ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
ಪಶ್ಚಿಮ ಏಷ್ಯಾದ ಲಾಜಿಸ್ಟಿಕ್ಸ್ ಅಡಚಣೆಗಳ ನಡುವೆ ರಫ್ತುದಾರರಿಗೆ ಬೆಂಬಲ ನೀಡಲು, ರಿಲೀಫ್ (RELIEF) ಉಪಕ್ರಮದ ಕಾರ್ಯಾಚರಣೆಯ ಕಾಲಮಿತಿಯನ್ನು ವಿಸ್ತರಿಸಿದ ಸರ್ಕಾರ
ಪ್ರಕಟಣಾ ದಿನಾಂಕ:
02 OCT 2026 11:01AM by PIB Bengaluru
ಪಶ್ಚಿಮ ಏಷ್ಯಾದಲ್ಲಿ ನಿರಂತರವಾಗಿ ನಡೆಯುತ್ತಿರುವ ಭೌಗೋಳಿಕ ರಾಜಕೀಯ ಅಡಚಣೆಗಳು ಮತ್ತು ಗಲ್ಫ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಾದ್ಯಂತ ಕಡಲ ಲಾಜಿಸ್ಟಿಕ್ಸ್ ಮೇಲಿನ ಆಗುತ್ತಿರುವ ಅದರ ಪ್ರಭಾವವನ್ನು ಪರಿಗಣಿಸಿ, ವಾಣಿಜ್ಯ ಇಲಾಖೆಯು 30 ಸೆಪ್ಟೆಂಬರ್ 2026 ರ ದಿನಾಂಕದ ಅಧಿಸೂಚನೆ ಸಂಖ್ಯೆ 37/2026-27 ರ ಮೂಲಕ ರಫ್ತು ಪ್ರೋತ್ಸಾಹಕ ಮಿಷನ್ (EPM) ಅಡಿಯಲ್ಲಿ ಕಾಲಬದ್ಧ ಉಪಕ್ರಮವಾದ ರಿಲೀಫ್ - ರಫ್ತು ಸುಲಭಗೊಳಿಸುವಿಕೆಗಾಗಿ ಸ್ಥಿತಿಸ್ಥಾಪಕತ್ವ ಮತ್ತು ಲಾಜಿಸ್ಟಿಕ್ಸ್ ಉಪಕ್ರಮದ (RELIEF – Resilience & Logistics Intervention for Export Facilitation) 'ಘಟಕ II' ಅಡಿಯಲ್ಲಿನ ಕಾಲಮಿತಿಯನ್ನು ವಿಸ್ತರಿಸಿದೆ.
'ರಿಲೀಫ್' ಯೋಜನೆಯ ಘಟಕ II ನಿರ್ದಿಷ್ಟಪಡಿಸಿದ ಪ್ರದೇಶಗಳಿಗೆ ಮುಂಬರುವ ಸರಕು ರವಾನೆಗಾಗಿ ಶೇಕಡಾ 95 ರಷ್ಟು ಅಪಾಯದ ರಕ್ಷಣೆಯೊಂದಿಗೆ ಇಸಿಜಿಸಿ (ECGC) ಕವರ್ ಪಡೆಯಲು ರಫ್ತುದಾರರನ್ನು ಪ್ರೋತ್ಸಾಹಿಸುತ್ತದೆ. ಈ ಘಟಕವು 16 ಮಾರ್ಚ್ 2026 ರಂದು ಅಥವಾ ನಂತರ ಪಡೆದ ಸ್ಟ್ಯಾಂಡ್ ಅಲೋನ್ ಪಾಲಿಸಿಗಳು ಅಥವಾ ಹೋಲ್ ಟರ್ನೋವರ್ ಪಾಲಿಸಿಗಳಿಗೆ ಲಭ್ಯವಿರುತ್ತದೆ. ಅನುಕೂಲಗಳ ಅಡಿಯಲ್ಲಿ ಒಳಗೊಂಡಿರುವ ಸರಕುಗಳ ಪ್ರಕಾರಗಳಲ್ಲಿ ಫುಲ್ ಕಂಟೈನರ್ ಲೋಡ್ (FCL), ಲೆಸ್ ದ್ಯಾನ್ ಕಂಟೈನರ್ ಲೋಡ್ (LCL), ಮತ್ತು ರೀಫರ್ ಕಂಟೈನರ್‌ಗಳು (ಇಂಧನ ಸರಕುಗಳನ್ನು ಹೊರತುಪಡಿಸಿ) ಸೇರಿವೆ. ಮೇಲಾಗಿ, ರಿಲೀಫ್‌ನ ಈ ಘಟಕವು ಅರ್ಹ ಅವಧಿಗೆ ರಫ್ತುದಾರರು ಪಾವತಿಸುವ ಪ್ರೀಮಿಯಂ ಅನ್ನು ಅಡಚಣೆ-ಪೂರ್ವ ಮಟ್ಟಕ್ಕಿಂತ ಮೀರಿ ಹೆಚ್ಚಿಸುವುದಿಲ್ಲ ಎಂಬುದನ್ನು ಖಚಿತಪಡಿಸುತ್ತದೆ.
ಗಲ್ಫ್ ಮತ್ತು ವಿಶಾಲವಾದ ಪಶ್ಚಿಮ ಏಷ್ಯಾದ ಕಡಲ ಕಾರಿಡಾರ್‌ನಲ್ಲಿನ ಅಡಚಣೆಗಳಿಂದಾಗಿ ಉಂಟಾದ ಅಸಾಧಾರಣ ಸರಕು ಸಾಗಣೆ ವೆಚ್ಚದ ಏರಿಕೆ, ಹೆಚ್ಚಿದ ವಿಮಾ ಪ್ರೀಮಿಯಂ ಮತ್ತು ಯುದ್ಧ ಸಂಬಂಧಿತ ರಫ್ತು ಅಪಾಯಗಳಿಂದ ಬಾಧಿತರಾದ ಭಾರತೀಯ ರಫ್ತುದಾರರನ್ನು ಬೆಂಬಲಿಸಲು ರಿಲೀಫ್ (RELIEF) ಯೋಜನೆಯನ್ನು 19 ಮಾರ್ಚ್ 2026 ರಂದು ಗುರಿ ಆಧಾರಿತ ಉಪಕ್ರಮವಾಗಿ ಪ್ರಾರಂಭಿಸಲಾಯಿತು.
ಮೇಲಿನ ವಿಸ್ತರಣೆಯು ಪ್ರಸ್ತುತ ಭೌಗೋಳಿಕ ರಾಜಕೀಯ ಪರಿಸ್ಥಿತಿ ಮತ್ತು ಲಾಜಿಸ್ಟಿಕ್ಸ್ ಅನಿಶ್ಚಿತತೆಗಳ ನಡುವೆ ರಫ್ತು ಸ್ಥಿತಿಸ್ಥಾಪಕತ್ವವನ್ನು ಖಚಿತಪಡಿಸಿಕೊಳ್ಳಲು, ವ್ಯಾಪಾರದ ಹರಿವನ್ನು ಕಾಯ್ದುಕೊಳ್ಳಲು ಮತ್ತು ರಫ್ತುದಾರರನ್ನು ಬೆಂಬಲಿಸಲು ಭಾರತ ಸರ್ಕಾರದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.
*****
(ಪ್ರಕಟಣೆ ಐ.ಡಿ.: 2318071)
ವಿಸಿಟರ್ ಕೌಂಟರ್ : 10