ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಏಷ್ಯನ್ ಕ್ರೀಡಾಕೂಟದ ಪುರುಷರ ಎತ್ತರದ ಜಿಗಿತದಲ್ಲಿ ಐತಿಹಾಸಿಕ ಬೆಳ್ಳಿ ಪದಕ ಗೆದ್ದ ಸರ್ವೇಶ್ ಕುಶಾರೆ ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 27 SEP 2026 9:19PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಇಂದು ಏಷ್ಯನ್ ಕ್ರೀಡಾಕೂಟದ ಪುರುಷರ ಹೈಜಂಪ್‌ನಲ್ಲಿ ಐತಿಹಾಸಿಕ ಬೆಳ್ಳಿ ಪದಕ ಗೆದ್ದ ಸರ್ವೇಶ್ ಕುಶಾರೆ ಅವರನ್ನು ಅಭಿನಂದಿಸಿದ್ದಾರೆ.

ಈ ಸ್ಪರ್ಧೆಯಲ್ಲಿ ಭಾರತದ ಐದು ದಶಕಗಳ ಪದಕದ ಕಾಯುವಿಕೆಯನ್ನು ಅವರು ತಮ್ಮ ಅದ್ಭುತ ಪ್ರಯತ್ನದಿಂದ ಕೊನೆಗೊಳಿಸಿದ್ದಾರೆ ಎಂದು ಪ್ರಧಾನಮಂತ್ರಿ ಹೇಳಿದ್ದಾರೆ. ಪರಿಶ್ರಮ ಮತ್ತು ದೃಢಸಂಕಲ್ಪದ ಈ ಸಾಧನೆ ನಿಜಕ್ಕೂ ಸ್ಮರಣೀಯವಾಗಿದೆ ಎಂದು ಶ್ರೀ ನರೇಂದ್ರ ಮೋದಿ ಉಲ್ಲೇಖಿಸಿದ್ದಾರೆ.

ಪ್ರಧಾನಮಂತ್ರಿ ಕಾರ್ಯಾಲಯ ಎಕ್ಸ್ ಪೋಸ್ಟ್ ನಲ್ಲಿ ಹೀಗೆ ಹಂಚಿಕೊಂಡಿದೆ;

"ಏಷ್ಯನ್ ಕ್ರೀಡಾಕೂಟದ ಪುರುಷರ  ಎತ್ತರದ ಜಿಗಿತ (ಹೈಜಂಪ್‌)ದಲ್ಲಿ ಸರ್ವೇಶ್ ಕುಶಾರೆಗೆ ಐತಿಹಾಸಿಕ ಬೆಳ್ಳಿ! ಈ ಕ್ರೀಡಾಕೂಟದಲ್ಲಿ ಪದಕಕ್ಕಾಗಿ ಭಾರತದ ಐದು ದಶಕಗಳ ಕಾಯುವಿಕೆಯನ್ನು ಅವರು ಅತ್ಯುತ್ತಮ ಪ್ರಯತ್ನದಿಂದ ಕೊನೆಗೊಳಿಸಿದ್ದಾರೆ. ಪರಿಶ್ರಮ ಮತ್ತು ದೃಢಸಂಕಲ್ಪದಿಂದ ಇದು ನಿಜಕ್ಕೂ ಸ್ಮರಣೀಯ ಸಾಧನೆಯಾಗಿದೆ: ಪ್ರಧಾನಮಂತ್ರಿ @narendramodi"

 

*****


(ಪ್ರಕಟಣೆ ಐ.ಡಿ.: 2315858) ವಿಸಿಟರ್ ಕೌಂಟರ್ : 5
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Assamese , Bengali , Manipuri , Punjabi , Gujarati , Odia