ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
ಸರ್ಕಾರಿ ಅನುಮೋದಿತ ಪರೀಕ್ಷಾ ಕೇಂದ್ರಗಳಾಗಿ (ಜಿಎಟಿಸಿ) ಮಾನ್ಯತೆಗೆ ಅರ್ಜಿ ಸಲ್ಲಿಸಲು ಅರ್ಹ ಸಂಸ್ಥೆಗಳಿಗೆ ಪ್ರೋತ್ಸಾಹ: ಅರ್ಜಿಗಳು ಸಲ್ಲಿಸಲು 2026ರ ಆಗಸ್ಟ್ 31 ರವರೆಗೆ ಕಾಲಾವಕಾಶ
प्रविष्टि तिथि:
20 AUG 2026 12:24PM by PIB Bengaluru
ಈಗಾಗಲೇ 51 ಜಿಎಟಿಸಿಗಳಿಗೆ ಮಾನ್ಯತೆ | ತಪಾಸಣೆ ವ್ಯಾಪ್ತಿ 23 ವಿಭಾಗಗಳಿಗೆ ವಿಸ್ತರಣೆ
ಹೆಚ್ಚಿನ ಪರಿಶೀಲನಾ ಸಾಮರ್ಥ್ಯ • ವೇಗದ ಸೇವೆಗಳು • ಉತ್ತಮ ಗ್ರಾಹಕ ರಕ್ಷಣೆ
ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ಗ್ರಾಹಕ ವ್ಯವಹಾರಗಳ ಇಲಾಖೆಯು ಕಾನೂನು ಮಾಪನಶಾಸ್ತ್ರ (ಸರ್ಕಾರ ಅನುಮೋದಿತ ಪರೀಕ್ಷಾ ಕೇಂದ್ರ) ನಿಯಮಗಳು 2013ರ ಅಡಿಯಲ್ಲಿ ಸರ್ಕಾರಿ ಅನುಮೋದಿತ ಪರೀಕ್ಷಾ ಕೇಂದ್ರಗಳಾಗಿ (ಜಿಎಟಿಸಿ) ಮಾನ್ಯತೆಗಾಗಿ ಅರ್ಹ ಕೈಗಾರಿಕೆಗಳು, ಪ್ರಯೋಗಾಲಯಗಳು, ಎಂಜಿನಿಯರಿಂಗ್ ಕಾಲೇಜುಗಳು, ಪಾಲಿಟೆಕ್ನಿಕ್‌ಗಳು, ಐಟಿಐಗಳು ಮತ್ತು ಪರೀಕ್ಷಾ ಸೌಲಭ್ಯಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.
ಸದ್ಯ ಆಲ್ ನೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಆರಂಭವಾಗಿರುವುದರಿಂದ ಅರ್ಹ ಸಂಸ್ಥೆಗಳು ತಮ್ಮ ಅರ್ಜಿಗಳನ್ನು ಇಲಾಖೆಯ ಆನ್‌ಲೈನ್ ಪೋರ್ಟಲ್ emaap.gov.in/gatc ಮೂಲಕ 2026ರ ಆಗಸ್ಟ್ 31ರ ಗಡುವಿನ ಮೊದಲು ಸಂಜೆ 5:00 ಗಂಟೆಯವರೆಗೆ ಸಲ್ಲಿಸಲು ಪ್ರೋತ್ಸಾಹಿಸಲಾಗುತ್ತದೆ. ಅರ್ಜಿಗಳನ್ನು ಸಲ್ಲಿಸಲು, ಶುಲ್ಕವನ್ನು ಪಾವತಿಸಲು, ಅರ್ಜಿ ಸ್ಥಿತಿಯನ್ನು ಪತ್ತೆಹಚ್ಚಲು ಮತ್ತು ಅರ್ಜಿದಾರರೊಂದಿಗೆ ಸಂವಹನ ನಡೆಸಲು ಪೋರ್ಟಲ್ ಸಂಪೂರ್ಣವಾಗಿ ಡಿಜಿಟಲ್ ಪ್ರಕ್ರಿಯೆಯನ್ನು ಒದಗಿಸುತ್ತದೆ, ಇದು ಪ್ರಕ್ರಿಯೆ ಸರಳ, ಪಾರದರ್ಶಕ ಮತ್ತು ವ್ಯವಹಾರ ಸ್ನೇಹಿಯನ್ನಾಗಿ ಮಾಡುತ್ತದೆ.
The Department has earlier provided detailed information on the GATC framework, its expanded scope and the benefits of wider access to verification services.
ವ್ಯಾಪಕ ಭಾಗವಹಿಸುವಿಕೆಯ ಮೂಲಕ ತಪಾಸಣಾ ಸಾಮರ್ಥ್ಯ ವಿಸ್ತರಣೆ
ಜಿಎಟಿಸಿ ಉಪಕ್ರಮವು ತಾಂತ್ರಿಕವಾಗಿ ಸಮರ್ಥ ಖಾಸಗಿ ವಲಯದ ಸಂಸ್ಥೆಗಳು ವ್ಯಾಪಾರ ಮತ್ತು ವಾಣಿಜ್ಯದಲ್ಲಿ ಬಳಸಲಾಗುವ ನಿರ್ದಿಷ್ಟ ತೂಕ ಮತ್ತು ಅಳತೆಗಳ ತಪಾಸಣೆ ಮತ್ತು ಮರು-ತಪಾಸಣೆಯಲ್ಲಿ ಭಾಗವಹಿಸಲು ಅನುವು ಮಾಡಿಕೊಡುವ ಮೂಲಕ ಭಾರತದ ಪರಿಶೀಲನಾ ಪೂರಕ ವ್ಯವಸ್ಥೆಯನ್ನು ವಿಸ್ತರಿಸುವ ಗುರಿಯನ್ನು ಹೊಂದಿದೆ.
ಈವರೆಗೆ, 51 ಜಿಎಟಿಸಿ ಗಳನ್ನು ಈಗಾಗಲೇ ಗುರುತಿಸಲಾಗಿದೆ. ಇಲಾಖೆಯು ಈಗ ಜಾಲವನ್ನು ಮತ್ತಷ್ಟು ವಿಸ್ತರಿಸುತ್ತಿದೆ ಇದರಿಂದ ವ್ಯವಹಾರಗಳು ತಮ್ಮ ಸ್ಥಳಗಳಿಗೆ ಹತ್ತಿರದಲ್ಲಿ ತಪಾಸಣಾ ಸೌಲಭ್ಯಗಳಿಗೆ ಹೆಚ್ಚಿನ ಲಭ್ಯತೆಯನ್ನು ಹೊಂದಿರುತ್ತವೆ, ಟರ್ನ್‌ಅರೌಂಡ್ ಸಮಯವನ್ನು ಕಡಿಮೆ ಮಾಡುತ್ತದೆ ಮತ್ತು ವೇಗವಾದ ಅನುಸರಣೆಯನ್ನು ಸುಗಮಗೊಳಿಸುತ್ತದೆ.
ಈ ಉಪಕ್ರಮವು ರಾಜ್ಯ ಕಾನೂನು ಮಾಪನಶಾಸ್ತ್ರ ಇಲಾಖೆಗಳ ಪ್ರಯತ್ನಗಳಿಗೆ ಪೂರಕವಾಗಿರುತ್ತದೆ. ತಪಾಸಣಾ ಸೇವೆಗಳಿಗೆ ಹೆಚ್ಚಿನ ಅನುಮೋದಿತ ಕೇಂದ್ರಗಳು ಲಭ್ಯವಿರುವುದರಿಂದ, ರಾಜ್ಯ ಕಾನೂನು ಮಾಪನಶಾಸ್ತ್ರ ಅಧಿಕಾರಿಗಳು ಮಾರುಕಟ್ಟೆ ಕಣ್ಗಾವಲು, ಜಾರಿ ಮತ್ತು ಗ್ರಾಹಕರ ಕುಂದುಕೊರತೆ ಪರಿಹಾರದ ಮೇಲೆ ಹೆಚ್ಚು ಗಮನಹರಿಸಬಹುದು.
ಸದ್ಯ 23 ವರ್ಗಗಳ ತೂಕ ಮತ್ತು ಅಳತೆ ವ್ಯಾಪ್ತಿ ಒಳಗೊಂಡಿದೆ
ಜಿಎಟಿಸಿ ನಿಯಮಗಳಿಗೆ ಇತ್ತೀಚಿನ ತಿದ್ದುಪಡಿಗಳ ನಂತರ, ಮಾನ್ಯತೆ ಪಡೆದ ಜಿಎಟಿಸಿ ಗಳು ಆರೋಗ್ಯ ರಕ್ಷಣೆ, ಇಂಧನ, ಸಾರಿಗೆ, ಚಿಲ್ಲರೆ ವ್ಯಾಪಾರ, ಉತ್ಪಾದನೆ ಮತ್ತು ಮೂಲಸೌಕರ್ಯದಂತಹ ಪ್ರಮುಖ ವಲಯಗಳನ್ನು ಒಳಗೊಂಡ 23 ವರ್ಗಗಳ ತೂಕ ಮತ್ತು ಅಳತೆಗಳ ಪರಿಶೀಲನೆ ಮತ್ತು ಮರು-ಪರಿಶೀಲನೆಯನ್ನು ಕೈಗೊಳ್ಳಬಹುದು. ಇವುಗಳಲ್ಲಿ ಇವು ಸೇರಿವೆ:
(i) ನೀರಿನ ಮೀಟರ್‌ಗಳು
(ii) ಸ್ಪಿಗ್ಮೋಮನೋಮೀಟರ್‌ಗಳು
(iii) ಕ್ಲಿನಿಕಲ್ ಥರ್ಮಾಮೀಟರ್‌ಗಳು
(iv) ಸ್ವಯಂಚಾಲಿತ ರೈಲು ತೂಕ ಸೇತುವೆಗಳು
(v) ಟೇಪ್ ಅಳತೆಗಳು
(vi) ನಿಖರತೆ ವರ್ಗ III ರ ಸ್ವಯಂಚಾಲಿತವಲ್ಲದ ತೂಕದ ಉಪಕರಣಗಳು (150 ಕೆಜಿ ವರೆಗೆ)
(vii) ನಿಖರತೆ ವರ್ಗ IIII ರ ಸ್ವಯಂಚಾಲಿತವಲ್ಲದ ತೂಕದ ಉಪಕರಣಗಳು
(viii) ಲೋಡ್ ಕೋಶಗಳು
(ix) ಬೀಮ್ ಮಾಪಕಗಳು
(x) ಕೌಂಟರ್ ಯಂತ್ರಗಳು
(xi) ಎಲ್ಲಾ ವರ್ಗಗಳ ತೂಕಗಳು
(xii) ಅನಿಲ ಮೀಟರ್‌ಗಳು
(xiii) ಇಂಧನ ಮೀಟರ್‌ಗಳು
(xiv) ತೇವಾಂಶ ಮೀಟರ್‌ಗಳು
(xv) ವಾಹನ ವೇಗ ಮೀಟರ್‌ಗಳು
(xvi) ಉಸಿರಾಟದ ವಿಶ್ಲೇಷಕಗಳು
(xvii) ಬಹು ಆಯಾಮದ ಅಳತೆ ಉಪಕರಣಗಳು
(xviii) ಫ್ಲೋ ಮೀಟರ್‌ಗಳು
(xix) ಪೆಟ್ರೋಲ್ ಮತ್ತು ಡೀಸೆಲ್ ವಿತರಕಗಳು
(xx) ಸಿಎನ್ ಜಿ ವಿತರಕಗಳು
(xxi) ಎಲ್ ಪಿಜಿ ವಿತರಕಗಳು
(xxii) ಎಲ್ ಎನ್ ಜಿ ವಿತರಕಗಳು
(xxiii) ಹೈಡ್ರೋಜನ್ ವಿತರಕಗಳು.
ಪೆಟ್ರೋಲ್, ಡೀಸೆಲ್, ಸಿಎನ್‌ಜಿ, ಎಲ್‌ಪಿಜಿ, ಎಲ್‌ಎನ್‌ಜಿ ಮತ್ತು ಹೈಡ್ರೋಜನ್ ವಿತರಕಗಳ ಸೇರ್ಪಡೆಯು ಇತ್ತೀಚಿನ ಜಿಎಟಿಸಿ ಚೌಕಟ್ಟಿನ ವಿಸ್ತರಣೆಯ ಭಾಗವಾಗಿದೆ. ಇದು ಇಂಧನ ವಿತರಣಾ ವ್ಯವಸ್ಥೆಗಳಿಗೆ ತಪಾಸಣಾ ಸಾಮರ್ಥ್ಯವನ್ನು ಬಲಪಡಿಸಲು ಸಹಾಯ ಮಾಡುತ್ತದೆ ಮತ್ತು ಇಂಧನ ವಹಿವಾಟುಗಳಲ್ಲಿ ನಿಖರವಾದ ಅಳತೆ ಮತ್ತು ಪಾರದರ್ಶಕತೆಯನ್ನು ಬೆಂಬಲಿಸುತ್ತದೆ.
ಉದ್ಯಮಕ್ಕೆ ಸರಳವಾದ ಮಾರ್ಗ
ಜಿಎಟಿಸಿಗಳ ವಿಸ್ತರಣೆಯು ವ್ಯವಹಾರ ಮಾಡುವ ಸುಲಭತೆಯ ಪ್ರಮುಖ ಸುಧಾರಣೆಯಾಗಿದೆ. ತಪಾಸಣೆಗಾಗಿ ಸೀಮಿತ ಇಲಾಖಾ ಸೌಲಭ್ಯಗಳನ್ನು ಮಾತ್ರ ಅವಲಂಬಿಸುವ ಬದಲು, ತಯಾರಕರು, ವ್ಯಾಪಾರಿಗಳು ಮತ್ತು ಬಳಕೆದಾರರು ವಿಸ್ತರಿಸುತ್ತಿರುವ ಜಿಎಟಿಸಿ ನೆಟ್‌ವರ್ಕ್ ಮೂಲಕ ಅನುಮೋದಿತ ತಾಂತ್ರಿಕ ಸೌಲಭ್ಯಗಳನ್ನು ಹೆಚ್ಚಾಗಿ ಹೊಂದಬಹುದು.
ಡಿಜಿಟಲ್ ಅಪ್ಲಿಕೇಶನ್ ವ್ಯವಸ್ಥೆಯು ಅರ್ಜಿದಾರರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು, ಡಿಜಿಟಲ್ ಪಾವತಿಗಳನ್ನು ಮಾಡಲು ಮತ್ತು ಸರ್ಕಾರಿ ಕಚೇರಿಗಳಿಗೆ ಪದೇ ಪದೇ ಭೌತಿಕ ಭೇಟಿಗಳ ಅಗತ್ಯವಿಲ್ಲದೆ ತಮ್ಮ ಅರ್ಜಿಗಳನ್ನು ಟ್ರ್ಯಾಕ್ ಮಾಡಲು ಅನುವು ಮಾಡಿಕೊಡುವ ಮೂಲಕ ಪ್ರಕ್ರಿಯೆಯನ್ನು ಮತ್ತಷ್ಟು ಸರಳಗೊಳಿಸುತ್ತದೆ.
ಅರ್ಹ ಸಂಸ್ಥೆಗಳು ರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ಪತ್ತೆಹಚ್ಚಬಹುದಾದ ನಿಗದಿತ ಪರೀಕ್ಷಾ ಮತ್ತು ಮಾಪನಾಂಕ ನಿರ್ಣಯ ಸಾಧನಗಳು, ಅರ್ಹ ತಾಂತ್ರಿಕ ಸಿಬ್ಬಂದಿ ಮತ್ತು ಜಿಎಟಿಸಿ ನಿಯಮಗಳ ಅಡಿಯಲ್ಲಿ ನಿರ್ದಿಷ್ಟಪಡಿಸಿದ ಮೂಲಸೌಕರ್ಯವನ್ನು ಹೊಂದಿರಬೇಕು.
ಬಲಿಷ್ಠ ಕಾನೂನು ಮಾಪನಶಾಸ್ತ್ರ ಸೇವೆಗಳಿಗೆ ಪಾಲುದಾರಿಕೆ
ಜಿಎಟಿಸಿ ಚೌಕಟ್ಟು ಕಾನೂನು ಮಾಪನಶಾಸ್ತ್ರದಲ್ಲಿ ಪಾಲುದಾರಿಕೆ ವಿಧಾನವನ್ನು ಪ್ರತಿನಿಧಿಸುತ್ತದೆ. ತಾಂತ್ರಿಕವಾಗಿ ಸಮರ್ಥ ಪ್ರಯೋಗಾಲಯಗಳು, ಕೈಗಾರಿಕೆಗಳು, ಶೈಕ್ಷಣಿಕ ಮತ್ತು ಪರೀಕ್ಷಾ ಸಂಸ್ಥೆಗಳನ್ನು ಪರಿಶೀಲನಾ ಪರಿಸರ ವ್ಯವಸ್ಥೆಗೆ ತರುವ ಮೂಲಕ, ಸರ್ಕಾರವು ಕಾನೂನು ಮಾಪನಶಾಸ್ತ್ರ ಚೌಕಟ್ಟಿನಡಿಯಲ್ಲಿ ಸೂಚಿಸಲಾದ ನಿಯಂತ್ರಣಮೇಲ್ವಿಚಾರಣೆಯನ್ನು ನಿರ್ವಹಿಸುವಾಗ ವಿಶ್ವಾಸಾರ್ಹ ಪರಿಶೀಲನಾ ಸೇವೆಗಳ ಲಭ್ಯತೆಯನ್ನು ಹೆಚ್ಚಿಸುತ್ತಿದೆ.
ಈ ವಿಧಾನವು ದೊಡ್ಡದಾದ, ಹೆಚ್ಚು ಲಭ್ಯವಾಗಬಹುದಾದ ಮತ್ತು ಸ್ಪಂದಿಸುವ ಪರಿಶೀಲನಾ ಜಾಲವನ್ನು ರಚಿಸಲು ಸಹಾಯ ಮಾಡುತ್ತದೆ, ಇದು ವ್ಯವಹಾರಗಳು ಮತ್ತು ಗ್ರಾಹಕರಿಗೆ ಪ್ರಯೋಜನವನ್ನು ನೀಡುತ್ತದೆ.
ವೇಗವಾದ ಅನುಸರಣೆ, ವಿಶ್ವಾಸಾರ್ಹ ಅಳತೆಗಳು ಮತ್ತು ಗ್ರಾಹಕ ರಕ್ಷಣೆ
ನ್ಯಾಯಯುತ ವಹಿವಾಟುಗಳು ಮತ್ತು ಗ್ರಾಹಕರ ವಿಶ್ವಾಸಕ್ಕಾಗಿ ನಿಖರವಾದ ತೂಕ ಮತ್ತು ಅಳತೆಗಳು ಅತ್ಯಗತ್ಯವಾಗಿದೆ. ಜಿಎಟಸಿ ಗಳ ವಿಶಾಲ ಜಾಲವು ಪರಿಶೀಲನೆ ಮತ್ತು ಮರು-ಪರಿಶೀಲನಾ ಸೇವೆಗಳನ್ನು ಹೆಚ್ಚು ಲಭ್ಯವಾಗುವಂತೆ ಮಾಡಬಹುದಾದ ಮತ್ತು ಸಕಾಲಿಕವಾಗಿ ಮಾಡಲು ಸಹಾಯ ಮಾಡುತ್ತದೆ, ಇದರಿಂದಾಗಿ ವಾಣಿಜ್ಯ ವಹಿವಾಟುಗಳಲ್ಲಿ ಬಳಸುವ ಅಳತೆಗಳು ನಿಖರ ಮತ್ತು ವಿಶ್ವಾಸಾರ್ಹವಾಗಿರುವುದನ್ನು ಖಾತ್ರಿಪಡಿಸಿಕೊಳ್ಳುವಾಗ ವ್ಯವಹಾರಗಳು ತಮ್ಮ ನಿಯಂತ್ರಣ ಅವಶ್ಯಕತೆಗಳನ್ನು ಪೂರೈಸುವಲ್ಲಿ ಬೆಂಬಲ ನೀಡುತ್ತದೆ.
ಆದ್ದರಿಂದ ಸುಧಾರಣೆಯು ಸುಲಭವಾಗಿ ವ್ಯವಹಾರ ಮಾಡುವುದು ಮತ್ತು ಗ್ರಾಹಕ ರಕ್ಷಣೆಯ ನಡುವಿನ ಸಮತೋಲನವನ್ನು ಸಾಧಿಸಲು ಪ್ರಯತ್ನಿಸುತ್ತದೆ, ದೈನಂದಿನ ವಹಿವಾಟುಗಳಲ್ಲಿ ಬಳಸುವ ಅಳತೆಗಳಲ್ಲಿ ವಿಶ್ವಾಸವನ್ನು ಬಲಪಡಿಸುವಾಗ ಪ್ರಾಮಾಣಿಕ ವ್ಯವಹಾರಗಳಿಗೆ ಅನುಸರಣೆಯನ್ನು ಸುಲಭಗೊಳಿಸುತ್ತದೆ.
ಇಲಾಖೆಯ ಜಿಎಟಿಸಿ ಸುಧಾರಣೆಗಳು ಡಿಜಿಟಲ್ ಆಡಳಿತ, ಆತ್ಮನಿರ್ಭರ ಭಾರತ ಮತ್ತು ಭಾರತದ ಗುಣಮಟ್ಟದ ಮೂಲಸೌಕರ್ಯವನ್ನು ಬಲಪಡಿಸುವ ಕಡೆಗೆ ಅದರ ವಿಶಾಲ ಪ್ರಯತ್ನಗಳೊಂದಿಗೆ ಹೊಂದಿಕೆಯಾಗುತ್ತವೆ, ಇದರಲ್ಲಿ ಅಂತಾರಾಷ್ಟ್ರೀಯವಾಗಿ ಅಂಗೀಕರಿಸಲ್ಪಟ್ಟ ಮಾಪನ ಪದ್ಧತಿಗಳೊಂದಿಗೆ ಹೊಂದಾಣಿಕೆ ಸೇರಿದೆ.
ಅರ್ಜಿಗಳುನ್ನು ಸಲ್ಲಿಸಲು 2026ರ ಆಗಸ್ಟ್ 31 ರವರೆಗೆ ಕಾಲಾವಕಾಶ
ಸರ್ಕಾರಿ ಅನುಮೋದಿತ ಪರೀಕ್ಷಾ ಕೇಂದ್ರಗಳಾಗಲು ಆಸಕ್ತಿ ಹೊಂದಿರುವ ಅರ್ಹ ಸಂಸ್ಥೆಗಳು ತಮ್ಮ ಅರ್ಜಿಗಳನ್ನು emaap.gov.in/gatc ಮೂಲಕ ಆನ್‌ಲೈನ್‌ನಲ್ಲಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ಅವಧಿ: 2026ರ ಆಗಸ್ಟ್ 17 ರಿಂದ 31 ಆಗಸ್ಟ್ 2026 ರವರೆಗೆ
ಕೊನೆಯ ದಿನಾಂಕ/ಸಮಯ: 2026ರ ಆಗಸ್ಟ್ 31ರ ಸಂಜೆ 5:00 ರವರೆಗೆ
ವಿವರವಾದ ಅರ್ಹತಾ ಷರತ್ತುಗಳು, ನಿಗದಿತ ಅವಶ್ಯಕತೆಗಳು ಮತ್ತು ಅರ್ಜಿ ಪ್ರಕ್ರಿಯೆ ಪೋರ್ಟಲ್‌ನಲ್ಲಿ ಲಭ್ಯವಿದೆ. ಅರ್ಹ ಸಂಸ್ಥೆಗಳು ಗಡುವಿನ ಮೊದಲು ಅರ್ಜಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಪ್ರೋತ್ಸಾಹಿಸಲಾಗುತ್ತದೆ. 51 ಜಿಎಟಸಿ ಗಳನ್ನು ಈಗಾಗಲೇ ಗುರುತಿಸಲಾಗಿದೆ ಮತ್ತು ತಪಾಸಣಾ ವ್ಯಾಪ್ತಿಯನ್ನು 23 ವರ್ಗಗಳಿಗೆ ವಿಸ್ತರಿಸಲಾಗಿದೆ, ಉದ್ಯಮಕ್ಕೆ ಸೇವೆಗಳಿಗೆ ಸುಲಭ ಲಭ್ಯತೆ, ವೇಗವಾದ ಅನುಸರಣೆ ಮತ್ತು ಗ್ರಾಹಕರಿಗೆ ವಾಣಿಜ್ಯ ಅಳತೆಗಳ ನಿಖರತೆಯಲ್ಲಿ ಹೆಚ್ಚಿನ ವಿಶ್ವಾಸವನ್ನು ಒದಗಿಸಲು ಇಲಾಖೆಯು ಭಾರತದ ಮಾಪನ ಪರಿಶೀಲನಾ ಜಾಲವನ್ನು ಮತ್ತಷ್ಟು ವಿಸ್ತರಿಸುತ್ತಿದೆ.
*****
(रिलीज़ आईडी: 2301465)
आगंतुक पटल : 16