ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಏಷ್ಯನ್ ಪ್ಯಾರಾ ಗೇಮ್ಸ್‌ ನಲ್ಲಿ ಚಿನ್ನದ ಪದಕ ಜಯಿಸಿ ಹೊಸ ದಾಖಲೆ ನಿರ್ಮಿಸಿರುವ ಮೋನಾ ಅಗರ್ವಾಲ್ ಅವರಿಗೆ ಪ್ರಧಾನಮಂತ್ರಿ ಅಭಿನಂದನೆ

ಪ್ರಕಟಣಾ ದಿನಾಂಕ: 19 OCT 2026 1:14PM by PIB Bengaluru

ಏಷ್ಯನ್ ಪ್ಯಾರಾ ಗೇಮ್ಸ್ 2026ರಲ್ಲಿ, ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ ಎಸ್ ಹೆಚ್ 1 ವಿಭಾಗದಲ್ಲಿ ಚಿನ್ನದ ಪದಕ ಜಯಿಸಿರುವ ಮೋನಾ ಅಗರ್ವಾಲ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.

ಮೋನಾ ಅಗರ್ವಾಲ್ ಅವರು ಗಳಿಸಿರುವ ಅತ್ಯುತ್ತಮ ಅಂಕವು ಏಷ್ಯನ್ ಪ್ಯಾರಾ ಗೇಮ್ಸ್‌ ನಲ್ಲಿ ಹೊಸ ದಾಖಲೆಯನ್ನೂ ಸೃಷ್ಟಿಸಿದ್ದು, ಭಾರತದ ಮೊದಲ ದಿನದ ಆಟವನ್ನು ಇನ್ನಷ್ಟು ವಿಶೇಷವಾಗಿಸಿದೆ ಎಂದು ಪ್ರಧಾನಮಂತ್ರಿ ಹೇಳಿದ್ದಾರೆ. ಮೋನಾ ಅವರ ನಿಖರತೆ, ದೃಢನಿಶ್ಚಯ ಮತ್ತು ಸಂಯಮವನ್ನು ಶ್ಲಾಘಿಸಿರುವ ಪ್ರಧಾನಮಂತ್ರಿಗಳು, ಮುಂದಿನ ಸ್ಪರ್ಧೆಗಳಲ್ಲಿಯೂ ಅವರಿಗೆ ನಿರಂತರ ಯಶಸ್ಸು ಸಿಗಲಿ ಎಂದು ಹಾರೈಸಿದ್ದಾರೆ.

ಪ್ರಧಾನಮಂತ್ರಿಗಳ ಕಾರ್ಯಾಲಯದ ಎಕ್ಸ್ ಪೋಸ್ಟ್ ಹೀಗಿದೆ:

“ಏಷ್ಯನ್ ಪ್ಯಾರಾ ಗೇಮ್ಸ್ 2026ರಲ್ಲಿ ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ ಎಸ್ ಹೆಚ್ 1 ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿರುವ ಮೋನಾ ಅಗರ್ವಾಲ್ ಅವರಿಗೆ ಅಭಿನಂದನೆಗಳು! ಅವರ ಅತ್ಯುತ್ತಮ ಅಂಕ ಗಳಿಕೆಯು ಏಷ್ಯನ್ ಪ್ಯಾರಾ ಗೇಮ್ಸ್‌ ನಲ್ಲಿ ಹೊಸ ದಾಖಲೆಯನ್ನೂ ನಿರ್ಮಿಸಿದ್ದು ಅವರ ಅಮೋಘ ಸಾಧನೆಗೆ ವಂದನೆಗಳು! ಭಾರತದ ಮೊದಲ ದಿನದಾಟವನ್ನು ಇನ್ನಷ್ಟುವಿಶೇಷವಾಗಿಸಿದ ಅಮೋಘ ಸಾಧನೆ ಇದಾಗಿದೆ. ಅವರ ನಿಖರತೆ, ದೃಢನಿಶ್ಚಯ ಮತ್ತು ಸಂಯಮ ನಿಜಕ್ಕೂ ಶ್ಲಾಘನೀಯ. ಮುಂದಿನ ಸ್ಪರ್ಧೆಗಳಲ್ಲಿ ಅವರಿಗೆ ಮತ್ತಷ್ಟು ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ: ಪ್ರಧಾನಮಂತ್ರಿ @narendramodi”

 

*****


(ಪ್ರಕಟಣೆ ಐ.ಡಿ.: 2325086) ವಿಸಿಟರ್ ಕೌಂಟರ್ : 7
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Assamese , Bengali , Manipuri , Punjabi , Gujarati , Tamil , Malayalam