ರಕ್ಷಣಾ ಸಚಿವಾಲಯ
azadi ka amrit mahotsav

ಭಾರತೀಯ ಸೇನೆಯ ಪ್ರಾದೇಶಿಕ ಸೇನೆ ವತಿಯಿಂದ ‘ಟೆರಿಯಾ ಸೈಬರ್ ಕ್ವೆಸ್ಟ್ 2026’ ಪ್ರಾರಂಭ

प्रविष्टि तिथि: 21 AUG 2026 11:13AM by PIB Bengaluru

ಪ್ರಾದೇಶಿಕ ಸೇನೆಯು ಸೈಬರ್‌ ಪೀಸ್ ಸಹಯೋಗದೊಂದಿಗೆ ಸಮಕಾಲೀನ ರಕ್ಷಣೆ, ಸೈಬರ್ ಭದ್ರತೆ ಮತ್ತು ಇನ್ಫರ್ಮೇಷನ್-ಡೊಮೇನ್ ಸವಾಲುಗಳಿಗೆ ನವೀನ ಪರಿಹಾರಗಳನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿರುವ ರಾಷ್ಟ್ರ ಮಟ್ಟದ ಹ್ಯಾಕಥಾನ್ ಆಗಿ ಟೆರಿಯಾ ಸೈಬರ್ ಕ್ವೆಸ್ಟ್ 2026 (ಟಿಸಿಕ್ಯು 3.0) ಅನ್ನು ಪ್ರಾರಂಭಿಸಿದೆ.

ಭಾರತೀಯ ಸೇನೆಯು ಸ್ಪರ್ಧೆಯ ಮೂರನೇ ಆವೃತ್ತಿಯಲ್ಲಿ ಶಿಕ್ಷಣ, ಕೈಗಾರಿಕೆ, ಸಂಶೋಧನಾ ಸಂಸ್ಥೆಗಳು, ಸರ್ಕಾರಿ ಸಂಸ್ಥೆಗಳು ಮತ್ತು ಸಶಸ್ತ್ರ ಪಡೆಗಳ ಪರಿಣಿತ ಪ್ರತಿಭೆಗಳನ್ನು ಒಟ್ಟುಗೂಡಿಸಲು ಬಯಸಿದೆ. ಈ ಉಪಕ್ರಮವು ಕೃತಕ ಬುದ್ಧಿಮತ್ತೆ (ಎಐ), ಸೈಬರ್ ಭದ್ರತೆ, ಬೆದರಿಕೆ ನಿಯಂತ್ರಣ, ಡಿಜಿಟಲ್ ಜಾಗೃತಿ ಸೇರಿದಂತೆ ಉದಯೋನ್ಮುಖ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸಿದ್ದು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದಂತೆ ಸ್ಥಳೀಯ ಪರಿಹಾರಗಳ ಅಭಿವೃದ್ಧಿಯನ್ನು ಉತ್ತೇಜಿಸಲಿದೆ.

ಹಿಂದಿನ ಆವೃತ್ತಿಗಳ ಮೇಲೆ ರೂಪುಗೊಳ್ಳುತ್ತಾ, ಟಿಸಿಕ್ಯು 3.0 ಅನ್ನು ಮೂರು ಸ್ಪರ್ಧಾತ್ಮಕ ಟ್ರ್ಯಾಕ್‌ ಗಳಲ್ಲಿ ನಡೆಸಲಾಗುತ್ತದೆ:

ಬಗ್ ಹಂಟಿಂಗ್ (ತಂತ್ರಾಂಶ ದೋಷ ಪತ್ತೆ): ಇದು ಆನ್‌ ಲೈನ್ *ಕ್ಯಾಪ್ಚರ್-ದಿ-ಫ್ಲಾಗ್* (ಸಿಟಿಎಫ್) ಅರ್ಹತಾ ಸ್ಪರ್ಧೆಯೊಂದಿಗೆ ಪ್ರಾರಂಭವಾಗುವ ಮತ್ತು ಮುಖಾಮುಖಿ ನೇರ ಸ್ಯಾಂಡ್‌ ಬಾಕ್ಸ್ ಅಂತಿಮ ಸ್ಪರ್ಧೆಯಲ್ಲಿ ಕೊನೆಗೊಳ್ಳುವ ಸೈಬರ್ ಭದ್ರತಾ ಸವಾಲಾಗಿದೆ. ಇದರಲ್ಲಿ ಭಾಗವಹಿಸುವವರು ಮಾದರಿ ನಿರ್ಣಾಯಕ ಮೂಲಸೌಕರ್ಯ ಪರಿಸರದ (ಕಂಪ್ಯೂಟರ್ ಮೂಲಕ ಸೃಜಿಸಿದ ನೈಜವಾಗಿ ಕಾಣುವ ಮೂಲಸೌಕರ್ಯ ಕಾರ್ಯನಿರ್ವಹಣಾ ವ್ಯವಸ್ಥೆಯ) ಲೋಪದೋಷಗಳನ್ನು ಗುರುತಿಸಿ ದಾಖಲಿಸಬೇಕಾಗುತ್ತದೆ.

ಎಐ ಕವಚ : ಇದು ಬೆದರಿಕೆ ಮುನ್ಸೂಚನೆ ನೀಡಬಲ್ಲ ಬುದ್ಧಿಮತ್ತೆ, ಸ್ವಯಂಚಾಲಿತ ರಕ್ಷಣಾ ಕಾರ್ಯವಿಧಾನಗಳು ಮತ್ತು ವ್ಯತ್ಯಾಸ ಪತ್ತೆಗೆ ಪರಿಹಾರಗಳನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿರುವ ಎಐ ಮತ್ತು ಮಷಿನ್ ಲರ್ನಿಂಗ್ ಆಧಾರಿತ ಸವಾಲಾಗಿದೆ.

ಸೃಜನಕಾರರ ಸವಾಲು : ಇದು ಡೀಪ್‌ ಫೇಕ್‌ ಗಳು, ಫಿಶಿಂಗ್, ಆನ್‌ ಲೈನ್ ವಂಚನೆಗಳು ಮತ್ತು ತಪ್ಪು ಮಾಹಿತಿಯಂತಹ ಅಪಾಯಗಳನ್ನು ಪರಿಹರಿಸಬಲ್ಲ ಪರಿಣಾಮಕಾರಿ ಜಾಗೃತಿ ಅಭಿಯಾನಗಳನ್ನು ರೂಪಿಸಲು ವಿಷಯ ರಚನೆಕಾರರು, ಸಂವಹನಕಾರರು ಮತ್ತು ಇನ್ ಫ್ಲುಯೆನ್ಸರ್ ಗಳಿಗಾಗಿ ಡಿಜಿಟಲ್ ಮಾಧ್ಯಮ ಮತ್ತು ಕಥೆ ಹೇಳುವ ಸ್ಪರ್ಧೆಯಾಗಿದೆ.

ಸ್ಪರ್ಧೆಗೆ 2026ರ ಆಗಸ್ಟ್ 31 ರವರೆಗೆ ನೋಂದಾಯಿಸಿಕೊಳ್ಳಬಹುದಾಗಿದೆ. ಆನ್‌ ಲೈನ್ ಅರ್ಹತಾ ಆಯ್ಕೆ ಹಂತವು 2026ರ ಸೆಪ್ಟೆಂಬರ್ 1 ರಿಂದ 10 ರವರೆಗೆ ನಡೆಯಲಿದೆ, ನಂತರ ನವದೆಹಲಿಯಲ್ಲಿ ಭವ್ಯವಾದ ಅಂತಿಮ ಸ್ಪರ್ಧೆ - ಗ್ರ್ಯಾಂಡ್ ಫಿನಾಲೆ 2026ರ ಅಕ್ಟೋಬರ್ 6 ರಿಂದ 8 ರವರೆಗೆ ಆಯೋಜನೆಯಾಗಿದೆ. 2026ರ ಅಕ್ಟೋಬರ್ 9 ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

 

*****


(रिलीज़ आईडी: 2302474) आगंतुक पटल : 28
इस विज्ञप्ति को इन भाषाओं में पढ़ें: Telugu , English , Urdu , हिन्दी , Marathi , Bengali , Bengali-TR , Punjabi , Gujarati , Tamil , Malayalam