ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಎಫ್ ಸಿ ಆರ್ ಎ ನೋಂದಣಿಗಾಗಿ ಲಂಚಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ಇಬ್ಬರು ಅಧಿಕಾರಿಗಳ ಬಂಧನ

ಪ್ರಕಟಣಾ ದಿನಾಂಕ: 29 SEP 2026 12:45PM by PIB Bengaluru

ಗೃಹ ಸಚಿವಾಲಕ್ಕೆ ಸಿಕ್ಕ ನಿರ್ದಿಷ್ಟ ಮಾಹಿತಿಯ ಮೇರೆಗೆ, ದೆಹಲಿ ಪೊಲೀಸರ ವಿಶೇಷ ಘಟಕವು ಕೇಂದ್ರ ಸಂಸ್ಥೆಗಳ ಸಹಯೋಗದೊಂದಿಗೆ ಸೆಪ್ಟೆಂಬರ್ 28, 2026 ರಂದು ನವದೆಹಲಿಯಲ್ಲಿ ಇಬ್ಬರು ಸರ್ಕಾರಿ ಅಧಿಕಾರಿಗಳನ್ನು ಬಂಧಿಸಿತು. ಬಂಧಿತರಲ್ಲಿ ಒಬ್ಬರು ಹಿರಿಯ ಲೆಕ್ಕಾಧಿಕಾರಿಯಾಗಿ ಮತ್ತು ಇನ್ನೊಬ್ಬರು ಲೆಕ್ಕಾಧಿಕಾರಿಯಾಗಿ  ಕಾರ್ಯನಿರ್ವಹಿಸುತ್ತಿದ್ದಾರೆ. ಒಂದು ಸಂಘಟನೆಯ ಬಾಕಿ ಇರುವ ಎಫ್ ಸಿ ಆರ್ ಎ ನೋಂದಣಿ ಪ್ರಕ್ರಿಯೆಯನ್ನು ಅನುಕೂಲ ಮಾಡಿಕೊಡಲು, ಅವರು ಆ ಸಂಘಟನೆಯನ್ನು ಸಂಪರ್ಕಿಸಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.

ಬಂಧಿತರಲ್ಲಿ ಒಬ್ಬರು ಪ್ರಸ್ತುತ ಗೃಹ ಸಚಿವಾಲಯದ 'ವಿದೇಶಿಯರ ವಿಭಾಗ'ದಲ್ಲಿ) ಕರ್ತವ್ಯ ನಿರ್ವಹಿಸುತ್ತಿದ್ದಾರೆ, ಇನ್ನೊಬ್ಬರು ಪ್ರಸ್ತುತ 'ವೇತನ ಮತ್ತು ಲೆಕ್ಕಪತ್ರ ಕಚೇರಿ'ಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು ಈ ಹಿಂದೆ 'ವಿದೇಶಿಯರ ವಿಭಾಗ'ದಲ್ಲಿ ಸೇವೆ ಸಲ್ಲಿಸಿದ್ದರು. ಲಂಚದ ಬದಲಾಗಿ ನೋಂದಣಿ ಮತ್ತು ನವೀಕರಣ ಪ್ರಕ್ರಿಯೆಗಳಲ್ಲಿ ಸಹಾಯ ಮಾಡಲು ಅವರು ಕೆಲವು ಸಂಸ್ಥೆಗಳೊಂದಿಗೆ ಸಂಪರ್ಕದಲ್ಲಿದ್ದರು ಎಂಬುದು ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ.

ಗೃಹ ಸಚಿವಾಲಯವು ಭ್ರಷ್ಟಾಚಾರದ ವಿರುದ್ಧ 'ಶೂನ್ಯ ಸಹಿಷ್ಣುತೆ'  ನೀತಿಯನ್ನು ಹೊಂದಿದೆ ಮತ್ತು ಈ ವಿಷಯದಲ್ಲಿ ಸೂಕ್ತ ಕಾನೂನು ಹಾಗೂ ಇಲಾಖಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಎಲ್ಲಾ ಎಫ್ ಸಿ ಆರ್ ಎ ಸಂಬಂಧಿತ ಸೇವೆಗಳನ್ನು ಎಫ್ ಸಿ ಆರ್ ಎ ಪೋರ್ಟಲ್ ಮೂಲಕ ಆನ್ ಲೈನ್ ನಲ್ಲಿ ಒದಗಿಸಲಾಗುತ್ತದೆ ಮತ್ತು ಯಾವುದೇ ಎಫ್ ಸಿ ಆರ್ ಎ ಸೇವೆಗೆ ಸಹಾಯ ಮಾಡಲು ಯಾವುದೇ ಮಧ್ಯವರ್ತಿ, ಏಜೆಂಟ್ ಅಥವಾ ವ್ಯಕ್ತಿಗೆ ಅಧಿಕಾರವಿರುವುದಿಲ್ಲ. 

 

*****


(ಪ್ರಕಟಣೆ ಐ.ಡಿ.: 2316515) ವಿಸಿಟರ್ ಕೌಂಟರ್ : 5