ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
azadi ka amrit mahotsav

ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು 2025 ರ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ಘೋಷಿಸಿದೆ

प्रविष्टि तिथि: 18 AUG 2026 12:50PM by PIB Bengaluru

ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ಇಂದು 2025 ರ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ಘೋಷಿಸಿದೆ.

ಕ್ರೀಡೆಯಲ್ಲಿ ಶ್ರೇಷ್ಠತೆಯನ್ನು ಗುರುತಿಸಲು ಮತ್ತು ಪುರಸ್ಕರಿಸಲು ಪ್ರತಿ ವರ್ಷ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ನೀಡಲಾಗುತ್ತದೆ.

ಸುಪ್ರೀಂಕೋರ್ಟ್ ನ  ನಿವೃತ್ತ ನ್ಯಾಯಮೂರ್ತಿ (ನಿವೃತ್ತ) ಅರುಣ್ ಕುಮಾರ್ ಮಿಶ್ರಾ ಅವರ ಅಧ್ಯಕ್ಷತೆಯ ಆಯ್ಕೆ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ, ಈ ಕೆಳಗಿನ ಕ್ರೀಡಾಪಟುಗಳು, ತರಬೇತುದಾರರು ಮತ್ತು ಸಂಸ್ಥೆಗಳಿಗೆ ವಿವಿಧ ವಿಭಾಗಗಳ ಅಡಿಯಲ್ಲಿ ಪ್ರಶಸ್ತಿಗಳನ್ನು ನೀಡಲು ಸರ್ಕಾರ ನಿರ್ಧರಿಸಿದೆ.

ಕ್ರೀಡೆ ಮತ್ತು ಕ್ರೀಡಾಕೂಟದಲ್ಲಿ ಅತ್ಯುತ್ತಮ ಪ್ರದರ್ಶನಕ್ಕಾಗಿ ಅರ್ಜುನ ಪ್ರಶಸ್ತಿಗಳು 2025

ಹಿಂದಿನ ನಾಲ್ಕು ವರ್ಷಗಳ ಅವಧಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಮತ್ತು ನಾಯಕತ್ವ, ಕ್ರೀಡಾ ಮನೋಭಾವ ಮತ್ತು ಶಿಸ್ತಿನ ಗುಣಗಳನ್ನು ಪ್ರದರ್ಶಿಸಿದ್ದಕ್ಕಾಗಿ 'ಕ್ರೀಡೆ ಮತ್ತು ಕ್ರೀಡಾಕೂಟದಲ್ಲಿ ಅತ್ಯುತ್ತಮ ಪ್ರದರ್ಶನಕ್ಕಾಗಿ ಅರ್ಜುನ ಪ್ರಶಸ್ತಿ'ಯನ್ನು ನೀಡಲಾಗುತ್ತದೆ.

ಕ್ರಮ ಸಂಖ್ಯೆ

ಕ್ರೀಡಾಪಟುವಿನ ಹೆಸರು

ಕ್ರೀಡೆ

1.

ಶ್ರೀ ತೇಜಸ್ವಿನ್ ಶಂಕರ್

ಅಥ್ಲೆಟಿಕ್ಸ್

2.

ಶ್ರೀ ಮುಹಮ್ಮದ್ ಅಜ್ಮಲ್ ವಿ.

ಅಥ್ಲೆಟಿಕ್ಸ್

3.

ಶ್ರೀಮತಿ ಪ್ರಿಯಾಂಕಾ ಗೋಸ್ವಾಮಿ

ಅಥ್ಲೆಟಿಕ್ಸ್

4.

ಶ್ರೀಮತಿ ಟ್ರೀಸಾ ಜಾಲಿ

ಬ್ಯಾಡ್ಮಿಂಟನ್

5.

ಶ್ರೀಮತಿ ಪುಲ್ಲೇಲಾ ಗಾಯತ್ರಿ ಗೋಪಿಚಂದ್

ಬ್ಯಾಡ್ಮಿಂಟನ್

6.

ಶ್ರೀ ನರೇಂದ್ರ ಮೋದಿ

ಬಾಕ್ಸಿಂಗ್

7.

ಶ್ರೀ ವಿದಿತ್ ಸಂತೋಷ್ ಗುಜರಾತಿ

ಚೆಸ್

8.

ಶ್ರೀಮತಿ ದಿವ್ಯಾ ಜಿತೇಂದ್ರ ದೇಶಮುಖ್

ಚೆಸ್

9.

ಶ್ರೀ ಧನುಷ್ ಶ್ರೀಕಾಂತ್

ಕಿವುಡರ ಶೂಟಿಂಗ್

10.

ಶ್ರೀಮತಿ ಲಾಲ್ರೆಮ್ಸಿಯಾಮಿ

ಹಾಕಿ

11.

ಶ್ರೀ ರಾಜ್ ಕುಮಾರ್ ಪಾಲ್

ಹಾಕಿ

12.

ಶ್ರೀ ಸುರ್ಜಿತ್

ಕಬಡ್ಡಿ

13.

ಶ್ರೀಮತಿ ಪೂಜಾ

ಕಬಡ್ಡಿ

14.

ಶ್ರೀ ರುದ್ರಾಂಶ್ ಖಂಡೇಲ್ವಾಲ್

ಪ್ಯಾರಾ ಶೂಟಿಂಗ್

15.

ಮಿಸ್ ಎ ವ್ಯಾನ್

ಪ್ಯಾರಾ ಅಥ್ಲೆಟಿಕ್ಸ್

16.

ಶ್ರೀ ಅರವಿಂದ್ ಸಿಂಗ್

ರೋಯಿಂಗ್

17.

ಶ್ರೀ ಅಖಿಲ್ ಶಿಯೋರನ್

ಶೂಟಿಂಗ್

ಕ್ರೀಡೆ ಮತ್ತು ಕ್ರೀಡಾಕೂಟ 2025 ರಲ್ಲಿ ಅತ್ಯುತ್ತಮ ಪ್ರದರ್ಶನಕ್ಕಾಗಿ ಅರ್ಜುನ ಪ್ರಶಸ್ತಿಗಳು (ಜೀವಮಾನ)

ತಮ್ಮ ಪ್ರದರ್ಶನದ ಮೂಲಕ ಕ್ರೀಡೆಗೆ ಕೊಡುಗೆ ನೀಡಿದ ಮತ್ತು ಸಕ್ರಿಯ ಕ್ರೀಡಾ ವೃತ್ತಿಜೀವನದಿಂದ ನಿವೃತ್ತರಾದ ನಂತರವೂ ಕ್ರೀಡೆಯ ಉತ್ತೇಜನಕ್ಕೆ ಕೊಡುಗೆ ನೀಡುವುದನ್ನು ಮುಂದುವರಿಸಿದ ಕ್ರೀಡಾಪಟುಗಳನ್ನು ಗೌರವಿಸಲು ಮತ್ತು ಪ್ರೇರೇಪಿಸಲು 'ಅರ್ಜುನ ಪ್ರಶಸ್ತಿ (ಜೀವಮಾನ)' ನೀಡಲಾಗುತ್ತದೆ.

ಕ್ರ. ಸಂ.

ಕ್ರೀಡಾಪಟುವಿನ ಹೆಸರು

ಕ್ರೀಡೆ

1.

ಶ್ರೀ ಇ ಅರುಮೈನಾಯಗಂ

ಫುಟ್ ಬಾಲ್

ಕ್ರೀಡೆ ಮತ್ತು ಕ್ರೀಡಾಕೂಟದಲ್ಲಿ ಅತ್ಯುತ್ತಮ ತರಬೇತುದಾರರಿಗೆ ದ್ರೋಣಾಚಾರ್ಯ ಪ್ರಶಸ್ತಿ 2025

ಕ್ರೀಡೆ ಮತ್ತು ಕ್ರೀಡಾಕೂಟಗಳಲ್ಲಿ ಅತ್ಯುತ್ತಮ ತರಬೇತುದಾರರಿಗೆ 'ದ್ರೋಣಾಚಾರ್ಯ ಪ್ರಶಸ್ತಿ'ಯನ್ನು ಅತ್ಯುತ್ತಮ ಮತ್ತು ಪ್ರತಿಭಾನ್ವಿತ ಕೆಲಸವನ್ನು ಸ್ಥಿರವಾದ ಆಧಾರದ ಮೇಲೆ ಮಾಡಿದ ಮತ್ತು ಕ್ರೀಡಾಪಟುಗಳು ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಉತ್ತಮ ಸಾಧನೆ ಮಾಡಲು ಅನುವು ಮಾಡಿಕೊಡುವ ತರಬೇತುದಾರರಿಗೆ ನೀಡಲಾಗುತ್ತದೆ.

ನಿಯಮಿತ ವರ್ಗ:

ಕ್ರ. ಸಂ.

ತರಬೇತುದಾರರ ಹೆಸರು

ಕ್ರೀಡೆ

1.

ಶ್ರೀ ಪರ್ವೀರ್ ಸಿಂಗ್

ಅಥ್ಲೆಟಿಕ್ಸ್

2.

ಶ್ರೀ ಛೋಟೆ ಲಾಲ್ ಯಾದವ್

ಬಾಕ್ಸಿಂಗ್

3.

ಶ್ರೀಮತಿ ನೇಹಾ ನಂದಕುಮಾರ್ ಚವಾಣ್

ಶೂಟಿಂಗ್

ಜೀವಮಾನದ ವರ್ಗ:

ಕ್ರ.ಸಂ.

ತರಬೇತುದಾರರ ಹೆಸರು

ಕ್ರೀಡೆ

1.

ಲಕ್ಷ್ಮಿ ಧರ್ಮೇಂದ್ರ ಸಿಂಗ್ ಯಾದವ್

ಬಾಕ್ಸಿಂಗ್

 

2.

ಶ್ರೀ. ವೀರೇಂದ್ರ ಕುಮಾರ್

ಕುಸ್ತಿ

ರಾಷ್ಟ್ರೀಯ ಖೇಲ್ ಪ್ರೋತ್ಸಾಹನ್ ಪುರಸ್ಕಾರ್ 2025

ಕ್ರೀಡಾ ಉತ್ತೇಜನ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ಗಮನಾರ್ಹ ಪಾತ್ರ ವಹಿಸಿದ ಕಾರ್ಪೊರೇಟ್ ಸಂಸ್ಥೆ (ಸಾರ್ವಜನಿಕ / ಖಾಸಗಿ), ಸರ್ಕಾರೇತರ ಸಂಸ್ಥೆಗಳಿಗೆ (ಎನ್ ಜಿಒ) 'ರಾಷ್ಟ್ರೀಯ ಖೇಲ್ ಪ್ರೋತ್ಸಾಹನ್ ಪುರಸ್ಕಾರ'ವನ್ನು ನೀಡಲಾಗುತ್ತದೆ.

ಕ್ರ.ಸಂ.   

ಘಟಕದ ಹೆಸರು

1. 

ಸೇನಾ ಪ್ಯಾರಾಲಿಂಪಿಕ್ ನೋಡ್, ಪುಣೆ

ಮೇಲೆ ತಿಳಿಸಿದ ಪ್ರಶಸ್ತಿಗಳಿಗೆ ಅರ್ಜಿಗಳನ್ನು ಆನ್ ಲೈನ್ ನಲ್ಲಿ ಆಹ್ವಾನಿಸಲಾಗಿತ್ತು ಮತ್ತು ಕ್ರೀಡಾಪಟುಗಳು/ತರಬೇತುದಾರರು/ಘಟಕಗಳಿಗೆ ಮೀಸಲಾದ ಆನ್ ಲೈನ್ ಪೋರ್ಟಲ್ ಮೂಲಕ ಸ್ವಯಂ-ಅರ್ಜಿ ಸಲ್ಲಿಸಲು ಅನುಮತಿ ನೀಡಲಾಗಿತ್ತು.

ಈ ವರ್ಷ ಈ ಪ್ರಶಸ್ತಿಗಳಿಗೆ ಹೆಚ್ಚಿನ ಸಂಖ್ಯೆಯ ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ನ್ಯಾಯಮೂರ್ತಿ (ನಿವೃತ್ತ) ಮಿಶ್ರಾ ನೇತೃತ್ವದ ಆಯ್ಕೆ ಸಮಿತಿಯು ಪ್ರಸಿದ್ಧ ಕ್ರೀಡಾಪಟುಗಳು, ಕ್ರೀಡಾ ಪತ್ರಿಕೋದ್ಯಮದಲ್ಲಿ ಅನುಭವ ಹೊಂದಿರುವ ವ್ಯಕ್ತಿಗಳು ಮತ್ತು ಕ್ರೀಡಾ ಆಡಳಿತಗಾರರನ್ನು ಒಳಗೊಂಡಿತ್ತು.

 

*****

 


(रिलीज़ आईडी: 2300800) आगंतुक पटल : 28
इस विज्ञप्ति को इन भाषाओं में पढ़ें: Assamese , Bengali , Bengali-TR , English , Urdu , Marathi , हिन्दी , Manipuri , Gujarati , Tamil , Telugu , Malayalam