telugu , Malayalam