ಪ್ರಧಾನ ಮಂತ್ರಿಯವರ ಕಛೇರಿ
ವಿಕಸಿತ ಭಾರತವನ್ನು ರೂಪಿಸುವ ಮತ್ತು ಜಾಗತಿಕ ದಕ್ಷಿಣಕ್ಕೆ ಸ್ಫೂರ್ತಿ ನೀಡುವ ನಾಯಕತ್ವ ಮತ್ತು ಸೇವೆಯ ಕುರಿತಾದ ಲೇಖನವನ್ನು ಹಂಚಿಕೊಂಡ ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
07 OCT 2026 12:23PM by PIB Bengaluru
ಭೂತಾನ್ ಪ್ರಧಾನಮಂತ್ರಿ ಶ್ರೀ ತ್ಸೆರಿಂಗ್ ಟೋಬ್ಗೆ ಅವರ ಲೇಖನವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹಂಚಿಕೊಂಡಿದ್ದಾರೆ. ಈ ಲೇಖನವು, ಪ್ರಧಾನಮಂತ್ರಿಯವರ ನಾಯಕತ್ವವು ಬುದ್ಧಿವಂತಿಕೆ, ಸಹಾನುಭೂತಿ, ಧೈರ್ಯ ಮತ್ತು ನಿಸ್ವಾರ್ಥ ಸೇವೆಯನ್ನು ಹೇಗೆ ಪ್ರತಿಬಿಂಬಿಸುತ್ತದೆ ಎಂಬುದನ್ನು ಉಲ್ಲೇಖಿಸುತ್ತದೆ.
ವಿಕಸಿತ ಭಾರತವು ಈ ಮೌಲ್ಯಗಳ ಸ್ಪಷ್ಟ ಅಭಿವ್ಯಕ್ತಿಯಾಗಿ ಹೇಗೆ ನಿಂತಿದೆ ಎಂಬುದನ್ನು ಶ್ರೀ ಟೋಬ್ಗೆ ಅವರು ಉತ್ತಮ ರೀತಿಯಲ್ಲಿ ವಿವರಿಸಿದ್ದಾರೆ, ಭಾರತವು ಪರಸ್ಪರ ಹಂಚಿಕೆಯ ದೃಷ್ಟಿಕೋನವನ್ನು ಒದಗಿಸುತ್ತದೆ ಮತ್ತು ಅದನ್ನು ನಿರ್ಮಿಸಲು ಜನರನ್ನು ಪ್ರೇರೇಪಿಸುತ್ತದೆ, ಅದೇ ಸಮಯದಲ್ಲಿ ಬಲಿಷ್ಠ ಭಾರತವು ತನ್ನ ನೆರೆಹೊರೆಯವರಿಗೆ ಮತ್ತು ಜಾಗತಿಕ ದಕ್ಷಿಣಕ್ಕೆ ಹೆಚ್ಚಿನ ಸಹಾಯವನ್ನು ಮಾಡಬಹುದು ಎಂದು ಅವರು ತಮ್ಮ ಲೇಖನದಲ್ಲಿ ಹೇಳಿದ್ದಾರೆ.
ಪ್ರಧಾನಮಂತ್ರಿಯವರ ಕಾರ್ಯಾಲಯವು ಎಕ್ಸ್ ತಾಣದಲ್ಲಿ ಈ ರೀತಿ ಸಂದೇಶ ಹಂಚಿಕೆ ಮಾಡಿದೆ:
"ಪ್ರಧಾನಮಂತ್ರಿ @narendramodi ಅವರ ನಾಯಕತ್ವವು ಬುದ್ಧಿವಂತಿಕೆ, ಸಹಾನುಭೂತಿ, ಧೈರ್ಯ ಮತ್ತು ನಿಸ್ವಾರ್ಥ ಸೇವೆಯನ್ನು ಪ್ರತಿಬಿಂಬಿಸುತ್ತದೆ" ಎಂದು ಭೂತಾನಿನ ಪ್ರಧಾನಮಂತ್ರಿ @tsheringtobgay ಅವರು ತಮ್ಮ ಲೇಖನದಲ್ಲಿ ಬರೆದಿದ್ದಾರೆ. ಭಾರತವು ಪರಸ್ಪರ ಹಂಚಿಕೆಯ ದೃಷ್ಟಿಕೋನವನ್ನು ನೀಡುವ ಮತ್ತು ವಿಕಸಿತ ಭಾರತವನ್ನು ನಿರ್ಮಿಸಲು ಜನರಿಗೆ ಸ್ಫೂರ್ತಿ ನೀಡುವ ಮೂಲಕ, ವಿಕಸಿತ ಭಾರತವನ್ನು ಈ ಮೌಲ್ಯಗಳ ಸ್ಪಷ್ಟ ಅಭಿವ್ಯಕ್ತಿಯಾಗಿ ಅವರು ನೋಡುತ್ತಿದ್ದಾರೆ.
ಬಲವಾದ ಭಾರತವು ತನ್ನ ನೆರೆಹೊರೆಯವರಿಗೆ ಮತ್ತು ಜಾಗತಿಕ ದಕ್ಷಿಣಕ್ಕೆ ಹೆಚ್ಚಿನದನ್ನು ಮಾಡಬಹುದು ಎಂದು ಅವರು ತಮ್ಮ ಲೇಖನದಲ್ಲಿ ಹೇಳಿದ್ದಾರೆ. ಇದು, ನಾಯಕತ್ವ ಮತ್ತು ಸೇವೆಯ ಕುರಿತು ಚಿಂತನಶೀಲ ಪ್ರತಿಬಿಂಬವಾಗಿದೆ."
*****
(ಪ್ರಕಟಣೆ ಐ.ಡಿ.: 2320028)
ವಿಸಿಟರ್ ಕೌಂಟರ್ : 5