ಗೃಹ ವ್ಯವಹಾರಗಳ ಸಚಿವಾಲಯ
ಭಾರತವು ನವದೆಹಲಿಯಲ್ಲಿ ಮೊದಲ ಬಿಮ್ ಸ್ಟೆಕ್ (BIMSTEC) ಗೃಹ ಸಚಿವರ ಸಭೆಯನ್ನು ಆಯೋಜಿಸಲು ಹೆಮ್ಮೆಪಡುತ್ತದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಹೇಳಿದ್ದಾರೆ
ಈ ಐತಿಹಾಸಿಕ ಸಭೆಯು ಭಯೋತ್ಪಾದನೆ, ಅಂತಾರಾಷ್ಟ್ರೀಯ ಸಂಘಟಿತ ಅಪರಾಧ, ಮಾದಕ ದ್ರವ್ಯಗಳು, ಉಗ್ರಗಾಮಿ ಚಿಂತನೆಗೆ ಪ್ರಚೋದನೆ, ಮಾನವ ಕಳ್ಳಸಾಗಣೆ, ಅಕ್ರಮ ಹಣಕಾಸು ಹರಿವು ಮತ್ತು ಸೈಬರ್ ಬೆದರಿಕೆಗಳನ್ನು ಎದುರಿಸಲು ನಮ್ಮ ಸಾಮೂಹಿಕ ಸಂಕಲ್ಪವನ್ನು ಒತ್ತಿಹೇಳುತ್ತದೆ
ದೃಢವಾದ ಸಮನ್ವಯದ ಮೂಲಕ, ಸುರಕ್ಷಿತ, ಬಲವಾದ ಮತ್ತು ಹೆಚ್ಚು ಸುಭದ್ರವಾದ ಬಿಮ್ ಸ್ಟೆಕ್ ಪ್ರದೇಶವನ್ನು ನಿರ್ಮಿಸಲು ನಾವು ಬದ್ಧರಾಗಿದ್ದೇವೆ
ಗೃಹ ಸಚಿವರಿಗೆ ಮತ್ತು ಸದಸ್ಯ ರಾಷ್ಟ್ರಗಳ ನಿಯೋಗಗಳಿಗೆ ಕೇಂದ್ರ ಗೃಹ ಸಚಿವರು ಆತ್ಮೀಯ ಸ್ವಾಗತ ಕೋರಿದರು
ಪ್ರಕಟಣಾ ದಿನಾಂಕ:
12 OCT 2026 6:29PM by PIB Bengaluru
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ಮಾತನಾಡಿ, ಅಕ್ಟೋಬರ್ 13, 2026ರಂದು ನವದೆಹಲಿಯಲ್ಲಿ ನಡೆಯಲಿರುವ ಮೊದಲ ಬಿಮ್ ಸ್ಟೆಕ್ ಗೃಹ ಸಚಿವರ ಸಭೆಯನ್ನು ಆಯೋಜಿಸಲು ಭಾರತ ಹೆಮ್ಮೆ ಪಡುತ್ತದೆ ಎಂದು ಹೇಳಿದರು.
ಎಕ್ಸ್ ನಲ್ಲಿ ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರ ಹೀಗೆ ಹೇಳಿದ್ದಾರೆ, "ಅಕ್ಟೋಬರ್ 13, 2026 ರಂದು ನವದೆಹಲಿಯಲ್ಲಿ ಮೊದಲ ಬಿಮ್ ಸ್ಟೆಕ್ ಗೃಹ ಸಚಿವರ ಸಭೆಯನ್ನು ಆಯೋಜಿಸಲು ಭಾರತಕ್ಕೆ ಹೆಮ್ಮೆಯಿದೆ. ಗೌರವಾನ್ವಿತ ಗೃಹ ಸಚಿವರಿಗೆ ಮತ್ತು ಸದಸ್ಯ ರಾಷ್ಟ್ರಗಳ ನಿಯೋಗಗಳಿಗೆ ನಾನು ಆತ್ಮೀಯ ಸ್ವಾಗತವನ್ನು ಕೋರುತ್ತೇನೆ. ಈ ಐತಿಹಾಸಿಕ ಸಭೆಯು ಭಯೋತ್ಪಾದನೆ, ಅಂತಾರಾಷ್ಟ್ರೀಯ ಸಂಘಟಿತ ಅಪರಾಧ, ಮಾದಕ ದ್ರವ್ಯ, ಉಗ್ರಗಾಮಿ ಚಿಂತನೆಗೆ ಪ್ರಚೋದನೆ, ಮಾನವ ಕಳ್ಳಸಾಗಣೆ, ಅಕ್ರಮ ಹಣಕಾಸು ಹರಿವು ಮತ್ತು ಸೈಬರ್ ಬೆದರಿಕೆಗಳನ್ನು ಎದುರಿಸಲು ನಮ್ಮ ಸಾಮೂಹಿಕ ಸಂಕಲ್ಪವನ್ನು ಒತ್ತಿಹೇಳುತ್ತದೆ. ದೃಢವಾದ ಸಮನ್ವಯದ ಮೂಲಕ, ಸುರಕ್ಷಿತ, ಬಲವಾದ ಮತ್ತು ಹೆಚ್ಚು ಸುಭದ್ರವಾದ ಬಿಮ್ ಸ್ಟೆಕ್ ಪ್ರದೇಶವನ್ನು ನಿರ್ಮಿಸಲು ನಾವು ಬದ್ಧರಾಗಿದ್ದೇವೆ."
*****
(ಪ್ರಕಟಣೆ ಐ.ಡಿ.: 2322661)
ವಿಸಿಟರ್ ಕೌಂಟರ್ : 23
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
हिन्दी
,
Marathi
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam