ರಕ್ಷಣಾ ಸಚಿವಾಲಯ
ಮುಂದಿನ 10 ವರ್ಷಗಳಲ್ಲಿ ಜಾಗತಿಕ ಪಾಲುದಾರಿಕೆಗಾಗಿ ಭಾರತದ ಕಾರ್ಯತಂತ್ರದ ಮಾರ್ಗಸೂಚಿ ಮತ್ತು ದೃಷ್ಟಿಕೋನವನ್ನು ವಿವರಿಸುವ ರಕ್ಷಣಾ ರಾಜತಾಂತ್ರಿಕ ದಾಖಲೆ ''ರಕ್ಷಾ'' ಅನ್ನು ಅನಾವರಣಗೊಳಿಸಿದ ರಕ್ಷಣಾ ಸಚಿವರು
ಪ್ರಕಟಣಾ ದಿನಾಂಕ:
03 SEP 2026 12:55PM by PIB Bengaluru
ರಕ್ಷಣಾ ಸಚಿವರಾದ ಶ್ರೀ ರಾಜನಾಥ್ ಸಿಂಗ್ ಅವರು ಸೆಪ್ಟೆಂಬರ್ 03, 2026 ರಂದು ನವದೆಹಲಿಯಲ್ಲಿ ರಕ್ಷಣಾ ರಾಜತಾಂತ್ರಿಕತೆ ಕುರಿತ 'ರಕ್ಷಾ' ದಾಖಲೆಯನ್ನು ಬಿಡುಗಡೆ ಮಾಡಿದರು. ಈ ಸಮಗ್ರ ನೀತಿ ಚೌಕಟ್ಟು ಮುಂದಿನ 10 ವರ್ಷಗಳಲ್ಲಿ ಜಾಗತಿಕ ರಕ್ಷಣಾ ಪಾಲುದಾರಿಕೆಗಾಗಿ ಭಾರತದ ಕಾರ್ಯತಂತ್ರದ ಮಾರ್ಗಸೂಚಿ ಮತ್ತು ದೃಷ್ಟಿಕೋನವನ್ನು ವಿವರಿಸುತ್ತದೆ.
_20260903125604_2a2683.jpeg)
ಈ ದಾಖಲೆಯು ಭಾರತದ ಕಾರ್ಯತಂತ್ರದ ತೊಡಗಿಸಿಕೊಳ್ಳುವಿಕೆಯಲ್ಲಿನ ಬದಲಾವಣೆಯನ್ನು ಸೂಚಿಸುತ್ತದೆ, ರಾಷ್ಟ್ರೀಯ ಭದ್ರತಾ ಉದ್ದೇಶಗಳನ್ನು ಪೂರ್ವಭಾವಿ ಜಾಗತಿಕ ಸಹಕಾರದೊಂದಿಗೆ ಹೊಂದಿಸುತ್ತದೆ, ದೀರ್ಘಕಾಲೀನ ಸ್ಥಿರತೆ ಮತ್ತು ಪರಸ್ಪರ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಕಾರ್ಯತಂತ್ರದ ನೀಲನಕ್ಷೆಯಲ್ಲಿ ಉಲ್ಲೇಖಿಸಲಾದ ಪ್ರಮುಖ ಆಧಾರ ಸ್ತಂಭಗಳು ಇವುಗನ್ನು ಒಳಗೊಂಡಿವೆ:
- ಕಾರ್ಯತಂತ್ರ ಪಾಲುದಾರಿಕೆ: ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಭದ್ರತಾ ಸಹಕಾರವನ್ನು ಆಳಗೊಳಿಸುವುದು
- ಸಾಮರ್ಥ್ಯ ವರ್ಧನೆ: ಜಂಟಿ ಮಿಲಿಟರಿ ಸಮರಾಭ್ಯಾಸಗಳು, ತರಬೇತಿ ಕಾರ್ಯಕ್ರಮಗಳು ಮತ್ತು ಸ್ನೇಹಪರ ರಾಷ್ಟ್ರಗಳೊಂದಿಗೆ ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳುವುದು
- ದೇಶೀಯ ರಫ್ತು: ರಾಷ್ಟ್ರವನ್ನು ವಿಶ್ವಾಸಾರ್ಹ ಜಾಗತಿಕ ರಕ್ಷಣಾ ಉತ್ಪಾದನಾ ಕೇಂದ್ರವಾಗಿ ಸ್ಥಾಪಿಸಲು 'ಮೇಕ್-ಇನ್-ಇಂಡಿಯಾ 'ರಕ್ಷಣಾ ವೇದಿಕೆಗಳನ್ನು ಉತ್ತೇಜಿಸುವುದು
- ಕಡಲ ಭದ್ರತೆ: ಹಿಂದೂ ಮಹಾಸಾಗರ ಪ್ರದೇಶದಲ್ಲಿ ನಿವ್ವಳ ಭದ್ರತಾ ಪೂರೈಕೆದಾರ ಮತ್ತು ಮೊದಲ ಪ್ರತಿಸ್ಪಂದಕನಾಗಿ ಭಾರತದ ಪಾತ್ರವನ್ನು ಬಲಪಡಿಸುವುದು
ರಕ್ಷಣಾ ರಾಜತಾಂತ್ರಿಕತೆಯು ಭಾರತದ ವಿದೇಶಾಂಗ ನೀತಿಯ ಪ್ರಮುಖ ಆಧಾರಸ್ತಂಭವಾಗಿರುವುದರಿಂದ, ಈ ದಾಖಲೆಯು ಮುಂದಿನ ದಶಕಕ್ಕೆ ಸ್ಪಷ್ಟವಾದ, ಕಾರ್ಯಸಾಧ್ಯವಾದ ದೃಷ್ಟಿಕೋನವನ್ನು ಒದಗಿಸುತ್ತದೆ, ವಿಕಸನಗೊಳ್ಳುತ್ತಿರುವ ಜಾಗತಿಕ ವ್ಯವಸ್ಥೆಯಲ್ಲಿ ಭಾರತವು ಶಾಂತಿ, ಸ್ಥಿರತೆ ಮತ್ತು ನಿಯಮ ಆಧಾರಿತ ಕ್ರಮದ ಆಧಾರವಾಗಿ ಉಳಿಯುವುದನ್ನು ಖಚಿತಪಡಿಸುತ್ತದೆ.
_20260903125615_8625a0.jpeg)
ಸೇನಾ ಮುಖ್ಯಸ್ಥ ಜನರಲ್ ಧೀರಜ್ ಸೇಠ್; ರಕ್ಷಣಾ ಕಾರ್ಯದರ್ಶಿ ಶ್ರೀ ರಾಜೇಶ್ ಕುಮಾರ್ ಸಿಂಗ್; ಕಾರ್ಯದರ್ಶಿ (ರಕ್ಷಣಾ ಉತ್ಪಾದನೆ) ಶ್ರೀ ಸಂಜೀವ್ ಕುಮಾರ್; ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ (ಪೂರ್ವ) ಶ್ರೀ ರುದ್ರೇಂದ್ರ ಟಂಡನ್; ವಾಯುಪಡೆಯ ಉಪ ಮುಖ್ಯಸ್ಥ ಏರ್ ಮಾರ್ಷಲ್ ಅಶುತೋಷ್ ದೀಕ್ಷಿತ್; ನೌಕಾಪಡೆಯ ಉಪ ಮುಖ್ಯಸ್ಥ ವೈಸ್ ಅಡ್ಮಿರಲ್ ಅಜಯ್ ಕೊಚ್ಚಾರ್; ಚೀಫ್ಸ್ ಆಫ್ ಸ್ಟಾಫ್ ಕಮಿಟಿಯ ಅಧ್ಯಕ್ಷರ ಇಂಟಿಗ್ರೇಟೆಡ್ ಡಿಫೆನ್ಸ್ ಸ್ಟಾಫ್ ಮುಖ್ಯಸ್ಥ ಏರ್ ಮಾರ್ಷಲ್ ತೇಜಿಂದರ್ ಸಿಂಗ್ ಹಾಗೂ ರಕ್ಷಣಾ ಸಚಿವಾಲಯ, ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯದ ಇತರ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
*****
(ಪ್ರಕಟಣೆ ಐ.ಡಿ.: 2306283)
ವಿಸಿಟರ್ ಕೌಂಟರ್ : 10